ಪ್ರಚಲಿತ

ಸರ್ಕಾರಿ ಪ್ರಾಯೋಜಕತ್ವದಲ್ಲಿ ಗೌರಿ ದಿನ!! ದೇಶದ್ರೋಹಿಗಳಿಗೆ ಸಿದ್ದರಾಮಯ್ಯರಿಂದ ಏನೆಲ್ಲಾ ಸವಲತ್ತು ಸಿಗಲಿದೆ ಗೊತ್ತಾ?

ಕೊನೆಗೂ ಕಾಂಗ್ರೆಸ್ ಪ್ರೇರಿತ ಗೌರಿ ಪರ ಹೋರಾಟಗಾರರು ಮತ್ತೆ ಬೆಂಗಳೂರಿನಲ್ಲಿ ಒಂದಾಗಿ ಬುದ್ದಿಮತ್ತೆಯನ್ನು ಸಾಭೀತು ಪಡಿಸಿದ್ದಾರೆ. ದೇಶದ್ರೋಹಿ ನಾಯಕರೆಲ್ಲಾ ಒಂದೇ ವೇದಿಕೆಯಲ್ಲಿ ಒಂದಾಗಿ ಇಂದು ಮತ್ತೆ ನಾನು ಗೌರಿ ನಾನು ಗೌರಿ ಎಂದು ಬೊಬ್ಬೆ ಹೊಡೆಯುತ್ತಾರೆ. ಈ ಮೂಲಕ ದೇಶದ್ರೋಹಿಗಳೆಲ್ಲರೂ ಗುಜರಾತ್ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕರ್ನಾಟಕಕ್ಕೆ ಆಗಮಿಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 4 ತಿಂಗಳುಗಳೇ ಕಳೆದರೂ ಇನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. “ನಮ್ಮ ಪೊಲೀಸ್ ಪಡೆ ಸಮರ್ಥವಾಗಿದೆ” ಎಂದು ಹೇಳುತ್ತಲೇ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‍ಐಟಿ ರಚನೆ ಮಾಡಿ ಅದಕ್ಕೆ ವರ್ಗಾಯಿಸಿದ್ದರು. ಸಿಬಿಐ ಗೆ ವಹಿಸಿ ಎಂದು ಅದೆಷ್ಟು ಬೊಬ್ಬೆ ಇಟ್ಟಿದ್ದರೂ ಅಹಂಕಾರ ಮೆರೆದ ಸಿದ್ದರಾಮಯ್ಯ ವಿಶೇಷ ತನಿಖಾ ದಳವೇ ಅಂತಿಮ ಎಂದು ತನಿಖೆ ಶುರುವಿಟ್ಟುಕೊಂಡಿದ್ದರು. ಆದರೆ ಗೌರಿ ಹತ್ಯೆ ನಡೆದು ಬರೋಬ್ಬರಿ 4 ತಿಂಗಳುಗಳೇ ಕಳೆದರೂ ಇನ್ನೂ ಹಂತಕರ ಪತ್ತೆಯಾಗಿಲ್ಲ ಎಂದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವೇನು ಎಂಬ ಪ್ರಶ್ನೆ ಮೂಡಿಯೇ ಮೂಡುತ್ತದೆ.

ಬಂದಿದ್ದಾರೆ ಕಾಂಗ್ರೆಸ್ ಪ್ರೇರಿತ “ಗೌರಿ”ಗಳು…!!!

ಇಂದು ಬೆಂಗಳೂರಿನಲ್ಲಿ ಗೌರಿ ಕುರಿತಾದ ನಾನು ಗೌರಿ ಎಂಬ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಜಿಗ್ನೇಶ್ ಮೇವಾನಿ, ಅಮೀನ್ ಮಟ್ಟು, ಪ್ರಕಾಶ್ ರೈ ಸಹಿತ ಅನೇಕ ಜಾತ್ಯಾತೀತ ನಾಯಕರು ಭಾಗವಹಿಸಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಪ್ರೇರಿತ ನಾಯಕರು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಇಂದು ಸ್ವತಃ ಗೌರಿ ಲಂಕೇಶ್ ಅವರ ಸಹೋದರ ಇಂದ್ರಜಿತ್ ಲಂಕೇಶ್ ಈ ಬಗ್ಗೆ ಕಿಡಿ ಕಾರಿದ್ದಾರೆ.

ಸಿಡಿದೆದ್ದ ಇಂದ್ರಜಿತ್ ಲಂಕೇಶ್-ಕಾಂಗ್ರೆಸ್ ವಿರುದ್ಧ ವಾಗ್ದಾಳಿ…

ಹಂತಕರ ಗುಂಡೇಟಿಗೆ ಬಲಿಯಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರ ಸಹೋದರ ಇಂದ್ರಜಿತ್ ಲಂಕೇಶ್ ಸಿಡಿದೆದ್ದಿದ್ದಾರೆ. ಇಂದು ಬೆಂಗಳೂರಿನ ಟೌನ್ ಹಾಲ್‍ನಲ್ಲಿ ನಡೆಯುತ್ತಿರುವ ನಾನು ಗೌರಿ ಎಂಬ ಕಾರ್ಯಕ್ರಮದ ವಿರುದ್ಧ ಇಂದ್ರಜಿತ್ ಲಂಕೇಶ್ ತನ್ನ ಮಾತಿನ ವಾಕ್ಪ್ರಹಾರವನ್ನೇ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಕೆಲವರನ್ನು ಛೂ ಬಿಟ್ಟಿದ್ದಾರೆ ಎಂದು ಅವರು ಹರಿಹಾಯ್ದಿದ್ದಾರೆ. ಗೌರಿ ಹತ್ಯೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮೇಲೆ ಭರವಸೆ ಇಟ್ಟು ಎಸ್‍ಐಟಿಗೆ ಓಕೆ ಅಂದಿದ್ದ ಇಂದ್ರಜಿತ್ ಲಂಕೇಶ್ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ.

ಇದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವೆಂದ ಇಂದ್ರಜಿತ್…

ಇಂದು ನಡೆಯುತ್ತಿರುವ ನಾನು ಗೌರಿ ಎಂಬ ಕಾರ್ಯಕ್ರಮ ಸಂಪೂರ್ಣ ಸರ್ಕಾರಿ ಪ್ರಯೋಕತ್ವದಲ್ಲಿ ನಡೆಯುತ್ತಿದ್ದು, ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಏನು ಹೇಳಿದ್ದಾರೆ? ಇಲ್ಲಿದೆ ನೋಡಿ…

“ಇಂದು ಬೆಂಗಳೂರಿನ ಟೌನ್ ಹಾಲ್‍ನಲ್ಲಿ ನಡೆಯುತ್ತಿರುವ ಗೌರಿ ಲಂಕೇಶ್ ಕುರಿತಾದ ಕಾರ್ಯಕ್ರಮ ಸಂಪೂರ್ಣ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ನಾವು ಹಾಜರಾಗೋದಿಲ್ಲ. ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ನಾಯಕರು ಗೌರಿ ಹಂತಕರ ಬಂದಿಸಲು ಸಾಧ್ಯವಾಗದೆ ಈ ಕಾರ್ಯಕ್ರಮದ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಾಧ್ಯಮ ಸಲಹೆಗಾರ ಅಮೀನ್ ಮಟ್ಟು ಅವರನ್ನು ಮುಂದಿಟ್ಟುಕೊಂಡು ಈ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಹೊರ ರಾಜ್ಯದಿಂದ ಅನೇಕ ನಾಯಕರು ಆಗಮಿಸುತ್ತಿದ್ದಾರೆ.

ಇವರೆಲ್ಲರನ್ನೂ ಸ್ವತಃ ಮುಖ್ಯಮಂತ್ರಿಗಳೇ ಹಣಕೊಟ್ಟು ವಿಮಾನದಲ್ಲಿ ಕರೆಸ್ತಿದ್ದಾರೆ. ದೆಹಲಿಯಿಂದ ಹಲವರನ್ನು ಸಾವಿರಾರು ರೂಗಳನ್ನು ನೀಡಿ ವಿಮಾನದಲ್ಲಿ ಕರೆಸ್ತಾ ಇದ್ದಾರೆ. ಇವರ ಉದ್ಧೇಶ ಏನು?, ನಮಗೆ ಬೇಕಾಗಿರುವುದು ಗೌರಿ ಹತ್ಯೆಯ ಹಂತಕರು. ಅವರನ್ನು ಮೊದಲು ಬಂಧಿಸಲಿ. ಸರ್ಕಾರಕ್ಕೆ ಗೌರಿ ಹತ್ಯೆಯ ಹಂತಕರನ್ನು ಬಂಧನ ಮಾಡುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಅವರಿಗೆ ಈ ಪ್ರಕರಣ ಇನ್ನೂ ಜೀವಂತವಾಗಿರಬೇಕೆನ್ನುವ ಆಶಯವಿದೆ. ನಾವು ಈಗಾಗಲೇ ಸುಪ್ರೀಂ ಕೋರ್ಟ್‍ನ ಮೊರೆ ಹೋಗಿದ್ದೇವೆ” ಎಂದು ಇಂದ್ರಜಿತ್ ಲಂಕೇಶ್ ಆರ್ಭಟಿಸಿದ್ದಾರೆ.

ಭಾಗವಹಿಸುವವರು ಕಾಂಗ್ರೆಸ್ಸಿಗರು?

“ನಾನು ಗೌರಿ” ಎನ್ನುವ ಹೆಸರಿನಲ್ಲಿ ಬೆಂಗಳೂರಿನ ಟೌನ್ ಹಾಲ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಲವಾರು ನಾಯಕರು ಭಾಗವಹಿಸಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಪ್ರೇರಿತ ನಾಯಕರು. ಜಿಗ್ನೇಶ್ ಮೇವಾನಿ ಗುಜರಾತಿನಲ್ಲಿ ಮೋದಿ ವಿರುದ್ಧ ದಲಿತರನ್ನು ಎತ್ತಿ ಕಟ್ಟಿದ ನಾಯಕ. ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಗುಜರಾತ್ ಮಾತ್ರವಲ್ಲದೆ ಸದ್ಯ ಕರ್ನಾಟಕದಲ್ಲೂ ಕಾಂಗ್ರೆಸ್ ಪರ ಪ್ರಚಾರ ಆರಂಭಿಸಿರುವ ಸೋಕಾಲ್ಡ್ ಸ್ವಯಂಘೋಷಿತ ನಾಯಕ. ಇವನಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನಿಸುವುದನ್ನು ನಿರೀಕ್ಷಿಸಲು ಸಾಧ್ಯವೇ? ಅಮೀನ್ ಮಟ್ಟು ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರ. ಇವರಿಂದ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಬೇಕಿಲ್ಲ.

ಮತ್ತೊಬ್ಬ ನಾಯಕ ಪ್ರಕಾಶ್ ರೈ. ಬಿಡಿ… ಅವರಂತೂ ಪ್ರಶಸ್ತಿ ಹಾಗೂ ಸೈಟಿನ ಆಸೆಗಾಗಿ ಕಾಂಗ್ರೆಸ್ ಸರ್ಕಾರವನ್ನು ಹೊಗಳಿ ಮೋದಿ ಸರ್ಕಾರವನ್ನು ತೆಗಳುತ್ತಿದ್ದ ಸೋಗಲಾಡಿ ನಾಯಕ. ಕಾಂಗ್ರೆಸ್‍ನ ಪಾರ್ಟ್ ಟೈಮ್ ರಾಜಕಾರಣಿ. ಖಂಡಿತವಾಗಿಯೂ ಗೌರಿ ಹಂತಕರನ್ನು ಬಂಧಿಸದ ರಾಜ್ಯ ಸರ್ಕಾರವನ್ನು ಆತ ಪ್ರಶ್ನಿಸೋದಿಲ್ಲ. ಹೀಗೆ ಎಲ್ಲರೂ ಕಾಂಗ್ರೆಸ್ ಪ್ರೇರಿತ ನಾಯಕರಾದರೆ ಅಲ್ಲಿ ಗೌರಿಯ ಗುಣಗಾನ ಇರುತ್ತೇ ಹೊರತು ಯಾವುದೇ ಕಾರಣಕ್ಕೂ ಗೌರಿ ಹಂತಕರನ್ನು ಬಂಧಿಸಲು ವಿಫಲರಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಯೋದಿಲ್ಲ. ಇದು ವಾಸ್ತವ… ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳು ತಾವೇ ಹಣ ನೀಡಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

ತಪ್ಪಿಸಿಕೊಂಡ ಮುಖ್ಯಮಂತ್ರಿಗಳು…

ಗೌರಿ ಹಂತಕರ ಬಂಧನ ಯಾವಾಗ ಸಾರ್ ಎಂದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದರ ಬಗ್ಗೆ ಮಾತನಾಡಲು ಒಲ್ಲೆ ಎಂದಿದ್ದಾರೆ. ಈ ಬಗ್ಗೆ ಮಾತನಾಡಲು ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ಉತ್ತರಿಸದೆ ಹೊರಟು ಹೋಗಿದ್ದಾರೆ. ಗೌರಿ ಕುಟುಂಬ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದ್ದನ್ನು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅವರೇಕೆ ಸುಪ್ರೀಂ ಕೋರ್ಟ್‍ಗೆ ಅರ್ಜಿ ಹಾಕಿ ಮನವಿ ಸಲ್ಲಿಸಬೇಕು. ಅದರ ಅವಶ್ಯಕತೆ ಏನಿದೆ” ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ಗೌರಿ ಹಂತಕರ ಪತ್ತೆ ಮಾಡಲು ಸಾಧ್ಯವಾಗದ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ತಪ್ಪನ್ನು ಮುಚ್ಚಿ ಹಾಕಲು ನಾನಾ ತಂತ್ರಗಳ ಮೊರೆ ಹೋಗುತ್ತಿದ್ದು ಈಗ ನಾನು ಗೌರಿ ಎಂಬ ಕಾರ್ಯಕ್ರಮವನ್ನೂ ತನ್ನ ಪ್ರಾಯೋಜಕತ್ವದಲ್ಲಿಯೇ ಮಾಡುತ್ತಿರುವುದ ಬೆಳಕಿಗೆ ಬಂದಿದೆ.

-ಸುನಿಲ್ ಪಣಪಿಲ

Tags

Related Articles

Close