ಪ್ರಚಲಿತ

ತನ್ನ ಸರಕಾರದ ಸಚಿವರನ್ನೇ ಅವಮಾನಿಸಿರುವ ಸಿದ್ದರಾಮಯ್ಯ ಅವರಿಗೆ ಇನ್ನು ಪತ್ರಕರ್ತರು ಯಾವ ಲೆಕ್ಕ!!

ಇತ್ತೀಚೆಗಷ್ಟೇ, ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳ್ಳಿರುವ ವಿಚಾರ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೇ, ಯುವ ಮುಖಂಡನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋದು ಗೊತ್ತೇ ಇದೆ!! ಇನ್ನು ಈ ಸುದ್ದಿ ಮಾಚುವ ಮುನ್ನವೇ ಉಡುಪಿಯಲ್ಲಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರಾದ ಮನೋಹರ ಪ್ರಸಾದ್ ಅವರನ್ನು ಸಭಾಸದರ ಎದುರೇ ಅವಮಾನಗೊಳಿಸಿದ ವಿದ್ಯಾಮಾನ ಇದೀಗ ನಡೆದಿದೆ!!

ಹೌದು… ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ “ದಿವಂಗತ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ”ಯ ನೂತನ ಮತ್ತು ಅಪೂರ್ಣ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದರ್ಪ, ದುರಹಂಕಾರ, ಸಾರ್ವಜನಿಕರ ಮುಂದೆಯೇ ಬಟಾಬಯಲಾಗಿದ್ದು, ಸಮಾರಂಭದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ರವರು ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಪೂರ್ಣ ಪ್ರಮಾಣದಲ್ಲಿ ಶುಭಾಶಿರ್ವಾದ ನೀಡಿದ ಬಳಿಕ, ಉದಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥರೂ, ಕವಿ, ಲೇಖಕರು ಆದ ಮನೋಹರ ಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡುತ್ತಿದ್ದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮನೋಹರ ಪ್ರಸಾದ್ ರವರಿಗೆ ನಿರೂಪಣಾ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ಅವಕಾಶ ಕೊಡಲಿಲ್ಲ. ಬದಲಾಗಿ ಹಿಂದಕ್ಕೆ ತಳ್ಳಿ ಸಭಾಸದರ ಎದುರೇ ಅವಮಾನಗೊಳಿಸಿದ ವಿದ್ಯಾಮಾನ ನಡೆಯಿತು.

ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನೇ ಹಿಂದಕ್ಕೆ ತಳ್ಳಿ ತನ್ನ ದರ್ಪ, ಅಹಂಕಾರವನ್ನು ಮೆರೆದ ಇವರು ಇದೀಗ ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದರ್ಪ, ದುರಹಂಕಾರವನ್ನು ಮೆರೆದಿದ್ದಲ್ಲದೇ, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವರ ನಡುವೆ ಸಂವಹನದ ಕೊರತೆ ಮತ್ತು ಗೊಂದಲವಿರುವುದು ಸಾರ್ವಜನಿಕರ ಮುಂದೆ ಬಟಾಬಯಲಾಗಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಮೀನಿನ ಊಟ ಮಾಡಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದಿರುವ ಬಗ್ಗೆ ಭಾರಿ ಚರ್ಚೆಯಾಗಿದ್ದಲ್ಲದೇ, ಇದು ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ!!

ಈ ಹಿಂದೆ ಪಕ್ಷದೊಳಗಡೆ ನಡೆದಿತ್ತು ಜಟಾಪಟಿ!!

ಈ ಹಿಂದೆ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೇ ಶಾಸಕ ಅಭಯಚಂದ್ರ ಜೈನ್ ಹಾಗೂ ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿ’ಸೋಜಾ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ದ.ಕ. ಜಿಲ್ಲಾ ಕಾಂಗ್ರೆಸ್‍ನೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬ ವಿಚಾರ ಬಹಿರಂಗವಾಗಿತ್ತು!! ಅಷ್ಟೇ ಅಲ್ಲದೇ, ಈ ಕಿತ್ತಾಟವು ಪಕ್ಷದ ನಾಯಕರನ್ನು ತೀವ್ರ ಮುಜುಗರಕ್ಕೆ ಎಡೆಮಾಡಿತ್ತು. ಇನ್ನು ಐವನ್ ಮತ್ತು ಅಭಯಚಂದ್ರ ನಡುವೆ ಆಂತರಿಕ ವೈಮನಸ್ಸು ಸೃಷ್ಟಿಯಾಗಿದೆ ಎನ್ನಲಾಗಿದ್ದು, ಸಿಎಂ ಮುಂದೆಯೇ ಜಟಾಪಟಿ ನಡೆದಿರುವುದು ಇದಕ್ಕೆ ಇಂಬು ನೀಡಿದೆ!! ಅಷ್ಟೇ ಅಲ್ಲದೆ ಈ ಇಬ್ಬರೂ ಕೂಡ ಪರಸ್ಪರ ವಾಗ್ವಾದ ಮಾಡುತ್ತ, ನೂಕಾಟ- ತಳ್ಳಾಟ ನಡೆಸಿದಂತೆ ಭಾಸವಾಗುವ ಸನ್ನಿವೇಶ ವೀಡಿಯೋಗಳಲ್ಲಿ ಸೆರೆಯಾಗಿದೆ. ಈ ವೇಳೆ ಅವರ ಬಳಿ ತೆರಳಿ ಸ್ವಾಗತ ಕೋರಲು ಮುಂದಾದ ಐವನ್ ಡಿ’ಸೋಜಾ ಕೈಯನ್ನು ಅಭಯಚಂದ್ರ ಜೈನ್ ಅವರು ಹಿಂದಕ್ಕೆ ತಳ್ಳಿದ್ದು, ಸಿಎಂ ಸಿದ್ದರಾಮಯ್ಯ ಅವರೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರನ್ನೇ ತಳ್ಳಿಕೊಂಡು ಮುಂದೆ ಹೋದ ದೃಶ್ಯ ವೀಡಿಯೋದಲ್ಲಿ ಗೋಚರಿಸಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು ಮಾತ್ರ ನಾಚಿಕೆ ಗೇಡಿನ ವಿಚಾರ!!
ಆದರೆ ಇದೀಗ ಉದಯವಾಣಿ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥರೂ, ಕವಿ, ಲೇಖಕರು ಆದ ಮನೋಹರ ಪ್ರಸಾದ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡುತ್ತಿದ್ದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮನೋಹರ ಪ್ರಸಾದ್ ರವರಿಗೆ ನಿರೂಪಣಾ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ಅವಕಾಶ ಕೊಡಲಿಲ್ಲ. ಬದಲಾಗಿ ಹಿಂದಕ್ಕೆ ತಳ್ಳಿ ಸಭಾಸದರ ಎದುರೇ ಅವಮಾನಗೊಳಿಸಿದ ವಿದ್ಯಾಮಾನ ನಡೆದಿದ್ದು, ಈ ವಿದ್ಯಾಮಾನವನ್ನು ನೋಡಿದ ಹಲವಾರು ಮಂದಿ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ!! ಅಷ್ಟೇ ಅಲ್ಲದೇ ಸಿದ್ಧರಾಮಯ್ಯ ವಿರುದ್ಧ ತಮ್ಮ ತಮ್ಮಲ್ಲೇ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು, ಮನೋಹರ ಪ್ರಸಾದ್ ರವರಿಗೆ ಮಾಡಿದ ಅಪಮಾನ, ಇಡೀ ಮಾಧ್ಯಮಲೋಕಕ್ಕೆ ಮಾಡಿದ ಅಪಮಾನವೆಂದು ಕೆಲವರು ಮಾತನಾಡಿಕೊಂಡರು ಮತ್ತು ಇಂಥವರ ಕಾರ್ಯಕ್ರಮಗಳಿಗೆಲ್ಲ ನಿರೂಪಣೆ ಮಾಡಿಕೊಳ್ಳಲು ಮನೋಹರ ಪ್ರಸಾದ್ ರಂಥವರು ಯಾಕೆ ಒಪ್ಪಿಕೊಳ್ಳುತ್ತಾರೋ ಎಂದು ಮಾತನಾಡಿಕೊಂಡಿದ್ದಾರೆ!!
ಸಚಿವ ಪ್ರಮೋದ್ ಮಧ್ವರಾಜ್ ಅವರನ್ನೇ ಅವಮಾನಿಸಿದ ಸಿಎಂ ಸಿದ್ದರಾಮಯ್ಯ!!!

ಸಮಾರಂಭದಲ್ಲಿ ಭಾಷಣ ಮಾಡಿದ ಸಿದ್ಧರಾಮಯ್ಯನವರು, ಸರಕಾರಿ ಆಸ್ಪತ್ರೆಯನ್ನು ಭೂಮಿ ಸಹಿತವಾಗಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಖಾಸಗೀ ಆಸ್ಪತ್ರೆ ನಿರ್ಮಿಸಲು ಸರಕಾರ ನೀಡಿದ್ದನ್ನು ಪದೇ ಪದೇ ಸಮರ್ಥಿಸಿಕೊಂಡರು. ಅಷ್ಟೇ ಅಲ್ಲದೇ, ನಮಗಾರಿಗೂ ಯಾವುದೇ ರೀತಿಯ ಶಂಕೆಯೂ ಇಲ್ಲ ಎನ್ನುವುದನ್ನೂ ಪದೇ ಪದೇ ಸ್ಪಷ್ಟಪಡಿಸುವ ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವರು ತಾವು ಕುಳಿತಿದ್ದ ಸ್ಥಳದಿಂದಲೇ ಸಿದ್ಧರಾಮಯ್ಯನವರನ್ನು ಉದ್ಧೇಶಿಸಿ, “ಅದು ಹಾಗಲ್ಲ, ಹೀಗೆ” ಎಂದು ಹೇಳಲು ಮುಂದಾದಾಗ ಸಿದ್ಧರಾಮಯ್ಯನವರು ಪ್ರಮೋದ್ ಮಧ್ವರಾಜ್ ರವರ ಮಾತಿಗೆ ಸ್ವಲ್ಪವೂ ಸೊಪ್ಪು ಹಾಕಲಿಲ್ಲ!! ಬದಲಾಗಿ ಪ್ರಮೊದ್ ಮಧ್ವರಾಜ್ ರವರ ಮಾತಿಗೆ ಅರ್ಧದಲ್ಲೇ ತಡೆ ಒಡ್ಡಿದ್ದು, “ನಿಮಗೇ ಕನ್ಫ್ಯೂಸ್ ಇದೆ! ನೀವಾ ಶಾಸಕ, ನಾನಾ???? ಬಿ.ಆರ್.ಶೆಟ್ಟರಲ್ಲಿ ಕೇಳ್ರಿ? ಎಂದು ಸಭೆಯಲ್ಲೇ ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಪ್ರಮೋದ್ ಮಧ್ವರಾಜ್ ರವರನ್ನು ಸ್ವಲ್ಪವೂ ಮುಲಾಜು ತೋರಿಸದೆ ಬಹಿರಂಗವಾಗಿಯೇ ಅಪಮಾನಿಸಿದ್ದಾರೆ!!

Image result for pramod madvaraj
ಆದರೆ, ಯಾವುದೋ ಒಂದು ಸತ್ಯವನ್ನು ಸಾರ್ವಜನಿಕರ ಎದುರೇ ತಿಳಿಯಪಡಿಸುವ ಪ್ರಯತ್ನದಲ್ಲಿ ವಿಫಲರಾದ ಸಚಿವ ಪ್ರಮೋದ್ ಮಧ್ವರಾಜ್ ತಮ್ಮ ಎರಡನೇ ಪ್ರಯತ್ನವಾಗಿ ತಾವು ಕುಳಿತಿದ್ದ ಸ್ಥಳದಿಂದ ಎದ್ದು ನಿಂತು ಯಾವುದೋ ಒಂದು ದಾಖಲಾತಿಯ ಕಾಗದವನ್ನು ಕೈಯ್ಯಲ್ಲಿ ಹಿಡಿದುಕೊಂಡು ಅದನ್ನು ಮುಖ್ಯಮಂತ್ರಿಗಳಿಗೆ ತೋರಿಸಲು ಮುಖ್ಯಮಂತ್ರಿ ಭಾಷಣ ಮಾಡುತ್ತಿದ್ದ ಸ್ಥಳಕ್ಕೆ ಹೋಗಲು ಹೊರಟಾಗ, ಮತ್ತೆ ಸಿದ್ದರಾಮಯ್ಯನವರು ಸಚಿವ ಪ್ರಮೋದ್ ಮಧ್ವರಾಜ್ ರವರ ಆ ಪ್ರಯತ್ನಕ್ಕೂ ತಡೆ ಒಡ್ಡಿದರು!! ಅಷ್ಟೇ ಅಲ್ಲದೇ, ಕೈಯ್ಯಲ್ಲೇ, “ಹತ್ತಿರಕ್ಕೆ ಬರಬೇಡ, ಅದೆಲ್ಲ ಬೇಡ, ಹೋಗು ಕುಳಿತುಕೊ” ಎಂದು ಸಂಜ್ಞೆಯಲ್ಲೇ ಸಚಿವ ಪ್ರಮೋದ್ ಮಧ್ವರಾಜ್ ರವರನ್ನು ಅವರ ಸ್ವಸ್ಥಾನಕ್ಕೆ ಹೋಗುವಂತೆ ಮಾಡಿದರು.

ಇನ್ನು, ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಎಂ.ಎ.ಗಫೂರ್, ಬಿ.ಆರ್.ಶೆಟ್ಟಿ, ಶ್ರೀಮತಿ ಬಿ.ಆರ್.ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ಜಿಲ್ಲಾಧಿಕಾರಿ ಪ್ರಯಾಂಕ ಮೇರಿ ಫ್ರಾನ್ಸಿಸ್ ಮೊದಲಾದವರು ಉಪಸ್ಥಿತರಿದ್ದ ಈ ವೇದಿಕೆಯಲ್ಲಿ ಹಲವಾರು ರೀತಿಯ ಅವಮಾನದ ಪ್ರಸಂಗಗಳು ನಡೆದಿದ್ದು, ಸಿದ್ಧರಾಮಯ್ಯನವರು ಸಭಾ ವೇದಿಕೆಯಲ್ಲೇ ಹೀಗೆ ನಿರೂಪಣೆ ಮಾಡುವವರಿಗೆ, ಸಚಿವರಿಗೆ ಅಪಮಾನಿಸುವುದು ಸರಿಯಲ್ಲ ಎಂದು ನಾಗರಿಕರು ಪರಸ್ಪರ ಚರ್ಚಿಸುವಂತೆ ಮಾಡಿದ್ದಾರೆ!!

ಈಗಾಗಲೇ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿರುವ ವಿಚಾರ ಖಚಿತವಾಗಿರುವ ಹಿನ್ನಲೆಯಲ್ಲಿಯೇ ಗರಂಗೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಮೋದ್ ಮಧ್ವರಾಜ್ ಅವರನ್ನು ಅವಮಾನ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಯು ಸ್ಪಷ್ಟವಾಗಿ ಗೋಚರಿಸುತ್ತಿದೆ!!

ಈ ಪ್ರಸಂಗದ ಮೂಲಕ, ಬಿ.ಆರ್.ಶೆಟ್ಟಿಯವರು ನಿರ್ಮಿಸುತ್ತಿರುವ ಆಸ್ಪತ್ರೆ ಬಗ್ಗೆ ಸರಕಾರದ ಪ್ರಮುಖ ಭಾಗವೇ ಆಗಿರುವ ಮುಖ್ಯಮಂತ್ರಿ ಹಾಗೂ ಕ್ಯಾಬಿನೇಟ್ ಮಂತ್ರಿ, ಅದರಲ್ಲೂ ಉಡುಪಿ ಜಿಲ್ಲಾ ಉಸ್ತುವಾರೀ ಸಚಿವರ ನಡುವೆ ಸಂವಹನದಲ್ಲಿ ಕೊರತೆ, ಗೊಂದಲ ಇರುವುದು ಕಂಡು ಬಂದಿದ್ದು, ಸರಕಾರ ಯಾವುದೋ ಸತ್ಯವನ್ನು ಮರೆ ಮಾಚುತ್ತಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ಇದರೊಂದಿಗೆ ಮಾಹಿತಿಯ ಕೊರತೆ ಇರುವುದಲ್ಲದೇ ಇತರ ಅಂಶಗಳು ಈಗಾಗಲೇ ಬಯಲಾಗಿವೆ!! ಅಂತೂ ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಗರಂಕೊಂಡಿರುವುದು ಮಾತ್ರ ಅಕ್ಷರಶಃ ನಿಜ!!
– ಅಲೋಖಾ

Tags

Related Articles

Close