ಪ್ರಚಲಿತ

ದೇಶದ ಹಿತದೃಷ್ಟಿಯಿಂದ ಗಾಂಧಿಯನ್ನೇ ವಿರೋಧಿಸಿದ್ದ ಪಟೇಲರು ನಿಜವಾಗಿಯೂ ಜನರ ಮನದಲ್ಲಿ ಸರದಾರನೆನಿಸಿದರು!!!

ಈ ಒಂದು ವಿಚಾರವನ್ನು ಅದೆಷ್ಟು ಜನ ಗಂಭೀರವಾಗಿ ಪರಿಗಣಿಸುತ್ತೀರೋ ಅರಿಯದು. ಆದರೆ ಇದು ವಾಸ್ತವಯೆಂಬುದನ್ನು ಮಾತ್ರ ನೀವೂ ಒಪ್ಪುತ್ತೀರಿ. ಅಧಿಕಾರ ಇಂದು ಇರುತ್ತೆ, ನಾಳೆ ಹೋಗುತ್ತೆ. ಬಂದಾಗ ಸುತ್ತ ತಿರುಗಾಡೋರು, ಕಳಕೊಂಡಾಗ ನಾಪತ್ತೆಯೂ ಆಗಿಬಿಡುತ್ತಾರೆ. ಅದಕ್ಕೇ ಅಧಿಕಾರವಿದ್ದಾಗ ಹೇಗೆ ಹೆಜ್ಜೆ ಇಡುತ್ತೀವಿ ಅನ್ನುವುದರ ಮೇಲೆ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಪ್ರೀತಿಯಿಂದ ಬಾಗುವವನ ಎದುರಿಗೆ ಉಳಿದವರು ಇನ್ನೂ ಬಾಗುತ್ತಾರೆ. ಹೀಗಾಗಿ ಬಾಗುವಿಕೆ ದೈನ್ಯವೆನಿಸುವುದಿಲ್ಲ. ಅದು ಎದೆ ಎತ್ತಿ ಮೀಸೆ ತಿರುವುದರ ಮತ್ತೊಂದು ರೂಪವಷ್ಟೇ. ಎದೆಯಲ್ಲಿ ಉರಿಸಿದ ಪ್ರೀತಿಯ‌ ದೀಪ ಎಂಥ ಅಂಧಕಾರವನ್ನೂ ನಿವಾರಿಸಬಲ್ಲುದು. ಆದರೆ ಆ ಪ್ರೀತಿಯ‌ ದೀಪಕ್ಕೆ ಸ್ನೇಹದ ಸ್ನಿಗ್ಧತೆ ಇರಬೇಕಷ್ಟೇ..

ಇಂಥಹ ವ್ಯಕ್ತಿತ್ವ ನಿಜವಾಗಿಯೂ ಸರದಾರನಾಗೋದು. ಅದಕ್ಕೇ ವಲ್ಲಭಭಾಯಿ ಪಟೇಲರನ್ನು “ಉಕ್ಕಿನ ಮನುಷ್ಯ” ಅನ್ನೋದು. ಒಗಟ್ಟಿಲ್ಲದ ನಾಡಲ್ಲಿ ಸಾಮರಸ್ಯ ಮೂಡಿಸಿದರು. ಚಿಂತೆಯಿಲ್ಲದ ಪ್ರಜೆಗಳಿಗೆ ದೇಶಪ್ರೇಮದ ಚಿಂತನೆಯನ್ನು ಮೂಡಿಸಿದರು. ತನ್ನ ಪಕ್ಕದಲ್ಲೇ ಹಿತಶತ್ರುವಿದ್ದರೂ, ದೇಶದ ಒಳಿತಿಗಾಗಿ ತನ್ನ ವೈಯ್ಯುಕ್ತಿಕ ಹಿತಾಸಕ್ತಿಯನ್ನು ಮರೆತು ಅವರೊಡನೆ ಕೈಜೋಡಿಸಿದರು, ಅಗತ್ಯವಿದ್ದಲ್ಲಿ ವಿರೋಧಿಸಿದ್ದರು ಕೂಡ..ದೇಶವನ್ನು ಕಟ್ಟಬಲ್ಲ ವ್ಯಕ್ತಿತ್ವದ ಪ್ರತಿರೂಪವೇ , ಪ್ರೇರಣೆಯೇ ಆಗಿದ್ದವರು ಸರದಾರರು. ನಿಜವಾದ ಅರ್ಥದಲ್ಲಿ ‘ನಾಯಕ’..!!

ಸರದಾರ ಎಂಬ ಹೆಸರಿಗೆ ತಕ್ಕ ನಡೆದವರು !!

ನಾಯಕರೆನಿಸಿದವರ ನಿಜವಾದ ಶಕ್ತಿಯದು. ಸೂಕ್ತ ಸಮಯದಲ್ಲಿ ಸೂಕ್ತ ದಾರಿಯನ್ನು ತೋರಿದವರು ಇವರು. ಒಮ್ಮೆ ಅಹಮದಾಬಾದಿನಲ್ಲಿ ಮೇಘಸ್ಫೋಟವಾಗಿ ಭಾರೀ ಮಳೆ ಸಂಭವಿಸಿತು. ಹಿಂದೆಂದೂ ಕಾಣದಿದ್ದ ವರುಣನ ಆರ್ಭಟವಾಗಿತ್ತದು. ಅಂದು ಪಟೇಲರಿಗೆ ನಿದ್ದೆಯೇ ಬರಲಿಲ್ಲ. ಮಧ್ಯರಾತ್ರಿಯ ಮಳೆ‌ ತಡೆಯಲಾಗದೇ ಪಟೇಲರು ಮಾತ್ರ ಮಿತ್ರ ಕಪಾಡಿಯಾನನ ಮನೆಯ ಬಾಗಿಲು ತಟ್ಟಿದರು. ನಂತರ‌ ಈರ್ವರೂ ನಗರದ ಪರಿಸ್ಥಿತಿಯನ್ನು ಅವಲೋಕಿಸಿದರು. ಅದೂ ಬೆಳಗಿನ ಜಾವದ‌ವರೆಗೂ ಅವರ ನಗರ ಪ್ರದಕ್ಷಿಣೆಯಾಗಿತ್ತು. ಒಂದು ಕ್ಷಣವೂ ಮಳೆ ಮಾತ್ರ ನಿಂತಿರಲಿಲ್ಲ. ಬೆಳಗ್ಗೆ ಆರು ಗಂಟೆಗೆ ಅವರು ನಡೆಯುತ್ತಾ ಮುನ್ಸಿಪಾಲಿಟಿ ಇಂಜಿನಿಯರ್ ನ ಮನೆಗೆ ತಲುಪಿದರು. ಅವನನ್ನೆಬ್ಬಿಸಿ ಕಛೇರಿ ಕಡೆಗೆ ನಡೆದರು. ತುರ್ತು ಸಭೆಗಳನ್ನು ಏರ್ಪಡಿಸಿದ್ದರು. ನೆನಪಿರಲಿ.ಅದು ಸತತವಾಗಿ 6 ದಿನಗಳ ಕಾಲ ಎಡೆಬಿಡದೆ ಸುರಿಯುತ್ತಿದ್ದ ಮಳೆಯಾಗಿತ್ತು. ಈ ಬಾರಿ ಸತತ ಆರು ದಿನಗಲ ಕಾಲ 56 ಇಂಚು ಮಳೆಯಾಗಿತ್ತು. ಆದರೆ ಪಚೇಲರು ಅಲುಗಾಡುವ ಜೀವವಾಗಿರಲಿಲ್ಲ. 4 ದಿನಗಳ ಕಾಲ ನಿದ್ದೆ ಕಳೆದುಕೊಂಡು ತಮ್ಮೆಲ್ಲ ಸಹಕಾರಿಗಳೂಂದಿಗೆ ಕೈಜೋಡಿಸಿ ನೀರು ಹರಿದು ಹೋಗುವಂತೆ ಮಾಡುವಲ್ಲಿ, ನೈರ್ಮಲ್ಯ ಕಾಪಾಡುವಲ್ಲಿ ಅವರು ಮಾಡಿಗ ಸಾಧನೆ ಅನುಪಮವಾದದ್ದೇ.

ಮಳೆ ಕ್ರಮೇಣ ಕಡಿಮೆಯಾಯಿತು. ಪಟೇಲರು ಸ್ವಯಂಸೇವಕರೊಂದಿಗೆ ನಗರದ ದುರಸ್ಥಿತಿಯನ್ನು ಸರಿಮಾಡುವಲ್ಲಿ ರಾತ್ರಿ ಹಗಲೆನ್ನದೆ ಸೇವೆಯಲ್ಲಿ ನಿರತರಾಗಿದ್ದರು. 75 ಸಾವಿರಕ್ಕೂ ಹೆಚ್ಚು ಮನೆಗಳು ಉರುಳಿದ್ದವು. ಬಂಡಿಯಲ್ಲಿ, ರೈಲಿನಲ್ಲಿ ಕೆಲವೆಡೆ ನೀರಿನಲ್ಲಿ ಈಜಿ ಸ್ವಯಂಸೇವಕರು ಅಗತ್ಯವಸ್ತುಗಳನ್ನು ಬೇರೆ ಬೇರೆ ಭಾಗಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದರು. ಹಾ.. ಇವಕ್ಕೆಲ್ಲಾ ಮಾರ್ಗದರ್ಶನ ಮಾಡುತ್ತಿದ್ದುದು ಇದೇ ಸರದಾರ. ಆಗ ಆಹಾರಗಳ ಕೊರತೆಯುಂಟಾಗಿ ಧಾನ್ಯಗಳ ಬೆಲೆ ಏರಿಕೆಯಾಯಿತು.

ತಕ್ಷಣ ಪಟೇಲರು ವ್ಯಾಪಾರಿಗಳ ಸಬೆ ಕರೆದು, ” ಈ ಸಂದರ್ಭದಲ್ಲಿ ಬೆಲೆ ಏರಿಸದೇ , ಅದನ್ನು ಮೊದಲಿಗಿಂತಲೂ ಕಮ್ಮಿ ಮಾಡಿ” ಎಂದು ಸಲಹೆ ನೀಡಿದರು. ಪರಿಣಾಮ? ಜನರಿಗೆ ಸುಲಭ ದರದಲ್ಲಿ ಧಾನ್ಯಗಳು ಲಭಿಸಿದವು. ಬೀಜಗಳು ದೊರೆತವು. ಹೀನ ಸ್ಥಿತಿಯಲ್ಲಿದ್ದ ಗುಜರಾತ್ ‌ಮತ್ತೆ ಸ್ವಾವಲಂಬಿಯಾಗಿ
ತಲೆ ಎತ್ತಿ ನಿಂತಿತ್ತು. ಪಟೇಲರ ಸತ್ವ ಮತ್ತೆ ಬೆಳಗಿತು. ಅವರ ಅಗಾಧ ವ್ಯಕ್ತಿತ್ವದ ಪ್ರಭಾವ ಮತ್ತೆ ಜಗಜ್ಜಾಹೀರಾಗಿತ್ತು.

ಗಾಂಧಿಯ ನಡೆಯಿಂದ ಬೇಸರಗೊಂಡಿದ್ದರು ಪಟೇಲರು !!

ಇಂತಹ ಅನೇಕ ಕಾರ್ಯಗಳಿಂದ ಸರದಾರರು ಜನಮಾನಸದಲ್ಲಿ ಸ್ಥಾಯಿಯಾಗಿದ್ದರು. ಇತ್ತ ಕಡೆ‌ ನೆಹರೂ ಮಾಡುತ್ತಿದ್ದ ಕುತಂತ್ರಗಳನ್ನೆಲ್ಲಾ ವಿರೋಧಿಸುತ್ತಲೇ ಬಂದಿದ್ದರು. ಗಾಂಧಿ ನೆಹರೂವಿಗೆ ಅಭಯ ಇಟ್ಟಾಗಲೂ ಬೇಸರಿಸಿದ್ದ‌ ಪಟೇಲರು, ಅವರ ಈ ಮಾತಿನಿಂದಂತೂ ಪಟೇಲರಿಗೆ ಘಾಸಿಯಾಗಿದ್ದು ಮಾತ್ರ ಸುಳ್ಳಲ್ಲ.

ಕಾಂಗ್ರೆಸ್ ಅನ್ನು ಸ್ವತಂತ್ರ ನಂತರ ಯಾರು ಮುನ್ನಡೆಸಬಲ್ಲರೆಂಬ ಪ್ರಶ್ನೆ ಮೂಡಿದಾಗ ಎಲ್ಲರ ಬಾಯಲ್ಲಿ ಬಂದದ್ದು ಎರಡೇ ಹೆಸರು.

1. ರಾಜಾಜಿ ಹಾಗೂ

2.ಪಟೇಲರು.

ಭಾರತ ಸ್ವತಂತ್ರದ ಹೊಸ್ತಿಲಲ್ಲಿದ್ದ ಸಂದರ್ಭದಲ್ಲಿ ಗಾಂಧಿ ದೇಶವನ್ನು ಹಳ್ಳಕ್ಕೆ ತಳ್ಳುವ ಕೆಲಸ ಮಾಡಿಬಿಟ್ಟಿದ್ದರು.

‘ನೆಹರೂಗೂ ನನಗೂ ಆರಂಭದಿಂದಲೇ ಸಾಮರಸ್ಯ ಇಲ್ಲ ನಿಜ. ಆದರೆ ಹಿಂದಿನಿಂದಲೂ ಹೇಳುತ್ತಿದ್ದೇನೆ. ಈಗಲೂ ಹೇಳುತ್ತೇನೆ. ನನ್ನ ವಾರಸುದಾರ ರಾಜಾಜಿಯೂ ಅಲ್ಲ, ಪಟೇಲರೂ ಅಲ್ಲ, ಬದಲಿಗೆ ಜವಾಹರ್ ಲಾಲ್ ನೆಹರೂ.‌ನೀರನ್ನು ಬಡಿಗೆಯಿಂದ ಬಡಿದ ಮಾತ್ರಕ್ಕೆ ಬೇರ್ಪಡಿಸವುದು ಸಾಧ್ಯವೇ? ಅಂತೆಯೇ ನಮ್ಮಿಬ್ಬರನ್ನು ಬೇರ್ಪಡಿಸುವುದೂ ಸಾಧ್ಯವೇ ಇಲ್ಲ. ನಾನು ಹೋದ ನಂತರ ಅವನೇ ನನ್ನ ಮಾತುಗಳನ್ನಾಡುತ್ತಾನೆ.” ಎಂದು 1942ರ ಅಖಿಲ ಭಾರತೀಯ ಕಾಂಗ್ರೆಸ್ ಕಮಿಟಿ ಅಧಿವೇಶನದಲ್ಲಿ ಘೋಷಿಸಿಬಿಟ್ಟರು.

ಪಟೇಲರಷ್ಟೇ‌ ಅಲ್ಲ. ರಾಷ್ಟ್ರದ ಕುರಿತು ಕಾಳಜಿ ಇದ್ದ‌ ಅನೇಕರು ಹತಾಶೆಯ ನಿಟ್ಟುಸಿರುಬಿಟ್ಟರಷ್ಟೇ. ಯಾರೂ ನೇರವಾಗಿ ವಿರೋಧಿಸಿಲ್ಲವಾದರೂ ಮನದ‌ ಒಳಗಡೆ ಬೇಸರ ವ್ಯಕ್ತವಾಗಿತ್ತೆಂಬುದು ಅನೇಕ ಕಡೆ‌ ನಂತರ ಉಲ್ಲೇಖವಾಗಿದೆ. ಈ ವಿಚಾರದ ಕುರಿತಾಗಿ ಸ್ವತ: ಪಟೇಲರೆ ತಮ್ಮ ಆಪ್ತರ ಬಳಿ ಹೇಳಿದ್ದರು. ಇಷ್ಟೆಲ್ಲಾ ನೋವುಗಳನ್ನು ತುಂಬಿದ್ದರೂ, ಸ್ವಾತಂತ್ರ್ಯ ಲಭಿಸಿದ ನಂತರ ಅವರ ರಾಷ್ಟ್ರ ಸೇವೆಯ‌ ವೇಗ ದುಪ್ಪಟ್ಟಾಯಿತು.

ಇತ್ತ ಕಡೆ‌ ಹಿತಶತ್ರು ನೆಹರೂವಿನ ಕಾಟ ‌ಇತ್ತಾದರೂ, ಅದನ್ನು ಲೆಕ್ಕಿಸದೇ ತುಂಡಾಗಿದ್ದ ಭಾರತವನ್ನು ಒಂದಾಗಿಸಿದರು. ಭಾರತವನ್ನು ವಿರೋಧಿಸುತ್ತಿದ್ದವರೆಲ್ಲಾ ಪಟೇಲರ. ವ್ಯಕ್ತಿತ್ವಕ್ಕೆ ತಲೆಬಾಗಿ ತಮ್ಮ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನವಾಗಿಸಲು ಸಮ್ಮತಿ ಸೂಚಿಸಿದ್ದರು. ಅವರನ್ನು “ಉಕ್ಕಿನ ಮನುಷ್ಯ ” ಎಂದು ಕರೆದು ಗೌರವಿಸಿತು ಇಡಿಯ ಭಾರತ.

ಆದರೆ ಅಂದು ಪಟೇಲರು ಭಾರತದ ಹಿತದೃಷ್ಟಿಯಿಂದ ಗಾಂಧಿಯನ್ನು ವಿರೋಧಿಸಿದ್ದರು. ಅದು ಸತ್ಯವೇ ಆಯಿತು. ಭಾರತ ದುಷ್ಟರ ಆಡಳಿತಕ್ಕೆ
ಸಿಕ್ಕಿ ಶತಮಾನಗಳ ಹಿಂದೆ ಸರಿದು ಹೋಗಿತ್ತು. ಸ್ವತ: ಕಾಂಗಿಗಳ ಪಕ್ಷವೇ ಉಕ್ಕಿನ ಮನುಷ್ಯನನ್ನ ಒಮ್ಮೆಯೂ ಸ್ಮರಿಸಲಿಲ್ಲ. ಎಂತಹ ವಿಪರ್ಯಾಸವಿದಲ್ಲವೇ??

ಈಗ ಸಮಯ‌ ಒದಗಿ ಬಂದಿದೆ. ಭಾರತವನ್ನು ಒಂದಾಗಿಲಿದ್ದ ಪಟೇಲರ ಕನಸನ್ನು ನನಸಾಗಿಸಲು. ಭಾರತವನ್ನು ವಿಶ್ವಗುರು ಸ್ಥಾನ ಪುನ: ಒದಗಿಸಲು. ಪಟೇಲರ
ಜೀವನಗಾಥೆಯನ್ನು ಸದಾ ಸ್ಮರಿಸುತ್ತಾ, ಅವರಿಂದ ಪ್ರೇರಣಯನ್ನು ಪಡೆಯುತ್ತಾ ಮುಂದೆ ಮುಂದೆ ಸಾಗೋಣ. ಭಾರತ ಜಾಗೃತವಾಗಲಿ.

ಹಾ.. ಪಟೇಲರ ಜನುಮದಿವಸದಂದು ಇಷ್ಟು ವಿಚಾರಗಳನ್ನು ನಿಮ್ಮೊಂದಿಗೆ ಹಂಚಬೇಕೆನಿಸಿತು. ಅಂತಿಮವಾಗಿ ಅವರ ರಾಷ್ಟ್ರ ಸೇವೆಗೆ ನಮ್ಮ ಪರವಾಗಿ ಒಂದು ಸೆಲ್ಯೂಟ್. ಸರದಾರ್ ಜೀ, ನೀವು ಯಾರಿಗೆ ಹೇಗಾದಿರೋ ಅರಿಯದು, ಆದರೆ ನಮ್ಮೆಲ್ಲರ ಮನದಲ್ಲಿ ಮಾತ್ರ ನೀವು ಅಜರಾಮರ..!!

– ವಸಿಷ್ಠ

Tags

Related Articles

Close