ಪ್ರಚಲಿತ

ಟಿಪ್ಪು ಟಿಪ್ಪು ಅಂತ ಅವರು ಬಾಯಿಬಡಿದುಕೊಳ್ಳಲಿ ನಾವು ಇವತ್ತು ಶಿವಾಜಿ ಮಹಾರಾಜರನ್ನ ನೆನೆಯೋಣ!! ಈ ದಿನದ ವಿಶೇಷತೆಯ ಬಗ್ಗೆ ನಿಮಗೆ ಗೊತ್ತೇ?!

ಇವತ್ತು ಅಂದರೆ ನವೆಂಬರ್ 10 ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನ ಭಾರೀ ವಿರೋಧದ ನಡಯವೆಯೂ ಆಚರಿಸಿಯೇ ತೀರುತ್ತೇವಂತ ಸಿದ್ದರಾಮಯ್ಯ ಎಲ್ಲಾ ಜಿಲ್ಲೆಗಳಲ್ಲೂ 144 ಸೆಕ್ಷನ್ ಜಾರಿ ಮಾಡಿಸಿ ಪೋಲಿಸ್ ಸರ್ಪಗಾವಲಿನಲ್ಲಿ ಟಿಪ್ಪು ಜಯಂತಿ ಆಚರಿಸಲು ಹೊರಟಿದ್ದು ಯಾವ ಪುರುಷಾರ್ಥಕ್ಕೋ ನಾ ಕಾಣೆ.

ಅವರ ಉದ್ದೇಶ ಏನಂತ ಗೊತ್ತಿಲ್ಲ ಆದರೆ ದುರುದ್ದೇಶ ಏನನ್ನೋದಂತೂ ಗೊತ್ತು. ಅದೇ ಮುಸ್ಲಿಂ ತುಷ್ಟೀಕರಣ.

ಟಿಪ್ಪು ಸುಮಾರು 1 ಲಕ್ಷದ 70 ಸಾವಿರ ಹಿಂದೂ ಹಾಗು ಕ್ರಿಶ್ಚಿಯನ್ನರ ಮಾರಣಹೋಮಕ್ಕೆ ಕಾರಣನಾದ ಮತಾಂಧ ಅನ್ನೋದನ್ನ ಇತಿಹಾಸದಲ್ಲಿ ಬಹಳ ಸ್ಪಷ್ಟವಾಗಿ ನಾವು ಕಾಣಬಹುದು.

ಈ ಕಾರಣಕ್ಕೆ ಹಿಂದೂ ಸಂಘಟನೆಗಳು ಟಿಪ್ಪು ಜಯಂತಿಯನ್ನ ಕಳೆದ ಮೂರು ವರ್ಷಗಳಿಂದ ವಿರೋಧಿಸುತ್ತಿದ್ದರೂ ಈ ಎಲ್ಲಾ ವಿರೋಧಗಳ ನಡುವೆ ಸಮಾಜದ ಸಾಮರಸ್ಯ ಕದಡಿ ಮುಸ್ಲಿಂ ವೋಟ್ ಗಳ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಸರ್ಕಾರ ಟಿಪ್ಪು ಜಯಂತಿ ಮಾಡೇ ಮಾಡ್ತೀವಿ ಅನ್ನೋ ಹುಂಬ ಸಾಹಸಕ್ಕೆ ಕೈ ಹಾಕಿದೆ.

ಅಷ್ಟಕ್ಕೂ ಟಿಪ್ಪು ಹುಟ್ಟಿದ್ದು ನವೆಂಬರ್ 20 ಕ್ಕೆ, ಆದರೆ ಸಿದ್ದರಾಮಯ್ಯ ಸರ್ಕಾರ ಯಾಕೆ ನವೆಂಬರ್ 10 ಕ್ಕೆ ಆತನ ಜಯಂತಿ ಆಚರಿಸೋಕೆ ಮುಂದಾಯ್ತು?

ಈ ಪ್ರಶ್ನೆಯನ್ನ ಕಳೆದ ವರ್ಷವೇ ರಾಜ್ಯದ ಜನತೆ ಸಿದ್ದರಾಮಯ್ಯ ಸರ್ಕಾರಕ್ಕೆ ಕೇಳಿತ್ತು, ಬಹುಶಃ ಇದನ್ನ ಗಂಭೀರವಾಗಿ ತೆಗೆದುಕೊಂಡ ‘ಕೈ’ ನಾಯಕರ ಬೆಂಬಲಿಗರು ವಿಕಿಪೀಡಿಯಾದಲ್ಲಿ ಟಿಪ್ಪುವಿನ ಬಗ್ಗೆ ಸರ್ಚ್ ಮಾಡಿದಾರೆ ಅನ್ಸತ್ತೆ, ವಿಕೀಪೀಡಿಯಾದಲ್ಲೂ ಟಿಪ್ಪು ಹುಟ್ಟಿದ್ದು ನವೆಂಬರ್ 20 ಅಂತಾನೇ ಕೆಲದಿನಗಳ ಹಿಂದೆ ಇತ್ತು. ಆದರೆ ಕೈ ನಾಯಕರ ಬೆಂಬಲಿಗರು ವಿಕೀಪೀಡಿತಾದಲ್ಲಿನ ಟಿಪ್ಪುವಿನ ಜನ್ಮದಿನವನ್ನ ನವೆಂಬರ್ 10 ಅಂತ ಬದಲಿಸಿದ್ದಾರೆ.

ಕೈ ಪಕ್ಷದ ಬೆಂಬಲಿಗರು ಎಷ್ಟು ಮೂರ್ಖರೆಂದರೆ ವಿಕೀಪೀಡಿಯಾದಲ್ಲಿ ಒಂದು ಕಡೆ ಮಾತ್ರ ತಮ್ಮ ಎಡಿಟಿಂಗ್ ಕೈ ಚಳಕ ತೋರಿಸಿದ್ದಾರೆ ಹೊರತು ಟಿಪ್ಪುವಿನ ಜನ್ಮದಿನಾಂಕವಿರೋ ಬೇರೆ ಕಡೆಗೆ ಎಡಿಟ್ ಮಾಡೋದನ್ನ ಮರೆತುಬಿಟ್ಟಿದ್ದಾರೆ ಪಾಪ!!

ಬೇಕಿದ್ದರೆ ಈ ಫೋಟೋ ನೋಡಿ!!

ಇವರ ವರಸೆಯೇ ಅಷ್ಟು ಬಿಡಿ, ನವೆಂಬರ್ 10 ಕ್ಕೆ ಟಿಪ್ಪು ಟಿಪ್ಪು ಅಂತ ಬಾಯಿಬಡಿದುಕೊಳ್ಳಲಿ ನಾವು ಇಂದು ಹಿಂದೂ ಹೃದಯ ಸಾಮ್ರಾಟನಾದ ಶಿವಾಜಿ ಮಹಾರಾಜನ ಬಗ್ಗೆ ನೆನೆಯೋಣ, ಇವತ್ತಿನ ದಿನ ಹಿಂದುಗಳಿಗೆ ಅದ್ಹೇಗೆ ವಿಶೇಷ ಅನ್ನೋದನ್ನ ತಿಳಿದುಕೊಳ್ಳೋಣ!!

ಅದು ಹಿಂದುಗಳಿಗೆ ಅಂಧಕಾರ, ಕತ್ತಲು ಕವಿದಿದ್ದ ದಿನಗಳಾಗಿದ್ದವು, ಮೊಘಲರಿಂದ ದೌರ್ಜನ್ಯಕ್ಕೊಳಗಾಗಿ, ಅತ್ಯಾಚಾರಕ್ಕೊಳಗಾಗಿ, ಒಂದೋ ಇಸ್ಲಾಂ ಸ್ವೀಕರಿಸಬೇಕು ಇಲ್ಲ ತಮ್ಮ ಖಡ್ಗಕ್ಕೆ ಬಲಿಯಾಗಬೇಕು ಅನ್ನೋ ಮೊಗಲರಿಂದ ಹಿಂದೂ ಸಮಾಜ ಕುಗ್ಗಿ ಹೋಗಿತ್ತು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದ “ಯಾವಾಗ ಅಧರ್ಮ ತಾಂಡವವಾಡಲು ಶುರುಮಾಡುತ್ತೋ ಆಗ ಧರ್ಮದ ರಕ್ಷಣೆಗಾಗಿ ನಾನು ಮತ್ತೆ ಹುಟ್ಟಿಬರುತ್ತೇನೆ”

ಭಾರತದ ಬಹುಭಾಗವನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ದೌರ್ಜನ್ಯ, ಅಧರ್ಮ ನಡೆಸುತ್ತಿದ್ದ ಮುಸಲ್ಮಾನ ಮತಾಂಧ ಆಕ್ರಮಣಕಾರರನ್ನ ಹಿಮ್ಮೆಟ್ಟಿಸಲು ಆ ಹಿಂದೂ ಹೃದಯ ಸಾಮ್ರಾಟನ ಜನನವಾಗಿತ್ತು.

ಆ ಸಿಂಹವೇ ಛತ್ರಪತಿ ಶಿವಾಜಿ ಮಹಾರಾಜ್!!

ಶಿವಾಜಿ ಮಹಾರಾಜರ ಬಗ್ಗೆ ಜೀವನ ವೃತ್ತಾಂತದ ಬಗ್ಗೆಯಂತೂ ನಿಮಗೆಲ್ಲಾ ತಿಳಿದೇ ಇರುತ್ತೆ. ಅದರ ಬಗ್ಗೆ ಚರ್ಚಿಸೋಕೆ ಹೋಗಲ್ಲ.

ಆದರೆ ಇದೇ 1659 ರ ಇವತ್ತಿನ ದಿನದಂದೇ ಅಂದರೆ ನವೆಂಬರ್ 10 ರಂದೇ ಇತಿಹಾಸದಲ್ಲಿ ನಡೆದ ಆ ರೋಚಕ ಘಟನಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯ ಸ್ಥಾಪಿಸಿ ಹಿಂದೂಗಳ ರಕ್ಷಣೆ ಪಣ ತೊಟ್ಟು ನಿಂತಾಗಿತ್ತು. ಗುರುಗಳಾದ ಸಮರ್ಥರಾಮದಾಸರು “ನಡೆಯಲಿ ಧರ್ಮ ರಕ್ಷಣೆ” ಎಂದು ಶಿವಾಜಿಗೆ ಆಶೀರ್ವದಿಸಿ ಕಳಿಸಿದರು.

ಮರಳಿ ಬಂದ ಶಿವಾಜಿ ಗುರು ಸಮರ್ಥದಾಸರು ತೊಟ್ಟಿದ್ದ ಕೇಸರಿ ಕಾವಿ ಬಟ್ಟೆಯನ್ನೇ ತನ್ನ ಸಾಮ್ರಾಜ್ಯದ ಧ್ವಜವನ್ನಾಗಿ ಮಾಡಿ ಗುರು ರಾಮದಾಸರ ಹೆಸರಲ್ಲಿ ಆಡಳಿತ ನಡೆಸಲು ಸಿದ್ಧನಾದ.

1655 ರ ವೇಳೆಗೆ ಜಾಲ್ವಿ, ಪ್ರತಾಪಗಢ, ಲೋಹಗಢ ಮುಂತಾದಕೋಟೆಗಳನ್ನ ಮುಸ್ಲಿಂ ರಾಜರುಗಳ ಕೈಯಿಂದ ವಶಪಡಿಸಿಕೊಂಡಿದ್ದ ಶಿವಾಜಿ

ಆ ಸಮಯಕ್ಕದಾಗಲೇ ಶಿವಾಜಿ ಮಹಾರಾಜರ ಜೀವನದ ಕಡುವೈರಿ ಮತಾಂಧ ‘ಔರಂಗಜೇಬ್’ ಮಧ್ಯಭಾರತದ ದೊರೆಯಾಗಿ ಪಟ್ಟವೇರಿದ್ದ.

ಶಿವಾಜಿಯ ಪರಾಕ್ರಮಕ್ಕೆ ಬಿಜಾಪುರದ ಸುಲ್ತಾನ ಹಾಗು ಮೊಗಲರು ಕಂಗಾಲಾಗಿ ಹೋಗಿದ್ದರು.

ಮೊದಲು ಹೇಗಾದರೂ ಮಾಡಿ ಆ ಶಿವಾಜಿಯನ್ನ ಸೋಲಿಸಿ ಆಮೆಲೆ ಮುಂದಿನ ಕೆಲಸ ಎಂಬ ನಿರ್ಧಾರಕ್ಕೆ ಬಂದ ಔರಂಗ್ ಜೇಬ್ ಗೆ ಸ್ವತಃ ತಾನೇ ಬಂದು ಯುದ್ಧಮಾಡಲು ಅವನಿಗೆ ತನ್ನ ಮನೆಯ ಕಲಹಗಳಿಂದ ಆಗಲಿಲ್ಲ.

ಕೊನೆಗೆ ತನ್ನ ಹೆಂಡತಿಯ ತಮ್ಮನಾದ ಅಫ್ಘಾನಿಸ್ತಾನದ ‘ಅಫಜಲ್ ಖಾನ್’ನ್ನ ನೇಮಿಸಿದ.

ನೊಡೋಕೆ ವಿಕಾರವಾಗಿ, ದೈತ್ಯವಾಗಿ, ಅತೀ ಕ್ರೂರಿಯಾಗಿದ್ದ ಅಫ್ಜಲ್ ಖಾನ್ ಶಿವಾಜಿ ಮಹಾರಾಜರನ್ನ ಕೊಲ್ಲೋದಕ್ಕೆ ಸುಪಾರಿ ತೆಗೆದುಕೊಂಡೇ ಬಿಟ್ಟನು.

ಅಫಜಲ್ ಖಾನ್ ಸಭೆಯಲ್ಲಿ ಹೇಳ್ತಾನೆ “ಅವನನ್ನು(ಶಿವಾಜಿ ಮಹಾರಾಜ) ನಾನು ಕುದುರೆಯಿಂದ ಕೆಳಗೆ ಇಳಿಯದೆ ಸೋಲಿಸಿ ಎಳೆದುಕೊಂಡು ಬರುತ್ತೇನೆ”” ಎಂದು ವ್ಯಂಗ್ಯವಾಡಿ ಶಿವಾಜಿ ಮಹಾರಾಜರನ್ನ ಕೊಲ್ಲಲು ತಯಾರಾಗಿಯೇಬಿಟ್ಟ.

ತನ್ನ ಬಲಿಷ್ಠ ಸೈನ್ಯದೊಂದಿಗೆ ಹೊರಟ ಅಫಜಲ್ ಖಾನ್ ನ ವಿಷಯ ಅರಿತ ಶಿವಾಜಿ ತನ್ನ ಜನರೊಂದಿಗೆ ಸಭೆ ಕರೆದ.

ಅಫ್ಜಲ್ ಖಾನ್ ನ ಕ್ರೂರತೆ, ಆತನ ಬಲಿಷ್ಟ ಸೈನ್ಯದ ಬಗ್ಗೆ ಅರಿವಿದ್ದ ಕಾರಣ ಸಭೆಯಲ್ಲಿದ್ದ ಎಲ್ಲರೂ “ಬೇಡ ನಾವು ಅಫ್ಜಲ್ ಖಾನನ ಜೊತೆ ಸಧಾನ ಮಾಡಿಕೊಳ್ಳೋದೆ ಒಳಿತು” ಎಂಬ ಮಾತನ್ನ ಹೇಳಿದ್ದರಂತೆ.ಆದರೆ ಶಿವಾಜಿ ಎಲ್ಲರ ಮಾತನ್ನು ಧಿಕ್ಕರಿಸಿ ಯುದ್ಧಕ್ಕೆ ಸನ್ನದ್ಧನಾದ.

ಶಿವಾಜಿ ಯುದ್ಧಕ್ಕೆ ಸಿದ್ಧನಾದ ಸಮಯದಲ್ಲಿ ಅಫ್ಜಲ್ ಖಾನ್ ನಿಂದ ಶಿವಾಜಿ ಮಹಾರಾಜರಿಗೆ ಶಾಂತಿ ಸಂಧಾನದ ಪತ್ರವೊಂದು ಬಂತು, ಇದರ ಹಿಂದಿರುವ
ಕುತಂತ್ರವನ್ನರಿತ ಶಿವಾಜಿ ಮಹಾರಾಜರು ಶಾಂತಿ ಸಂಧಾನಪತ್ರ ತಂದಿದ್ದ ಅಫ್ಜಲ್ ಖಾನ್ ನ ಸೈನಿಕರನ್ನು ಚೆನ್ನಾಗಿ ನೋಡಿಕೊಂಡು ಸಂಧಾನಕ್ಕೆ ಸಿದ್ಧ ಎಂದು ಹೇಳಿ ಕಳಿಸಿದ್ದರು.

ಸಂಧಾನ ಮಾಡಿಕೊಳ್ಳಲು ಇಬ್ಬರೂ ಪರಸ್ಪರ ಭೇಟಿಯಾಗಬೇಕು ಅಂತ ಅಫ್ಜಲ್ ಖಾನ್ ಶಿವಾಜಿಗೆ ಮತ್ತೆ ಪತ್ರ ಕಳಿಸಿದಾಗ ಇದನ್ನ ಶಿವಾಜಿಯೂ ಒಪ್ಪಿದರು.

ಸ್ಥಳವನ್ನು ಶಿವಾಜಿ ಮಹಾರಾಜರೇ ತೀರ್ಮಾನಿಸಿ ಅಫ್ಜಲ್ ಖಾನ್ ನಿಗೆ ಬರುವಂತೆ ಆಹ್ವಾನವಿತ್ತರು.

ಕುರಿ ಬಲಿಗೆ ಸಿದ್ಧವಾಯ್ತು ಅಂತ ಮನಸ್ಸಿನಲ್ಲೇ ಖುಷಿಯಾಗಿದ್ದ ಅಫ್ಜಲ್ ಖಾನ್ ಶಿವಾಜಿ ಮಹಾರಾಜರನ್ನ ಭೇಟಿಯಾಗೋಕೆ ಬಂದೇ ಬಿಟ್ಟ.

ಶಿವಾಜಿ ಮಹಾರಾಜರು ಹಿಂದಿನ ರಾತ್ರಿಯೇ ಪಾಳುಬಿದ್ದ ಗುಡಿಯಲ್ಲಿ ತನ್ನಸಹಚರರೊಂದಿಗೆ ವಾಸ್ತವ್ಯ ಹೂಡಿ ಬೆಳಿಗ್ಗೆ ಸ್ನಾನ ಮುಗಿಸಿ ಮೈಗೆ ಉಕ್ಕಿನಕವಚ ಧರಿಸಿ ಕೈಯಲ್ಲಿ ಉಕ್ಕಿನ ವ್ಯಾಘ್ರ (ಕೈ ಬೆರಳಿಗೆ ಹಾಕುವ ಉಕ್ಕಿನಿಂದ ಮಾಡಿದ ಸಾಧನ) ಹಾಕಿ ತನ್ನ ಖಡ್ಗ ತೆಗೆದು ಆರಾಧ್ಯಧೈವ ಅಂಬೆಯನ್ನು ನೆನೆದು ಹೊರಟ ಶಿವಾಜಿಗೆ ಎದುರಾಗಿದ್ದು ಮಗನಿಗೆ ಆಶೀರ್ವದಿಸಲು ಬಂದ ಜಿಜಾಮಾತೆ “ಹೋಗಿ ಬಾ ಶಿವಾಜಿ ಗೆಲುವು ನಿನ್ನದೇ ಆ ದುರುಳ ದುಷ್ಟ ಅಫ್ಜಲ್ ಖಾನನ ಸಾವನ್ನ ಹಿ೦ದು ಸಮಾಜ ಬಯಸುತ್ತಿದೆ” ಎಂದು ಕಾಲಿಗೆ ಬಿದ್ದ ಮಗನನ್ನ ಆಶೀರ್ವದಿಸಿ ಪ್ರೀತಿಯಿಂದ ತಲೆ ಸವರಿ ಕಳಿಸಿ ಕೊಟ್ಟಳು.

ಇತ್ತ ಶಿವಾಜಿ ಅಪ್ಜಲ್ ಖಾನ್ ಭೇಟಿ ಸಮಯ ಕೂಡಿ ಬಂದಿತ್ತು. ಅಫ್ಜಲ್ ಖಾನ್ ಶಿವಾಜಿಯನ್ನ ಕಂಡ ತಕ್ಷಣ ಬಾ ಗೆಳೆಯ ಈ ಸಂಧಾನದ ಖುಷಿಗದ
ತಬ್ಬಿಕೊಳ್ಳೋಣ ಅಂತ ತನ್ನೆರಡೂ ತೋಳು ಅಗಲಿಸಿ ಶಿವಾಜಿಯನ್ನು ತಬ್ಬಿಕೊಳ್ಳಲು ಮುಂದಾದ.

ಶಿವಾಜಿಯನ್ನ ತಬ್ಬಿಕೊಂಡ ತಕ್ಷಣ ಆತನ ಬೆನ್ನಿಗೆ ಚೂರಿ ಇರಿಯಲು ಖಡ್ಗ ತೆಗೆಯುವಷ್ಟರಲ್ಲಿ ಶಿವಾಜಿ ಮಹಾರಾಜರು ತನ್ನ ಕೈಗೆ ಧರಿಸಿದ್ದ ಉಕ್ಕಿನ ಹುಲಿಯುಗರಿನ ಸಹಾಯದಿಂದ ಅಫ್ಜಲ್ ಖಾನ್ ನ ಕರುಳು ಬಗೆದೇ ಬಿಟ್ಟಿದ್ದ.

ಅಫ್ಜಲ್ ಖಾನ್ ಎಂಬ ಕ್ರೂರಿ, ಮತಾಂಧ ತಾನು ಮಾಡಿದ್ದ ಕುತಂತ್ರಕ್ಕೆ ತಾನೇ ಬಲಿಯಾಗಿದ್ದ. ಕರುಳು ಬಗೆದ ಶಿವಸಜಿ ನಂತರ ತನ್ನ ಖಡ್ಗದಿಂದ ಅಫ್ಜಲ್ ಖಾನ್ ನ ರುಂಡ ಚೆಂಡಾಡಿ ಅದನ್ನ ತನ್ನ ತಾಯಿಯ ಕಾಲಿನ ಬಳಿ ತಂದಿಟ್ಟಿದ್ದ.

ಅಂದು ಶಿವಾಜಿ ಮಹಾರಾಜರೇನಾದರೂ ಅಫ್ಜಲ್ ಖಾನ್ ನ ಮೋಸಕ್ಕೆ, ಕುತಂತ್ರಕ್ಕೆ ಬಲಿಯಾಗಿದ್ದಿದ್ದರೆ “ಕಾಶಿ ಕೀ ಕಲಾ ಜಾತಿ, ಮಥುರಾ ಮಸ್ಜಿದ್ ಬನ್ ಜಾತಿ, ಹಮ್ ಸಬ್ ಲೋಗೋ ಕಿ ಸುನ್ನತ್ ಹೋ ಜಾತಿ” ಅನ್ನೋದು ಅಕ್ಷರಶಃ ನಿಜವಾಗಿಬಿಟ್ಟಿರುತ್ತಿತ್ತೇನೋ!!

ಅಫ್ಜಲ್ ಖಾನ್ ನ್ನ ಶಿವಾಜಿ ಮಹಾರಾಜರು ಸಂಹರಿಸಿದ ದಿನವೇ ಈ ನವೆಂಬರ್ 10, 1659 ರಂದು. ಮತ್ಯಾಕೆ ತಡ ಟಿಪ್ಪು ಟಿಪ್ಪು ಅಂತ ಬಾಯಿ ಬಡಿದುಕೊಳ್ಳುತ್ತಿರೋರ ಎದುರು ಶಿವಾಜಿ ಮಹಾರಾಜರ ಇವತ್ತಿನ ದಿನದ ಈ ಪರಾಕ್ರಮದ ಬಗ್ಗೆ ತಿಳಿಸಿ ಇತಿಹಾಸದ ಮಹತ್ವ ಎಂದರೆ ಹೀಗಿರುತ್ತೆ ಹೊರತು ಯಾವತ್ತೋ ಹುಟ್ಟಿದವನ ದಿನವನ್ನ ಇನ್ಯಾವುದೋ ದಿನ ಆಚರಿಸೋದಲ್ಲ ಅನ್ನೋದನ್ನ ತಿಳಿಸಿ!!

– Vinod Hindu Nationalist

Tags

Related Articles

Close