ಪ್ರಚಲಿತ

ಚೀನಾದ ಪಕ್ಕದ ಮನೆಗೆ ಹೋಗಿ ಆ ದೇಶವನ್ನು ಬೆಚ್ಚಿ ಬೀಳಿಸಿದ ಮೋದಿ!! ಇಸ್ರೋ ಮಾಡುತ್ತಿರುವ ಮತ್ತೊಂದು ಸಾಹಸವೇನು ಗೊತ್ತೇ?!

ಪ್ರಧಾನಿ ಮೋದಿಯವರ ಆಡಳಿತದ ಕಾರ್ಯ ವೈಖರಿಯೇ ಇಡೀ ಭಾರತವನ್ನಲ್ಲದೆ ಇಡೀ ವಿಶ್ವವನ್ನೇ ಮೂಕವಿಸ್ಮಿತರನ್ನಾಗಿ ಮಾಡಿದೆ… ಶತ್ರು ರಾಷ್ಟ್ರಗಳೇ ಮೋದಿಜೀ ಕಾರ್ಯವೈಖರಿಯನ್ನು ನೋಡಿ ಹೊಗಳುತ್ತಿದೆ.. ನರೇಂದ್ರ ಮೋದಿಯೇ ಹಾಗೆ. ಅವರ ಚಿಂತನೆಗಳು ಯೋಚನೆಗಳು ಆಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಯಾರಿಗೂ ಊಹಿಸಲೂ ಆಗುವುದಿಲ್ಲ. ಅಂತಹ ಹಲವಾರು ದಿಟ್ಟ ನಿರ್ಧಾರಗಳನ್ನ ಅನೇಕ ಬಾರಿ ದಿಢೀರ್ ಘೋಷಿಸಿದ್ದಾರೆ ಮೋದಿಯವರು. ತಮ್ಮ ಸತತ ಪ್ರಯತ್ನಗಳಿಂದಾಗಿ ಭಾರತವನ್ನ ಮತ್ತೆ ವಿಶ್ವಮಟ್ಟದಲ್ಲಿ ಮತ್ತೆ ಕಂಗೊಳಿಸುವಂತೆ ಮಾಡಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ.

ಸದ್ಯ ದಕ್ಷಿಣ ಏಷ್ಯಾದ ಹತ್ತು ರಾಷ್ಟ್ರಗಳ ಅಧ್ಯಕ್ಷರು ಗಳನ್ನ ಭಾರತದ 69 ನೇ ಗಣರಾಜ್ಯೋತ್ಸವಕ್ಕೆ ಅತಿಥಿಗಳನ್ನಾಗಿ ಆಹ್ವಾನಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದರ ಹಿಂದಿದ್ದುದ್ದು ಅಕ್ಷರಶಃ ಮೋದಿಯವರ ಚಾಣಾಕ್ಷ ರಾಜತಾಂತ್ರಿಕತೆ. ಭಾರತ ಹಾಗು ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಬಂಧಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಭಾರತದಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಿ ಜೊತೆ ಜೊತೆಗೆ ಅವರನ್ನ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳನ್ನಾಗಿಯೂ ಕರೆಯಲಾಗಿತ್ತು.

ಸಾರ್ಕ್ ರಾಷ್ಟ್ರಗಳ ಮೇಲೆ ಮೋದಿ ಕಣ್ಣು..

ಮೋದಿಯವರು ಪ್ರಧಾನಿಯಾದ ತಕ್ಷಣ ಅಕ್ಕಪಕ್ಕದ ರಾಷ್ಟ್ರಗಳನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದರು. ತನ್ನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ನ ಎಲ್ಲಾ ರಾಷ್ಟ್ರಗಳನ್ನ ಆಹ್ವಾನಿಸಿದರು. ಒಂದೊಂದೇ ನಿರ್ಧಾರಗಳು ಹಾಗು ಸಹಾಯಗಳ ಮೂಲಕ ಪಾಕಿಸ್ತಾನ ಹೊರತು ಪಡಿಸಿ ಎಲ್ಲಾ ಸಾರ್ಕ್ ರಾಷ್ಟ್ರಗಳ ವಿಶ್ವಾಸಗಳಿಸುವಲ್ಲಿ ಸಫಲರಾದರು ಮೋದಿ. ಆದರೆ ಪಾಕಿಸ್ತಾನ ಮಾತ್ರ ಯಾವಾಗಲೂ ಎಲ್ಲಾ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಬಹುದು… ಪಾಕಿಸ್ತಾನ ಮಾತ್ರ ಯಾವಾಗಲೂ ಭಾರತಕ್ಕೆ ವಿರೋಧವನ್ನೇ ಮಾಡುತ್ತಾ ಬರುತ್ತಿದೆ.

ಸಾರ್ಕ್ ರಾಷ್ಟ್ರಗಳ ಮನಗೆದ್ದ ನಂತರ ಇದೀಗ ಮೋದಿಯವರ ಚಿತ್ತ ಆಸಿಯಾನ್ ರಾಷ್ಟ್ರಗಳತ್ತ ನೆಟ್ಟಿದೆ. ಪ್ರಸ್ತುತ ಭಾರತದಲ್ಲಿರುವ ಆಸಿಯಾನ್ ನ ಹತ್ತೂ ರಾಷ್ಟ್ರಗಳ ನಾಯಕರ ಜೊತೆ ಹಲವಾರು ಮಹತ್ವದ ಮಾತುಕತೆಗಳು ನಡೆಯುತ್ತಿವೆ. ಸಾಲು ಸಾಲು ಸಭೆ ನಡೆಸುತ್ತಿರುವ ಪ್ರಧಾನಿ ಮೋದಿ ಹಲವಾರು ಒಪ್ಪಂದಗಳಿಗೆ ವಿವಿಧ ಆಸಿಯಾನ್ ರಾಷ್ಟ್ರಗಳ ಜೊತೆ ಸಹಿ ಹಾಕಿದ್ದಾರೆ.ನವೆಂಬರ್ ಎರಡನೇ ವಾರದಲ್ಲಿ ಮನಿಲಾದಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಹತ್ವದ ಮಾತುಕತೆ ನಡೆಯಿತು.!!

ಉಭಯ ದೇಶಗಳ ನಡುವಿನ ಸಂಬಂಧ ಸಕಾರಾತ್ಮಕ ಬೆಳವಣಿಗೆ ಉದ್ದೇಶದಿಂದ ವೃದ್ಧಿಯಾಗುತ್ತಿದೆ. ಏಷ್ಯಾ ಖಂಡದ ಒಳಿತಿಗೆ ನಮ್ಮ ಸಂಬಂಧಗಳು ಕೊಡುಗೆ ನೀಡಲಿವೆ ಎಂದು ಉಭಯ ನಾಯಕರು ಹೇಳುವ ಮೂಲಕ ಗಟ್ಟಿಗೊಂಡ ಸಂಬಂಧವನ್ನು ತೆರೆದಿಟ್ಟರು.!! ಭದ್ರತೆ, ರಕ್ಷಣೆಗೆ ಸಂಬಂಧಿಸಿದಂತೆ ದೀರ್ಘ ಚರ್ಚೆ ನಡೆಸುವ ಮೂಲಕ ಪರೋಕ್ಷವಾಗಿ ಚೀನಾ, ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ನೆರೆರಾಷ್ಟ್ರಗಳೊಡನೆ ಬಾಂಧವ್ಯ ವೃದ್ಧಿ, ವಿಶ್ವದ ಮಹಾಶಕ್ತಿಗಳೊಡನೆ ಸ್ನೇಹಹಸ್ತ, ಚೀನಾದೊಂದಿಗೆ ಚತುರ ನಡೆ, ಡೋಕ್ಲಾಂ ವಿವಾದಕ್ಕೆ ರಾಜತಾಂತ್ರಿಕವಾಗಿ ದಿಟ್ಟ ಉತ್ತರ-ಹೀಗೆ ಭಾರತದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಮನದಟ್ಟು ಮಾಡಿಸುವ ಮೂಲಕ ವಿದೇಶಾಂಗ ನೀತಿಗೆ ಮತ್ತಷ್ಟು ಬಲ ಬಂದಿರುವುದು ಈ ವರ್ಷದ ಮಹತ್ವದ ಬೆಳವಣಿಗೆ. ನಮ್ಮ ಅಭಿಪ್ರಾಯ, ನಿಲುವುಗಳಿಗೆ ಮನ್ನಣೆ ದೊರೆಯುತ್ತ ವಿವಾದಗಳು ಒಂದೊಂದಾಗಿ ಪರಿಹಾರವಾಗುತ್ತಿರುವುದು ಸಮಾಧಾನಕರ ಬೆಳವಣಿಗೆ. ಪಾಕಿಸ್ತಾನ ಹೊಸ ಕಿತಾಪತಿ ನಡೆಸದಂತೆ ಅಂತಾರಾಷ್ಟ್ರೀಯ ಒತ್ತಡ ತಂದಿರುವುದು, ಭಯೋತ್ಪಾದನೆ ವಿರುದ್ಧ ಸಮರಕ್ಕೆ ಶಕ್ತಿ ತುಂಬಿರುವುದು ಪ್ಲಸ್ ಪಾಯಿಂಟ್.

ವಿಯೆಟ್ನಾಂ ನಲ್ಲಿ ಇಸ್ರೋ ಕೇಂದ್ರ..

ಚೀನಾದ ವಿರೋಧದ ನಡುವೆಯೂ ವಿಯೆಟ್ನಾಂನಲ್ಲಿ ಇಸ್ರೋ ಕೇಂದ್ರ ಆರಂಭಿಸುವ ಭಾರತದ ಪ್ರಯತ್ನ ಸಫಲವಾಗಿದೆ. ಆಸಿಯಾನ್ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಯೆಟ್ನಾಂ ಪ್ರಧಾನಿ ಗುವೆನ್ ಕ್ಸುವನ್ ಫುಕ್ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. 2015ರಲ್ಲಿ ಇಸ್ರೋ ಕೇಂದ್ರ ಆರಂಭಿಸಲು ಆಸಿಯಾನ್ ದೇಶಗಳು ಒಪ್ಪಿಕೊಂಡಿದ್ದವು. ಆದರೆ, ಚೀನಾದ ವಿರೋಧ ಹಾಗೂ ವಿಯೆಟ್ನಾಂ ನಿರಾಸಕ್ತಿಯಿಂದ ಅನುಷ್ಠಾನಕ್ಕೆ ವಿಳಂಬವಾಗಿತ್ತು.

ಭಾರತ ಸೇರಿದಂತೆ ಆಸಿಯಾನ್ ದೇಶಗಳಿಗೆ ಹವಾಮಾನ ವೈಪರೀತ್ಯ ಹಾಗೂ ಇತರ ಮಾಹಿತಿ ರವಾನೆಗೆ ಪ್ರಮುಖವಾಗಿ ಈ ಉಪಗ್ರಹ ಕೇಂದ್ರ ಬಳಕೆಯಾಗಲಿದೆ. ಹಾಗೆಯೇ ಇಂಡೋನೇಷ್ಯಾದ ಬಿಯೋಕ್‍ನಲ್ಲಿರುವ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಲು ಕೂಡ ಇದರಿಂದ ನೆರವಾಗಲಿದೆ. ಚೀನಾ ಗಡಿ ಪ್ರದೇಶ ಹಾಗೂ ವಿವಾದಿತ ದಕ್ಷಿಣ ಚೀನಾ ಸಮುದ್ರದ ಬಳಿಯ ಹೊ ಚಿ ಮಿನ್ ಸಿಟಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿದೆ. ಉಪಗ್ರಹ ನಿಗಾ, ದತ್ತಾಂಶ ಸ್ವೀಕಾರ ಹಾಗೂ ಸಂಸ್ಕರಣೆಯು ಈ ಕೇಂದ್ರದಲ್ಲಿ ನಡೆಯಲಿದೆ.

ಸುಮಾರು 150 ಕೋಟಿ ವೆಚ್ಚದಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿದ್ದು, ಇದು ಕಾರ್ಯಾರಂಭ ಮಾಡಿದ ಬಳಿಕ ಉಪಗ್ರಹ ಚಲನವಲನದ ಮೇಲಿನ ನಿಗಾ ಇನ್ನಷ್ಟು ಸುಲಭವಾಗಲಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಅಂಡಮಾನ್-ನಿಕೋಬಾರ್, ಬ್ರೂನಿ, ಇಂಡೋನೇಷ್ಯಾದ ಬಿಯಾಕ್ ಹಾಗೂ ಮಾರಿಷಸ್?ನಲ್ಲಿ ಇಸ್ರೋ ಉಪಗ್ರಹ ನಿಗಾ ಕೇಂದ್ರಗಳಿವೆ. ಈ 4 ಕೇಂದ್ರಗಳು ವಿಯೊಟ್ನಾಂ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಲಿವೆ.

ದಕ್ಷಿಣ ಚೀನಾ ಸಮುದ್ರದ ಬಳಿಯೇ ಈ ಕೇಂದ್ರ ಸ್ಥಾಪಿಸುತ್ತಿರುವುದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಚೀನಾದ ರಕ್ಷಣಾ ವ್ಯವಸ್ಥೆ ಕುರಿತು ಮಾಹಿತಿ ಕದಿಯುವ ಉದ್ದೇಶದಿಂದಲೇ ಈ ಕೇಂದ್ರ ಆರಂಭಿಸಲಾಗುತ್ತಿದೆ. ಇದರ ಜತೆಗೆ ಚೀನಾ ನೆರೆಹೊರೆಯ ರಾಷ್ಟ್ರಗಳಿಗೂ ಮಾಹಿತಿ ರವಾನಿಸುವ ಭಾರತದ ತಂತ್ರಗಾರಿಕೆ ಎಂದು ದೂರಿದೆ.

ಮೋದಿಯ ಈ ಯೋಜನೆಯಿಂದ ಲಾಭವೇನು?

ಮೋದಿಯವರ ಈ ಮಹತ್ವದ ಯೋಜನೆಯ ಹಿಂದೆ ಬಹುದೊಡ್ಡ ಉದ್ದೇಶವಿದೆ. ಚೀನಾಗೆ ಪಾಠ ಕಲಿಸುವುದಕ್ಕೋಸ್ಕರವೇ ಭಾರತ ಈ ಯೋಜನೆ ಕೈಗೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಭಾರತ ಕಣ್ಗಾವಲು ಇಡಲು ಈ ಯೋಜನೆಯನ್ನ ಭಾರತ ರೂಪಿಸಿದೆ ಎಂದು ಚೀನಾ ಹೇಳಿದೆ. ಈ ಒಪ್ಪಂದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಚೀನಾ ಭಾರತದ ವಿರುದ್ಧ ಕೆಂಡಕಾರಿದೆ.

ಈ ಮಹತ್ವದ ಯೋಜನೆಯಿಂದ ಭಾರತ ಸೇರಿದಂತೆ ಆಸಿಯಾನ್ ದೇಶಗಳಿಗೆ ಹವಾಮಾನ ವೈಪರೀತ್ಯ ಹಾಗು ಇತರ ಮಾಹಿತಿ ರವಾನೆಗೆ ಪ್ರಮುಖವಾಗಿ ಈ ಉಪಗ್ರಹ ಕೇಂದ್ರ ಬಳಕೆಯಾಗಲಿದೆ. ಹಾಗೆಯೇ ಇಂಡೋನೇಷ್ಯಾದ ಬಿಯೋಕ್ ನಲ್ಲಿರುವ ಬಾಹ್ಯಾಕಾಶ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಲು ಕೂಡ ಇದರಿಂದ ನೆರವಾಗಲಿದೆ. ಚೀನಾ ಗಡಿ ಪ್ರದೇಶ ಹಾಗು ವಿವಾದಿತ ದಕ್ಷಿಣ ಚೀನಾ ಸಮುದ್ರದ ಬಳಿಯ ಹೊ ಚಿ ಮಿನ್ ಸಿಟಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿದೆ. ಉಪಗ್ರಹ ನಿಗಾ, ದತ್ತಾಂಶ ಸ್ವೀಕಾರ ಹಾಗೂ ಸಂಸ್ಕರಣೆಯು ಈ ಕೇಂದ್ರದಲ್ಲಿ ನಡೆಯಲಿದೆ.

ಮೋದಿಯ ಬಾಹ್ಯಾಕಾಶ ರಾಜತಾಂತ್ರಿಕತೆ!

ಮೋದಿಯವರು ತಮ್ಮ ರಾಜತಾಂತ್ರಿಕ ನೈಪುಣ್ಯತೆಯಿಂತ ಹಲವಾರು ರಾಷ್ಟ್ರಗಳ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಸಾರ್ಕ್ ರಾಷ್ಟ್ರಗಳಿಗಾಗಿಯೇ ವಿಶೇಷ ಉಪಗ್ರಹ ಉಡಾವಣೆ ಮಾಡಿಸಿದ್ದರು ಮೋದಿ. ಇದೀಗ ಮತ್ತೆ ತಮ್ಮ ಬಾಹ್ಯಾಕಾಶ ರಾಜತಾಂತ್ರಿಕತೆ ಮೂಲಕ ಆಸಿಯಾನ್ ರಾಷ್ಟ್ರಗಳ ಜೊತೆಗಿನ ಸಂಬಂಧ ಬೆಳೆಸುವ ಜೊತೆಗೆ ಚೀನಾಗೆ ಆಘಾತ ನೀಡಲು ಮೋದಿ ಸಜ್ಜಾಗಿದ್ದಾರೆ.

ಏಷ್ಯಾಗೆ ಭಾರತವನ್ನ ಅಧಿಪತಿ ಮಾಡಬೇಕೆನ್ನುವ ಹೆಬ್ಬಯಕೆಯೊಂದಿಗೆ ಮುನ್ನುಗುತ್ತಿರುವ ನರೇಂದ್ರ ಮೋದಿಯವರಿಗೆ ಅಡ್ಡಗಾಲಾಗಿರುವುದು ಚೀನಾ. ಹಾಗಾಗಿ ಒಂದೊಂದೇ ಏಷ್ಯಾದ ಅಕ್ಕಪಕ್ಕದ ರಾಷ್ಟ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದ್ದಾರೆ ಪ್ರಧಾನಿ ಮೋದಿ. ಅದರ ಮುಂದುವರಿದ ಭಾಗವೇ ಆಸಿಯಾನ್ ರಾಷ್ಟ್ರಗಳಿಗೆ ರಾಜಾತಿಥ್ಯ ನೀಡಿದ್ದು.. ಒಟ್ಟಾರೆ ಚೀನಾವನ್ನ ಮಣಿಸಲು ಏಷ್ಯಾದ ಸಾರ್ಕ್ ನಂತರ ಆಸಿಯಾನ್ ಮೇಲೆ ಕಣ್ಣಿಟ್ಟಿದ್ದಾರೆ ಮೋದಿ. ಒಟ್ಟಾರೆ ಭಾರತದ ಪ್ರಧಾನಿಯವರ ರಾಜತಾಂತ್ರಿಕತೆಯನ್ನ ಅಷ್ಟು ಸುಲಭವಾಗಿ ವಿಶ್ಲೇಷಿಸುವುದು ಸಾಧ್ಯವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.. ಮೋದಿಯವರ ಆಡಳಿತ ವೈಖರಿಯೇ ಮೆಚ್ಚುವಂತಹದ್ದು!! ಒಂದು ಬಾರಿ ನಿರ್ಣಯ ಮಾಡಿದರೆ ಸಾಕು ಅದನ್ನು ಮಾಡಿಯೇ ತೀರುಸುತ್ತಾರೆ ನಮ್ಮ ಮೋದಿ!!
– ಪವಿತ್ರ

Tags

Related Articles

Close