ಪ್ರಚಲಿತ

ದುರ್ಗಾ ಪೂಜೆಯನ್ನು ಅಲ್ಪಸಂಖ್ಯಾತರ ಓಲೈಕೆಗಾಗಿ ನಿಷೇಧಿಸಿದ ಮಮತಾ ದೀದಿಗೆ ಛೀಮಾರಿ ಹಾಕಿದ ಕಲ್ಕತ್ತಾ ಉಚ್ಛ ನ್ಯಾಯಾಲಯ!!!

ಮೊಹರಂ ಹಬ್ಬ ಇರುವ ಕಾರಣ ದುರ್ಗಾ ಪೂಜೆಯ ಮೂರ್ತಿ ವಿಸರ್ಜನೆಯನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿದ ಮಮತಾ ಬ್ಯಾನರ್ಜಿ ಸರಕಾರ ಈಗ ಎರಡನೇ ಬಾರಿ ಅಧಿಸೂಚನೆಯನ್ನು ಹೊರಡಿಸಿದೆ. ಅಕ್ಟೋಬರ್ ಒಂದರಂದು ನಡೆಯುವ ಮೊಹರಂಗೆ ದುರ್ಗಾ ಪೂಜೆಯ ಮೂರ್ತಿ ವಿಸರ್ಜನೆಯಿಂದ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಅಡ್ಡಿಯಾಗುವುದೆಂಬ ಕಾರಣವನ್ನಿಟ್ಟುಕೊಂಡು ದುರ್ಗಾ ವಿಸರ್ಜನೆಯನ್ನು ಮುಂದೂಡುವಂತೆ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಹಿಂದೂಗಳ ವಿರುದ್ಧ ಹೊರಡಿಸಿದ ಈ ಆದೇಶ ಹಿಂದೂಗಳನ್ನು ಕೆರಳಿಸುವಂತೆ ಮಾಡಿದೆ.

ಹಿಂದೂಗಳು ವೈಭವಯುತವಾಗಿ ಆಚರಿಸುವ ದುರ್ಗಾ ಮಾತೆ ವಿಗ್ರಹ ವಿಸರ್ಜನೆ ಮತ್ತು ಮುಸ್ಲಿಮರು ಭಕ್ತಿಯಿಂದಾಚರಿಸುವ ಮೊಹರಂ ಒಂದೇ ದಿನ ಬಂದಿರುವುದು ಪಶ್ಚಿಮ ಬಂಗಾಳದಲ್ಲಿ ಸಮಸ್ಯೆಗೆ ಕಾರಣವಾಗಿದೆ. ಈ ಎರಡೂ ಆಚರಣೆಗಳು ಒಂದೇ ದಿನ ಬಂದಿರುವುದರಿಂದ, ಅಂದು ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ಮಮತಾ ಬ್ಯಾನರ್ಜಿ ಸರಕಾರ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.

ಈ ವರ್ಷ, ದಸರಾ ಹಬ್ಬ ಸಪ್ಟೆಂಬರ್ 30 ರಂದು ಅಂತ್ಯಗೊಳ್ಳಲಿದೆ. ದಸರದ ಮರುದಿನ ಮೂರ್ತಿಗಳ ವಿಸರ್ಜನೆ ನಡೆಯುತ್ತದೆ. ಆದರೆ, ಈ ಬಾರಿ ಅಕ್ಟೋಬರ್ 1 ರಂದು ಮೊಹರಂ ಹಬ್ಬ ಬಂದಿರುವುದರಿಂದ ಅಂದು ಮೂರ್ತಿ ವಿಸರ್ಜನೆ ಬೇಡವೆಂದು, ಕೋಮು ಗಲಭೆಗಳ ಭೀತಿ ಇರುವುದರಿಂದ ಅಗಸ್ಟ್ 2ರಿಂದ ನಡೆಸಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ನಿನ್ನೆ ನಡೆದ ದುರ್ಗಾಪೂಜೆ ಸಮಿತಿಯ ಸಭೆಗೆ ಹಾಜರಾದ ಮಮತಾ, ಕೆಲವು ಕೋಮುವಾದಿ ಸಂಘಟನೆಗಳು ಜನರನ್ನು ಕೋಮು ಗಲಭೆಗೆ
ಪ್ರಚೋದಿಸಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಕೋಮುಗಲಭೆ ಉಂಟುಮಾಡಬಲ್ಲ ಯಾವುದೇ ಪ್ರಚೋದನೆಗಳಿಗೆ ಒಳಗಾಗಬೇಡಿ ಎಂದು ಸಾರ್ವಜನಿಕರಿಗೆ ತಾಕೀತು ಮಾಡಿದ್ದಾರೆ.ಅಕ್ಟೋಬರ್ ಒಂದರಂದು ಆಚರಿಸಲಾಗುವ ಮೊಹರಂ ಹಬ್ಬಕ್ಕಾಗಿ, ಇದೇ ಮಾಸಾಂತ್ಯದಲ್ಲಿ ಬರುವ ನವರಾತ್ರಿ ದುರ್ಗಾ ವಿಸರ್ಜನೆಗೆ ನಿರ್ಬಂಧ ಹೇರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು ಯಾವ ರೀತಿಯ ಕೋಮು ಸೌಹಾರ್ದತೆ ಎಂದು ಪ್ರಶ್ನಿಸುವಂತಾಗಿದೆ.!!

“ಮೊಹರಂ ಕೇವಲ ಒಂದು ಹಬ್ಬವಲ್ಲ, ಜವಾಬ್ದಾರಿ ಎಂಬುವುದು ಗಮನದಲ್ಲಿರಲಿ”. ಕೆಲವರು ಜನರನ್ನು ತಪ್ಪು ದಾರಿಗೆ ಎಳೆದು, ಗಲಭೆ ಸೃಷ್ಟಿಸಲು ಕಾಯುತ್ತಿದ್ದಾರೆ. ಪೂಜೆಯ ಸಮಿತಿಗಳು ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಯಾಕೆ ಈ ಮಮತಾ ಬ್ಯಾನರ್ಜಿಗೆ ಮೊಹರಂ ಮಾತ್ರ ಜವಾಬ್ದಾರಿಯುತ ಹಬ್ಬವೆಂದು ಅನಿಸುತ್ತದೆ?? ಯಾಕೆ ನಮ್ಮ ದುರ್ಗಾ ಪೂಜೆ ಜವಾಬ್ದಾರಿಯುತ ಹಬ್ಬವೆಂದು ಅನಿಸುತ್ತಿಲ್ಲ?? ಮಮತಾ ಬ್ಯಾನರ್ಜಿ ಯಾಕೆ ನೀವು ಇಷ್ಟೊಂದು ಕೆಳ ಮಟ್ಟದಲ್ಲಿ ಯೋಚಿಸುತ್ತೀರೀ? ಥೂ ನಿಮ್ಮ ಜನ್ಮಕ್ಕೆ…

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮಮತಾ ಬ್ಯಾನರ್ಜಿ, ರಾಷ್ಟ್ರೀಯ ಪಕ್ಷ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಧ್ಯಕ್ಷರಿಗೆ ಕೋಲ್ಕತ್ತಾದಲ್ಲಿನ
ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಅನುಮತಿ ನಿರಾಕರಿಸಿ ಸರ್ವಾಧಿಕಾರ ಧೋರಣೆ ತೋರಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೋಹನ್ ಭಾಗವತ್ ಅವರಿಗೂ ಮಮತಾ ಸರಕಾರ ಅನುಮತಿ ನಿರಾಕರಿಸಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ದಿನದಿಂದ ದಿನಕ್ಕೆ ಪಶ್ಚಿಮ ಬಂಗಾಳದಲ್ಲಿ ಜನಪ್ರಿಯಗೊಳ್ಳವುದನ್ನು ಸಹಿಸಿಕೊಳ್ಳಲಾಗದೇ, ಮಮತಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದು ನಮಗೆ ಅರ್ಥವಾಗುತ್ತಿದೆ. ಕಳೆದ ವರ್ಷದಂತೆಯೇ ಈ ಬಾರಿಯೂ ದುರ್ಗಾಪೂಜೆ ಮತ್ತು ವಿಸರ್ಜನೆಗೆ ಮಮತಾ ಬ್ಯಾನರ್ಜಿ ಹಲವು ನಿರ್ಬಂಧನೆಗಳನ್ನು ವಿಧಿಸಿದ್ದಾರೆ.

ಮಮತಾ ಬ್ಯಾನರ್ಜಿ ಸರಕಾರದ ಆದೇಶದ ವಿರುದ್ಧ ಕೆಲವು ಹಿಂದೂ ಸಂಘಟನೆಗಳು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದೆ.
ಆದರೆ ಇದೀಗ ಮೊಹರಂ ದಿನ ದುರ್ಗಾ ವಿಗ್ರಹ ವಿಸರ್ಜನೆಗೆ ನಿಷೇಧ ಹೇರಿದ್ದ ಮಮತಾ ಬ್ಯಾನರ್ಜಿ ಸರಕಾರಕ್ಕೆ ಕಲ್ಕತ್ತಾ ಹೈಕೋರ್ಟ್‍ತರಾಟೆಗೆ ತೆಗೆದುಕೊಂಡಿದೆ. ಧಾರ್ಮಿಕ ಆಚರಣೆಗಳನ್ನು ಯಾವುದೇ ಕಾರಣಕ್ಕೂ ಸರಕಾರ ನಿರ್ಬಂಧಿಸುವಂತಿಲ್ಲ ಎಂದಿದ್ದಾರೆ. ಎರಡೂ ಸಮುದಾಯಗಳು ಒಟ್ಟಾಗಿ ಏಕೆ ಹಬ್ಬವನ್ನು ಆಚರಿಸಬಾರದು? ನೀವೇಕೆ ರಾಜ್ಯದಲ್ಲಿ ಕೋಮು ಸಾಮರಸ್ಯ ಹೊಂದಿರುವಾಗ ನೀವೇಕೆ ಕೋಮು ಗಲಭೆಯನ್ನು ಸೃಷ್ಠಿಸುತ್ತೀರಿ? ಎರಡೂ ಸಮುದಾಯಗಳನ್ನು ಸಾಮರಸ್ಯದಿಂದ ಬದುಕಲು ಬಿಡಿ.. ಅವರ ನಡುವೆ ಗೆರೆ ಎಳೆಯ ಬೇಡಿ ಎಂದು ನ್ಯಾಯಾಲಯವು ಮಮತಾ ಬ್ಯಾನರ್ಜಿ ಸರಕಾರಕ್ಕೆ ಆದೇಶ ನೀಡಿದೆ. ಸೆಪ್ಟೆಂಬರ್ 30 ರಂದು ದುರ್ಗಾ ವಿಗ್ರಹಗಳ ಮುಳುಗುವಿಕೆಯು ಮಧ್ಯರಾತ್ರಿಯವರೆಗೆ ಅಂದರೆ 1.36ರ ತನಕ ಪಂಚಾಂಗದ ಪ್ರಕಾರ ನಿಶ್ಚಿತ ಸಮಯದಲ್ಲಿ ಮುಳುಗಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್ ಮಮತಾ ಬ್ಯಾನರ್ಜಿಗೆ ಆದೇಶಿಸಿದೆ.

ಮಮತಾಬ್ಯಾನರ್ಜಿ ಸರಕಾರದ ನಿರ್ಧಾರ ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಮಮತಾ ಸರಕಾರ ಈ ಮಟ್ಟಕ್ಕೆ ಇಳಿದಿರುವುದು
ವಿಷಾದನೀಯ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮೋದಿ ಸರಕಾರ ಮಾಡುವ ಒಳ್ಳೆ ಕೆಲಸಗಳನ್ನು ಸಹಿಸಲಾಗದಿದ್ದಲ್ಲಿ ಇಂತಹ ಕೆಟ್ಟ ಕೆಲಸಗಳನ್ನು ಮಾಡಿ ಜನರ ಟೀಕೆಗೆ ಒಳಗಾಗಬೇಡಿ.. ಅಧಿಕಾರದಲ್ಲಿರುವಷ್ಟು ಒಂದಿಷ್ಟು ಒಳ್ಳೆಯ ಕೆಲಸವನ್ನು ಮಾಡಿ. ಜನ ಓಟು ಹಾಕಿ ಗೆಲ್ಲಿಸಿದ್ದಕ್ಕಾದರೂ ಅವರಿಗೆ ಗೌರವ ಕೊಡುವ ಮೂಲಕ ಶ್ರದ್ಧೆಯಿಂದ ಕೆಲಸ ಮಾಡಿ. ಹಿಂದೂ-ಮುಸ್ಲಿಮರು ಅಂತ ಬೇರ್ಪಡಿಸಲು ಪ್ರಯತ್ನಿಸಬೇಡಿ…ಸಾಮರಸ್ಯದಿಂದ ಅವರನ್ನು ಬದುಕಲು ಬಿಡಿ…

-ಶೃಜನ್ಯಾ

Tags

Related Articles

Close