ಪ್ರಚಲಿತ

ದೆಹಲಿಗಾಗಮಿಸಿದ ಬರಾಕ್ ಒಬಾಮ ನನ್ನು ಭೇಟಿಯಾಗಿದ್ದ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಟ್ರೋಲ್ ಆಗಿದ್ದು ಹೇಗೆ ಗೊತ್ತೇ?!

ರಾಹುಲ್‌ ಗಾಂಧಿಗೆ ಮತ್ತೊಮ್ಮೆ ಮುಜುಗರ!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೂ ವಿವಾದಕ್ಕೂ ಅವಿನಾಭಾವ ಸಂಬಂಧ ಇರುವಂತಿದೆ. ಏಕೆಂದರೆ ಏನೇ ಮಾಡಿದರೂ ಅಥವಾ ಏನೋ ಮಾಡಲು ಹೋಗಿ ಮುಜುಗರಕ್ಕೆ ಈಡಾಗುತ್ತಿದ್ದಾರೆ. ಇತ್ತೀಚೆಗೆ ಸೋಮನಾಥ್ ದೇಗುಲಕ್ಕೆ ಭೇಟಿ ನೀಡಿ ಹಿಂದೂಯೇತರ ಎನಿಸಿಕೊಂಡಿದ್ದ ರಾಹುಲ್ ಈಗ ಮತ್ತೊಮ್ಮೆ ಮುಜುಗರಕ್ಕೀಡಾಗಿದ್ದಾರೆ. ಈ ಬಾರಿ ಖುದ್ದಾಗಿ ರಾಹುಲ್ ಗಾಂಧಿಯೇ ಮುಖಭಂಗಕ್ಕೀಡಾಗಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಆಗಮಿಸಿದ್ದಾರೆ. ಅವರನ್ನು ಭೇಟಿ ಮಾಡಿ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದರು.ನಂತರ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಾಕಿಕೊಂಡಿದ್ದ ರಾಹುಲ್ ಗಾಂಧಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಮಾತುಕತೆ ನಡೆಸಿದೆ ಎಂದು
ಬರೆದುಕೊಂಡಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮಾ ಎಂದು ಬರೆದುಕೊಂಡಿರುವುದು ಟ್ರೋಲ್‍ಗೆ ಕಾರಣವಾಗಿದೆ. ಆದರೆ ಅಮೆರಿಕದಲ್ಲಿ ಎಲ್ಲ ಮಾಜಿ ಅಧ್ಯಕ್ಷರಿಗೂ ಮಿ. ಪ್ರೆಸಿಡೆಂಟ್ ಎಂದೇ ನಮೂದಿಸಲಾಗುತ್ತದೆ ಎಂದು ಹೇಳಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇತ್ತೀಚೆಗೆ ಟ್ವಿಟರ್‍ನಲ್ಲಿ ರಾಹುಲ್ ಗಾಂಧಿ ಸಕ್ರಿಯವಾಗಿರೋದರ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ತನಗಾಗಿ ನಾಯಿ ಟ್ವೀಟ್ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವಿಟರ್ ಲ್ಲಿ ಪೆÇೀಸ್ಟ್ ಹಾಕಿದ ಪೋಸ್ಟ್ ಕೂಡಾ ವೈರಲ್ ಆಗಿತ್ತು ಇದು ಎಲ್ಲರಿಗೂ ತಿಳಿದ ವಿಷಯ.. ಇವರು ಏನೇ ಮಾಡೋಕೆ ಹೋದ್ರೋ ವಿವಾದ ಮಾಡಿಯೇ ಬರುತ್ತಾರಲ್ಲ ಇದರ ಬಗ್ಗೆ ನಮಗೆ ಅವರಿವಾಗುತ್ತಲ್ಲ ರಾಹುಲ್ ಗಾಂಧಿಯವರೆ!..ಇದಕ್ಕಿಂತ ಮುಂಚೆ ನಿಮ್ಮನ್ನು ಪಪ್ಪು ಎಂದು ಹೆಸರಿಟ್ಟಿದ್ದು ನಿಜವಾಗಿಯೂ ಸರಿಯಾಗಿತ್ತು ಬಿಡಿ!

ಟ್ವಿಟರ್ನಲ್ಲಿ ತಮ್ಮ ನಾಯಿ ಪಿಡಿಯ ವಿಡಿಯೋವೊಂದನ್ನು ರಾಹುಲ್ ಪೆÇೀಸ್ಟ್ ಮಾಡಿದ್ದರು!! ರಾಹುಲ್ ಅವರು “ಪಿಡಿ” ಎಂದು ಕರೆದ ತಕ್ಷಣ ಹುಲ್ಲು ಹಾಸಿನ ಮೇಲೆ ಬಂದು ನಿಲ್ಲುತ್ತದೆ.!! ಈ ವೇಳೆ ರಾಹುಲ್ ನಮಸ್ಕಾರ ಮಾಡು ಅಂತ ಹೇಳುತ್ತಾರೆ.!! ಅಂತೆಯೇ ಪಿಡಿ ತನ್ನ ಎರಡು ಮುಂಗಾಲುಗಳನ್ನು ಮೇಲೆತ್ತಿ ನಿಲ್ಲುತ್ತದೆ. ನಂತರ ರಾಹುಲ್ ಬಿಸ್ಕೆಟ್‍ವೊಂದನ್ನು ಅದರ ಮೂಗಿನ ಮೇಲೆ ಇರಿಸುತ್ತಾರೆ. ರಾಹುಲ್ ಚಿಟಿಕೆ ಹೊಡೆದ ಕ್ಷಣ ಮಾತ್ರದಲ್ಲಿ ನಾಯಿ ತನ್ನ ಬಾಯಿಗೆ ಬಿಸ್ಕತ್ ಎಳೆದುಕೊಳ್ಳುತ್ತದೆ. ಸ್ವತಃ ರಾಹುಲ್ ಗಾಂಧಿಯೇ ನನಗಿಂತ ಈ ನನ್ನ ನಾಯಿಯೇ ತುಂಬಾ ಬುದ್ದಿವಂತ ಎಂದು ಅವರೇ ಹೇಳಿರ ಬೇಕಾದರೆ ನಾವು ಕೂಡಾ ನಂಬಲೇ ಬೇಕಾದ ಸಂಗತಿಯಾಗಿದೆ. ರಾಹುಲ್ ಟ್ವಿಟರ್ ಖಾತೆಯನ್ನು ಯಾರು ನಿಭಾಯಿಸುತ್ತಾರೆ ಅನ್ನೋ ಪ್ರಶ್ನೆ ಯಾವಾಗಲೂ ಜನರಿಗೆ ಕಾಡುತ್ತಲೇ ಇರುತ್ತಿತ್ತು. ಅದು ಬೇರೆ ಯಾರೂ ಅಲ್ಲ ನಾನೇ ಪಿಡಿ… ನಾನು ಆತನಿಗಿಂತ ಬಹಳ ಕೂಲ್… ನೋಡಿ ಟ್ವೀಟ್‍ನಿಂದ ನಾನೇನು ಮಾಡಬಲ್ಲೆ.. ಊಪ್ಸ್… ಎಂದು ಟ್ವೀಟ್ ಮೂಲಕ ರಾಹುಲ್ ಗಾಂಧಿ ಹೇಳಿ ಕೊಂಡಿದ್ದರು.!! ಆಗಿನ ವಿಷಯ ಯಾಕೆ ಇವಾಗ ಎಂದು ಯೋಚಿಸುತ್ತಿದ್ದರೆ, ಈ ಬಾರಿ ಯಾರೂ ಟ್ವೀಟ್ ಮಾಡಿರ ಬಹುದು ಎನ್ನುವ ಸಂದೇಹದಿಂದ ಈ ವಿಷಯವನ್ನು ಹೇಳ ಬಯಸಿದೆ ಅಷ್ಟೇ!

47 ವರ್ಷದ ಇಂತಹ ಯುವಕನಾಗಿರುವಂತಹ ರಾಹುಲ್ ಗಾಂಧಿ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ ಎಂದರೆ ಯಾರಾದರೂ ನಂಬಲು ಸಾಧ್ಯವೇ? 2019 ರ ಪ್ರಧಾನಿ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದಾರೆ ಬೇರೆ!!.. ನಿಮ್ಮಂಥವರಿಗೆ ಪ್ರಧಾನಿ ಹುದ್ದೆ ಕೊಟ್ಟು ಬಿಟ್ಟರೆ ಇಮಾಜೀನ್ ಮಾಡೋಕೂ ಕಷ್ಟವಾಗುತ್ತದೆ.!! ರಾಹುಲ್ ಗಾಂಧಿಗಿಂತ ಆತನ ನಾಯಿ ಟ್ವೀಟರ್ ಖಾತೆಯನ್ನು ನಿರ್ವಹಿಸಬಲ್ಲದು ಎಂದು ಸ್ವತಃ ರಾಹುಲ್ ಗಾಂಧಿಯವರೇ ಒಪ್ಪಿಕೊಂಡಿದ್ದಲ್ಲದೆ ಈ ಬಾರಿ ಈ ರೀತಿಯಾಗಿ ರಾಹುಲ್ ಟ್ವೇಟ್ ಮಾಡಿರುವುದು ಇದು ವೈರಲ್ ಆಗಿದೆ.!! ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗುವುದಕ್ಕೂ ರೆಡಿಯಾಗುತ್ತಿದ್ದಾರೆ.!!

ಅದಲ್ಲದೆ ಮೊನ್ನೆ ಸೋಮನಾಥ ದೇವಾಲಯಕ್ಕೆ ಹೋಗಿ ಅಲ್ಲಿ ಕೂಡಾ ಎಡವಟ್ಟು ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ! ಸೋಮನಾಥ ದೇವಾಲಯದ ಪಾವಿತ್ರ್ಯತೆ ಹಾಗೂ ರಕ್ಷಣೆ ಸಲುವಾಗಿ ಅಲ್ಲಿಗೆ ಭೇಟಿ ನೀಡುವ ಹಿಂದೂಗಳಲ್ಲದ ವ್ಯಕ್ತಿಗಳು ದಾಖಲಾತಿ ಪುಸ್ತಕಗಳಲ್ಲಿ ತಮ್ಮ ವೈಯಕ್ತಿಕ
ವಿವರಗಳನ್ನು ನೀಡಬೇಕು ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಸೋಮನಾಥ ದೇವಾಲಯಕ್ಕೆ ಪ್ರವೇಶಿಸುವ ಹಿಂದೂ ಧರ್ಮವಲ್ಲದ ಬೇರೆ ಧರ್ಮಗಳ ವ್ಯಕ್ತಿಗಳ ವಿವರಗಳನ್ನು ದಾಖಲಿಸಿಕೊಳ್ಳುವುದು ಪದ್ಧತಿ. ಬೇರೆ ಧರ್ಮಗಳ ಜನರು ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ದಾಖಲಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ತಮ್ಮ ವಿವರಗಳನ್ನು ನೀಡಬೇಕು. ಈ ನಿಯಮವನ್ನು ನಾವು ಕಡ್ಡಾಯವಾಗಿ ಪಾಲಿಸುತ್ತೇವೆ ಎಂದು ದೇವಸ್ಥಾನದ ಮೇಲ್ವಿಚಾರಕ ಸಂಜಯ್ ಭಾಯ್ ಜೋಶಿ ಹೇಳಿದ್ದರು.. 2015ರಿಂದ ಈ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದ್ದು, ಹಿಂದೂಯೇತರ ವ್ಯಕ್ತಿಗಳು ದೇವಸ್ಥಾನವನ್ನು ಪೂರ್ವಾನುಮತಿಯಿಲ್ಲದೆ ಪ್ರವೇಶಿಸುವಂತಿಲ್ಲ.

ಬೇರೆ ಧರ್ಮದವರನ್ನು ಸೋಮನಾಥ ದೇವಸ್ಥಾನಕ್ಕೆ ಪ್ರವೇಶಿಸಲು ಅನುಮತಿ ನೀಡಬೇಕೆಂದು ಪ್ರಾತಿನಿಧ್ಯಗಳು ಬಂದ ನಂತರ ಹಿಂದೂಯೇತರರು
ಪ್ರವೇಶಿಸಬಾರದೆಂಬ ನಿಯಮವನ್ನು ತೆಗೆದುಹಾಕಲಾಯಿತು ಎಂದು ದೇವಸ್ಥಾನದ ಟ್ರಸ್ಟಿನ ಅಧಿಕಾರಿಯೊಬ್ಬರು ಹೇಳಿದ್ದರು. ಬೇರೆ ಧರ್ಮದವರ ವಿವರ ಪಡೆಯದೆ ಗುರುತು ಪಡೆಯದೆ ದೇವಸ್ಥಾನದೊಳಗೆ ಹೋಗಲು ಬಿಟ್ಟರೆ ಭದ್ರತೆ ನಮಗೆ ಆತಂಕವುಂಟಾಗುತ್ತದೆ.ಅಲ್ಲದೆ ದೇವಸ್ಥಾನದ ಜ್ಯೋತಿರ್ಲಿಂಗ ಹಿಂದೂಗಳಿಗೆ ಬಹಳ ಪವಿತ್ರವಾಗಿರುವುದರಿಂದ ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ದೇವಸ್ಥಾನದ ಅಧಿಕಾರಿಗಳು. ಬೇರೆ ಧರ್ಮಗಳ ಭಕ್ತರು ದೇವಸ್ಥಾನದೊಳಗೆ ಪ್ರವೇಶಿಸುವ ಮುನ್ನ ದೇವಸ್ಥಾನದ ಪ್ರಧಾನ ವ್ಯವಸ್ಥಾಪಕರ ಅನುಮತಿ ತೆಗೆದುಕೊಳ್ಳಬೇಕೆಂದು ನೊಟೀಸೊಂದನ್ನು ಮುಖ್ಯ ದ್ವಾರದಲ್ಲಿ ಹಾಕಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ಹಿಂದೂಯೇತರ ಧರ್ಮಕ್ಕೆ ಸೇರಿದವರೆಂದು ದಾಖಲಾತಿ ಪುಸ್ತಕದಲ್ಲಿ ಬರೆದು ಒಳಹೋಗಿದ್ದರು. ಇವರು ಯಾವಾಗ ಯಾವ ಧರ್ಮಕ್ಕೆ ಮತಾಂತರವಾಗುತ್ತಾರೆ ಎಂಬುವುದೇ ಅರ್ಥವಾಗುತ್ತಿಲ್ಲ..

ಜಾತಿ ಮತ್ತು ದೇಗುಲಗಳು ಹೇಗೆ ರಾಜಕೀಯಕರಣಗೊಳ್ಳುತ್ತಿವೆ ಎಂಬುದಕ್ಕೆ ಗುಜರಾತಿನ ಈಗಿನ ಸನ್ನಿವೇಶವೇ ಪ್ರತ್ಯಕ್ಷ ಸಾಕ್ಷಿ. ವೋಟಿಗೋಸ್ಕರ ರಾಹುಲ್ ಅಪ್ಪಟ ದೈವಭಕ್ತ ಆಗುತ್ತಿದ್ದಾರೆ. ಅದರ ಬೆನ್ನಲ್ಲೇ ಹಾರ್ದಿಕ್ ಪಟೇಲ್ ಪಟೇಲ್ ಸಮುದಾಯವನ್ನು, ಜಿಗ್ನೇಶ್ ಮೇವಾನಿ ದಲಿತ ಸಮುದಾಯವನ್ನು, ಅಲ್ಪೇಶ್ ಠಾಕೂರ್ ಇತರ ಹಿಂದುಳಿದ ವರ್ಗಗಳನ್ನು ಬೇರ್ಪಡಿಸಿ ರಾಹುಲ್ ಮಡಿಲು ತುಂಬಲು ಯೋಜನೆ ರೂಪಿಸಿದ್ದಾರೆ. ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ ಅಂತಲೇ ಇಟ್ಟುಕೊಳ್ಳೋಣ. ಈಗ ಭರವಸೆ ನೀಡಿರುವಂತೆ ಪಟೇಲ್ ಸಮುದಾಯಕ್ಕೆ ರಾಹುಲ್ ಎಲ್ಲಿಂದ ಮೀಸಲಾತಿ ಕಲ್ಪಿಸುತ್ತಾರೆ. ಸಂವಿಧಾನದ ಪ್ರಕಾರ ಮೀಸಲಾತಿ ಶೇಕಡಾ. 50ರ ಮಿತಿ ದಾಟುವ ಹಾಗಿಲ್ಲ. ಅಕಸ್ಮಾತ್ ಈ ಸಲದ ಗುಜರಾತ್ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸೋಲಾದರೆ ಮುಂದಿನ ಬಾರಿ ರಾಮಮಂದಿರ ನಿರ್ಮಾಣ ಆಂದೋಲನಕ್ಕೇ ರಾಹುಲ್ ನೇತೃತ್ವ ವಹಿಸಲು ಮುಂದಾಗಬಹುದು ಅಲ್ಲವೇ? ಅಚ್ಚರಿ ಏನಿಲ್ಲ?

ಹೀಗೆ ಎಲ್ಲಿ ಹೋದರು ಬೆಂಬಿಡದ ಭೂತದಂತೆ ವಿವಾದ ಮಾತ್ರ ಇವರನ್ನು ಬಿಡಲ್ಲ ಅನ್ಸುತ್ತೆ!!!…ಪಾಪ ಪ್ರಧಾನಿ ಬೇರೆ ಆಗೋಕೆ ಹೊರಟಿರುವ ಈತ ಇನ್ನೇನೆಲ್ಲಾ ಎಡವಟ್ಟು ಮಾಡುತ್ತಾರೆ ಎಂಬುವುದನ್ನೇ ಎಲ್ಲಾ ನಿಮ್ಮ ಹಿತೈಷಿಗಳು ಕಾಯುತ್ತಿರುತ್ತಾರೆ….

-ಪವಿತ್ರ

Tags

Related Articles

Close