ಪ್ರಚಲಿತ

ಗೌರಿ ಡೇ ವಿಶೇಷ ವರದಿ.. ಎಚ್ಚರಿಕೆ!! ಕರ್ನಾಟಕಕ್ಕೆ ಆಗಮಿಸಿದೆ ಭಾರತವನ್ನು ಒಡೆಯುವ ತಂಡ!!

ಈ ಮೊದಲೇ ಗೌರಿ ಲಂಕೇಶ್ ಕುರಿತಾಗಿ ಜಾತ್ಯಾತೀತವಾದಿಗಳು ಎಂದು ಕರೆಸಿಕೊಳ್ಳುವ ದೇಶದ್ರೋಹಿಗಳು ಮಾಡುತ್ತಿರುವ ಗೌರಿ ದಿನ ಬೇರೆನೇ ದಾರಿಯನ್ನು ಹಿಡಿಯುತ್ತದೆ ಎಂವ ನಮ್ಮ ಪೋಸ್ಟ್ ಕಾರ್ಡ್ ಭವಿಷ್ಯವು ನಿಜವಾಗಿದೆ. ಕಾಂಗ್ರೆಸ್ ಆಡಳಿತವುಳ್ಳ ಕರ್ನಾಟಕದಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆಯ ವಿಚಾರವು ಇಂದಿಗೂ ದಂತ ಕಥೆ.

ಅದು ರಾಜ್ಯ ಮಾತ್ರವಲ್ಲದೆ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿತ್ತು. ಇಂದಿಗೂ ಗೌರಿ ಹತ್ಯೆಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್‍ದಾರೆ. ಇಂದು ಮತ್ತೆ ಗೌರಿ ದಿನ ಕಾರ್ಯಕ್ರಮ ಆಯೋಜನೆಯಾಗಿತ್ತು. ನಾವು (ಪೋಸ್ಟ್ ಕಾರ್ಡ್) ಮೊದಲೇ ಹೇಳಿದಂತೆ ಈ ಕಾರ್ಯಕ್ರಮದಲ್ಲಿ ಗೌರಿ ಹತ್ಯೆಗೆ ಕಾರಣವಾದ, ಅಥವಾ ಅಪರಾದಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಯಾವುದೇ ವಿರೋಧ ಹೇಳಿಕೆಗಳನ್ನು ನೀಡದ ಈ ದೇಶದ್ರೋಹಿಗಳು ಮತ್ತೆ ಮೋದಿಯನ್ನು ತೆಗಳಿದ್ದಾರೆ.

ಕಾಂಗ್ರೆಸ್ ಸಮಾವೇಶವಾಯಿತು ಗೌರಿ ದಿನ!!!

ಇಂದು ಬೆಳಗ್ಗೆಯೇ ಗೌರಿ ದಿನ ಕಾರ್ಯಕ್ರಮದ ಬಗ್ಗೆ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಮಾತನಾಡಿದ್ದರು. ಇದು ಸರಕಾರಿ ಪ್ರೇರಿತ ಕಾರ್ಯಕ್ರಮ. ಮುಖ್ಯಮಂತ್ರಿಗಳನೇತೃತ್ವದಲ್ಲಿಯೇ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಮಾತ್ರವಲ್ಲದೆ ದೆಹಲಿಯ ಜಾತ್ಯಾತೀತ ನಾಯಕರಿಗೆ ಸ್ವತಃ ಸರ್ಕಾರದಿಂದಲೇ ವಿಮಾನ ಟಿಕೆಟ್ ಬುಕ್ ಆಗಿವೆ ಎಂದೂ ಆರೋಪಿಸಿದ್ದರು.

ಇಂದ್ರಜಿತ್ ಲಂಕೇಶ್ ಹೇಳಿದಂತೆಯೇ ಗೌರಿ ದಿನ ಕಾಂಗ್ರೆಸ್ ಸಮಾವೇಶವಾಗಿ ಬದಲಾಗಿದೆ. ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಎಲ್ಲಾ ನಾಯಕರೂ ಆರೋಪಿಗಳನ್ನು ಹಿಡಿಯುವಲ್ಲಿ ವಿಫಲರಾದ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡದೆ, ಗೌರಿ ಹತ್ಯೆಯಲ್ಲಿ ಯಾವುದೇ ಭಾಗವಾಗಿರದ ಹಾಗೂ ತನಗೆ ಸಂಬಂಧವೇ ಇಲ್ಲದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಎಳೆದು ತರುತ್ತಾರೆ. ಪ್ರತಿಯೊಂದಕ್ಕೂ ಮೋದಿಯೇ ಕಾರಣ ಎಂದು ಬೊಬ್ಬೆ ಬಿಡುವ ಈ ಸೋಗಲಾಡಿ ನಾಯಕರು ಈಗ ಮತ್ತೆ ತಮ್ಮ ಬಾಲವನ್ನು ಬಿಚ್ಚಿದ್ದಾರೆ.

ಆರಂಭದಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಳ್ಳುತ್ತಿರುವ ದೊರೆಸ್ವಾಮಿ ನೇರವಾಗಿ ನರೇಂದ್ರ ಮೋದಿಯನ್ನೇ ಟಾರ್ಗೆಟ್ ಮಾಡುತ್ತಾರೆ. ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ರಾಜ್ಯದಿಂದ ಓಡಿಸಬೇಕಾಗಿದೆ ಎಂದು ಮಾತನಾಡಿದ್ದರು. ಇವರ ಮಾತುಗಳೂ ಅಪ್ಪಟ ಕಾಂಗ್ರೆಸ್ ನಾಯಕ ಮಾತಿನಂತೆ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರೇ ನಾಚುವಂತೆ ಇತ್ತು ಇವರ ಈ ಹೇಳಿಕೆಗಳು.

ಬಿಜೆಪಿಯನ್ನು ಓಡಿಸಬೇಕಾಗಿದೆ-ಜಿಗ್ನೇಶ್…

“ನಾನು ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಬರುತ್ತೇನೆ. ಕರ್ನಾಟಕದಿಂದ ಭಾರತೀಯ ಜನತಾ ಪಕ್ಷವನ್ನು ಓಡಿಸಬೇಕಾಗಿದೆ. ಮೋದಿಯಿಂದ ನಾವು ನಮ್ಮ ಗೌರಿ ಲಂಕೇಶ್‍ರನ್ನು ಬಕಳೆದುಕೊಂಡಿದ್ದೇವೆ. ಎಲ್ಲದಕ್ಕೂ ಮೋದಿಯೇ ಕಾರಣ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಿಂದ ಭಾರತೀಯ ಜನತಾ ಪಕ್ಷವನ್ನು ಸೋಲಿಸಬೇಕಾಗಿದೆ. ಈ ಮೂಲಕ ಗೌರಿ ಹತ್ಯೆಗೆ ನಾವು ನ್ಯಾಯವನ್ನು ಪಡೆಯಬೇಕಾಗಿದೆ” ಎಂದು ಹೇಳಿದ್ದಾರೆ.

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಾಯಿಗೆ ಬಂದಂತೆ ಬೊಗಳುವವರ ಸಂಖ್ಯೆ ಹೆಚ್ಚುತ್ತಿದೆ.
ಭಾರತದಲ್ಲೇ ಇದ್ದು ಶತ್ರು ರಾಷ್ಟ್ರಕ್ಕೆ ಬೆಂಬಲ ನೀಡುತ್ತಿರುವ ಕೆಲ ಭಾರತೀಯರ ಸಾಲಿನಲ್ಲೇ ಬರುವವರು ಜಿಗ್ನೇಶ್ ಮೇವಾನಿ.

ಜಿಗ್ನೇಶ್ ಮೇವಾನಿ ಗುಜರಾತ್ ನಲ್ಲಿ ದಲಿತರ ಪರವಾಗಿ ಹೋರಾಟಕ್ಕೆ ಇಳಿದು ಅದನ್ನೇ ರಾಜಕೀಯಕ್ಕೆ ಬಳಸಿಕೊಂಡು ಗುಜರಾತ್ ನ‌ ಶಾಸಕರಾಗಿದ್ದಾರೆ. ಮುಗ್ದ ದಲಿತರನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸಿದ ಜಿಗ್ನೇಶ್ ಮೇವಾನಿ ಹಲವಾರು ಬಾರಿ ದೇಶ ವಿರೋಧಿ ಹೇಳಿಕೆ ನೀಡಿದ್ದಾನೆ…!!

ಪ್ರತಿಯೊಂದು ಘಟನೆಗಳಿಗೂ ಮೋದಿ ಸರಕಾರವನ್ನು ಪ್ರಶ್ನಿಸುವ ಜಿಗ್ನೇಶ್ ಮೇವಾನಿ ತನ್ನ ಹೆಸರನ್ನು ಪಸರಿಸಲು ಮೋದಿ ಸರಕಾರವನ್ನು ತೆಗಳುವ ಕಾರ್ಯದಲ್ಲಿ ತೊಡಗಿದ್ದಾನೆ.

ದಲಿತಪರ ಹೋರಾಟಕ್ಕೆ ಹೊಸಮುಖ ಪರಿಚಯವಾಗುತ್ತಿದೆ ಎಂದು ಅಂದುಕೊಳ್ಳುವಷ್ಟರಲ್ಲಿ ಅಂಬೇಡ್ಕರ್ ಆದರ್ಶಗಳನ್ನೇ ಮರೆತು ದೇಶ ವಿರೋಧಿಗಳ ಜೊತೆ ಕೈಜೋಡಿಸಿಕೊಂಡಿದ್ದ…!

ಬಹುಭಾಷಾ ನಟನಾಗಿ ಹೆಸರು ಗಳಿಸಿದ್ದ ಪ್ರಕಾಶ್ ರೈ ಇದೀಗ ಕರ್ನಾಟಕದಲ್ಲಿ ರಾಜಕೀಯ ಪ್ರೇರಿತವಾಗಿ ಮಾತನಾಡುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ.

ಸದಾ ಮೋದಿ ಮತ್ತು ಯೋಗಿಯ ವಿಚಾರವಾಗಿ ಹೇಳಿಕೆ ನೀಡುತ್ತಿರುವ ಪ್ರಕಾಶ್ ರೈ ಕರ್ನಾಟಕದ ಕಾಂಗ್ರೆಸ್ ನ ಗುಲಾಮರಂತೆ ವರ್ತಿಸುತ್ತಿದ್ದಾರೆ…!!

ಕರ್ನಾಟಕದಲ್ಲಿ ನಡೆಯುವ ಘಟನೆಗಳಿಗೆ ನೇರವಾಗಿ ಮೋದಿಯೇ ಕಾರಣ ಎಂಬಂತೆ ಬಿಂಬಿಸುವ ಪ್ರಕಾಶ್ ರೈ ಕರ್ನಾಟಕದ ರಾಜ್ಯ ಕಾಂಗ್ರೆಸ್ ಸರಕಾರದಿಂದ ಲಾಭ ಪಡೆಯುತ್ತಿರುವುದು ಗಮನಿಸಬೇಕಾದ ಅಂಶ.

ಒಟ್ಟಾರೆ ಇಂದು ನಮ್ಮ ಪೋಸ್ಟ್ ಕಾರ್ಡ್ ಮಾಧ್ಯಮ ಅದಾಗಲೇ ಹೇಳಿದಂತೆ, ಇಂದು ಗೌರಿ ಕೊಲೆಯನ್ನು ತಾತ್ಸಾರವಾಗಿ ಪರಿಗಣಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರು ಪ್ರತಿನಿದಿಸುವ ಭಾರತೀಯ ಜನತಾ ಪಕ್ಷವನ್ನು ವಾಚಾಮಗೋಚರ ತೆಗಳಲು ಮರೆತಿಲ್ಲ. ಇದು ನಿಜವಾದ ದೇಶದ್ರೋಹಿಗಳು ಹಾಗೂ ಸೋಗಲಾಡಿ ಜಾತ್ಯಾತೀತವಾದಿಗಳ ನಿಜಮುಖ. ಈ ದೇಶದ್ರೋಹಿಗಳು ಮುಂದಿನ ವಿಧಾನ ಸಭಾ ಚುನಾವಣೆಯಲ್ಲೂ ಇದನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

source: public tv

-ಸುನಿಲ್ ಅರ್ಜುನ್

Tags

Related Articles

Close