ಅಂಕಣಪ್ರಚಲಿತ

ದೇಶದ ಅರ್ಥವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಪೆಟ್ರೋಲಿಯಂ ತೈಲವನ್ನೇ ನಿಷೇಧಗೊಳಿಸಲು ಮುಂದಾಗಿದ್ದಾರೆ ಮೋದಿ.!! ಯಾಕೆಂದು ತಿಳಿದರೆ ದಂಗಾಗುವಿರಿ…!!

ನರೇಂದ್ರ ಮೋದಿ ಪೆಟ್ರೋಲಿಯಂ ನಿಷೇಧಗೊಳಿಸಲು ಮುಂದಾಗಿದ್ದಾರಂತೆ….!!! ಈ ಸುದ್ದಿಯನ್ನು ಓದಿದಾಗ ಒಂದು ಸಲ ಅವಾಕ್ಕಾಗಿ ಬಿಡುವಂತಾಗುತ್ತದಲ್ಲವೇ? ಪೆಟ್ರೋಲಿಯಂ ಉತ್ಪನ್ನ ಇಲ್ಲದೆ ಈ ಪ್ರಪಂಚವನ್ನೂ ಊಹಿಸಲೂ ಕಷ್ಟವಿದೆ. ಅಂಥಹುದ್ದರಲ್ಲಿ ಈ ತೈಲವನ್ನೇ ನಿಷೇಧಗೊಳಿಸಿದರೆ ಹೇಗೆ… ನರೇಂದ್ರ ಮೋದಿ ಸರಕಾರಕ್ಕೆ ಹುಚ್ಚು ಹಿಡಿದಿದೆ ಎಂದೆಲ್ಲಾ ನಮಗನಿಸುತ್ತದೆ. ಆದರೆ ಮೋದಿ ಎನ್ನುವ ವ್ಯಕ್ತಿಯ ತಲೆಯಲ್ಲಿ ಎಂಥೆಂಥಾ ಆಲೋಚನೆಗಳು ಬರುತ್ತದೋ ಆ ದೇವರಿಗೇ ಗೊತ್ತು. ಇಲ್ಲವೆಂದಿದ್ದರೆ ಪೆಟ್ರೋಲಿಯಂ ತೈಲವನ್ನೇ ಬ್ಯಾನ್ ಮಾಡಲು ಹೊರಟಿದ್ದಾರೆಂದರೆ…. ಖಂಡಿತಾ ಒಂದು ಸಲ ಅಚ್ಚರಿ, ಅಘಾತ ಉಂಟಾಗುತ್ತದೆ.

ಹೌದು ಅಚ್ಚರಿ, ಅಘಾತ ಆಗಲೇಬೇಕು.. ಯಾಕೆಂದರೆ ಯಾವುದೋ ಒಂದು ದೇಶಕ್ಕೆ ಬಿಲಿಯನ್‍ಗಟ್ಟಲೆ ಹಣ ಸುರಿದು ಅಲ್ಲಿಂದ ಪೆಟ್ರೋಲಿಯಂ ತೈಲವನ್ನು ಆಮದು ಮಾಡಿ ಇಲ್ಲಿನ ಸಾಗಾಟ ವ್ಯವಸ್ಥೆಗೆ ಅಳವಡಿಸುವುದೆಂದರೆ ಎಷ್ಟೊಂದು ಆರ್ಥಿಕ ವೆಚ್ಚವಾಗುತ್ತದೆ ಎಂದು ನಮಗೆ ಚೆನ್ನಾಗಿ ಗೊತ್ತಿದೆ. ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಪೆಟ್ರೋಲಿಯಂ ತೈಲದ ಬದಲಿಗೆ ಇನ್ನೊಂದು ಇಂಧನ ಮೂಲವನ್ನು ಬಳಸಿ ಪೆಟ್ರೋಲಿಯಂ ವಾಹನಗಳಿಗಿಂತ ದಕ್ಷ ವಾಹನ ರಸ್ತೆಗಿಳಿದರೆ ಏನಾಗಬಹುದು ಎಂದು ಜಸ್ಟ್ ಊಹಿಸಿ.

ನಮ್ಮ ದೇಶದಿಂದ ಬಿಲಯನ್‍ಗಟ್ಟಲೆ ಹಣದ ಹೊರಹರಿವು ನಿಂತು ಆ ಹಣ ನಮ್ಮ ದೇಶದಲ್ಲೇ ಉಳಿದು ಭಾರತ ಆರ್ಥಿಕ ಬಲಶಾಲಿ ರಾಷ್ಟ್ರವಾಗುತ್ತದೆ. ಪ್ರಯಾಣ ದರ ತೀವ್ರ ಕಡಿಮೆಯಾಗುತ್ತದೆ. ಉತ್ಪನ್ನಗಳನ್ನು ಸಾಗಿಸುವ ವಾಹನಗಳು ದೇಶೀಯ ಇಂಧನದಿಂದ ಸಂಚರಿಸುವ ಕಾರಣ ಉತ್ಪನ್ನಗಳ ಬೆಲೆಯೂ ಗಣನೀಯವಾಗಿ ತಗ್ಗುತ್ತದೆ. ಇನ್ನೊಂದು ಮುಖ್ಯ ವಿಷಯವೆಂದರೆ ದೇಶದಲ್ಲಿ ಪೆಟ್ರೋಲಿಯಂ ವಾಹನಗಳ ಮಾರಾಟ ತನ್ನಷ್ಟಕ್ಕೇ ನಿಂತು ಬೇರೆ ಇಂಧನ ಮೂಲದಿಂದ ಸಂಚರಿಸುವ ವಾಹನಗಳು ಅಭಿವೃದ್ಧಿ ಹೊಂದುತ್ತದೆ. ಪೆಟ್ರೋಲಿಯಂ ತೈಲ ವಿಭಜಕ ಕಂಪೆನಿಗಳಿಗೆ ಬೀಗ ಬೀಳುತ್ತದೆ. ಪೆಟ್ರೋಲಿಯಂ ವಾಹನಗಳಿಂದ ಆಗುವ ಪರಿಸರ ಮಾಲಿನ್ಯವೂ ತಗ್ಗುತ್ತದೆ.

ಸೌದಿ ಅರೆಬಿಯಾ, ಇರಾನ್, ಅಬುದಾಬಿಯಂಥಾ ತೈಲ ಮಾರಾಟ ದೇಶಗಳಿಗೆ ಜ್ವರ ಬಂದರೆ ಭಾರತದಲ್ಲಿ ನೆಗಡಿಯಾಗುತ್ತದೆ. ಆ ದೇಶಗಳು ಇನ್ನು ಮುಂದೆ ಭಾರತಕ್ಕೆ ಪೆಟ್ರೋಲಿಯಂ ತೈಲ ಕಳಿಸುವುದಿಲ್ಲ ಎಂದು ಹೇಳಿಬಿಟ್ಟರೆ ಮುಗಿಯಿತು. ಭಾರತದ ಸಂಚಾರ ವ್ಯವಸ್ಥೆಯೇ ಸ್ಥಬ್ಧಗೊಳ್ಳುತ್ತದೆ. ಒಂದು ವೇಳೆ ಆ ದೇಶಗಳಲ್ಲಿ ಯುದ್ಧ ನಡೆದರೆ ನಮ್ಮ ದೇಶದ ಮೇಲೆ ಗಂಭೀರ ಪರಿಣಾಮ ಬೀಳುತ್ತದೆ. ನಾವು ಪೆಟ್ರೋಲಿಯಂಗಾಗಿ ಕೊಡುವ ಬಿಲಿಯನ್ ಗಟ್ಟಲೆ ಹಣದಿಂದ ತೈಲರಫ್ತುದಾರ ರಾಷ್ಟ್ರಗಳು ಇಸ್ಲಾಂ ಉಗ್ರವಾದವನ್ನು ಪೋಷಿಸುವುದರಿಂದ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೇ ತಲೆನೋವು. ಪೆಟ್ರೋಲಿಯಂ ಸ್ವಾವಲಂಬಿ ರಾಷ್ಟ್ರಗಳು ಇಡೀ ವಿಶ್ವವನ್ನೇ ಕೈಗೊಂಬೆ ಮಾಡುತ್ತಿರುವುದು ತನ್ನ ದೇಶದಲ್ಲಿ ಹೇರಳವಾಗಿ ಸಿಗುವ ಪೆಟ್ರೋಲಿಯಂ ನಿಕ್ಷೇಪದಿಂದ..

ಬ್ಯಾರೆಲ್‍ಗೆ ಒಂದು ಡಾಲರ್ ಹೆಚ್ಚಾದರೂ ಲೀಟರ್‍ಗೆ 2 ರೂ ಹೆಚ್ಚಾಗುತ್ತದೆ. ಇದರಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿ ಎಂದು ಆಗಾಗ ಹೋರಾಟ ನಡೆಯುತ್ತಲೇ ಇದೆ. ಯಾರಿಗಾದರೂ ಪೆಟ್ರೋಲಿಯಂ ದರವನ್ನು ಕಡಿಮೆ ಮಾಡಲು ಸಾಧ್ಯವಾಗಿದೆಯೇ? ಮೋದಿ ಅಲ್ಲ ಯಾರೇ ಬಂದರೂ ಪೆಟ್ರೋಲ್ ದರ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಯಾಕೆಂದರೆ ಅದರ ಬೆಲೆ ನಿಯಂತ್ರಣ ನಮ್ಮ ಕೈಯ್ಯಲ್ಲಿಯೇ ಇಲ್ಲ.

ನಮ್ಮ ದೇಶದಲ್ಲಿ ಸಿಗದ ಪೆಟ್ರೋಲಿಯಂ ಅನ್ನು ಆಮದು ಮಾಡುವುದರಿಂದ ಅದರಿಂದ ಉಂಟಾಗುವ ನಷ್ಟ ಏನೆಂದು ಎಲ್ಲರಿಗೂ ಚೆನ್ನಾಗಿ ಗೊತ್ತಿದ್ದು ಅದನ್ನು ಮತ್ತೊಮ್ಮೆ ಸ್ಪಷ್ಟವಾಗಿ ವಿವರಿಸಬೇಕಾಗಿಲ್ಲ.

Image result for non petrol vehicles

ಈ ಎಲ್ಲಾ ಕಷ್ಟ ಅನುಭವಿಸುವುದಕ್ಕಿಂತ ಪೆಟ್ರೋಲಿಯಂ ತೈಲವನ್ನೇ ಬಿಟ್ಟು ಬೇರೆ ಇಂಧನ ಮೂಲವನ್ನು ಬಳಸಿದರೆ ಹೇಗೆ? ಇಂಥದೊಂದ ಕ್ರಾಂತಿಕಾರಿ ನಿರ್ಧಾರ ಮೋದಿ ಸರಕಾರದಲ್ಲಿದೆ. ಇನ್ನು ಕೆಲವೇ ಕೆಲವು ವರ್ಷಗಳಷ್ಟೇ.. ಈ ದೇಶದಲ್ಲಿ ಪೆಟ್ರೋಲ್ ರಹಿತ ವಾಹನಗಳು ಸಂಚರಿಸಲಿವೆ. ಇದು ಹೇಗೆ ಸಾಧ್ಯ ಅಂತೀರಾ.. ಖಂಡಿತಾ ಸಾಧ್ಯವಿದೆ.

ವಿದ್ಯುತ್ ಕ್ರಾಂತಿ….!!!!!

ಪೆಟ್ರೋಲಿಯಂ ಉತ್ಪನ್ನಗಳಿಗೆ ಪರ್ಯಾಯವಾಗಿರುವುದು ಅದು ವಿದ್ಯುತ್ ಮಾತ್ರ.. ಇಡೀ ದೇಶದಲ್ಲಿ ವಿದ್ಯುತ್ ಕ್ರಾಂತಿ ನಡೆಸಿ ಆ ಮೂಲಕ ವಿದ್ಯುತ್ ಚಾಲಿತ ವಾಹನಗಳನ್ನು ಜಾರಿಗೊಳಿಸುವುದು..
ಅದಕ್ಕಾಗಿ ಮೋದಿ ಸರಕಾರ ದೇಶದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ವಾಹನ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಮೊದಲು ದೇಶವನ್ನು ಸಂಪೂರ್ಣ ವಿದ್ಯುತ್ ಕ್ರಾಂತಿಗೊಳಿಸಿ ಆಮೇಲೆ ಪೆಟ್ರೋಲ್ ರಹಿತ ವಾಹನಗಳನ್ನು ಜಾರಿಗೊಳಿಸಲು ಮೋದಿ ಸರಕಾರ ಹೆಜ್ಜೆ ಇಟ್ಟಿದೆ. ಈ ದೇಶದಲ್ಲಿ 2030ರ ವೇಳೆಗೆ ಪೆಟ್ರೋಲಿಯಂ ವಾಹನಗಳು ಮೂಲೆ ಸೇರಲಿದ್ದು, ವಿದ್ಯುತ್ ಚಾಲಿತ ವಾಹನಗಳು ರಸ್ತೆಯಲ್ಲಿ ಪಾರಮ್ಯ ಮೆರೆಯಲಿದೆ.

ನಿಮಗೆ ನಿನೆಪಿದೆಯೇ?

ಕಳೆದ ಬಾರಿ ಬಿಎಸ್3 ವಾಹನಗಳನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಎಲ್ಲರಿಗೂ ಆತಂಕ ಉಂಟಾಗಿತ್ತು. ಸುಪ್ರೀಂ ಆದೇಶ ಹೊರಡಿದ ಬೆನ್ನಲ್ಲೇ ವಾಹನ ವ್ಯಾಪಾರ ಸಂಸ್ಥೆಗಳು ಬಿಎಸ್3 ವಾಹನ ಮಾರಾಟವನ್ನು ನಿಲ್ಲಿಸಿದವು. ಈ ವೇಳೆ ಕೇಂದ್ರ ಸಾರಿಗೆ ಸಚಿವ ವಾಹನ ಉತ್ಪನ್ನ ಕಂಪೆನಿಗಳಿಗೆ ಎಚ್ಚರಿಕೆಯೊಂದನ್ನು ಕೊಟ್ಟಿದ್ದರು.
`ಕೆಲವೇ ವರ್ಷಗಳಲ್ಲಿ ಪೆಟ್ರೋಲಿಯಂ ರಹಿತ ವಾಹನಗಳ ಬದಲಿಗೆ ವಿದ್ಯುತ್ ಚಾಲಿತ ವಾಹನಗಳು ಬರಲಿವೆ. ವಾಹನ ತಯಾರಕ ಕಂಪೆನಿಗಳು ತನ್ನ ವಾಹನಗಳನ್ನು ಈಗಿಂದಲೇ ವಿದ್ಯುತ್ ವ್ಯವಸ್ಥೆಗೆ ಸರಿಹೊಂದುವಂತೆ ವಾಹನಗಳನ್ನು ತಯಾರಿಸಲಿ. ಆಮೇಲೆ ಮತ್ತೆ ಹಲುಬುವುದು ಬೇಡ…’ ಎಂದು ಎಚ್ಚರಿಸಿದ್ದರು. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ವಾಹನ ತಯಾರಕ ಕಂಪೆನಿಗಳು ವಿದ್ಯುತ್ ವ್ಯವಸ್ಥೆಗೂ ಸರಿಹೊಂದುವಂಥಾ ಇಂಜಿನ್ ಇರುವ ವಾಹನಗಳನ್ನು ತಯಾರಿಸಲು ಮುಂದಾಗಿವೆ.

ಎಲೆಕ್ಟ್ರಿಕ್ ವಾಹನಗಳು ಸಂಪೂರ್ಣವಾಗಿ ಪಾರಮ್ಯ ಮೆರೆದು ಪೆಟ್ರೋಲ್ ಡೀಸೆಲ್ ವಾಹನಗಳು ಸ್ಥಗಿತಗೊಳ್ಳಲು 2030ರವರಗೆ ಕಾಯಬೇಕು ಯಾಕೆ? ಈಗಿಂದಲೇ ತಯಾರಿಸಿದರೆ ಏನು ಎಂದು ಅನಿಸಬಹುದು. ಯಾಕೆಂದರೆ ಈಗ ಅನೇಕ ಪೆಟ್ರೋಲಿಯಂ ರಹಿತ ವಾಹನಗಳು ಮಾರುಕಟ್ಟೆ ಪ್ರವೇಶಿಸಿದೆ. ಆದರೆ ದೇಶದಲ್ಲಿ ಸಂಪೂರ್ಣ ವಿದ್ಯುತ್ ಕ್ರಾಂತಿ ಮಾಡಿದರಷ್ಟೆ ಪೆಟ್ರೋಲಿಯಂ ಅನ್ನು ಆಮದುಗೊಳಿಸುವುದನ್ನು ರದ್ದುಗೊಳಿಸಬಹುದು. ಪೆಟ್ರೋಲಿಯಂ ಬಂಕ್‍ಗಳಂತೆ ಅಲ್ಲಲ್ಲಿ ವಿದ್ಯತ್ ಚಾರ್ಜಿಂಗ್ ಔಟ್‍ಲೆಟ್‍ಗಳನ್ನು ಸ್ಫಾಪಿಸಬೇಕು.. ಸದ್ಯ ಇದ್ದಿರುವ ಪೆಟ್ರೋಲಿಯಂ ವಾಹನಗಳಿಗೆ ನಿಧಾನವಾಗಿ ನಿಷೇಧ ಹೇರುತ್ತಾ ಕೊನೆಗೆ 2030ರ ವೇಳೆಗೆ ಇಡೀ ದೇಶದಲ್ಲಿ ಪೆಟ್ರೋಲಿಯಂ ರಹಿತ ವಾಹನಗಳನ್ನು ರಸ್ತೆಗಿಳಿಸುವುದು ಸದ್ಯ ಮೋದಿ ಸರಕಾರದ ಮಹತ್ವದ ಯೋಜನೆ.. ಪೆಟ್ರೋಲಿಯಂ ಆಮದು ನಿಲ್ಲಲು ಇನ್ನು ಹನ್ನೆರಡು ವರ್ಷಗಳನ್ನು ಕಾಯಬೇಕು ಅಷ್ಟೆ. ಅದಕ್ಕಾಗಿಯೇ ಯೋಜನೆಯನ್ನು ಹಂತಹಂತವಾಗಿ ಜಾರಿಗೊಳಿಸಲು ಸರಕಾರ ಮುಂದಾಗಿದೆ.

ಎಲೆಕ್ಟ್ರಿಕ್ ಬ್ಯಾಟರಿಯಿಂದ ಓಡುವ ವಾಹನಗಳು….!!!

ಎಲೆಕ್ಟ್ರಿಕ್ ಬ್ಯಾಟರಿಯಿಂದ ಓಡುವ ವಾಹನಗಳ ಮಸೂದೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಇಂಧನ ಆಮದನ್ನು ಕಡಿಮೆಗೊಳಿಸಿ ದೇಶದಲ್ಲಿ ವಾಹನಗಳ ಚಾಲನಾ ವೆಚ್ಚವನ್ನು ಕಡಿಮೆಗೊಳಿಸುವುದು ಈ ಬಿಲ್‍ನ ಮುಖ್ಯ ಉದ್ದೇಶ. ಇಂಧನ ಸಚಿವ ಪಿಯೂಷ್ ಘೋಯಲ್ ಈ ಮಸೂದೆಯನ್ನು ಪ್ರಸ್ತಾಪಿಸಿದ್ದಾರೆ. ಈಗಾಗಲೇ ನೀತಿ ಆಯೋಗ ಇ-ವಾಹನ ಯೋಜನೆ ಕುರಿತಂತೆ ಕರಡು ಪ್ರತಿ ರಚನೆ ಮಾಡಿದ್ದು, ಕರಡು ಪ್ರತಿಯಲ್ಲಿ ಇ-ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

ಸುಮಾರು 90 ಪುಟಗಳ ಕರಡು ಪ್ರತಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಮೇಲಿನ ಸಾಲಗಳಿಗೆ ತೆರಿಗೆಗಳನ್ನು ಮತ್ತು ಬಡ್ಡಿದರಗಳನ್ನು ಕಡಿಮೆಗೊಳಿಸಲು ಆಯೋಗ ಶಿಫಾರಸು ಮಾಡಲು ಮುಂದಾಗಿದೆ. ಪ್ರಸ್ತುತ ಡೀಸೆಲ್-ಪೆಟ್ರೋಲ್ ಮತ್ತು ಗ್ಯಾಸ್ ಬಂಕ್‍ಗಳ ಮಾದರಿಯಲ್ಲೇ ಬ್ಯಾಟರಿ ಕೇಂದ್ರಗಳನ್ನು ತೆರೆಯಲು ಶಿಫಾರಸ್ಸು ಮಾಡಲಾಗಿದ್ದು, 2018ರ ಹೊತ್ತಿಗೆ ಈ ಬ್ಯಾಟರಿ ಘಟಕಗಳು ತಲೆ ಎತ್ತಲಿವೆ. ಅಂತೆಯೇ ಪ್ರಸ್ತುತ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬಂಕ್‍ಗಳಲ್ಲಿ ವಿದ್ಯುತ್ ಕಾರುಗಳನ್ನು ಚಾರ್ಜ್ ಮಾಡುವ ವ್ಯವಸ್ಥೆ ಒದಗಿಸುವಂತೆಯೂ ಶಿಫಾರಸ್ಸು ಮಾಡಲಾಗಿದೆ.

ಭಾರತದ ಹೊಸ ಮಾದರಿಯ ವಾಹನ ವ್ಯವಸ್ಥೆ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಗಮನಾರ್ಹ ಪರಿಣಾಮವನ್ನು ಬೀರಬಹುದು ಎಂದು ಕರಡು ಪ್ರತಿಯಲ್ಲಿ ನೀತಿ ಆಯೋಗ ಅಭಿಪ್ರಾಯಪಟ್ಟಿದೆ.
ಈ ಹಿಂದೆ ಅಂದರೆ ಕಳೆದ ವರ್ಷ ನೆರೆಯ ಚೀನಾ ಸರ್ಕಾರ ಕೂಡ ಪೆಟ್ರೋಲ್ ಡೀಸೆಲ್ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಇ-ವಾಹನಗಳ ಮಾರುಕಟ್ಟೆ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಇದರ ಬೆನ್ನಲ್ಲೇ ಭಾರತ ಕೂಡ ಇದೇ ಮಾದರಿಯ ಕ್ರಮಕ್ಕೆ ಮುಂದಾಗಿರುವುದು ಭಾರತೀಯ ವಾಹನೋಧ್ಯಮದಲ್ಲಿ ಮಹತ್ತರ ಬದಲಾವಣೆಯ ಮುನ್ಸೂಚನೆ ನೀಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಘನ ಕೈಗಾರಿಕಾ ಸಚಿವಾಲಯ ಹಾಗೂ ನೀತಿ ಆಯೋಗ ಜಂಟಿಯಾಗಿ ಕೆಲಸ ಮಾಡಲಿದೆ. ಜನರನ್ನು ಎಲೆಕ್ಟ್ರಿಕ್ ಬ್ಯಾಟರಿಯಿಂದ ಓಡುವ ವಾಹನಗಳನ್ನು ಖರೀದಿಸುವಂತೆ ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ. ಪೆಟ್ರೋಲಿಯಂ ವೆಚ್ಚ ಇನ್ನೂ ಗಣನೀಯವಾಗಿ ಏರಲಿರುವುದರಿಂದ ಇಂಥದೊಂದು ಕ್ರಮಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಗಣಣೀಯ ಅಭಿವೃದ್ಧಿಗೆ ಸಕಾಲಿಕ ಕ್ರಮವನ್ನು ಮೋದಿ ಸರಕಾರ ಕೈಗೊಂಡಿದೆ. ಇದರ ಅಡಿಯಲ್ಲಿ ಸರ್ಕಾರವು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿ ಸಬ್ಸಿಡಿಗಳನ್ನು ನೀಡುತ್ತದೆ.

2017ರ ಸಿಐಐ ಸೆಷನ್‍ನಲ್ಲಿ ಮಾತಾಡಿದ ಪಿಯೂಷ್ ಘೋಯಲ್ ಅವರು, ನಾವು ಎಲೆಕ್ಟ್ರಿಕ್ ವಾಹನಗಳನ್ನು ದೊಡ್ಡ ಹಂತದಲ್ಲಿ ಉತ್ಪಾದಿಸಿ ಸ್ವಾವಲಂಬಿ ದೇಶ ಕಟ್ಟಬೇಕು. 2030ರ ವೇಳೆಗೆ ಈ ದೇಶದಲ್ಲಿ ಒಂದೇ ಒಂದು ಡೀಸೆಲ್ ಅಥವಾ ಪೆಟ್ರೋಲ್ ವಾಹನಗಳು ಸಂಚರಿಸಬಾರದು. ಸರಕಾರವೇ ಮುಂದಿನ 2 ವರ್ಷಗಳಲ್ಲಿ ವಿದ್ಯುತ್ ಕೈಗಾರಿಕೆಗಳನ್ನು ಸ್ಫಾಪಿಸಲಿದೆ. ಉದ್ಯಮವು ಸ್ಥಿರಗೊಳ್ಳುವ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂದ ವಿದ್ಯುತ್ ವಾಹನಗಳಿಗೆ ಪರಿವರ್ತನೆ ಮಾಡಲು 2-3 ವರ್ಷಗಳಲ್ಲಿ ವಿದ್ಯುತ್ ಉದ್ಯಮ ಸ್ಥಾಪಿಸಲು ನೆರವಾಗುತ್ತದೆ ಎಂದು ಘೋಯಲ್ ತಿಳಿಸಿದ್ದಾರೆ. ಇನ್ನು ಮೂರೇ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳು(ಇವಿ) ರಸ್ತೆಗಳಿಯಲಿದೆ. ಅದಕ್ಕಾಗಿ ಸರಕಾರವೇ ಚಾಜಿಂಗ್ ವ್ಯವಸ್ಥೆ, ಬ್ಯಾಟರಿ ಜೋಡಣೆ ಇತ್ಯಾದಿ ಇದರ ಉದ್ದೇಶ.

ಮೋದಿ ಕರೆಗೆ ಓಗೊಟ್ಟ ಮಹೀಂದ್ರ ಕಂಪೆನಿ!!!

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ನರೇಂದ್ರ ಮೋದಿ ಸರಕಾರದ ಕರೆಗೆ ಓಗೊಟ್ಟ ಮಹೀಂದ್ರ ಕಂಪೆನಿಯ ಮುಖ್ಯಸ್ಥ ಆನಂದ್ ಮಹೀಂದ್ರ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿದ್ದಾರೆ. ಇವರ ಕಂಪೆನಿಯಲ್ಲಿ ವಿದ್ಯುತ್ ಚಾಲಿತ ವಾಹನಗಳು ತಯಾರಾಗುತ್ತಿವೆ. ಅವರು ಟೆಲ್ಸಾಸ್ ಸುಪೆರ್‍ಬಾಸ್ ಎಲೋನ್ ಮಸ್ಕ್ ಕಂಪೆನಿಯ ಸಹಯೋಗದಲ್ಲಿ ವಿದ್ಯುತ್ ಚಾಲಿತ ಕಾರುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಮೊದಲ ಹಂತದಲ್ಲಿ ಅವರು ಮೂರು ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ. ಕೆಲವೇ ತಿಂಗಳಲ್ಲಿ ಬುಕಿಂಗ್ ಆರಂಭಗೊಳ್ಳಲಿದೆ. ಮುಂದಿನ ವರ್ಷದಿಂದ ಮಹೀಂದ್ರಾ ನಿರ್ಮಿತ ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿದೆ. ಈ ಕಾರಿನ ಬಗ್ಗೆ ಭಾರೀ ಕುತೂಹಲ ಸೃಷ್ಟಿಯಾಗಿದೆ. ಒಂದು ಅಂದಾಜಿನ ಪ್ರಕಾರ ಬಿರುಸಿನ ಕ್ರಾಂತಿಯಿಂದ 2030ರ ಒಳಗಡೆಯೇ ಪೆಟ್ರೋಲಿಯಂ ರಹಿತ ವಾಹನಗಳು ಪಾರಮ್ಯ ಮೆರೆಯಲಿದೆ.

ಮಹೀಂದ್ರಾ ಹಾದಿಯನ್ನು ಟೊಯೊಟಾ, ವೋಲ್ವೋ, ಬಿಎಂಡಬ್ಲ್ಯು ಕಂಪೆನಿಗಳೂ ತುಳಿಯಲು ಮುಂದಾಗಿವೆ. ಸಾಂಪ್ರದಾಯಿಕ ಹೈಬ್ರಿಡ್ ಬದಲಿಗೆ ಪ್ಲಗ್ ಇನ್ ಹೈಬ್ರಿಡ್ ಬಳಸಲು ಮುಂದಾಗಿದೆ. ಇದರಿಂದ ಈ ಕಂಪೆನಿಗಳ ವಾಹನಗಳು ಎಲೆಕ್ಟ್ರಿಕ್ ಬ್ಯಾಟರಿಯಿಂದ ದಕ್ಷತೆಯಿಂದ ರಸ್ತೆಗಳಲ್ಲಿ ಸಂಚರಿಸಲಿದೆ.

ಇನ್ನು ದ್ವಿಚಕ್ರ ವಾಹನಗಳ ಕಂಪೆನಿಗಳು ಏನು ಕಮ್ಮಿಯೇ? ಬ್ಯಾಟರಿ ಮೂಲಕ ಸಂಚರಿಸುವ ನೂರಾರು ವಾಹನಗಳು ರಸ್ತೆಗಿಳಿದಿವೆ. ಇನ್ನು ಇವುಗಳು ಕೂಡಾ ಕ್ರಾಂತಿಕಾರಕ ನಿರ್ಧಾರಗಳನ್ನು ಪ್ರಕಟಿಸಲಿದೆ.

ವಿದ್ಯುತ್ ಕ್ರಾಂತಿಯ ಮೂಲಕ ಪೆಟ್ರೋಲಿಯಂ ತೈಲಕ್ಕೆ ಗುಡ್‍ಬೈ ಹೇಳಿ ಸ್ವಾವಲಂಬಿ ಭಾರತ ಕಟ್ಟುವಲ್ಲಿ ಮೋದಿ ಸರಕಾರದ ಮಹತ್ವದ ಹೆಜ್ಜೆಗೆ ಇಡೀ ದೇಶದಲ್ಲೇ ಬೆಂಬಲ ವ್ಯಕ್ತವಾಗಿದೆ. ನರೇಂದ್ರ ಮೋದಿ ಭವಿಷ್ಯದ ಭಾರತವನ್ನು ಸೃಷ್ಟಿಸಲು ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಮೋದಿ ಸರಕಾರದ ಈ ನಿರ್ಧಾರದಿಂದ ತೈಲ ಕಂಪೆನಿಗಳ ಅಟ್ಟಹಾಸ ನಿಲ್ಲಲಿದೆ.

ಚೇಕಿತಾನ

Tags

Related Articles

Close