ಪ್ರಚಲಿತ

ದೇಶ ಕಂಡ ಅತ್ಯದ್ಭುತ ಗಟ್ಟಿಗಿತ್ತಿ ರಾಜಕಾರಣಿ ಸುಷ್ಮಾ ಸ್ವರಾಜ್‍ರ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?

ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿರುವ ಈ ಸಚಿವೆ..

“ತೊಟ್ಟಿಲು ತೂಗುವ ಕೈ, ಲೋಕದ ಸೂತ್ರವನ್ನು ಹಿಡಿಯಬಲ್ಲದು” ಎನ್ನುವ ಮಾತಿನಂತೆ ದೇಶದ ವಿದೇಶಾಂಗ ಸಚಿವೆಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸುಷ್ಮಾ ಸ್ವರಾಜ್ ಹೊರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ನೆರವಿಗೆ ಸದಾ ಸಿದ್ಧರಾಗಿರುವಂತಹ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಹೆಮ್ಮೆ ಇವರದ್ದು!! ಯಾವುದೇ ಸಮಯದಲ್ಲಾದ್ರೂ ಭಾರತೀಯರ ಅಳಲು ಆಲಿಸಿ ಸಹಾಯಮಾಡುವ ಕರುಣಾ ಹೃದಯಿಯಾಗಿ ಖ್ಯಾತಿ ಪಡೆದಿದ್ದಾರೆ ಸುಷ್ಮಾ.

ಆ ನಗು, ಪ್ರೀತ್ಯಾದರ ತೋರುವ ಸುಷ್ಮಾ ಸ್ವರಾಜ್ ಮಾತೃ ಹೃದಯಿ, ಎಲ್ಲರಿಗೂ ಆಪ್ತರೆನ್ನಿಸುವ ವ್ಯಕ್ತಿತ್ವ ಇವರದ್ದು!! ಅವರು ವಿದೇಶಾಂಗ ಸಚಿವರಾದ ಮೇಲಂತೂ, ಮೈಕ್ರೋ ಬ್ಲಾಗಿಂಗ್ ಟ್ವೀಟರ್ ಮೂಲಕ ಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸೋ ರೀತಿ ಎಲ್ಲರಿಗೂ ಮಾದರಿಯಾಗಿದೆ. ಈ ಕಾರಣದಿಂದಲೇ ‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ’ ಭಾರತದ ಅತ್ಯಾಪ್ತ ರಾಜಕಾರಣಿ ಎಂಬ ಕೀರ್ತಿಗೆ ಸುಷ್ಮಾ ಭಾಜನರಾಗಿದ್ದಾರೆ.

ಸುಷ್ಮಾ ಸ್ವರಾಜ್ ಒಬ್ಬ ಭಾರತೀಯ ರಾಜಕಾರಣಿಯಾಗಿ, ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆಯಾಗಿ ಗುರುತಿಸಿಕೊಂಡಿರುವ ಇವರು 26 ಮೇ 2014 ರಿಂದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಅಧಿಕಾರದಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕಿಯಾದ ಸ್ವರಾಜ್, ಇಂದಿರಾ ಗಾಂಧಿ ನಂತರ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿರುವ ಎರಡನೇ ಮಹಿಳೆಯಾಗಿದ್ದಾರೆ. ಅವರು ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ ಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. 1977ರಲ್ಲಿ 25 ನೇ ವಯಸ್ಸಿಗೆ, ಅವರು ಉತ್ತರ ಭಾರತದ ಹರ್ಯಾಣಾ ರಾಜ್ಯದ ಅತ್ಯಂತ ಕಿರಿಯ ಸಂಪುಟ ಸಚಿವೆಯಾದರು. ಅಷ್ಟೇ ಅಲ್ಲದೇ, 1998 ರಲ್ಲಿ ಅಲ್ಪ ಅವಧಿಗೆ ದೆಹಲಿಯ 5ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಹಿರಿಮೆ ಇವರದ್ದಾಗಿದೆ.

ಕೇಂದ್ರದ ಎನ್.ಡಿ.ಎ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದು ಒಂದು ಆಶಾಕಿರಣ ಎನ್ನಬಹುದು. ಮೋದಿ ಸರ್ಕಾರದ ಸಚಿವೆಯರು ಹಲವು ತಡೆಗೋಡೆಗಳನ್ನು ಭೇದಿಸಿ ತಮ್ಮ ನೈಜ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ!! ಹಾಗಾಗಿ ಸುಷ್ಮಾ ಸ್ವರಾಜ್ ಅವರನ್ನು ಗಮನಿಸಿರುವ ಮೋದಿ ಸರಕಾರ ವಿದೇಶಾಂಗ ಸಚಿವೆಯಾಗಿ ಆಯ್ಕೆ ಮಾಡಿದ್ದಾರಲ್ಲದೇ, ಇದೀಗ ಶಾಂತಿ-ಮಾತುಕತೆಗಳ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ವಿದೇಶಗಳಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಪಾರುಮಾಡಿ ರಕ್ಷಣೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆಯಾಗಿದ್ದ ಸುಷ್ಮಾ ಸ್ವರಾಜ್ 14 ¥sóÉಬ್ರುವರಿ 1952 ಜನಿಸಿದ್ದು, ಸಂಸ್ಕೃತ ಮತ್ತು ರಾಜ್ಯಶಾಸ್ತ್ರಗಳನ್ನು ಮುಖ್ಯ ವಿಷಯಗಳಾಗಿ ತೆಗೆದುಕೊಂಡು ಸ್ನಾತಕ ಪದವಿ ಗಳಿಸಿದ್ದಾರೆ. ಅಷ್ಟೇ ಅಲ್ಲದೇ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದ್ದಲ್ಲದೇ ಹರ್ಯಾಣಾದ ಭಾಷಾ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅವರು ಮೂರು ವರ್ಷ ಸತತ ಅತ್ಯುತ್ತಮ ಹಿಂದಿ ಭಾಷಣಗಾರ್ತಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ!!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಸರ್ಕಾರದ ಸಲಹೆಗಾರ್ತಿ ಇವಾಂಕಾ ಟ್ರಂಪ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ನ್ಯೂಯಾರ್ಕ್ ನಲ್ಲಿ ಬೇಟಿ ನೀಡಿದ್ದ ಸಂದರ್ಭದಲ್ಲಿ, ತಮ್ಮ ಭೇಟಿಯ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಇವಾಂಕಾ ಟ್ರಂಪ್, ಸುಷ್ಮಾ ಸ್ವರಾಜ್ ತುಂಬಾ ಗೌರವಯುತ ಮಹಿಳೆಯಾಗಿದ್ದು ವರ್ಚಸ್ವಿ ವಿದೇಶಾಂಗ ಸಚಿವೆ ಕೂಡ ಹೌದು. ನಿಪುಣೆ ಮತ್ತು ವರ್ಚಸ್ವಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಗ್ಗೆ ಬಹಳ ಗೌರವವಿದೆ. ಮಹಿಳಾ ಉದ್ಯಮಶೀಲತೆ, ಮುಂದಿನ ಜಿಇಎಸ್ 2017 ಮತ್ತು ಅಮೆರಿಕಾ ಮತ್ತು ಭಾರತದಲ್ಲಿ ಕಾರ್ಯಪಡೆಯ ಅಭಿವೃದ್ಧಿ ಕುರಿತು ನಾವು ಚರ್ಚೆ ನಡೆಸಿದೆವು ಎಂದಿದ್ದಾರೆ.

ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ ಸುಷ್ಮಾರಿಗೆ ಇಂಥದ್ದೊಂದು ಬಿರುದು ನೀಡಿದ್ದು, ವಿದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ನೆರವಿಗೆ ಧಾವಿಸುವ ಅವರ ಕಾರ್ಯವೈಖರಿಯನ್ನು ಬಣ್ಣಿಸಲಾಗಿದೆ. ಸ್ಟ್ಯಾನ್ ಫೆÇೀರ್ಡ್ ವಿವಿಯ ಹೂವರ್ ಸಂಸ್ಥೆಯ ಸಂಶೋಧಕರಾದ ಟುಂಕು ವರದರಾಜನ್ ಎಂಬುವವರು ಬರೆದ ಲೇಖನವೊಂದನ್ನು ಪತ್ರಿಕೆ ಪ್ರಕಟಿಸಿದ್ದು, ‘ವಿದೇಶ ಮತ್ತು ಭದ್ರತಾ ನೀತಿ ಮೇಲೆ ವೈಯಕ್ತಿಕ ನಿಯಂತ್ರಣ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾದ ನಂತರ ತಮಗೆ ತಾವೇ ಸವಾಲು ಹಾಕಿಕೊಂಡ 65 ವರ್ಷದ ಸುಷ್ಮಾ, ವಿದೇಶದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಮುಂದಾದರು,’ ಎಂದೂ ಉಲ್ಲೇಖಿಸಲಾಗಿದೆ.

’86 ಲಕ್ಷಕ್ಕಿಂತಲೂ ಹೆಚ್ಚು ಟ್ವೀಟರ್ ಫಾಲೋಯರ್ಸ್ ಹೊಂದಿರುವ ಸುಷ್ಮಾ ಅತಿ ಹೆಚ್ಚು ಟ್ವೀಟ್ ಪಾಲೋಯರ್ಸ್ ಹೊಂದಿರುವ 10 ರಾಜಕಾರಣಿಗಳಲ್ಲೊಬ್ಬರು. ಅವರ ಬಹುತೇಕ ಟ್ವೀಟ್‍ಗಳು ಸಂಕಷ್ಟದಲ್ಲಿರುವ ಭಾರತೀಯರ ನೆರವಿಗೆ ಸೂಚಿಸಿದ್ದಾಗಿರುತ್ತವೆ,’ ಎಂದ ಲೇಖಕರು ಹೇಳಿದ್ದಾರೆ.

ಇನ್ನು ‘ಭಾರತ – ಪಾಕಿಸ್ತಾನದ ಸಂಬಂಧ ಹದಗೆಟ್ಟಿದ್ದರೂ, ನೆರವಿಗಾಗಿ ಕೋರಿ ಅನೇಕ ಪಾಕಿಸ್ತಾನಿಯರು ಸುಷ್ಮಾಗೆ ಟ್ವೀಟ್ ಮಾಡುತ್ತಾರೆ. ಅದರಲ್ಲಿಯೂ ಪಾಕಿಸ್ತಾನದಲ್ಲಿ ವಿಶೇಷ ತಂತ್ರಜ್ಞಾನದ ವ್ಯವಸ್ಥೆಯುಳ್ಳ ಆಸ್ಪತ್ರೆಗಳ ಕೊರತೆಯಿದ್ದು, ಚಿಕಿತ್ಸೆ ದುಬಾರಿಯಾಗಿರುವುದರಿಂದ ನೆರವು ಕೋರಿ ಸುಷ್ಮಾಗೆ ಟ್ವೀಟ್ ಮಾಡಲಾಗುತ್ತದೆ. ಅದಕ್ಕವರು ಪ್ರತಿಕ್ರಿಯೆ ನೀಡಿ, ಅಗತ್ಯ ಕ್ರಮ ಕೈಗೊಳ್ಳುತ್ತಾರೆ,’ ಎಂದು ಭಾರತೀಯ ಸಚಿವೆಯನ್ನು ಅಮೆರಿಕದ ಪತ್ರಿಕೆಯ ಲೇಖನ ಶ್ಲಾಘಿಸಿದೆ.

ಮೋದಿ ಸಂಪುಟದಲ್ಲಿ 7 ಜನ ಮಹಿಳೆಯರಿಗೆ ಸ್ಥಾನ ಕಲ್ಪಿಸಲಾಗಿದ್ದು, ಎಲ್ಲರಿಗೂ ಉನ್ನತ ಮಟ್ಟದ ಸ್ಥಾನಗಳೇ ಲಭಿಸಿವೆ, ಮಹಿಳಾ ಸಬಲೀಕರಣ ಎಂಬ ವಿಪಕ್ಷಗಳ ಕೂಗಿಗೆ ಮೋದಿ ಈ ರೀತಿ ಉತ್ತರಿಸಿದ್ದಾರೆ. ಕಳೆದ ಯುಪಿಎ ಸರ್ಕಾರದಲ್ಲಿದ್ದ ಬೃಹತ್ ಮಂತ್ರಿ ಮಂಡಲದ 71 ಸಚಿವರ ಪೈಕಿ 7 ಜನ ಮಾತ್ರ ಮಹಿಳೆಯರಿದ್ದರು, ಗಿರೀಜಾ ವ್ಯಾಸ್ ಹಾಗೂ ಚಂದ್ರೇಶ್ ಕಟೋಚ್ ಮಾತ್ರ ಕ್ಯಾಬಿನೆಟ್ ದರ್ಜೆ ಪಡೆದಿದ್ದರು. ಮೀರಾ ಕುಮಾರ್ ಅವರನ್ನು ಸ್ಪೀಕರ್ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗ ಹಾಗೂ ಮಹಿಳೆಯರ ಮೆಚ್ಚುಗೆ ಪಡೆದಿದ್ದಾರೆ!!

Image result for sushma swaraj with narendra modi

62 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್ ಅವರು ವಿದಿಶಾ ಕ್ಷೇತ್ರದಿಂದ ನಿರೀಕ್ಷೆಯಂತೆ ಜಯ ಗಳಿಸಿದ್ದು, ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರ ಖಾತೆ ಸಚಿವೆಯಾಗಿದ್ದಾರೆ. ಈ ಹಿಂದೆ ಮಾಹಿತಿ ಮತ್ತು ವಾರ್ತಾ, ದೂರ ಸಂಪರ್ಕ ಹಾಗೂ ಆರೋಗ್ಯ ಖಾತೆ ನಿಭಾಯಿಸಿದ್ದರು. ಲೋಕಸಭೆಯಲ್ಲಿ ವಿಪಕ್ಷ ನಾಯಕಿಯಾಗಿ ಉತ್ತಮ ಕಾರ್ಯ ನಿರ್ವಹಣೆ, ಆರೆಸ್ಸೆಸ್ ಕಾರ್ಯಕರ್ತರೊಬ್ಬರ ಮಗಳಾಗಿರುವ ಸುಷ್ಮಾ ಅವರು ಪಕ್ಷದ ಹಿರಿಯ ನಾಯಕ ಎಲ್. ಕೆ ಅಡ್ವಾಣಿ ಅವರ ಪರಮ ಶಿಷ್ಯೆ. ಸ್ವದೇಶಿ ಚಿಂತನೆ ಉಳ್ಳ ಸುಷ್ಮಾ ವಿದೇಶಿ ನಾಯಕರ ಜತೆ ಮಾತನಾಡುವ ಕಲೆ ಹೊಂದಿದ್ದಾರೆ. ಏಳು ಬಾರಿ ಸಂಸದೆ, ಮೂರು ಬಾರಿ ಶಾಸಕಿ ಹಾಗೂ 25ನೇ ವರ್ಷಕ್ಕೆ ಹರ್ಯಾಣ ಸರ್ಕಾರದಲ್ಲಿ ಸಚಿವೆಯಾಗಿದ್ದ ಅನುಭವ ಹೊಂದಿರುವ ಪ್ರಭಾವಿ ಮಹಿಳೆಯಾಗಿದ್ದಾರೆ!!

ಅಮೇರಿಕಾದ ಪ್ರತಿಷ್ಠಿತ ದಿನಪತ್ರಿಕೆ ವಾಷಿಂಗ್ಟನ್ ಪೆÇೀಸ್ಟ್‍ನಲ್ಲಿ ಪ್ರಕಟವಾಗಿರುವ ಲೇಖನವೊಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಸೂಪರ್ ಮಾಮ್ ಎಂದು ಕರೆದಿದೆ. ಅಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾ, ಅದರಲ್ಲೂ ಟ್ವಿಟರ್‍ನಲ್ಲಿ ಸಕ್ರಿಯರಾಗಿರುವ ಸುಷ್ಮಾ ಅತ್ಯಂತ ಯಶಸ್ವಿ ಸಚಿವೆ ಎಂದು ಸುಷ್ಮಾ ಅವರ ಬಗ್ಗೆ ಪ್ರಕಟವಾಗಿರುವ ಲೇಖನದಲ್ಲಿ ಹೇಳಲಾಗಿದೆ.

ಟ್ವಿಟರ್‍ನಲ್ಲಿ 5.63 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಸುಷ್ಮಾ ವಿಶ್ವದಲ್ಲೇ ಟ್ವಿಟರ್‍ನಲ್ಲಿ ಅತಿ ಕ್ರಿಯಾಶೀಲರಾಗಿರುವ ವಿದೇಶಾಂಗ ಸಚಿವೆಯಾಗಿರುವ ಇವರು ವಿದೇಶದಲ್ಲಿರುವ ಭಾರತೀಯರ ರಕ್ಷಣೆಗೆ ಬಗ್ಗೆ, ಪಾಸ್‍ಪೆÇೀರ್ಟ್, ವೀಸಾ ವಿಷಯಗಳ ಬಗ್ಗೆ, ಹೀಗೆ ಎಲ್ಲಾ ತರನಾದ ಅಗತ್ಯ ವಿಷಯಗಳ ಬಗ್ಗೆ ಅವರು ಸೂಕ್ತ ಸಂದರ್ಭದಲ್ಲಿ ಟ್ವಿಟರ್‍ನಲ್ಲಿ ಮಾಹಿತಿ ನೀಡುತ್ತಾರೆ ಎಂದು ಲೇಖನ ಹೇಳಿದೆ.

ಟ್ವಿಟರ್ ಮೂಲಕ ಯಾವುದೇ ಮೂಲೆಯಲ್ಲಿರುವ ಭಾರತೀಯರು ಸಹಾಯ ಕೇಳಿದರೂ ಅವರಿಗೆ ತಕ್ಷಣವೇ ಸ್ಪಂದಿಸುವ ಸುಷ್ಮಾ ಭಾರತದ ಸೂಪರ್ ಮಾಮ್ ಆಗಿ ಹೊರಹೊಮ್ಮಿದ್ದಾರೆ!! ಅಷ್ಟೇ ಅಲ್ಲದೇ ಮಾನವೀಯ ಕರ್ತವ್ಯಗಳ ಮೂಲಕ ಸುಷ್ಮಾ ಸ್ವರಾಜ್ ಗೌರವಾನ್ವಿತ ಸಚಿವೆ ಎನಿಸಿಕೊಂಡಿರುವುದು ಹೆಮೆಯ ವಿಚಾರ!!
– ಅಲೋಖಾ

Tags

Related Articles

Close