ಪ್ರಚಲಿತ

ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶ್ ಗೌಡ ಕೊಲೆ ಕೇಸಲ್ಲಿ ರೋಚಕ ಯು-ಟರ್ನ್…! ಹಣ ಮತ್ತು ಕೀಳು ರಾಜಕೀಯ ಏನನ್ನೆಲ್ಲ ಮಾಡಿಸುತ್ತೆ ಗೊತ್ತಾ!!

ರಾಜ್ಯ ರಾಜಕಾರಣದಲ್ಲೇ ತೀವ್ರ ಕುತೂಹಲ ಕೆರಳಿಸಿದಂತಹ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ ಸಾಕಷ್ಟು ಟ್ವಿಸ್ಟ್‍ಗಳು ನಡೆಯುತ್ತಲೇ ಇದ್ದು, ತನ್ನ ಗಂಡನ ಕೊಲೆಗೆ ನ್ಯಾಯ ಕೇಳಿದ್ದ ಮಲ್ಲಮ್ಮ ಅವರೇ ಇದೀಗ ಉಲ್ಟಾ ಹೊಡೆದಿದ್ದಲ್ಲದೇ ಗಂಡನನ್ನೇ “ರೌಡಿ ಶೀಟರ್” ಎಂದಿದ್ದಾರೆ.

ಬೆಳ್ಳಿಗಟ್ಟಿ ಗ್ರಾಮದ ಬಳಿ ನಾಗೇಶ್ ಎಂಬವರಿಗೆ ಸೇರಿದ 40 ಎಕರೆ ಜಮೀನಿನಲ್ಲಿ, 9ಎಕರೆ ಜಮೀನನ್ನು ಯೋಗೀಶ್ ಗೌಡ ಖರೀದಿಸಿದ್ದರು. ಬಳಿಕ 15 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಜಮೀನು ಖರೀದಿ ವಿಷಯದಲ್ಲಿ ಯೋಗೀಶ್ ಗೌಡ ಹಾಗೂ ಬಸವರಾಜ್ ಮುತ್ತಗಿಗೆ ವಿವಾದ ನಡೆದಿತ್ತು. ಈ ಹಿನ್ನಲೆಯಲ್ಲಿ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ಉದಯ ಜಿಮ್ ನಲ್ಲೇ ಯೋಗೀಶ್ ಗೌಡ ಅವರನ್ನು ಐವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು.

ಈ ಕೊಲೆಗೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಮುಖಂಡ ಬಸವರಾಜ್ ಮುತ್ತಗಿ ಸೇರಿ ವಿಕ್ರಮ್ ಬಳ್ಳಾರಿ, ವಿನಾಯಕ ಕಟಗಿ, ಕೀರ್ತಿಕುಮಾರ್ ಕುರಹಟ್ಟಿ, ಸಂಧೀಪ್ ಸವದತ್ತಿ ಎಂಬುವವರನ್ನು ಬಂಧಿಸಲಾಗಿತ್ತು. ಇನ್ನು ಈ ಕೊಲೆಗೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ಕೊಲೆಯಲ್ಲಿ ರಾಜ್ಯದ ಪ್ರಭಾವಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಇರುವುದನ್ನು ಸುದ್ದಿವಾಹಿನಿಯೊಂದು ಬಯಲುಗೊಳಿಸಿತ್ತು!! ಅಷ್ಟೇ ಅಲ್ಲದೇ ಕೊಲೆಯಾದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡರ ಪತ್ನಿ ಮಲ್ಲಮ್ಮ ನನ್ನ ಗಂಡನ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಪಾತ್ರ ಇದೆ ಎಂದು ಹೇಳಿದ್ದವರು ಇದೀಗ ಯು-ಟರ್ನ್ ಹೊಡೆದಿರುವುದು ಮಾತ್ರ ವಿಪರ್ಯಾಸ!!

ಹೌದು… ಈಗಾಗಲೇ ಕೊಲೆಯಾದ ಯೋಗೀಶ್ ಗೌಡ ಅವರ ಚಾರಿತ್ರ್ಯ ವಧೆಗೆ ಖುದ್ದು ಅವರ ಪತ್ನಿಯೇ ಮುಂದಾಗಿದ್ದು, ಸಚಿವ ವಿನಯ್ ಕುಲಕರ್ಣಿ ನನ್ನ ಗಂಡನನ್ನ ಕೊಲ್ಲಿಸಿದ್ದಾರೆ ಎಂದು ಬೊಬ್ಬಿರಿದಿದ್ದ ಮಲ್ಲಮ್ಮ, ಇದೀಗ ಆರೋಪಿತರ ರಕ್ಷಣೆಗೆ ಮುಂದಾಗಿದ್ದಾರೆ. ಪ್ರಕರಣ ಸಿಬಿಐಗೆ ವಹಿಸುವಂತೆ ಯೋಗೀಶ್ ಗೌಡ ತಾಯಿ ತುಂಗಮ್ಮ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಧಾರವಾಡ ಹೈಕೋರ್ಟ್ ಪೀಠಕ್ಕೆ ಮಲ್ಲಮ್ಮ ಪ್ರಮಾಣ ಪತ್ರ ಸಲ್ಲಿಸಿದ್ದು ತನ್ನನ್ನೂ ಪ್ರತಿವಾದಿಯಾಗಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಗುತ್ತಿದ್ದಂತೆಯೇ ಯೋಗೀಶ್ ಗೌಡರ ಪತ್ನಿ ಮಲ್ಲಮ್ಮನನ್ನು ಕಾಂಗ್ರೆಸ್ ಮನವೊಲಿಸಿ ತನ್ನತ್ತ ಸೆಳೆದಿದ್ದು, ಇದೀಗ ಸ್ವತಃ ಗಂಡನನ್ನೇ ಕಾಂಗ್ರೆಸ್ ಸೇರಿದ ಬಳಿಕ ರೌಡಿ ಶೀಟರ್ ಎಂದಿದ್ದಾರೆ!! ಯೋಗೀಶ್ ಗೌಡರ ಪತ್ನಿ ಮಲ್ಲಮ್ಮ ನೀಡಿರುವ ಹೇಳಿಕೆಯು ಯೋಗೀಶ್ ಗೌಡರ ಹತ್ಯೆ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿತೇ ಎಂಬ ಅನುಮಾನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ತನ್ನ ಗಂಡನ ಹತ್ಯೆಯ ಹಿಂದೆ ಸಚಿವ ವಿನಯ್ ಕುಲಕರ್ಣಿಯವರ ಕೈವಾಡವಿದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅರ್ಜಿ ನೀಡಿದ್ದ ಮಲ್ಲಮ್ಮ ತಮ್ಮ ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದರೆ ಯೋಗೀಶ್ ಗೌಡರ ಹತ್ಯೆ ಕೇಸನ್ನು ಸಿಬಿಐಗೆ ವಹಿಸಬೇಕೆಂದು ಅವರ ಕುಟುಂಬದವರು ಅರ್ಜಿ ಹಾಕಿದ ನಂತರ ಕಾಂಗ್ರೆಸ್ ಪಕ್ಷ ಸೇರಿರುವ ಮಲ್ಲಮ್ಮ ತನ್ನ ಗಂಡ ಯೋಗೀಶ್ ಗೌಡ ಮತ್ತು ಮಾವ ಗುರುನಾಥ್ ಗೌಡರು ರೌಡಿ ಶೀಟರ್ ಗಳು ಹಾಗಾಗಿ ಅವರು ನ್ಯಾಯಾಲಯದಲ್ಲಿ ನ್ಯಾಯಾಕೇಳಲು ಅನರ್ಹರು ಎಂದು ಹೇಳಿದ್ದಾರೆ.


ಯೋಗಿಶ್ ಗೌಡ ಹಾಗೂ ವಿನಯ್ ಕುಲಕರ್ಣಿ ಮಧ್ಯೆ ದ್ವೇಷವೇ ಇರಲಿಲ್ಲ ಎಂದರೇ ಮಲ್ಲಮ್ಮ!!

ಯೋಗೀಶ್ ಗೌಡರ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರಿದ ಬಳಿಕ ತಾಳಿ ಕಟ್ಟಿದ ಗಂಡನನ್ನೇ ರೌಡಿ ಶೀಟರ್ ಎಂದಿದ್ದಲ್ಲದೇ, ವಿನಯ್ ಕುಲಕರ್ಣಿ ವಿರುದ್ಧ ಇಂಗ್ಲೀಷ್ ನಲ್ಲಿ ದೂರು ಬರೆದು ನನ್ನ ಸಹಿ ಪಡೆದಿದ್ದಾರೆ. ಅಷ್ಟೇ ಅಲ್ಲದೇ, ಗುರುನಾಥ್ ಗೌಡ ರಾಜಕೀಯ ಲಾಭಕ್ಕೆ ಕೊಲೆ ಕೇಸ್ ಬಳಸಿಕೊಳ್ಳುತ್ತಿದ್ದಾರೆ. ಹೈಕೋರ್ಟ್’ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಇಂಗ್ಲೀಷ್‍ನಲ್ಲಿ ದೂರು ಬರೆದುಕೊಂಡು ನನ್ನ ಬಳಿ ಸಹಿ ಮಾಡಿಸಿಕೊಂಡಿದ್ದಾರೆ. ನಾನು ಎಲ್ಲಿಯೂ ವಿನಯ್ ಕುಲಕರ್ಣಿ ಹಾಗೂ ಹೆಚ್ ಕೆ ಪಾಟೀಲ್ ವಿರುದ್ಧ ಆರೋಪ ಮಾಡಿಲ್ಲ ಎಂದು ಮಲ್ಲಮ್ಮ ಹೇಳಿಕೊಂಡಿದ್ದಾರೆ.

ಅದೆಲ್ಲಕ್ಕಿಂತಲೂ ಅಚ್ಚರಿಯ ವಿಚಾರ ಏನೆಂದರೆ, ನನ್ನ ಗಂಡ ಯೋಗಿಶ್ ಗೌಡರ ವಿರುದ್ಧ 27 ಹಾಗೂ ಭಾವ ಗುರುನಾಥ್ ಗೌಡರ ವಿರುದ್ಧ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ. ನನ್ನ ಗಂಡನ ಹತ್ಯೆ ಕೇಸನ್ನು ರಾಜಕೀಯ ದ್ವೇಷ ಸಾಧನೆಗೆ ಗುರುನಾಥ್ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದೂ ಮಲ್ಲಪ್ಪ ಆರೋಪಿಸಿದ್ದಾರೆ.

ಇನ್ನೂ ನಾನು ಯಾವಾಗಲೂ ವಿನಯ್ ಕುಲಕರ್ಣಿ ಯೋಗಿಶ್ ಗೌಡ ಕೊಲೆ ಕೇಸಲ್ಲಿ ಮಾಸ್ಟರ್ ಮೈಂಡ್ ಎಂದು ಹೇಳಿಯೇ ಇಲ್ಲ ಎಂದೂ ಯೂಟರ್ನ್ ಹೊಡೆದಿದ್ದಾರೆ. ಈ ಮೂಲಕ ಮಲ್ಲಮ್ಮ ಯೋಗೀಶ್ ಗೌಡ ಕೇಸ್ ಗೆ ಮೇಜರ್ ಟ್ವಿಸ್ಟ್ ಕೊಟ್ಟಿದ್ದಾರೆ.

ಹತ್ಯೆಯ ಹಿಂದೆ ಸಚಿವರ ಕೈವಾಡವಿದೆ ಎಂದು ನಾನೆಂದೂ ಹೇಳಿಲ್ಲ, ಹತ್ಯೆಗೀಡಾದ ನನ್ನ ಹೇಳಿಕೆಯನ್ನು ಪರಿಗಣಿಸಿ ತೀರ್ಪು ನೀಡಬೇಕು ಎಂದು ಹೇಳಿರುವ ಇವರು ಒಂದೊಮ್ಮೆ ನನ್ನ ಹೇಳಿಕೆಯನ್ನು ಪರಿಗಣಿಸದೇ ತೀರ್ಪು ನೀಡಿದರೆ ಅದು ಪೂರ್ವ ನಿರ್ಧರಿತ ತೀರ್ಪಾಗಲಿದೆ ಎಂದು ಹೇಳಿರುವುದನ್ನ ಗಮನಿಸಿದರೆ ಕಾಂಗ್ರೆಸ್ ಗೆ ಸೇರಿದ ನಂತರ ತಮ್ಮ ಹೇಳಿಕೆಯನ್ನು ತಿರುಚಿರುವುದರ ಹಿಂದೆ ಯಾರಿದ್ದಾರೆ ಎಂಬ ಅನುಮಾನ ಕಾಡಲಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಒಬ್ಬ ನಾಯಕನಾಗಿದ್ದ ತನ್ನ ಗಂಡನ ವಿರುದ್ಧವಾಗಿ ಆತನ ಪತ್ನಿಯೇ ತಮ್ಮ ಹೇಳಿಕೆಯನ್ನು ತಿರುಚುತ್ತಿರುವುದನ್ನು ನೋಡಿದರೆ ಇದರ ಹಿಂದೆ ಯಾವುದೇ ಕಾಣದ ಕೈವಾಡ ಇದೆ ಎಂಬ ಸ್ಪಷ್ಟವಾಗಿ ತಿಳಿಯುತ್ತಿದೆ.

ಒಟ್ಟಿನಲ್ಲಿ ಮೂರು ವಾರಗಳ ಕಾಲ ನಾಪತ್ತೆಯಾಗಿದ್ದ ಮಲ್ಲಮ್ಮ ಪ್ರತ್ಯಕ್ಷವಾದಗಲೇ ಸಚಿವ ವಿನಯ್ ಪರ ಬ್ಯಾಟಿಂಗ್ ಬೀಸಿದ್ದರು. ಅಷ್ಟೇ ಅಲ್ಲದೇ, ಇದೀಗ ಅಧಿಕೃತವಾಗಿ ಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೇ ಮಲ್ಲಮ್ಮ ಕುಟುಂಬದವರ ವಿರುದ್ಧವೇ ತಿರುಗಿ ನಿಂತಿದ್ದು ಮಾತ್ರ ನಿಜಕ್ಕೂ ದೊಡ್ಡ ವಿಪರ್ಯಾಸ!!

– ಅಲೋಖಾ

 

Tags

Related Articles

Close