ಪ್ರಚಲಿತ

ನಿಜವಾಗಿಯೂ ಚಂದ್ರಗ್ರಹಣಕ್ಕೆ ಭಯ ಪಡಬೇಕಾ? ಇಲ್ಲಿದೆ ನೋಡಿ ನೈಜ ಸ್ಟೋರಿ!!

ಸೌರವ್ಯೂಹದಲ್ಲಿ ಇಂದು ಚಂದ್ರಚೋದ್ಯ ನಡೆಯಲಿದೆ. ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದ್ದು, 152 ವರ್ಷಗಳ ಬಳಿಕ ಒಟ್ಟಿಗೇ ಸೂಪರ್ ಮೂನ್, ಬ್ಲಡ್‍ಮೂನ್, ಬ್ಲೂ ಮೂನ್, ಗ್ರಹಣ ಎಲ್ಲವೂ ಸಂಭವಿಸುತ್ತಿದೆ. 1866ರ ಮಾರ್ಚ್ 31ರಲ್ಲಿ ಈ ರೀತಿ ಒಟ್ಟೊಟ್ಟಿಗೇ ಎಲ್ಲವೂ ಆಗಿತ್ತು. ಭಾರತದಲ್ಲಿ 35 ವರ್ಷಗಳ ಹಿಂದೆ ಬ್ಲೂಮೂನ್ ಮತ್ತು ಗ್ರಹಣ ಒಟ್ಟಿಗೇ ನಡೆದಿತ್ತು. ಪ್ರತಿನಿತ್ಯ ಕಾಣೋ ಚಂದ್ರನಿಗಿಂತ ಇಂದು ಗೋಚರಿಸೋ ಚಂದ್ರ ಹೆಚ್ಚು ದೊಡ್ಡದಾಗಿ, ಪ್ರಖರವಾಗಿ ಇರಲಿದ್ದಾನೆ.

ಇಂದು ಹುಣ್ಣಿಮೆಯೂ ಆಗಿದೆ. ಇನ್ನು, ಇಂದಿನ  ಬಿದಿಗೆ ಚಂದ್ರಮನ ಕಣ್ತುಂಬಿಕೊಳ್ಳಲು ವಿಶ್ವವೇ ಬೆರಗುಗಣ್ಣಿನಿಂದ ಕಾಯ್ತಿದೆ. ಭಾರತ ಮಾತ್ರವಲ್ಲದೆ, ಅಮೆರಿಕ, ಈಶಾನ್ಯ, ಯುರೋಪ್, ರಷ್ಯಾ, ಆಸ್ಟ್ರೇಲಿಯಾ, ಏಷ್ಯಾ, ಹಿಂದು ಮಹಾಸಾಗರ, ಫೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಕಾಣಿಸಲಿದ್ದು, ವಿಜ್ಞಾನಿಗಳು, ಖಗೋಳ ಶಾಸ್ತ್ರಜ್ಞರು, ವಿಜ್ಞಾನ ವಿದ್ಯಾರ್ಥಿಗಳಲ್ಲಿ ಕಾತರತೆಯನ್ನ ಇಮ್ಮಡಿಗೊಳಿಸಿದೆ.!!

ಚಂದ್ರ ಗ್ರಹಣ ಹೇಗೆ ಸಂಭವಿಸುತ್ತದೆ ಎಂದರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಅಂಬ್ರ ಭಾಗದಲ್ಲಿ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತೆ. ಸೂರ್ಯಗ್ರಹಣದಂತೆ ಸಂಪೂರ್ಣ ಮರೆ ಮಾಚದೆ ಇಡೀ ಚಂದ್ರ ಕೆಂಪು ಬಣ್ಣದಿಂದ ಗೋಚರಿಸುತ್ತದೆ. ತಾಮ್ರವರ್ಣ ಸೂರ್ಯನ ಕಿರಣವನ್ನು ಭೂಮಿ ಸಂಪೂರ್ಣ ಮರೆಮಾಡದೆ, ಬೆಳಕು ಅಂಬ್ರ ಪ್ರದೇಶದ ಮೇಲೆ ಬೀಳುತ್ತದೆ. ಕೆಂಪುಕಿರಣದ ತರಂಗದೂರ ಕಡಿಮೆ ಇರುವ ಕಾರಣ ಚಂದ್ರ ತಾಮ್ರವರ್ಣವಾಗಿ ಗೋಚರಿಸುತ್ತೆ. ಪೆನಂಬ್ರ ( ಖಂಡ ಛಾಯೆ) ಭಾಗದಲ್ಲಿ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತೆ. ಅಲ್ಲಿ ಕಪ್ಪು-ಬಿಳುಪು ಮಿಶ್ರಿತ ಚಂದ್ರನ ಭಾಗಗಳು ಗೋಚರಿಸುತ್ತದೆ..

ಬ್ಲೂಮೂನ್, ಬ್ಲಡ್‍ಮೂನ್, ಸೂಪರ್ ಮೂನ್ ಹಾಗಂದ್ರೇನು.?

ಬ್ಲೂಮೂನ್ ಅಥವಾ ನೀಲಿ ಚಂದ್ರ ಅಂದ್ರೆ ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಸಂಭವಿಸುವುದು. ಜನವರಿ 1ರಂದು ಕೂಡಾ ಹುಣ್ಣಿಮೆ ಬಂದಿತ್ತು. ಇದು ಮಾರ್ಚ್ ತಿಂಗಳಿನಲ್ಲೂ ಸಂಭವಿಸಲಿದೆ.

ಬ್ಲಡ್‍ಮೂನ್ -ಬ್ಲಡ್‍ಮೂನ್ ಅಂದ್ರೆ ಗ್ರಹಣ ಆರಂಭದಲ್ಲಿ ಬೆಳ್ನೊರೆಯಂತೆ ಕಾಣಿಸೋ ಚಂದ್ರ. ಗ್ರಹಣದ ವೇಳೆ ತಾಮ್ರವರ್ಣ ಅಥವಾ ಬಂಗಾರದ ಬಣ್ಣಕ್ಕೆ ತಿರುಗ್ತಾನೆ.

ಸೂಪರ್ ಮೂನ್ – ಸೂಪರ್ ಮೂನ್ ಅಂದ್ರೆ ಚಂದ್ರ ದೊಡ್ಡದಾಗಿ, ಪ್ರಕಾಶಮಾನವಾಗಿ ಕಾಣಿಸ್ತಾನೆ ಇದು ಸೂಪರ್ ಮೂನ್.

ಪೆರಿಗಿ, ಅಪೆÇೀಗಿ ಹಾಗಂದ್ರೆ ಏನು?

ಪೆರಿಗಿ ಅಂದರೆ ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ 7%ರಷ್ಟು ಹೆಚ್ಚು ವಿಸ್ತಾರ ಮತ್ತು 15%ರಷ್ಟು ಹೆಚ್ಚು ಪ್ರಖರವಾಗಿ ಚಂದ್ರ ಕಾಣ್ತಾನೆ. ಅಂದ್ರೆ ಸಾಮಾನ್ಯವಾಗಿ ಭೂಮಿಯಿಂದ ಚಂದ್ರ ಅಂದಾಜು 3 ಲಕ್ಷದ 84 ಸಾವಿರ ಕಿ.ಮೀ ದೂರದಲ್ಲಿ ಇರುತ್ತಾನೆ.. ಆದ್ರೆ, ನಾಳೆ ಗ್ರಹಣದ ಸಂದರ್ಭದಲ್ಲಿ ದೂರದ ಪ್ರಮಾಣ 3 ಲಕ್ಷದ 56 ಸಾವಿರದ 555 ಕಿ.ಮೀ. ಇರಲಿದೆ. ಅಂದರೆ ಚಂದ್ರ ತನ್ನ ಕಕ್ಷೆಯಿಂದ ಸುಮಾರು 27 ಸಾವಿರದ 445 ಕಿ.ಮೀ. ಭೂಮಿಗೆ ಹತ್ತಿರ ಬರುತ್ತಾನೆ. ಈ ಕಾರಣದಿಂದ ಪ್ರಕಾಶಮಾನವಾಗಿ ಮತ್ತು ದೊಡ್ಡದಾಗಿ ಕಾಣುತ್ತಾನೆ..

ಅಪೆÇೀಗಿ ಅಂದರೆ ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ 7%ರಷ್ಟು ಕಡಿಮೆ ವಿಸ್ತಾರ ಮತ್ತು 15%ರಷ್ಟು ಕಡಿಮೆ ಪ್ರಖರವನ್ನು ಹೊಂದಿರುತ್ತದೆ.. ಅಂದರೆ ಪೆರಿಗೆಗೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತಾನೆ. ಅಂದರೆ ಸಹಜ ಕಕ್ಷೆಗೆ ಚಂದ್ರ ಹೋಗುತ್ತಾನೆ.. ಈ ಎರಡೂ ಪ್ರಕ್ರಿಯೆಯಲ್ಲಿ ಚಂದ್ರನ ಗಾತ್ರದಲ್ಲಿ ಬದಲಾಗುತ್ತೆ. ಅದನ್ನ ಮ್ಯಾಕ್ರೋ, ಮೈಕ್ರೋ ಮೂನ್ ಎಂದು ಕರೆಯಲಾಗುತ್ತದೆ. ಮ್ಯಾಕ್ರೋ ಮೂನ್ ಪೆರಿಗಿಯಲ್ಲಿ ಭೂಮಿಗೆ ಚಂದ್ರ ತುಂಬ ಸನಿಹ ಮತ್ತು ದೊಡ್ಡದಾಗಿ ಗೋಚರಿಸುತ್ತದೆ. ಮೈಕ್ರೋ ಮೂನ್ ಅಪೆÇೀಗಿಯಲ್ಲಿ ಭೂಮಿಯಿಂದ ಭೂಮಿಯಿಂದ ದೂರ ಮತ್ತು ಸಣ್ಣದಾಗಿ ಗೋಚರಿಸುತ್ತದೆ.

ಇಂದು ಯಾವ ಸಮಯಕ್ಕೆ ಚಂದ್ರಗ್ರಹಣ ಸಂಭವಿಸುತ್ತೆ?

* ಸಂಜೆ 4:22 ಪೆನಂಬ್ರಕ್ಕೆ ಪ್ರವೇಶ
* ಸಂಜೆ 5:18 ಭಾಗಶಃ ಚಂದ್ರ ಗ್ರಹಣ (ಗ್ರಹಣ ಆರಂಭ)
* ಸಂಜೆ 6:22 ಸಂಪೂರ್ಣ ಗ್ರಹಣ
* ರಾತ್ರಿ 7 ಗಂಟೆ ಮಧ್ಯ ಗ್ರಹಣ
* ರಾತ್ರಿ 7.38 ಪೂರ್ಣ ಚಂದ್ರಗ್ರಹಣ ಅಂತ್ಯ
* ರಾತ್ರಿ 8.41 ಭಾಗಶಃ ಚಂದ್ರಗ್ರಹಣ ಅಂತ್ಯ ( ಗ್ರಹಣದಿಂದ ಚಂದ್ರ ಸ್ವಲ್ಪ ಹೊರಗೆ ಬರ್ತಾನೆ)
* ರಾತ್ರಿ 9.39 ಚಂದ್ರಗ್ರಹಣ ಅಂತ್ಯ ( ಗ್ರಹಣ ಕಾಲ ಅಂತ್ಯ. ಸಹಜ ಸ್ಥಿತಿಗೆ ಚಂದ್ರ)

ಭಾರತದ ಪ್ರಮುಖ ನಗರಗಳಲ್ಲಿ ಚಂದ್ರಗ್ರಹಣ ಸಮಯ

* ಗುವಾಹತಿ- ಸಂಜೆ 5:01
* ಪಾಟ್ನಾ- ಸಂಜೆ 5: 28
* ದೆಹಲಿ -ಸಂಜೆ 5:57
* ಮುಂಬೈ -ಸಂಜೆ 6:29

ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

ಜ್ಯೋತಿಷ್ಯ ಶಾಸ್ತ್ರ್ರ ಪ್ರಕಾರ ಈ ಗ್ರಹಣ ಅತ್ಯಂತ ಅಪಾಯಕಾರಿಯಾಗಿದ್ದು ನೈಸರ್ಗಿಕ ವಿಕೋಪಗಳು ನಡೆಯುತ್ತವಂತೆ. ರಾಶಿಗಳ ಮೇಲೂ ಗ್ರಹಣದಿಂದ ವ್ಯತಿರಿಕ್ತ ಪರಿಣಾಮವಾಗಲಿದ್ದು, ಶುಭ, ಅಶುಭ, ಮಿಶ್ರ ಫಲ ಆಗಲಿದೆ. ಆಶ್ಲೇಷ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣ ಗೋಚರವಾಗಲಿದೆ ಎಂಬುವುದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

ಚಂದ್ರ ಗ್ರಹಣವು ಸಂಜೆ 4.21 ಕ್ಕೆ ಆರಂಭವಾಗಲಿದ್ದು, ಪೂರ್ಣ ಚಂದ್ರ ಗ್ರಹಣ ರಾತ್ರಿ 7.31 ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಭಾಗಶಃ ಗ್ರಹಣವು ರಾತ್ರಿ 8.41 ರ ವರೆಗೆ ಕಾಣಬಹುದು.

ಚಂದ್ರ ಗ್ರಹಣವನ್ನು ಹೇಗೆ ನೋಡಬಹುದು?

ಯಾವುದಾದರೂ ಎತ್ತರ ಪ್ರದೇಶ ಅಥವಾ ಎತ್ತರ ಕಟ್ಟಡದ ಮೇಲೆ ನಿಂತು ತಿಳಿಯಾದ ಆಕಾಶದಲ್ಲಿ ನೋಡಬಹುದು.

ಈ ಅದ್ಭುತ ದೃಶ್ಯವನ್ನು ಬರಿಗಣ್ಣಿನಲ್ಲಿ ನೋಡಬಹುದೇ?

ಹೌದು. ವೈಜ್ಞಾನಿಕವಾಗಿ ಬರಿಗಣ್ಣಿನಲ್ಲಿ ನೋಡುವುದರಿಂದ ಹಾನಿಕಾರಕ ಕಿರಣಗಳಿಂದ ಯಾವುದೇ ಅಪಾಯವಾಗುವುದಿಲ್ಲ. ಗ್ರಹಣದ ಸಮಯದಲ್ಲಿ ನಿತ್ಯ ಚಟುವಟಿಕೆಗಳನ್ನು ಯಾವುದೇ ಭಯವಿಲ್ಲದೆ ಮುಂದುವರೆಸಬಹುದು.

ಚಂದ್ರಗ್ರಹಣ ವೀಕ್ಷಿಸಲು ವಿಶೇಷ ಉಪಕರಣ ಬೇಕೆ?

ಇಲ್ಲ. ಬೈನಾಕ್ಯುಲರ್ ಮತ್ತು ಸರಳ ದೂರದರ್ಶಕವಿದ್ದರೆ ಚಂದ್ರನು ಸ್ವಲ್ಪ ಆಕರ್ಷಕವಾಗಿ ಕಾಣುತ್ತದೆ.
ಇಂದು ನಡೆಯುವ ಚಂದ್ರ ಗ್ರಹಣವು ಸ್ವಲ್ಪ ಅಪಾಯಕಾರಿಯಾಗಿದ್ದು, ಕೆಲವು ದೇವಾಲಯಗಳು ಕೂಡಾ ತೆರೆಯುವುದಿಲ್ಲ..

ಕೃಪೆ: ಪಬ್ಲಿಕ್ ಟಿವಿ

ಪವಿತ್ರ

Tags

Related Articles

Close