ಪ್ರಚಲಿತ

ಜಗತ್ತಿನ ಅತಿಭಯಂಕರ ಉಗ್ರ ಹಫೀಜ್ ಸಯ್ಯದ್, ಪಾಕಿಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾನೆ! ಮಾನವ ಹಕ್ಕು ಹೋರಾಟಗಾರ್ತಿ, ನೋಬೆಲ್ ಪ್ರಶಸ್ತಿ ಪುರಸ್ಕ್ರತೆ ಮಲಾಲಾ ಎಲ್ಲಿದ್ದೀಯಮ್ಮಾ?! ಎಲ್ಲಿ ಅಡಗಿ ಕುಳಿತಿರುವೆ?!

ಮಲಾಲಾ ಯೂಸಾಫ್ಜಾಯ್ ಎಂಬ ಪಾಕಿಸ್ಥಾನದ ಪೋರಿಯನ್ನು ಏಕಾಏಕಿ, 2014 ರಲ್ಲಿ ಹೀರೋಯಿನ್ ಆಗಿಸಿಬಿಟ್ಟರು! ‘Suppression of children, young people and education’ ಎಂಬ ವಿಷಯವನ್ನಿಟ್ಟು ಆಕೆ ಒಂದೆರಡು ಮಾತನಾಡಿದ್ದನ್ನೇ, ಹೋರಾಟವೆಂದು ತಿಳಿದು, ಶಾಂತಿ ಹೋರಾಟಗಾರ್ತಿ ಎಂಬ ಬಿರುದನ್ನೂ ತಲೆಗೇರಿಸಿ, ನೋಬೆಲ್ ಪ್ರಶಸ್ತಿಯನ್ನೂ ದಕ್ಕಿಸಿಕೊಟ್ಟು, ಜಗತ್ತಿನ ಅತೀ ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳ ಪೈಕಿ ಮಲಾಲಾ ಕೂಡ ಎಂದು ರಾತ್ರೋ ರಾತ್ರಿ ಹಬ್ಬಿಸಿದರು!

ದುರಂತವೆಂದರೆ, ಯಾವ ಬಾಲಕಿ ಪಾಕಿಸ್ಥಾನಿಗಳ ಮಾನವ ಹಕ್ಕುಗಳಿಗಾಗಿ ಹೋರಾಡಿದ್ದಳೋ, ಯಾರು ಭಯೋತ್ಪಾದನೆಯನ್ನು ನಿಲ್ಲಿಸಿಯೇ ಬಿಟ್ಟೆನೆಂದು ಹೇಳಿದ್ದಳೋ, 2012 ರಿಂದ ಆಕೆ ಪಾಕಿಸ್ಥಾನದಲ್ಲಿ ವಾಸವಾಗಿಯೇ ಇಲ್ಲ! ಅದೂ, ತಾಲಿಬಾನ್ ಆಕೆಯ ಮೇಲೆ ದಾಳಿ ನಡೆಸಿದ ಮೇಲೆ, ಆಕೆ ಪಾಕಿಸ್ಥಾನದ ಕಡೆ ತಿರುಗಿಯೂ ನೋಡಲಿಲ್ಲ! ಮಾಧ್ಯಮ ಹೇಳಿದಂತೆ, ಆಕೆ ಯಾವ ಮಾನವ ಹಕ್ಕುಗಳಿಗಾಗಿ ಹೋರಾಡಲೂ ಇಲ್ಲ! ಯಾವ ಉಗ್ರ ಸಂಘಟನೆಗಳ ವಿರುದ್ಧ ನಿಂತಿರಲೂ ಇಲ್ಲ! ಆದರೂ, ಆಕೆ ಮಾನವ ಹಕ್ಕು ಹೋರಾಟಗಾರ್ತಿಯೆಂದು ಕರೆಯಲ್ಪಟ್ಟಳು!

ಆಶ್ಚರ್ಯವೇನೆಂದರೆ, ಇದೇ ಮಲಾಲಾ ಭಾರತದ ವಿರುದ್ಧ ಧ್ವನಿ ಎತ್ತುವುದನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದಳು! ಪರಿಣಾಮ, ಭಾರತ ಸರಕಾರಕ್ಕೆ ಬಿಟ್ಟಿ
ಸಲಹೆಯನ್ನೂ ನೀಡಿದಳು! ‘ಕಾಶ್ಮೀರಿಗಳಿಗೆ ಅವರದೇ ಆದ ಸ್ವಾತಂತ್ರ್ಯವಿದೆ! ಕೊಟ್ಟುಬಿಡಿ!’ ಎಂದು ಪ್ರತ್ಯೇಕತೆಯ ಮಾತೆತ್ತಿದ್ದವರಿಗೆ ಈಕೆಯ ಬೆಂಬಲವೂ
ಜೋರಾಗಿಯೇ ನಡೆಯಿತು ಬಿಡಿ! ಕಾಶ್ಮೀರದ ಪ್ರಜೆಗಳ ಆಜಾದಿಗೆ ಬಾಯ್ಬಿಟ್ಟ ಈಕೆ, ತನ್ನದೇ ದೇಶವಾದ ಪಾಕಿಸ್ಥಾನದಲ್ಲಿ ನಡೆಯುವ ಕ್ರೂರತೆಯ ಬಗ್ಗೆಯಾಗಲಿ, ಬಲೂಚಿಸ್ಥಾನದಲ್ಲಿ, ದಿನನಿತ್ಯದ ಕರ್ಮದಂತೆ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರದ ಬಗ್ಗೆಯಾಗಲಿ, ಐಸಿಸ್ ಉಗ್ರರ ಕಾಮಕೇಳಿಗೆ ಬಲಿಯಾಗಿ ಹೋದ ಅದೆಷ್ಟೋ ಮಕ್ಕಳ ಬಗ್ಗೆಯಾಗಲಿ, ಗರ್ಭವನ್ನೂ ಲೆಕ್ಕಿಸದೇ ಅತ್ಯಾಚಾರ ಎಸಗಿ ಕಾಮತೃಷೆ ತೀರಿಸಿಕೊಂಡ ಉಗ್ರಕಾಮುಕರ ಬಗ್ಗೆಯಾಗಲಿ ಸೊಲ್ಲೆತ್ತಲಿಲ್ಲ! ಸಿರಿಯಾವನ್ನು ಅಕ್ಷರಶಃ ನರಕವನ್ನಾಗಿಸಿದ ಐಸಿಸ್ ಬಗ್ಗೆ ಅಭಿಪ್ರಾಯ ಕೇಳಿದಾಗ, ವಿದ್ಯುತ್ ತಗುಲಿದ ಕಾಗೆಯ ಹಾಗೆ ಪಿಳಿಪಿಳಿ ಕಣ್ಣು ಬಿಟ್ಟಳೇ ವಿನಃ ಉಹೂಂ! ಧ್ವನಿ ಹೊರಬರಲಿಲ್ಲ ಹುಡುಗಿಗೆ!

ಅದೇ, ಕಾಶ್ಮೀರದ ವಿಚಾರವಾಗಿ ಉದ್ದುದ್ದ ಭಾಷಣವನ್ನೇ ಕೊಟ್ಟಳು ಭಾರತಕ್ಕೆ! ಭಾರತ ಮತ್ತು ಪಾಕಿಸ್ಥಾನ, ಯುಎನ್ ಜೊತೆಗೂಡಿ ಕಾಶ್ಮೀರದ
ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದಾಗಲೇ ಭಾರತೀಯರು ಮೂಲೆಯಲ್ಲಿದ್ದ ಕೆರ ತೆಗೆದುಕೊಂಡಿದ್ದರು! ಭಾರತದ ಇತಿಹಾಸದ ಬಗ್ಗೆ ಗೊತ್ತಿಲ್ಲದೇ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಈಕೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿ ಎಂದು ಭಾರತಕ್ಕೆ ಹೇಳಿದಾಗ, ಪಾಪ! ಚಿಕ್ಕ ಹುಡುಗಿ! ಎಂಬ ಕಾರಣಕ್ಕೆ ಸುಮ್ಮನಾಯಿತಷ್ಟೇ!

ಈಗ ಭಾರತ ಕೇಳುತ್ತಿದೆ ಆಕೆಗೆ ಪ್ರಶ್ನೆಗಳನ್ನು!! ಬಾರಮ್ಮ! ಉತ್ತರಿಸು!

ಈಗ, ಭಾರತೀಯರು ಮಲಾಲಾಗೆ ಕೇಳುತ್ತಿರುವುದು ಒಂದೇ ಪ್ರಶ್ನೆ! “ಉಗ್ರ ಹಫೀಜ್ ಸೈಯದ್ ಪಾಕಿಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾನೆಂಬುದಕ್ಕೆ ನಿಮ್ಮ ನಿಲುವೇನು ಮಲಾಲಾ?!” ಎಂಬುದೊಂದೇ ಪ್ರಶ್ನೆ ಕೇಳುತ್ತಿರುವುದು!

ಹಫೀಜ್ ಸೈಯದ್, ಮುಂಬರುವ ಪಾಕಿಸ್ಥಾನದ ಚುನಾವಣೆಯಲ್ಲಿ, ಮಿಲ್ಲಿ ಮುಸ್ಲಿಂ ಲೀಗ್ (MML) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು
ಸ್ವತಃ ಹೇಳಿಕೊಂಡಿದ್ದಾನೆ! ಈ ಪಕ್ಷ ಸ್ಥಾಪಿತಗೊಂಡಿರುವುದು ಲಶ್ಕರ್ – ಎ – ತಯ್ಬಾ ಎಂಬ ಉಗ್ರ ಸಂಘಟನೆಯಿಂದ!

ಹೋದಲ್ಲಿ ಬಂದಲ್ಲೆಲ್ಲ, ಉದ್ದಕ್ಕೂ ತನಗೆ ಪಾಕಿಸ್ಥಾನದಲ್ಲಿ ಆ ಪ್ರಭಾವವಿದೆ ಇದಿದೆ ಅದಿದೆ, ತೊಂಡೆ ಬದನೆಕಾಯಿಯಿದೆ ಎನ್ನುವ ಮಲಾಲಾ ಈ ವಿಚಾರದ ಬಗ್ಗೆಯಾಗಲಿ, ಹಫೀಜ್ ನ ಬಿಡುಗಡೆಯ ಬಗ್ಗೆಯಾಗಲಿ, ಚುನಾವಣೆಯ ಬ‌ಗ್ಗೆಯಾಗಲಿ, ಪಕ್ಷದ ಬಗ್ಗೆಯಾಗಲಿ, ಚಕಾರವೆತ್ತಿಲ್ಲ!

ಅಮೇರಿಕಾವೇ, ಈ ಚುನಾವಣೆಯ ಬಗ್ಗೆ ‘ಒಬ್ಬ ಉಗ್ರ ಅಧಿಕಾರ ಹಿಡಿಯುವುದು ಸರಿಯಲ್ಲ!” ಎಂಬುದಾಗೆಲ್ಲ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡುತ್ತಿದ್ದರೂ ಸಹ, ಉಹೂಂ! ಮಲಾಲಾ ಜಾಣ ಕುರುಡಿ! ಜಾಣ ಕಿವುಡಿ! ತನ್ನಷ್ಟಕ್ಕೆ ತಾನು ನೋಬೆಲ್ ಪ್ರಶಸ್ತಿಯನ್ನು ನೇವರಿಸುತ್ತಾ ಕುಳಿತಿದ್ದಾಳೆ!

ಯುಎನ್ ಸೆಕ್ಯುರಿಟಿ ಕೌನ್ಸಿಲ್ ಯಾರಿಗೆ ಗ್ಲೋಬಲ್ ಟೆರರಿಸ್ಟ್ ಎಂಬ ಪಟ್ಟವನ್ನು ಕೊಟ್ಟಿದೆಯೋ, ಅಂತಹವನೇ ಪಾಕಿಸ್ಥಾನದಲ್ಲಿ ಚುನಾವಣೆಗೆ ನಿಲ್ಲುತ್ತಿದ್ದಾನೆ! ಅಂತಹದ್ದರಲ್ಲಿ, ಮಲಾಲಾ ಮ್ಯಾಡಮ್ಮು ಅಂತರಾಷ್ಟ್ರೀಯ ಫೋರಮ್ ಗಳಲ್ಲಿ ಬಿಟ್ಟಿ ಉಪನ್ಯಾಸ ಕೊಡುವಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ!

ಏನಾದರೂ, ಮಲಾಲಾ ಮ್ಯಾಡಮ್ಮಿಗೇನಾದರೂ ಸಮಾಜದ ಶಾಂತಿ ಸೌಹಾರ್ದತೆಯ ಬಗ್ಗೆ ಅರಿವಿದ್ದಿದ್ದೇ ಆಗಿದ್ದಿದ್ದರೆ, ಹಫೀಜ್ ಸೈಯ್ಯದ್ ಚುನಾವಣೆಗೆ ನಿಲ್ಲುವ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಳು! ನೆರೆ ರಾಷ್ಟ್ರಗಳಿಗೆ ಶಾಂತಿ ಪಾಠ ಭೋಧಿಸುವಾಕೆಗೆ, ತನ್ನದೇ ದೇಶದ ಅಶಾಂತಿ ಕಣ್ಣಿಗೆ ಕಾಣಲಿಲ್ಲ! ಆಕೆಯ ಮೌನ ಸಾರಿ ಹೇಳುತ್ತಿರುವುದು ಶಾಂತಿಯನ್ನಲ್ಲ! ಅಕಸ್ಮಾತ್ತಾಗಿ ತಗುಲಿದ ಬುಲೆಟ್ಟೊಂದು ಆಕೆಯನ್ನು ವೈಭವೀಕರಿಸಿದ ಸಮಾಜದ ಮೂರ್ಖತನದ ಪರಮಾವಧಿಯನ್ನು!

ಯಾ ಅಲ್ಲಾಹ್! ಲೀಲೆಯೆಂದರೆ ನಿನ್ನದೇ ಬಿಡಪ್ಪಾ!

– ತಪಸ್ವಿ

Tags

Related Articles

Close