ಪ್ರಚಲಿತ

ಚಿದಂಬರಂ ಪುತ್ರನ ಭ್ರಷ್ಟಾಚಾರದ ಕುರಿತು ಸಿಬಿಐ ಸುಪ್ರೀಂಗೆ ಹೇಳಿದ್ದೇನು ಗೊತ್ತಾ?!! ಕಾಂಗ್ರೆಸ್‍ಗಿದು ಶಾಕಿಂಗ್ ನ್ಯೂಸ್!!!

ಕಾಂಗ್ರೆಸ್‍ಗೆ ಇದು ನಿಜವಾಗಿಯೂ ಶಾಕಿಂಗ್ ನ್ಯೂಸ್. ಭ್ರಷ್ಟಾಚಾರ, ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪ ಹೊತ್ತಿರುವ ಕೇಂದ್ರದ ಮಾಜಿ ಸಚಿವ
ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ತನಿಖೆ ನಡೆಯುತ್ತಿದೆ. ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಕಾರ್ತಿ ಚಿದಂಬರಂ ಮೇಲಿದೆ. ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದು, ಕಾರ್ತಿ ಚಿದಂಬರಂ ವಿದೇಶಕ್ಕೆ
ಪರಾರಿಯಾಗಬಹುದು ಎಂಬ ಶಂಕೆಯನ್ನು ಸಿಬಿಐ ವ್ಯಕ್ತಪಡಿಸಿದೆ.

ಅದಕ್ಕಾಗಿ ಸಿಬಿಐ ಮಾಡಿದ್ದೇನು ಗೊತ್ತಾ?

ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು ವಿದೇಶದಲ್ಲಿರುವ ತಮ್ಮ ಹಲವು ಬ್ಯಾಂಕ್ ಖಾತೆಗಳನ್ನು
ಕ್ಲೋಸ್ ಮಾಡುತ್ತಿರುವುದರಿಂದ ಅವರ ವಿದೇಶ ಪ್ರಯಾಣ ತಡೆಯುವುದಕ್ಕಾಗಿ ಸಿಬಿಐ ಆತನ ವಿರುದ್ಧ ಲುಕ್‍ಔಟ್ ನೋಟಿಸ್ ಜಾರಿ ಮಾಡಿದೆ. ಈ ವಿಷಯವನ್ನು
ಖುದ್ದಾಗಿ ಸಿಬಿಐ ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ. ಈ ವೇಳೆ ಸಿಬಿಐ ಮಹತ್ವದ ಅಂಶವೊಂದನ್ನು ಸುಪ್ರೀಂ ಕೋರ್ಟಲ್ಲಿ ವಿವರಿಸಿದೆ.

ಅದೇನು ಗೊತ್ತಾ?

ಕಾರ್ತಿ ಚಿದಂಬರಂ ವಿರುದ್ಧದ ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ಹಲವು ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‍ಗೆ ತನಿಖಾ ಸಂಸ್ಥೆ ವಿವರಿಸಿದೆ. ಇದರಿಂದ ಭವಿಷ್ಯದಲ್ಲಿ ಚಿದಂಬರಂ ಕುಟುಂಬಕ್ಕೆ ಕಂಟಕ ಎದುರಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿದೆ.

ಕಾರ್ತಿ ಚಿದಂಬರಂ ವಿರುದ್ಧ ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‍ಗೆ ನೀಡಲು ಸಿಬಿಐ ಬಯಸಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠಕ್ಕೆ ತಿಳಿಸಿರುವುದು ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಆದರೆ ಇದಕ್ಕೆ ಆರೋಪಿ ಪರ ವಕೀಲ ಕಪಿಲ್ ಸಿಬಲ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರಿಗೆ ಸಿಬಿಐ ಹಲವು ಬಾರಿ ಸಮನ್ಸ್ ಜಾರಿ ಮಾಡಿದೆ. ಆದರೆ ಕಾರ್ತಿ ಚಿದಂಬರಂ ಅದಕ್ಕೆ ಸಾಕಷ್ಟು ಬಾರಿ ತಡೆಯಾಜ್ಞೆ ತಂದಿದ್ದರು. ಅದಕ್ಕಾಗಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಕಾರ್ತಿ ವಿರುದ್ಧ ಸಿಬಿಐ ಲುಕ್‍ಔಟ್ ನೋಟಿಸ್ ಸಹ ನೀಡಿದೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಕೇಸಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರ ಹೆಸರು ಕೇಳಿಬಂದಿತ್ತು.
ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ಬೇನಾಮಿ ಹೆಸರಲ್ಲಿ ಭಾರತ ಮತ್ತು ವಿದೇಶದಲ್ಲಿ ಸಾವಿರಾರು ಕೋಟಿ ರೂ. ಆಸ್ತಿ ಸಂಪಾದಿಸಿದ್ದಾರೆ ಎಂಬ ಸ್ಫೋಟಕ
ಮಾಹಿತಿ ಹೊರಬಿದ್ದಿತ್ತು.

ಸಾಮಾನ್ಯವಾಗಿ ಬೇನಾಮಿ ಆಸ್ತಿಗಳು ಅದರ ನಿಜವಾದ ಮಾಲಕರ ಹೆಸರಲ್ಲಿರದೆ ಮಾಲಕರ ನಂಬಿಕಸ್ಥರ ಹೆಸರಿನಲ್ಲಿ ಇರುತ್ತವೆ. ಆದರೆ, ಕಾರ್ತಿ ಚಿದಂಬರಂ ಅವರಿಗೆ ‘ಬೇನಾಮಿ’ಗಳ ಮೇಲೆ ವಿಶ್ವಾಸವಿಲ್ಲವೇನೋ ಎಂಬಂತೆ, ದೇಶ-ವಿದೇಶಗಳಲ್ಲಿರುವ ಬೇನಾಮಿ ಆಸ್ತಿಗಳು, ತಾವು ಗತಿಸಿದ ನಂತರ ತಮ್ಮ ಪುತ್ರಿಗೆ ಸೇರಬೇಕು ಎಂಬ ಉಯಿಲು ಬರೆದಿಡಿಸಿದ್ದಾರೆ. ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಆದಾಯ ತೆರಿಗೆ ದಾಳಿಯಲ್ಲಿ ಈ ಉಯಿಲುಗಳು ಕಾರ್ತಿ ಚಿದಂಬರಂ ಅವರ ಕಪಾಟಿನಲ್ಲಿ ಪತ್ತೆಯಾಗಿವೆ ಎಂದು ಚೆನ್ನೈನ `ದ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್’ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದು ಸಾಕಷ್ಟು ಕೋಲಾಹಲವನ್ನೇ ಸೃಷ್ಟಿಸಿತ್ತು.

ಚಿದಂಬರಂ ಪುತ್ರನ ಮಾಲಕತ್ವದಲ್ಲಿ ಅಡ್ವಾಂಟೇಜ್ ಸ್ಟ್ರೆಟಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿ| ಎಂಬ ಕಂಪೆನಿ ಇದೆ. ಈ ಕಂಪೆನಿಯ ಮೂಲಕ ಬೇನಾಮಿಯಾಗಿ ಕಾರ್ತಿ ಅವರು ಭಾರತದ ಹಲವೆಡೆ ಮತ್ತು ವಿಶ್ವದ ಅನೇಕ ಕಡೆ ವ್ಯವಹಾರ ನಡೆಸುತ್ತಿದ್ದಾರೆ. ಇದರ ಮೌಲ್ಯ ಹಲವು ನೂರಾರು, ಸಾವಿರಾರು ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ಕೋಟಿ ರೂ.ಗಳಲ್ಲಿದೆ. ಸ್ನೇಹಿತರನ್ನು ಬೇನಾಮಿ ಆಸ್ತಿಗೆ ವಾರಸುದಾರರನ್ನಾಗಿ ಮಾಡಲಾಗಿದೆ. ಇವರ ಕಾಲಾನಂತರ ಕಂಪೆನಿಯ ಎಲ್ಲ ಷೇರುಗಳು ಕಾರ್ತಿ ಚಿದಂಬರಂ ಅವರ ಪುತ್ರಿಗೆ ಸಿಗುವಂತೆ ಉಯಿಲಿನಲ್ಲಿ ಬರೆದಿಡಲಾಗಿದೆ ಎಂಬ ಸ್ಫೋಟಕ ವರದಿಯಲ್ಲಿ ವಿವರಿಸಿತ್ತು.

ಭಾರತವಷ್ಟೇ ಅಲ್ಲದೆ, ಲಂಡನ್, ಸಿಂಗಾಪುರ, ದುಬೈ, ಆಫ್ರಿಕಾ, ಫಿಲಿಪ್ಪೀನ್ಸ್, ಥಾಯ್ಲೆಂಡ್, ಮಲೇಷ್ಯಾ, ಶ್ರೀಲಂಕಾ, ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಫ್ರಾನ್ಸ್, ಅಮೆರಿಕ ಸ್ವಿಜರ್ಲೆಂಡ್, ಗ್ರೀಸ್ ಮತ್ತು ಸ್ಪೇನ್‍ನಲ್ಲೂ ಅಡ್ವಾಂಟೇಜ್‍ನ ಸಾವಿರಾರು ಕೋಟಿ ರೂ. ಮೊತ್ತದ ಬೇನಾಮಿ ಆಸ್ತಿ ಇದೆ ಎಂದು ವರದಿ ವಿವರಿಸಿದೆ. ಬಹುಶಃ ಅಂಟಾರ್ಟಿಕಾವೊಂದನ್ನು ಬಿಟ್ಟು ಬೇರೆಲ್ಲೆಡೆ ಕಾರ್ತಿ ಚಿದಂಬರಂ ಬೇನಾಮಿ ಸಾಮ್ರಾಜ್ಯವಿದೆ ಎಂದು ವರದಿ ವ್ಯಂಗ್ಯವಾಡಿತ್ತು.

ಕಾರ್ತಿ ಚಿದಂಬರಂ ಅವರಿಗೇ ಸೇರಿದ ಅಡ್ವಾಂಟೇಜ್ ಇಂಡಿಯಾ ಎಂಬ ಕಂಪೆನಿಯಿದೆ. ಆದರೆ ಕಂಪೆನಿಯಲ್ಲಿ ಕಾರ್ತಿ ಅವರ ಹೆಸರು ಅಧಿಕೃತವಾಗಿ ನಮೂದಾಗಿಲ್ಲ. ಇದಕ್ಕೆ ಪದ್ಮಾ ವಿಶ್ವನಾಥನ್, ಸಿಬಿಎನ್ ರೆಡ್ಡಿ, ರವಿ ವಿಶ್ವನಾಥನ್ ಎಂಬ ಪಾಲುದಾರರಿದ್ದು, ಇವರೆಲ್ಲ ಕಾರ್ತಿ ಅವರ ನಾಮಿನಿಗಳು. ಕಾರ್ತಿಯರವ ಕಾಲಾನಂತರ ಕಂಪೆನಿಯ ಶೇ.60ರಷ್ಟು ಪಾಲು ಅವರ ಪುತ್ರಿ ಅದಿತಿ ನಳಿನಿ ಚಿದಂಬರಂ ಅವರಿಗೆ ಬರಬೇಕು ಎಂದು ಉಯಿಲು ಬರೆಯಲಾಗಿದೆ. ಇನ್ನು ಅಡ್ವಾಂಟೇಜ್ ಸಿಂಗಾಪುರ ಎಂಬ ಬೇರೆ ಕಂಪೆನಿಯೂ ಸಿಂಗಾಪುರದಲ್ಲಿದ್ದು, ಇದು ಅಡ್ವಾಂಟೇಜ್ ಇಂಡಿಯಾ ಅಧೀನದಲ್ಲೇ ಬರುತ್ತದೆ. ಹೀಗಾಗಿ ಅಡ್ವಾಂಟೇಜ್ ಇಂಡಿಯಾ ಮತ್ತು ಸಿಂಗಾಪುರದ ಬಹುಪಾಲು ಆಸ್ತಿಯೆಲ್ಲ ಕಾರ್ತಿ ಪುತ್ರಿಗೆ ಸೇರುತ್ತದೆ. ಅಲ್ಲದೆ, ಮೋಹನನ್ ರಾಜೇಶ್ ಎಂಬ ಕಾರ್ತಿ ಅವರ ಪಕ್ಕದ ಮನೆಯ ವ್ಯಕ್ತಿ ಇದ್ದು, ಈತ ಕಾರ್ತಿ ಅವರ ಇನ್ನೊಂದು ಕಂಪೆನಿಯಾದ ಆಸ್‍ಬ್ರಿಡ್ಜ್ ಎಂಬುದರ `ಬೇನಾಮಿ’ ಮಾಲೀಕ. ಕಾರ್ತಿ ಅಣತಿಯಂತೆ ಹಣದ ವ್ಯವಹಾರ ನಡೆಸುತ್ತಾನೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಕಾನೂನು ಸಮರ ನಡೆಸುತ್ತಿರುವ ಸುಬ್ರಹ್ಮಣಿಯನ್ ಸ್ವಾಮಿ ಅವರು ಕಾರ್ತಿ ಚಿದಂಬರಂ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿ 21 ಅಘೋಷಿತ ಬ್ಯಾಂಕ್ ಖಾತೆಗಳ
ವಿವರಗಳನ್ನು ನೀಡಿದ್ದರು. ಈ ಖಾತೆಗಳನ್ನು ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ನಿಯಂತ್ರಿಸುತ್ತಿದ್ದಾರೆ. ವಿದೇಶದ ನಾನಾ ಬ್ಯಾಂಕ್‍ಗಳಲ್ಲಿ ತಂದೆ ಮಗ ಖಾತೆಗಳನ್ನು ಹೊಂದಿದ್ದು ಅದರಲ್ಲಿ ಕೋಟಿಗಟ್ಟಲೆ ಹಣವಿದೆ ಎಂದು ಬ್ಯಾಂಕ್‍ಗಳ ಹೆಸರನ್ನೂ ಸ್ವಾಮಿ ಉಲ್ಲೇಖಿಸಿದ್ದರು. ಮೊನಕೋ ದೇಶದ ಬರ್ಕೇಲ್ಸ್ ಬ್ಯಾಂಕ್, ಯುನೈಟೆಡ್ ಕಿಂಗ್‍ಡಂನ ಮೆಟ್ರೊ ಬ್ಯಾಂಕ್, ಸಿಂಗಾಪುರದ ಸ್ಟಾಂಡರ್ಡ್ ಕ್ಯಾರೆಕ್ಟೆಡ್ ಬ್ಯಾಂಕ್, ಸಿಂಗಾಪುರದ ಒಎಸ್‍ಬಿಸಿ ಬ್ಯಾಂಕ್, ಯುಕೆಯ ಎಚ್‍ಎಸ್‍ಬಿಸಿ, ಫ್ರಾನ್ಸ್‍ನ ಡ್ಯೂಷೆ ಬ್ಯಾಂಕ್, ಸ್ವಿಝರ್ಲ್ಯಾಂಡ್‍ನ ಯುಬಿಎಸ್ ಬ್ಯಾಂಕ್, ಕ್ಯಾಲಿಫೆÇೀರ್ನಿಯಾದ ವೆಲ್ಸ್ ಫಾರ್ಗೊ ಬ್ಯಾಂಕ್ ಇತ್ಯಾದಿಗಳಲ್ಲಿ ಹಣ ಇಟ್ಟಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು.

ಒಟ್ಟಿನಲ್ಲಿ ಚಿದಂಬರಂ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಲುಕೌಟ್  ಜಾರಿಗೊಳಿಸಲಾಗಿರುವುದರಿಂದ ತನಿಖೆ ಒಂದು ಹಂತಕ್ಕೆ ಬಂದು ನಿಂತಿದೆ ಎಂದೇ ಹೇಳಬಹುದು.

-ಚೇಕಿತಾನ

Tags

Related Articles

Close