ಪ್ರಚಲಿತ

ಜಾಗತಿಕ ಉಗ್ರರ ಪಟ್ಟಿಯಿಂದ ಕೈಬಿಟ್ಟರೆ ಹಫೀಜ್ ಮಾಡೋದೇನು? ಇದರಿಂದ ಜಗತ್ತಿಗಾಗುವ ಅಪಾಯವೇನು? ಹಫೀಜ್‍ಗೆ ಕಂಟಕವಾಯಿತು ಮೋದಿ ಉಪಾಯ…!

ಮುಂಬೈಗೆ ದಾಳಿ ನಡೆಸಿ 166 ಮಂದಿಯ ಪ್ರಾಣ ಹೋಗಲು ಕಾರಣವಾದ ಜಾಗತಿಕ ಉಗ್ರ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‍ನನ್ನು ಪಾಕಿಸ್ತಾನ ಗೃಹಬಂಧನದಿಂದ ಮುಕ್ತಗೊಳಿಸಿ ಇಡೀ ಜಗತ್ತಿನ ಕಣ್ಣಿಗೆ ಮಣ್ಣೆರಚಿದೆ. ಇದೀಗ ಜೈಲಿನಿಂದ ಹೊರಬಂದಿರುವ ಹಫೀಜ್ ಜಾಗತಿಕ ಉಗ್ರರ ಪಟ್ಟಿಯಿಂದ ತನ್ನ ಹೆಸರನ್ನು ಕೈಬಿಡುವಂತೆ ವಿಶ್ವಸಂಸ್ಥೆಗೆ ಅರ್ಜಿ ಹಾಕಿ ತಾನೊಬ್ಬ ಅಮಾಯಕ ಎಂದು ಇಡೀ ಜಗತ್ತಿಗೆ ಸಾರಲು ಹೊರಟಿದ್ದಾನೆ. ಈತನ ಈ ಯತ್ನಕ್ಕೆ ಪಾಕಿಸ್ತಾನ ಸರಕಾರ ಪರೋಕ್ಷವಾಗಿ ಬೆಂಬಲಿಸಿದೆ.

ಒಂದು ವೇಳೆ ಈತನ ಹೆಸರನ್ನು ಜಾಗತಿಕ ಉಗ್ರರ ಪಟ್ಟಿಯಿಂದ ತೆಗೆದಿದ್ದೇ ಆದರೆ ಈತ ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಅಪಾಯಕಾರಿ ವ್ಯಕ್ತಿಯಾಗ್ತಾನೆ. ಯಾಕೆಂದರೆ ಆತ ಅಂಥದೊಂದು ಕೆಲಸಕ್ಕೆ ಇಳಿದಿದ್ದಾನೆ. ಆದರೆ ಈತನ ಉಪಾಯ ಫಲಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಈತ ಬಂಧಮುಕ್ತಗೊಳ್ಳುತ್ತಾನೆ ಎಂದು ಮೊದಲೇ ತಿಳಿದುಕೊಂಡಿದ್ದ ಭಾರತದ ಪ್ರಧಾನಿ ಮೊದಲೇ ಒಂದು ಉಪಾಯ ಮಾಡಿಬಿಟ್ಟಿದ್ದಾರೆ. ಈ ಉಪಾಯ ಹಫೀಜ್‍ಗೆ ಕಂಟಕವಾಗುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.

ಜೈಲಿನಿಂದ ಬಿಡುಗಡೆಗೊಂಡಿರುವ ಹಫೀಜ್ ಮಿಲ್ಲಿ ಮುಸ್ಲೀಂ ಲೀಗ್ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾನೆ ಎನ್ನುವುದನ್ನು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ವಿಶ್ವಸಂಸ್ಥೆಯಲ್ಲಿ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಈತನ ಹೆಸರಿರುವುದರಿಂದ ಈತನಿಗೆ ಹೊಸ ಪಕ್ಷ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಭಾರತ ಹಾಗೂ ಅಮೆರಿಕಾ ಮೊದಲಿಂದಲೂ ಈತನ ವಿರುದ್ಧ ತೊಡೆತಟ್ಟಿ ನಿಂತಿದೆ.

ವಿಶ್ವಸಂಸ್ಥೆಯಿಂದ ಪಾಕಿಸ್ತಾನದ ಮೇಲೆ ಒತ್ತಡ ಇರುವುದರಿಂದ ಈತನ ರಾಜಕೀಯ ಪಕ್ಷ ಪಾಕಿಸ್ತಾನದಲ್ಲಿ ನೋಂದಣಿಗೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಆತನಿಗೆ ತಾನು ಜಾಗತಿಕ ಉಗ್ರ ಎಂಬ ಪಟ್ಟಿಯಿಂದ ಹೆಸರು ತೆಗೆಸಿಕೊಳ್ಳಬೇಕು. ಅದಕ್ಕಾಗಿಯೇ ಹಫೀಜ್ ಸಯೀದ್ ಲಾಹೋರ್ ಮೂಲದ ಮಿರ್ಜಾ ಅಂಡ್ ಮಿರ್ಜಾ ಕಾನೂನು ಕಂಪನಿಯ ಮೂಲಕ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿ ದುಂಬಾಲು ಬಿದ್ದಿದ್ದಾನೆ.

ಆದರೆ ಜಾಗತಿಕ ಉಗ್ರ ಪಟ್ಟಿಯಿಂದ ಆತನ ಹೆಸರನ್ನು ಕೈಬಿಡಲು ಅಷ್ಟೊಂದು ಸುಲಭವಲ್ಲ. ಯಾಕೆಂದರೆ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ಮೋದಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ ನಡೆಸಿದ್ದರು. ಹಫೀಜ್ ಜಾಗತಿಕ ಉಗ್ರ ಎಂಬುವುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದಲ್ಲದೆ, ಉಗ್ರ ಸಲಾವುದ್ದೀನ್ ಎಂಬಾತನನ್ನೂ ಜಾಗತಿಕ ಉಗ್ರ ಎಂದು ಘೋಷಿಸುವಲ್ಲಿ ಯಶಸ್ವಿಯಾಗಿದ್ದರು.

ವಿಶ್ವಸಂಸ್ಥೆಗೆ ಹಫೀಜ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದ ಮೋದಿ ಸರಕಾರ ಮುಂಬೈ ಉಗ್ರ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಜಾಗತಿಕ ಕ್ರಮಕ್ಕೆ ಭಾರತ ಕರೆ ನೀಡಿತ್ತು. ಇದನ್ನು “ಅಂತಾರಾಷ್ಟ್ರೀಯ ಸಮುದಾಯ ಕೈಗೊಳ್ಳುವ ಕ್ರಮ, ಮುಂಬೈ ಉಗ್ರ ದಾಳಿಗೆ ನ್ಯಾಯ ಪಡೆಯುವ ಮೊದಲ ಹಂತವಾಗಿರಲಿದೆ” ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಅಭಿಪ್ರಾಯಿಸಿತ್ತು. ಇದರಿಂದಾಗಿ ಸುಮಾರು 2 ವಾರಗಳ ಕಾಲ ಗೃಹ ಬಂಧನ ವಿಧಿಸಿದ ಬಳಿಕ ಹಫೀಜ್ ಸಯೀದ್ ಹೆಸರನ್ನು ಪಾಕಿಸ್ತಾನ ಸರ್ಕಾರ ಭಯೋತ್ಪಾದಕ ವಿರೋಧಿ ಕಾಯ್ದೆ(ಎಟಿಎ) ಯಡಿಯಲ್ಲಿ ಸೇರಿತ್ತು.

ಇದಲ್ಲದೆ ಅಮೆರಿಕಾ ಕೂಡಾ ಹಫೀಜ್‍ನ ಕ್ರೌರ್ಯದ ಬಗ್ಗೆ ಅರ್ಥ ಮಾಡಿಕೊಂಡಿದ್ದು, ಆತನನ್ನು ಬಂಧಮುಕ್ತಗೊಳಿಸಿರುವುದಕ್ಕೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಈತನನ್ನು ಕುತಂತ್ರದಿಂದ ಬಿಡುಗಡೆ ಮಾಡಲಾಗಿದೆ. ಈತನನ್ನು ಗೃಹ ಬಂಧನದಿಂದ ಮುಕ್ತಿ ಮಾಡಬೇಡಿ.

ಆತನ ವಿರುದ್ಧ ಕೇಸ್ ದಾಖಲಿಸಿ, ಬಂಧನದಲ್ಲಿಡಬೇಕು. ಅಲ್ಲದೇ ಆತನ ವಿರುದ್ಧ ದಾಖಲೆ ಸಂಗ್ರಹಿಸಬೇಕು. ಆತ ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಇದೆಲ್ಲಾ ಮೋದಿ ಸರಕಾರ ಅಮೆರಿಕಾಕ್ಕೆ ಮನವರಿಕೆ ಮಾಡಿರುವುದರಿಂದ ಸಾಧ್ಯವಾಗಿದೆ ಎಂದೇ ಅರ್ಥಮಾಡಿಕೊಳ್ಳಬಹುದು. ಜೊತೆಗೆ ವಿಶ್ವಸಂಸ್ಥೆಗೆ ಹಫೀಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಕಷ್ಟು ಮನವರಿಕೆ ಮಾಡಿಕೊಟ್ಟಿರುವುದರಿಂದ ಅಷ್ಟು ಸುಲಭದಲ್ಲಿ ಆತನ ಹೆಸರನ್ನು ಪಟ್ಟಿಯಿಂದ ಕೈಬಿಡಲು ಸಾಧ್ಯವಿಲ್ಲ.

2008ರ ನವೆಂಬರ್ 26ರಂದು ಮುಂಬೈ ದಾಳಿ ನಂತರ, ಲಷ್ಕರ್ ಹಾಗೂ ಅಲ್‍ಖೈದಾ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಪಡೆದ ವಿಶ್ವಸಂಸ್ಥೆ ಹಫೀಜ್‍ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿತು. ಇದೀಗ ಹಫೀಜ್ ಬಿಡುಗಡೆಗೆ ಸ್ವತಃ ಅಮೆರಿಕಾವೇ ಕೆಂಡ ಕಾರಿರುವುದರಿಂದ ಅವನ ಹೆಸರನ್ನು ತೆಗೆಯಲು ಪಟ್ಟಿಯಿಂದ ತೆಗೆಯಲು ಅಷ್ಟು ಸುಲಭವಿಲ್ಲ. ಅದನ್ನೂ ಮೀರಿ ಹಫೀಜ್ ಪಕ್ಷ ಸ್ಥಾಪಿಸಿದ್ದೇ ಆದರೆ ಇಡೀ ಜಗತ್ತಿನಿಂದ ಜಾಗತಿಕ ಒತ್ತಡ ಬರುವುದರಿಂದ ಪಾಕಿಸ್ತಾನ ಆತನಿಕೆ ಪಕ್ಷ ಸ್ಥಾಪಿಸಲು ಅನುವು ಮಾಡಿಕೊಡುವುದಿಲ್ಲ..

ಹಫೀದ್ ಸಯೀದ್‍ನ ಅರ್ಜಿಯನ್ನು ಪರಿಶೀಲಿಸಲು ವಿಶ್ವಸಂಸ್ಥೆಯ ಸಮಿತಿ ಆರು ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಅದು ಅರ್ಜಿದಾರನ ರಾಷ್ಟ್ರಕ್ಕೆ ಸೂಚಿಸಿ ವಿವರಣೆ ಪಡೆದುಕೊಳ್ಳುತ್ತದೆ. ಆಮೇಲೆ ಖೈದಾ ನಿಷೇಧ ಸಮಿತಿಯ 15 ಸದಸ್ಯ ರಾಷ್ಟ್ರಗಳು ಅಥವಾ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳಿಂದ ಯಾವುದೇ ವಿರೋಧ ವ್ಯಕ್ತವಾಗುವಂತಿಲ್ಲ. ಹೀಗಾಗಿ ಹಫೀಜ್ ಸಯೀದ್ ಅರ್ಜಿಯ ವಿಚಾರದಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅಮೆರಿಕಾ ಆರಂಭದಲ್ಲೇ ಸಯೀದ್ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಆತನ ಹೆಸರನ್ನು ಪಟ್ಟಿಯಿಂದ ತೆಗೆಯಲು ಸಾಧ್ಯವಿಲ್ಲ. ಅಲ್ಲದೆ ಮೋದಿ ಸರಕಾರ ಕೂಡಾ ತನ್ನ ರಾಜತಾಂತ್ರಿಕ ನಡೆಯ ಮೂಲಕ ಹಫೀಜ್ ಯತ್ನಕ್ಕೆ ಅಡ್ಡಗಾಲು ಇಡುತ್ತದೆ.

ಒಂದು ವೇಳೆ ಹಫೀಜ್‍ನ ಹೆಸರನ್ನು ಪಟ್ಟಿಯಿಂದ ತೆಗೆದದ್ದೇ ಆದರೆ ಆತ ಪಕ್ಷ ಸ್ಥಾಪಿಸಿಕೊಳ್ಳುತ್ತಾನೆ. ಆತನ ಪಕ್ಷ ಪ್ರಾಬಲ್ಯಕ್ಕೆ ಬಂದರೆ ಆತ ಇಡೀ ಪಾಕಿಸ್ತಾನವನ್ನೇ ತೆಕ್ಕೆಗೆ ತೆಗೆದುಕೊಂಡು ಮುಂದೆ ವಿಶ್ವಕ್ಕೆ ಸವಾಲೊಡ್ಡಬಹುದು. ಇಂದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾನ್ ಉನ್ ಹೇಗೆ ಅಮೆರಿಕಾ ಸೇರಿ ಜಾಗತಿಕವಾಗಿ ಅಪಾಯಕಾರಿಯಾಗಿದ್ದಾನೋ ಅದೇ ರೀತಿ ಹಫೀಜ್ ಕೂಡಾ ಆಗಲಿದ್ದಾನೆ. ಆದ್ದರಿಂದ ಈತನ ಹೆಸರನ್ನು ಪಟ್ಟಿಯಿಂದ ತೆಗೆಯಲು ಅಷ್ಟು ಸುಲಭವಿಲ್ಲ. ಇದಕ್ಕೆ ಅವಕಾಶ ನೀಡಲು ಅಮೆರಿಕಾ ಅಷ್ಟೊಂದು ಮೂರ್ಖವಲ್ಲ.

ನರೇಂದ್ರ ಮೋದಿ ಸರಕಾರ ಅಮೆರಿಕಾ ಸೇರಿ ವಿಶ್ವಸಂಸ್ಥೆಗೆ ಹಫೀಜ್ ಎಷ್ಟು ಅಪಾಯಕಾರಿ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದೆ. ಇದೀಗ ಹಫೀಜ್ ಯತ್ನಕ್ಕೆ ಅಡ್ಡಗಾಲಾಗಿ ಪರಿಣಮಿಸಿದೆ.

ಚೇಕಿತಾನ

Tags

Related Articles

Close