ಪ್ರಚಲಿತ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಯನ್ನು ಅಂಬುಲೆನ್ಸ್ ನಿಂದ ಕೆಳಗಿಳಿಸಿ ಅಸ್ಪತ್ರೆಯವರೆಗೆ ನಡೆದುಕೊಂಡು ಹೋಗುವಂತೆ ಮಾಡಿದ ಸಿದ್ದರಾಮಯ್ಯ?

ಈ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಇನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಬಗ್ಗಬಹುದು ಬಗ್ಗಬಹುದು ನೆಲಮುಟ್ಟುವವರೆಗೆ ಬಗ್ಗಬಹುದು. ಆದರೆ ನಂತರ ಎದ್ದೇಳಲೇಬೇಕು. ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದೆ. ಹಗರಣಗಳಿಂದ ಮಾತ್ರವಲ್ಲ ಅನಾಚಾರಗಳಿಂದಲೂ ಸುದ್ಧಿಯಾಗಿದ್ದ ಈ ರಾಜ್ಯ ಸರ್ಕಾರದಿಂದ ಮತ್ತೊಂದು ದುರಂತ ಬಯಲಲಿಗೆ ಬಂದಿದೆ.

ಸಿಎಂ ವಾಹನಗಳ ಸುಗಮ ಸಂಚಾರಕ್ಕಾಗಿ ಆಂಬುಲೆನ್ಸ್‍ನಲ್ಲಿದ್ದ ಮಹಿಳೆಯನ್ನು ಕೆಳಗಿಳಿಸಿ ನಡೆದುಕೊಂಡು ಹೋಗುವಂತೆ ಮಾಡಿದ್ದ ಅಮಾನವೀಯ ಘಟನೆ ಮಂಡ್ಯದಲ್ಲಿ ನಡೆದಿದೆ. ಸಿಎಂ ಕಾರ್ಯಕ್ರಮದ ಸೆಕ್ಯೂರಿಟಿ ಹೆಸರಲ್ಲಿ ಆಂಬುಲೆನ್ಸ್‍ನಿಂದ ಕೆಳಗಿಳಿಸಿ ನಡೆಸಿಕೊಂಡು ಹೋಗುವಂತೆ ಮಾಡಿದ್ದಾರೆ ಈ ಪಾಪಿ ರಾಜ್ಯ ಸರ್ಕಾರದ ಅಧಿಕಾರಿಗಳು.

ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ನಾಗಮಂಗಲದಲ್ಲಿ ಸ್ಟೇಡಿಯಂನಲ್ಲಿ ಹೆಲಿಕಾಫ್ಟರ್‍ನಿಂದ ಇಳಿದು ಎದುರಿನ ಸ್ಟೇಜ್‍ಗೆ ಹೋಗುವಾಗ, ದಾರಿ ಮಧ್ಯದಲ್ಲಿ ಆಂಬುಲೆನ್ಸ್‍ನಲ್ಲಿ ಮಹಿಳಾ ರೋಗಿಯೋರ್ವರನ್ನು ಕರೆತರಲಾಗಿತ್ತು.

ಆದರೆ ಸಿಎಂ ಭದ್ರತೆ ಹೆಸರಲ್ಲಿ ಹಳ್ಳಿಯಿಂದ ಮಹಿಳಾ ರೋಗಿಯನ್ನು ಕರೆತರುತ್ತಿದ್ದ ಆಂಬುಲೆನ್ಸ್‍ನ್ನು ಅರ್ಧಕ್ಕೆ ತಡೆದಿದ್ದಾರೆ. ಭದ್ರತೆ ಹೆಸರಲ್ಲಿ ರೋಗಿಯನ್ನು ತಡೆದಿದ್ದರಿಂದ ಮಹಿಳೆಯನ್ನು ನಡೆಸಿಕೊಂಡೇ ಆಸ್ಪತ್ರೆವರೆಗೆ ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯ ಮೋಬೈಲ್‍ನಲ್ಲಿ ಸೆರೆಯಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಈ ರೀತಿಯ ನಡೆಯನ್ನು ಜನರು ತೀವ್ರವಾಗಿ ಟೀಕಿಸಿದ್ದಾರೆ.

ಮಹಿಳೆಯನ್ನು ನೋಡಿ ಮರುಗಿದ ಜನ ಇಂತಹ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಹೇಳಬೇಕು ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರನ್ನು ತನ್ನ ಕಪಿಮುಷ್ಟಿಲ್ಲಿರಿಸುವ ಸರ್ಕಾರ ತನಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಇಂತಹ ಅಮಾನವೀಯ ಕೆಲಸಗಳು ಸ್ವತಃ ಪೊಲೀಸರಿಂದಲೇ ನಡೆಯುತ್ತಿದ್ದರೂ ತುಟಿ ಬಿಚ್ಚದೆ ಬೆಚ್ಚಗೆ ನಿದ್ರೆ ಮಾಡುತ್ತಿದೆ.

ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವುದು ಜನಸಮಾನ್ಯರಿಗೆ ಕಾಡುತ್ತಿರುವ ಪ್ರಶ್ನೆ. ಯಾಕೆಂದರೆ ಜನ ಸರ್ಕಾರದಿಂದ ಯಾವುದನ್ನು ಬಯಸುತ್ತಿದ್ದರೋ ಅದ್ಯಾವುದೂ ಆಗುತ್ತಿಲ್ಲ. ಹಲವಾರು ಆಶ್ವಾಸನೆಗಳನ್ನು ನೀಡುತ್ತಾ ಬಂದಂತಹ ಸರ್ಕಾರದಿಂದ ಜನ ಇನ್ನೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

ಮುಖ್ಯಮಂತ್ರಿಗಳ ಕಾರ್ಯಕ್ರಮದ ನಿಮಿತ್ತ ಸೆಕ್ಯೂರಿಟಿ ನೆಪದಲ್ಲಿ ಆಂಬುಲೆನ್ಸ್ ವಾಹನವನ್ನು ತಡೆದು ಅದರಲ್ಲಿದ್ದ ಮಹಿಳಾ ರೋಗಿಯನ್ನು ಆಸ್ಪತ್ರೆಯವರೆಗೂ ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ ಮುಖ್ಯಮಂತ್ರಿಗಳ ಭದ್ರತೆಗೆ ಆಗಮಿಸಿದ ಪೊಲೀಸರು. ರಾಜ್ಯ ಸರ್ಕಾರ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂಬುವುದನ್ನು ಇಷ್ಟರಲ್ಲೇ ಅರ್ಥಮಾಡಿಕೊಳ್ಳಬೇಕಾಗಿದೆ. ಪೊಲೀಸರನ್ನು ತಮಗೆ ಬೇಕಾದ ಹಾಗೆ ನಡೆಸಿಕೊಳ್ಳುವ ಈ ಸರ್ಕಾರ ದಕ್ಷ ಪೊಲೀಸ್ ಅಧಿಕಾರಿಗಳನ್ನ ಮಾತ್ರ ಮೂಲೆಗುಂಪು ಮಾಡಿ ಅವರ ಅಧಿಕಾರವನ್ನೇ ಕಿತ್ತುಕೊಳ್ಳುತ್ತಿದೆ. ಹಲವಾರು ಅಪರಾಧ ಕೃತ್ಯಗಳನ್ನು ಬಯಲಿಗೆಳೆದ ದಕ್ಷ ಪೊಲೀಸ್ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ, ಕೊಲೆ ಭಾಗ್ಯ, ವರ್ಗಾವಣೆ ಭಾಗ್ಯಗಳನ್ನು ಕರುಣಿಸಿದ ಈ ರಾಜ್ಯ ಸರ್ಕಾರ ತಮ್ಮ ಮಾತನ್ನು ಕೇಳುವ ಪೊಲೀಸರನ್ನು ಈ ರೀತಿ ಅಮಾನವೀಯವಾಗಿ ವರ್ತಿಸುವಂತೆ ಪ್ರೋತ್ಸಾಹಿಸುತ್ತಿದೆ. ಇದು ರಾಜ್ಯ ಸರ್ಕಾರದ ಅಹಂಕಾರದ ಆಡಳಿತ ಅನ್ನದೆ ಮತ್ತಿನ್ನೇನನ್ನಬೇಕು..?

ಈ ಹಿಂದೆ ಒಡಿಸ್ಸಾದಲ್ಲಿ ತನ್ನ ಸಂಬಂಧಿಕರೋರ್ವರ ಹೆಣ ಸಾಗಾಟ ಮಾಡಲು ಹಣವಿಲ್ಲದ ಕಾರಣ ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಕ್ರಿಯೆ ಮಾಡಿದ್ದ ಮನಕಲಕುವ ಘಟನೆ ರಾಷ್ಟ್ರವ್ಯಾಪಿ ಚರ್ಚೆಯಾಗಿತ್ತು. ಅಲ್ಲಿನ ಸರ್ಕಾರದ ಕಾರ್ಯವೈಖರಿ ಬಗ್ಗೆ ಟೀಕಾಪ್ರಹಾರವೇ ನಡೆದಿತ್ತು. ಕೇವಲ ಹೆಣವನ್ನು ಸಾಗಾಟ ಮಾಡಲು ಸಾಧ್ಯವಾಗದ ಸರ್ಕಾರಕ್ಕೆ ಮತ್ತಿನ್ನೇನು ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಜನರು ಸರ್ಕಾರದ ಮುಂದಿಟ್ಟಿದ್ದರು.

ಆದರೆ ಈಗ ಕರ್ನಾಟಕ ಸರ್ಕಾರ ನಡೆಸಿಕೊಳ್ಳುತ್ತಿರುವ ಈ ರೀತಿಯ ಅಮಾನವೀಯ ಕೃತ್ಯಗಳನ್ನು ನೋಡಿದರೆ ಯಾವ ಸಾಮಾನ್ಯ ಪ್ರಜೆಯೂ ಈ ಸರ್ಕಾರಕ್ಕೆ ಶಾಪ ಹಾಕದೆ ಇರಲಾರ… ಯಾವುದೇ ಸಾಮಾನ್ಯ ಪ್ರಜೆಯನ್ನೂ ತನ್ನ ಭದ್ರತೆಗಿಂತಲೂ ಆತನ ಭದ್ರತೆಯನ್ನು ಮೊದಲು ಮಾಡಬೇಕಾದ ಸರ್ಕಾರ, ತನ್ನ ಭದ್ರತೆಯೇ ಪ್ರಮುಖವಾಗಿರುವ ಮುಖ್ಯಮಂತ್ರಿಗಳ ಈ ರೀತಿಯ ಧೋರಣೆಯು ಸಾಮಾನ್ಯ ಪ್ರಜೆಗಳಲ್ಲಿ ಕೆಂಗಣ್ಣು ಬೀರುವಂತೆ ಮಾಡಿದೆ.

ಯಾವುದೇ ಕಾರ್ಯಕ್ರಮ ಅಥವಾ, ಯಾವುದೇ ವಾಹನ ಜಾಥಾಗಳು ಇದ್ದರೂ ಆಂಬುಲೆನ್ಸ್‍ಗೆ ದಾರಿ ನೀಡುವ ನಮ್ಮ ಸಾಮಾನ್ಯ ಜನರ ಎದುರು ತನ್ನ ಭದ್ರತೆಗಾಗಿ ಓರ್ವ ರೋಗಿಯನ್ನು ನಡುರೋಡಿನಲ್ಲಿ ನಡೆದುಕೊಂಡುಕೊಂಡು ಹೋಗುವಂತೆ ಮಾಡಿದ್ದು ಎಷ್ಟು ಸರಿ..?

ಯಾವುದೇ ಒಬ್ಬ ರಾಜನಿಗೆ ಪ್ರಜೆಗಳ ಮೇಲೆ ದಯೆಯಿರಬೇಕು, ಮಮತೆಯಿರಬೇಕು ಅದರೆ ಸಿದ್ದರಾಮಯ್ಯನಂತವರಿಂದ ಅದನ್ನೂ ನಿರೀಕ್ಷಿಸಲೂ ಸಾದ್ಯವಿಲ್ಲ. ಯಾರ ಭಯವೂ ಇಲ್ಲದೇ ತಾನು ನಡೆದಿದ್ದೇ ಹಾದಿ ಎಂಬಂತೆ ದೇವಾಲಯದೊಳಗೆ ಮೀನು ಮಾಂಸ ತಿಂದು ಹೋಗುವ ಮುಖ್ಯಮಂತ್ರಿಯಿಂದ ಅಹಂಕಾರವಲ್ಲದೇ ಬೇರೆನೂ ಸಿಗಲಾರದು ವಾರದ ಹಿಂದೆ ಖಾಸಗಿ ಅಸ್ಪತ್ರೆಗಳ ಮುಷ್ಕರದಿಂದ ರಾಜ್ಯದ 80 ಜನರು ಸತ್ತಾಗ ಸಾಕ್ಷಿ ಕೇಳಿ ದರ್ಪ ತೋರುವ ಮುಖ್ಯಮಂತ್ರಿ ಬೇರೆಲ್ಲಾದರೂ ಸಿಗುವರೇ ? ಎಂತೆಂತ ದಕ್ಷ ಅಧಿಕಾರಿಗಳ ಕೋಲೆಗಳಾದಾಗ  ತನ್ನ ಸಹೋದ್ಯೋಗಿಯೇ ಕೋಲೆ ಅರೋಪದಲ್ಲಿ ಭಾಗಿಯಾದರೂ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತಿರುವ ಮುಖ್ಯಮಂತ್ರಿಯನ್ನು ಪಡೆದ ಈ ಕರುನಾಡು ಧನ್ಯ ಇಂತ ಘೋರ ಘಟನೆಗಳು ಪ್ರಕಾಶ್ ರಾಜ್ ನಂತಹ ಗಂಜಿ ಗಿರಾಕಿಗಳಿಗೆ ಕಾಣದಿರುವುದು ಅವರ ಪೊಳ್ಳು ಮುಖವಡದ ರಾಜಕೀಯ ವೈನ್ ತೋರಿಸುತ್ತದೆ. ನಾಲ್ಕುವರೆ ವರುಷಗಳಲ್ಲಿ ಅದೆಷ್ಟೋ ಇಂತಹ ಕ್ರೂರ ಘಟನೆಗಳು ನಡೆದರೂ ಕರ್ನಾಟಕದಲ್ಲಿ ಏನಾಗುತ್ತಿದೆ ಅನ್ನುವ ಪ್ರಶ್ನೆಗಳು ಗಂಜಿ ಗಿರಾಕಿಗಳಿಗೆ ಹುಟ್ಟದೇ ಇಲ್ಲ ಅದರೆ ಒಂದಂತೂ ಸತ್ಯ ಸಿದ್ದಣ್ಣ..ನಿಮ್ಮ ಮಗ ಸತ್ತಾಗ ಇಡೀ ಕರ್ನಾಟಕದ ಜನತೆ ಪಕ್ಷ ಬೇದ ಮರೆತು ನಿಮ್ಮೊಡನೇ ಕಣ್ಣಿರು ಹಾಕಿತ್ತು ಅದರೆ ನೀವು ಅದನ್ನು ಮರೆತ್ತಿದ್ದೀರಾ, ಈಗ ಮತ್ತ ಜನತೆ ಇದನ್ನೆಲ್ಲಾ ನೋಡಿ ಕಣ್ಣೀರು ಹಾಕುತ್ತಿದ್ದಾರೆ ನೆನಪಿರಲಿ ಕಣ್ಣೀರೊಂದಿಗೆ ಶಾಪವನ್ನೂ ಹಾಕುತ್ತಿದ್ದಾರೆ. ದರ್ಪ ತೋರಿದ ಎಂತೆಂತಾ ರಾಜ ಮಹಾರಾಜರುಗಳೇ ಅಳಿದು ಹೋಗಿದ್ದಾರೆ ಇನ್ನು ನೀವ್ಯಾವ ಲೆಕ್ಕ ಆರು ತಿಂಗಳಿದೆ, ಅಷ್ಟೇ ತೋರಿಸಿ ನಿಮ್ಮ ದರ್ಪವನ್ನಾ.

source:http://publictv.in/in-the-name-of-cm-security-the-patient-was-made-to-get-down-from-ambulance/

-ಸುನಿಲ್ ಪಣಪಿಲ

Tags

Related Articles

Close