ಪ್ರಚಲಿತ

ತಲಾಖ್ ನಿಷೇಧದ ನಂತರ ಮುಸ್ಲಿಮ್ ಮಹಿಳೆಯರು ಮೋದಿ ಫೋಟೋ ಹಿಡಿದು ಥ್ಯಾಂಕ್ಯೂ ಮೋದಿ ಅಂದಿದ್ದು ಯಾಕೆ ಗೊತ್ತಾ?!

ಸ್ವಾತಾಂತ್ರ್ಯಾ ನಂತರ ದೇಶವನ್ನಾಳುತ್ತಾ ಬಂದ ಕಾಂಗ್ರೆಸ್ಸಿಗರು ಜಾತ್ಯಾತೀತ ದೇಶ ಹಾಗೂ ಜಾತ್ಯಾತೀತ ಪಕ್ಷ ಎಂಬ ಸೋಗಿನಲ್ಲಿ ಮುಸಲ್ಮಾನರ ಓಲೈಕೆಗಾಗಿ ಅವರನ್ನು ವಂಚನೆ ಮಾಡುತ್ತಲೇ ಬಂದಿದ್ದರು. ಶಿಕ್ಷಣದಿಂದ ಹಿಡಿದು ಆರೋಗ್ಯ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸಲ್ಮಾನ ಮಹಿಳೆಯರಿಗೆ ಏಕ ಪಕ್ಷೀಯ ನಿರ್ಧಾರವನ್ನೇ ಕೈಗೊಂಡು ಕಾಂಗ್ರೆಸ್‍ನೊಂದಿಗೆ ಇರುವ ಮೂಲಭೂತವಾದಿ ಚಿಂತನೆಯುಳ್ಳ ಮುಸಲ್ಮಾನರ ಮಾತುಗಳನ್ನೇ ಆದೇಶವೆನಿಸಿಕೊಂಡು ದೇಶದಲ್ಲಿ ಇತರ ಮಹಿಳೆಯರಿಗೆ ನೀಡುತ್ತಿದ್ದ ಸೌಲಭ್ಯಗಳಿಂದ ಮುಸಲ್ಮಾನರ ಮಹಿಳೆಯರು ವಂಚಿತರನ್ನಾಗಿ ಮಾಡುತ್ತಿದ್ದರು. ಮೊನ್ನೆ ಮೊನ್ನೆಯವರೆಗೂ ಮುಸಲ್ಮಾನ ಮಹಿಳೆಯರು ಪ್ರತಿಶತ ಶೇಕಡಾ ಎಪ್ಪತ್ತರಷ್ಟು ಶಿಕ್ಷಣ ಅಭಿವ್ಯಕ್ತಿ ಸ್ವಾತಂತ್ರ್ಯ ಧಾರ್ಮಿಕ ಸಹಿತ ಎಲ್ಲಾ ರಂಗದಲ್ಲೂ ತುಳಿತಕ್ಕೊಳಗಾಗಿ ವಂಚನೆಯನ್ನೇ ಅನುಭವಿಸಿಕೊಂಡು ಬಂದಿದ್ದಾರೆ.

ಆದರೆ ತಮ್ಮ ಸಮಾಜದ ಪುರುಷರಿಗೆ ಕಾಂಗ್ರೆಸ್ ನೀಡುತ್ತಿದ್ದ ನಾಲಾಯಕ್ಕು ಸೌಲಭ್ಯಗಳನ್ನು ಇಟ್ಟುಕೊಂಡು ಕಾಂಗ್ರೆಸ್‍ಗೆ ಮತ ಹಾಕುತ್ತಿದ್ದರು… ಆದರೆ ಇದು ಮೋದಿ ಯುಗ!!..ತ್ರಿವಳಿ ತಲಾಖ್ ಪದ್ಧತಿಯನ್ನು ಶಾಶ್ವತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಮೋದಿ ಜೀ ಸರಕಾರವು ಇದಕ್ಕೊಂದು ಗತಿ ಕಾಣಿಸಿದೆ ಎಂದೇ ಹೇಳಬಹುದು…. ಕಾನೂನನ್ನು ಉಲ್ಪಂಘಿಸುವವರಿಗೆ ತಕ್ಕ ಶಿಕ್ಷೆಯನ್ನೇ ನಿಗದಿಗೊಳಿಸಿದೆ! ಹೌದು! ತಲಾಖ್ ಪದ್ಧತಿಯನ್ನು ವೈಯುಕ್ತಿಕ ಹಕ್ಕಿನ ಮೇರೆಗೆ ಮುಂದುವರೆಸಿದರೆ ಅಥವಾ ಕಾನೂನನ್ನು ಉಲ್ಲಂಘಿಸಿದರೆ, ಜಾಮೀನು ರಹಿತ ಬಂಧನ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ ಕೂಡಾ ನೀಡಿದೆ.. ಆದರೆ ಕಾಂಗ್ರೆಸ್ ಇದಕ್ಕೆ ಸಂಪೂರ್ಣ ವಿರೋಧವನ್ನು ವ್ಯಕ್ತ ಪಡಿಸುತ್ತಲೇ ಬಂದಿದೆ… ಮೋದಿ ಜೀ ಸರಕಾರವು ಮುಸ್ಲಿಮ್ ಯುವತಿ ನ್ಯಾಯ ಒದಗಿಸುವ ಮೂಲಕ ಬೃಹತ್ ಕಾರ್ಯವನ್ನು ಮಾಡುವಲ್ಲಿ ಮೋದಿ ಜೀ ಯಶಸ್ವಿಯಾಗುತ್ತಿದ್ದಂತೆ ಮತ್ತೊಂದು ದೊಡ್ಡ ಮಹತ್ವದ ಕಾರ್ಯಯೊಜನೆಯನ್ನು ಮಾಡುವಲ್ಲಿ ಅತೀ ಬೇಗನೆ ಯಶಸ್ವಿಯಾಗಿದ್ದಾರೆ !!

ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾಗಿರುವ ಹಜ್ ಯಾತ್ರೆಗೆ ಇನ್ನು ಮುಂದೆ ಮಹಿಳೆಯರು ಪುರುಷರ ಸಹಾಯವಿಲ್ಲದೇ ಒಂಟಿಯಾಗಿ ಯಾತ್ರೆ ಕೈಗೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ತನ್ನ ಮನ್ ಕೀ ಕೀಬಾತ್‍ನಲ್ಲಿ ತಿಳಿಸಿದ್ದರು.. 39 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಪ್ರಕಾರ 45 ವಯಸ್ಸಿಗಿಂತ ಮೇಲ್ಪಟ್ಟ ಹಾಗೂ ಕನಿಷ್ಠ ನಾಲ್ವರು ಮಹಿಳೆಯರು ಗುಂಪು ಹಜ್ ಯಾತ್ರೆ ಮಾಡಬಹುದು, ಇವರುಗಳಿಗೆ ಯಾವುದೇ ಮಹ್ರಮ್ ಬೇಕಾಗಿಲ್ಲ ಎಂದು ಮೋದಿ ಹೇಳಿದ್ದರು.

ಮುಸ್ಲಿಂ ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದ ತಾರತಮ್ಯ ನೀತಿಯನ್ನು ರದ್ದುಗೊಳಿಸಲಾಗಿದ್ದು, ಮಹ್ರಮ್ ಪದ್ದತಿಯನ್ನು ತೆರವುಗೊಳಿಸಿರುವುದು ಕೆಲವರಿಗೆ ಕನಿಷ್ಠ ವಿಚಾರ ಎನಿಸಬಹುದು ಆದರೆ, ಒಂದು ಒಂದು ಪದ್ದತಿಯನ್ನು ತೆರವುಗೊಳಿಸಿರುವುದು ಕೆಲವರಿಗೆ ಕನಿಷ್ಠ ವಿಚಾರ ಎನಿಸಬಹುದು ಆದರೆ, ಒಂದು ಒಂದು ಸಮಾಜದಲ್ಲಿ ಇಂತಹ ವಿಚಾರಗಳು ನಮ್ಮ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ಮೋದಿ ನುಡಿದಿದ್ದರು.

ಈ ಕಾಂಗ್ರೆಸ್ಸಿಗರು ಇಲ್ಲಿಯರೆಗೆ ನಮ್ಮ ಹಿಂದೂ ದೇವಸ್ಥಾನಗಳಿಂದ ಬರುತ್ತಿದ್ದ ಹಣವನ್ನು ಮುಸ್ಲಿಮರಿಗೆ ಹಜ್ ಯಾತ್ರೆಗೆ ಹೋಗಲು ನೀಡುತ್ತಿದ್ದಲ್ಲದೇ ಅದು ಕೇವಲ ಶ್ರೀಮಂತ ಕುಟುಂಬಕ್ಕೆ ಮಾತ್ರ ಸೇರುತ್ತಿತ್ತು.. ಆದರೆ ಇನ್ನು ಇದಕ್ಕೆ ಖಂಡಿತಾ ಮೋದಿ ಕಡಿವಾಣವನ್ನು ಕಡಿವಾಣವನ್ನು ಹಾಕಿದ್ದಾರೆ…

ಮೊದಲಿಗೆ ನಾನೂ ಈ ವಿಚಾರವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ, ಆದರೆ ಅದರೆ ಮಹತ್ವ ಅರಿಯಲು ಹೆಚ್ಚಿನ ಅಧ್ಯಯನ ನಡೆಸಿದ ಬಳಿಕವಷ್ಟೇ ನನಗನಿಸಿದ್ದು, ನಮಗೆ ಸ್ವಾತಂತ್ರ್ಯ ದೊರೆತು 70 ವರ್ಷಕಳೆದರೂ ಮುಸ್ಲಿಂ ಮಹಿಳೆಯರ ಮೇಲೆ ನಡೆದ ಅನ್ಯಾಯದ ಕುರಿತು ಯಾರೊಬ್ಬರೂ ದ್ವನಿ ಎತ್ತಲೇ ಇಲ್ಲ ಎಂದು ತಮ್ಮ ರೇಡಿಯೋ ಸಂದೇಶದಲ್ಲಿ ನುಡಿದಿದ್ದರು..

ನುಡಿದಂತೆ ನಡೆಯುವ ಈ ವಿಶ್ವದ ದೊರೆ ನರೇಂದ್ರ ಮೊದಿಯವರು ತಾವು ಹೇಳಿರುವ ಮಾತನ್ನು ಅತೀ ಬೇಗನೆ ಕಾರ್ಯಯೋಜನೆ ಗೊಳಿಸಿದ್ದಾರೆ ಎಂದು ಹೇಳ ಬಹುದು..
ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ 32 ಮಹಿಳೆಯರು ರಕ್ಷಕರು ಮತ್ತು ಸಂಬಂಧಿಗಳಿಲ್ಲದೇ ಹಜ್ ಯಾತ್ರೆಯನ್ನು ಕೈಗೊಂಡಿದ್ದಾರೆ. ಉತ್ತರ ಪ್ರದೇಶದ ಲಖನೌದ 12, ಕಾನ್ಪುರದ 12 ಮತ್ತು ಅಮೇಥಿ ಮತ್ತು ಗೊಂಡಾ ಜಿಲ್ಲೆಯ ಒಟ್ಟು 32 ಮುಸ್ಲಿಂ ಮಹಿಳೆಯರು ಮಹಿಳಾ ರಕ್ಷಕರಿಲ್ಲದೇ ಹಜ್ ಪ್ರಯಾಣ ಆರಂಭಿಸಿದ್ದಾರೆ. ಇತ್ತೀಚೆಗೆ ಅಲ್ಪಸಂಖ್ಯಾತ ಸಚಿವಾಲಯ 45 ವಯಸ್ಸು ಮೀರಿದ ಮಹಿಳೆಯರು ಹಜ್ ಯಾತ್ರೆ ಪ್ರಯಾಣಿಸುವ ವೇಳೆ ಮಹಿಳೆಯರ ರಕ್ಷಕರಿಲ್ಲದೇ ಪ್ರಯಾಣಿಸುವ ಅವಕಾಶ ನೀಡಲಾಗಿದೆ.2017 ಡಿಸೆಂಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಟ್ಟ ಮನ್ ಕಿ ಬಾತ್ ನಲ್ಲಿ ` ಸರ್ಕಾರ ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ವೇಳೆ ರಕ್ಷಕರಿರಬೇಕು ಎಂಬ ನಿಯಮವನ್ನು ತೆಗೆದು ಹಾಕಲಾಗಿತ್ತು ಅದರ ಪ್ರಕಾರ ಹಜ್ ಯಾತ್ರೆ ಆರಂಭವಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರ ಕೈಗೊಂಡ ನಂತರ ಮುಸ್ಲಿಂ ಮಹಿಳೆಯರು ಏಕಾಂಗಿಯಾಗಿ ಹಜ್ ಯಾತ್ರೆಗೆ ಪ್ರಯಾಣಿಸಲು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಸುಮಾರು 1300 ಮುಸ್ಲಿಂ ಮಹಿಳೆಯರು ಏಕಾಂಗಿಯಾಗಿ ಹಜ್ ಯಾತ್ರೆ ಮಾಡಲು ದೇಶದ ನಾನಾ ಭಾಗಗಳಿಂದ ಅರ್ಜಿ ಸಲ್ಲಿಸಿದ್ದಾರೆ…ಕೊನೆಗೂ ಮುಸ್ಲಿಮ್ ಮಹಿಳೆಯರಿಗೆ ದೊರಕಿತು ಮೋದಿಯಿಂದ ಬಿಡುಗಡೆ ಎಂದೇ ಹೇಳಬಹುದು…

ಪವಿತ್ರ

Tags

Related Articles

Close