ಪ್ರಚಲಿತ

ವಿಶೇಷ ಸುದ್ದಿ! ಲಡಾಖ್ ನಲ್ಲಾಯ್ತು ಚೀನಾಕೆ ಮತ್ತೆ ಭಾರೀ ಮುಖಭಂಗ!!!

ಚೀನಾ-ಭಾರತದ ನಡುವಿನ ದೋಕ್ಲಾಂ ವಿವಾದದಲ್ಲಿ ಚೀನಾ ಹಿಂದೆಸರಿದಿದ್ದರೂ ಕೂಡ ಭಾರತದ ಮೇಲಿರುವ ದ್ವೇಷವನ್ನು ಮಾತ್ರ ಇನ್ನು ಬಿಡುತ್ತಿಲ್ಲ ಎನ್ನುವ ವಿಚಾರ ಗೊತ್ತೇ ಇದೆ. ಇನ್ನು ಭಾರತ ಮತ್ತು ಚೀನಾ ಗಡಿಯ ದೋಕ್ಲಾಂನಲ್ಲಿ ಉಂಟಾಗಿದ್ದ ಬಿಕ್ಕಟ್ಟಿನ ನಂತರ ಭಾರತ ಎಚ್ಚೆತ್ತುಕೊಂಡಿದ್ದು, ಈಗ ಭಾರತ ಲಡಾಖ್ ವಲಯದಲ್ಲಿ ಜಗತ್ತಿನ ಅತೀ ಎತ್ತರದ ವಾಹನ ಸಂಚರಿಸುವ ರಸ್ತೆ ನಿರ್ಮಾಣ ಮಾಡುವ ಮೂಲಕ ಚೀನಾಗೆ ತಕ್ಕ ಪ್ರತ್ಯುತ್ತರ ನೀಡಿದೆ!!

ಹೌದು… ದೋಕ್ಲಾಂ ಗಡಿ ವಿವಾದದ ನಂತರ ಭಾರತ ಚೀನಾ ಗಡಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಭಾರತ ಸರಕಾರ ಇದೀಗ ಭಾರತದ ಲಡಾಖ್ ವಲಯದಲ್ಲಿ ಜಗತ್ತಿನ ಅತೀ ಎತ್ತರದ ವಾಹನ ಸಂಚರಿಸುವ ರಸ್ತೆ ನಿರ್ಮಾಣ ಮಾಡಿದೆ!! ಆದರೆ ಈ ರಸ್ತೆ ನಿರ್ಮಾಣದ ಕುರಿತ ಹಿಂದಿರುವ ಶ್ರಮವನ್ನು ಕೇಳಿದರೆ ಒಂದು ಕ್ಷಣ ಬೆಚ್ಚಿ ಬೀಳಬಹುದು. ಯಾಕೆಂದರೆ ಜೀವವನ್ನೇ ಪಣಕ್ಕಿಟ್ಟು ಮಾಡುವಂತಹ ಕೆಲಸ ಇದಾಗಿತ್ತು!!

ಹೌದು… ಈ ರಸ್ತೆ ನಿರ್ಮಿಸುವುದು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ಸಮುದ್ರ ಮಟ್ಟದಿಂದ 19 ಸಾವಿರಕ್ಕೂ ಹೆಚ್ಚು ಎತ್ತರವಿರುವುದರಿಂದ ಇಲ್ಲಿ ಆಮ್ಲಜನಕದ ಪ್ರಮಾಣ ಸಾಕಷ್ಟು ಕಡಿಮೆ ಇದ್ದು, ಉಸಿರಾಡಲು ಯೋಗ್ಯವಾಗಿಲ್ಲದ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ಹಾಗಾಗಿ ರಸ್ತೆ ನಿರ್ಮಿಸುವ ಕಾರ್ಮಿಕರು ಪ್ರತೀ 10 ನಿಮಿಷಕ್ಕೆ ಈ ಕೆಲಸ ಕಾರ್ಯಗಳಿಂದ ಒಂದು ಸಲ ಕೆಳಗಿಳಿದು ಬರಬೇಕಿತ್ತು!! ಇದರ ಜತೆಗೆ ಇಲ್ಲಿ ಬೇಸಿಗೆಯಲ್ಲಿರುವ ತಾಪಮಾನವು “10 ರಿಂದ -20 ಡಿಗ್ರಿ ಸೆಲ್ಸಿಯಸ್” ಇದ್ದರೆ, ಚಳಿಗಾಲದಲ್ಲಿ -40 ಡಿಗ್ರಿ ಇರುತ್ತಿತ್ತು!! ಹಾಗಾಗಿ ಇಲ್ಲಿ ಕೆಲಸ ಮಾಡುವುದು ಜೀವವನ್ನೇ ಪಟಕ್ಕಿಟ್ಟು ಮಾಡಿದ ಹೋರಾಟವಾಗಿತ್ತು ಎಂದರೆ ತಪ್ಪಾಗಲಾರದು!! ಏಕೆಂದರೆ ಕಠಿಣವಾದ ತಾಪಮಾನವನ್ನು ಎದುರಿಸುತ್ತಾ ಜಗತ್ತಿನಲ್ಲಿಯೇ ಅತೀ ಎತ್ತರವಾದ ರಸ್ತೆ ನಿರ್ಮಿಸುವುದು ಎಂದರೆ ಸುಲಭದ ಮಾತೇ??

ಈ ಒಂದು ಅತೀ ಎತ್ತರವಾದ ರಸ್ತೆಯನ್ನು ಬಾರ್ಡರ್ ರೋಡ್ ಆರ್ಗನೈಸೇಷನ್ (ಬಿಆರ್‍ಒ) “ಪ್ರಾಜೆಕ್ಟ್ ಹಿಮಾಂಕ್” ಯೋಜನೆಯಡಿ ಲಡಾಖ್‍ನಲ್ಲಿ ಈ ರಸ್ತೆ ನಿರ್ಮಿಸಿದೆ. ಇದು ಒಟ್ಟು 86 ಕಿಲೋ ಮೀಟರ್ ಉದ್ದವಿದ್ದು, ಚಿಸುಮ್ಲೆ ಹಾಗೂ ಡೆಮ್ಚೋಕ್ ಗ್ರಾಮಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಷ್ಟೇ ಅಲ್ಲದೇ, ಈ ರಸ್ತೆಯು ಸಮುದ್ರ ಮಟ್ಟದಿಂದ 19 ಸಾವಿರದ 300 ಅಡಿ ಎತ್ತರದಲ್ಲಿರುವುದೇ ಇದರ ವಿಶೇಷತೆಯಾಗಿದೆ!! ಇನ್ನು ಈ ರಸ್ತೆ ನಿರ್ಮಾಣದಲ್ಲಿ ತೊಡಗಿಸಿಕೊಂಡ ಸಿಬ್ಬಂದಿಗೆ ನಾನಾ ರೀತಿಯ ಸಮಸ್ಯೆಗಳು ಕಾಡಿದ್ದು, ಬಹುಮುಖ್ಯವಾಗಿ ಇಲ್ಲಿನ ತಾಪಮಾನದಿಂದಾಗಿ ಬ್ಲಡ್ ಪ್ರೇಶರ್, ಕಣ್ಣಿನ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಿದ್ದವು. ಆದರೆ, ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸಿಯು ಕೂಡ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ!!

ಈ ಹಿಂದೆ ಭಾರತ ಹಾಗೂ ಚೀನಾ ನಡುವಣ ಗಡಿ ಸಮಸ್ಯೆಯಿಂದಾಗಿ ಉಂಟಾಗಿರುವ ವಿವಾದವನ್ನು ಸಮರ್ಥವಾಗಿ ನಿಭಾಯಿಸದಿದ್ದಲ್ಲಿ ಎರಡೂ ದೇಶಗಳ ನಡುವೆ ಯುದ್ಧ ಸಂಭವಿಸಲಿದೆ ಎಂದು ಗ್ಲೋಬಲ್ ಟೈಮ್ಸ್ ತನ್ನ ವರದಿಯಲ್ಲಿ ಎಚ್ಚರಿಕೆಯನ್ನು ನೀಡಿತ್ತು!! ಇದರ ಜೊತೆ “ಒಂದು ವೇಳೆ ಯುದ್ಧ ಸಂಭವಿಸಿದರೆ ಚೀನಾ ತನ್ನ ಗಡಿ ಹಾಗೂ ಭೂ ಪ್ರದೇಶದಲ್ಲಿ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲಿದೆ. ಇನ್ನು ಯುದ್ಧದಲ್ಲಿ ಚೀನಾ ಸೈನಿಕರು ಭಾರತದ 4,383 ಸೈನಿಕರನ್ನು ಹಾಗೂ ಭಾರತದ ಸೈನಿಕರು ಚೀನಾದ 722 ಸೈನಿಕರನ್ನು ಹತ್ಯೆ ಮಾಡಿದ್ದರು. ಈ ಬಳಿಕ ಚೀನಾ ತನ್ನ ಭೂ ಪ್ರದೇಶವನ್ನು ವಿಸ್ತರಿಸಿಕೊಂಡಿದೆ. ಹಾಗಾಗಿ 1962ರ ಯುದ್ಧದ ಇತಿಹಾಸದಿಂದ ಭಾರತ ಸೇನೆ ಪಾಠ ಕಲಿಯಲಿ” ಎಂದು ವರದಿ ಮಾಡಿತ್ತು!!

ಅಷ್ಟೇ ಅಲ್ಲದೇ, ಭಾರತ ಮತ್ತು ಚೀನಾ, ಜಮ್ಮು ಕಾಶ್ಮೀರದಿಂದ ಅರುಣಾಚಲ ಪ್ರದೇಶದ ವರೆಗೆ ಒಟ್ಟು 3,488 ಕಿ.ಮೀ ಗಳಷ್ಟು ಉದ್ದದ ಗಡಿ ಪ್ರದೇಶವನ್ನು
ಹಂಚಿಕೊಂಡಿವೆ. ಇನ್ನು ಗಡಿ ಸಮಸ್ಯೆಯಿಂದಾಗಿ ಸಿಕ್ಕಿಂಗೆ ಹೊಂದಿಕೊಂಡಿರುವ 220 ಕಿ.ಮೀ ಉದ್ದದ ಗಡಿ ಪ್ರದೇಶದಲ್ಲಿ ಉಭಯ ರಾಷ್ಟ್ರಗಳು ಸೇನಾ ಪಡೆಗಳನ್ನು ನಿಯೋಜಿಸಿವೆ. ಆದರೆ ಚೀನಾ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಸಚಿವ ಅರುಣ್ ಜೇಟ್ಲಿ ಅವರು, “1962ರ ಭಾರತಕ್ಕಿಂತ 2017ರ ಭಾರತ ಭಿನ್ನವಾಗಿದೆ” ಎಂದು ತಿರುಗೇಟು ನೀಡಿದ್ದರು. ಹಾಗಾಗಿ ಈ ರಸ್ತೆ ನಿರ್ಮಾಣದ ಮೂಲಕ ಅದನ್ನೀಗ ಸಾಬೀತು ಮಾಡಲಿದ್ದಾರೆ ಎನ್ನುವುದು ಖಚಿತ!!

ಈ ಹಿಂದೆ ಚೀನಾ ಗಡಿಯಲ್ಲಿ 2020-21ರ ಅವಧಿಯೊಳಗೆ ಹಲವು ಮಹತ್ವದ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಬಾರ್ಡರ್ ರೋಡ್ ಆರ್ಗನೈಸೇಷನ್
(ಬಿಆರ್‍ಒ) ಶ್ರಮಿಸುತ್ತಿದ್ದು, ಇದರಲ್ಲಿ ಒಟ್ಟು 61 ರಸ್ತೆಗಳ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿ, 27 ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಿತ್ತು!!! ಇದರಲ್ಲಿ 34
ರಸ್ತೆಗಳನ್ನು ನಿರ್ಮಾಣ ಮಾಡಬೇಕಾಗಿತ್ತು ಕೂಡ!! ಈ ಮೂಲಕ ಮುಂದಿನ ದಿನಗಳಲ್ಲಿ ದೋಕ್ಲಾಂ ನಂತಹ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಗಡಿ ಭಾಗದಲ್ಲಿ ತ್ವರಿತವಾಗಿ ಸೇನಾ ಜಮಾವಣೆ ಮಾಡಲು ಸಾಧ್ಯವಾಗುತ್ತದೆ ಎನ್ನುವುದನ್ನು ಆ ಸಂದರ್ಭದಲ್ಲಿ ಹೇಳಲಾಗಿತ್ತು!!

ಕಳೆದ ವರ್ಷ ಬಿಆರ್‍ಒ ಚೀನಾ ಗಡಿ ಭಾಗದಲ್ಲಿ 147 ಕಿ.ಮೀ. ರಸ್ತೆ ನಿರ್ಮಾಣಗೊಂಡಿತ್ತು. ಹಾಗಾಗಿ 2014-15ರಲ್ಲಿ 107 ಕಿ.ಮೀ. ರಸ್ತೆ ನಿರ್ಮಾಣವಾಗಿದ್ದರೆ,
2016-17ನೇ ಸಾಲಿನಲ್ಲಿ ಒಟ್ಟು 174 ರಿಂದ 233 ಕಿ.ಮೀ. ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿದೆ!! ಹಾಗಾಗಿ ಭಾರತ ಮತ್ತು ಚೀನಾ ಗಡಿಯ ಬಹುತೇಕ
ಭಾಗ ಹಿಮಾಲಯದಲ್ಲಿರುವುದರಿಂದ ರಸ್ತೆ ನಿರ್ಮಾಣಕ್ಕೆ ವರ್ಷದಲ್ಲಿ ಕೇವಲ 4-6 ತಿಂಗಳು ಮಾತ್ರ ಅನುಕೂಲಕರ ಸಮಯ ಸಿಗುತ್ತದೆ. ಇಷ್ಟು ಅತ್ಯಲ್ಪ ಸಮಯದಲ್ಲಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದ ರಸ್ತೆ ನಿರ್ಮಿಸಲು ಬಿಆರ್‍ಒ ಅಗತ್ಯ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಸಹ 100 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಿತ್ತು!! ಆದರೆ, ಇದೀಗ ಜಗತ್ತಿನಲ್ಲಿಯೇ ಅತ್ಯಂತ ಎತ್ತರವಾದ ರಸ್ತೆ ನಿರ್ಮಾಣದಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ!!

ಇನ್ನು ಈ ರಸ್ತೆಯ ನಿರ್ಮಾಣದಿಂದ ಸೇನೆಗೆ ಶಸ್ತ್ರಾಸ್ತ್ರಗಳನ್ನು, ಸರಕುಗಳನ್ನು ಸಾಗಿಸಲು ಹಾಗು ವಾಹನಗಳ ಮೂಲಕ ಗಡಿ ತಲುಪಲು ಅನುಕೂಲವಾಗುತ್ತದೆ ಎಂದು ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠ ಅವರು ಹೇಳಿದ್ದಾರೆ!! ಅಂತೂ ದೋಕ್ಲಾಂ ಗಡಿ ವಿವಾದದ ನಂತರ ಭಾರತ, ಚೀನಾ ಗಡಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಮಾತ್ರ ಹೆಮ್ಮೆಯ ವಿಚಾರ!!

Source :http://vijayavani.net/border-roads-organisation-has-constructed-worlds-highest-motorable-road-in-ladakh/

– ಅಲೋಖಾ

Tags

Related Articles

Close