ಪ್ರಚಲಿತ

ನೋಟ್ ಬ್ಯಾನ್, ಜಿಎಸ್‍ಟಿ, ಭಜನೆ ಮಾಡುತ್ತಾ ಕಾಲ ಕಳೆದವರಿಗೆ ಮೋದಿ ರೈತರಿಗೆ ನೀಡಿದ ಕೊಡುಗೆ ಮರೆತು ಹೋಯಿತಾ?

ಅತಿವೃಷ್ಠಿ ಅನಾವೃಷ್ಠಿಯಿಂದ ಕಂಗಾಲಾಗಿದ್ದ ದೇಶದ ರೈತರಿಗೆ ಕೇಂದ್ರ ಸರಕಾರದಿಂದ ಸಿಹಿಸುದ್ಧಿಯೊಂದು ಬಂದಿದೆ. ಎಲ್ಲಾ ರೀತಿಯ ಬೇಳೆಕಾಳು(ದ್ವಿದಳ ದಾನ್ಯ)ಗಳ ರಫ್ತು ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ವಾಪಸ್ ಪಡೆದು ಕೊಳ್ಳುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ರೈತರು ತಮ್ಮ ಬೆಳೆಗಳಿಗೆ ಉತ್ತಮ ಬೆಳೆ ಪಡೆಯಲಿ ಎಂಬ ಉದ್ಧೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಈ ನಿರ್ಧಾರಕ್ಕೆ ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬೇಳೆಕಾಳು ರಫ್ತಿನ ಮೇಲೆ ಇದ್ದ ನಿರ್ಭಂಧವನ್ನು ತೆರವು ಮಾಡಿದ್ದೇವೆ. ಪರಿಣಾಮ ರಫ್ತಿಗೆ ಮುಕ್ತ ಅವಕಾಶ ಇರುವ ಕಾರಣ ರೈತರು ತಮ್ಮ ಬೆಳೆಗಳಿಗೆ ಉತ್ತಮ ಆದಾಯ ಪಡೆಯಬಹುದು ಮತ್ತು ಬಿತ್ತನೆ ಪ್ರದೇಶವನ್ನೂ ವಿಸ್ತರಿಸಿ ಕೊಳ್ಳಬಹುದಾಗಿದೆ ಎಂದಿದ್ದಾರೆ. ಬೇಳೆಕಾಳುಗಳ ರಫ್ತಿಗೆ ಅನುಮತಿ ನೀಡುವುದರಿಂದ ಹೆಚ್ಚುವರಿ ಉತ್ಪನ್ನಗಳಿಗೆ ಪರ್ಯಾಯ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಅಲ್ಲದೆ ದೇಶದ ರಫ್ತುದಾರರು ಮತ್ತೆ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲೂ ನೆರವಾಗುತ್ತದೆ ಎಂದಿದ್ದಾರೆ ಸಚಿವ ಪ್ರಸಾದ್. ಇದೇ ವೇಳೆ ಬೇಳೆ ಕಾಳುಗಳ ಮೇಲಿನ ರಫ್ತು ಮತ್ತು ಆಮದು ನೀತಿಯನ್ನು ಮರು ಪರಿಶೀಲಿಸಲು ಆಹಾರ ಮತ್ತು ನಾಗರಿಕ ಸರಬರಾಜು ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿ(ಸಿಸಿಇಎ) ಅಧಿಕಾರ ಕಲ್ಪಿಸಿದೆ.

ರೈತರ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ದಶಕಕಗಳಿಂದಲೂ ಅದು ಕಾಡುತ್ತಾ ಬಂದಿದೆ. ನಮ್ಮ ಆತ್ಮಸಾಕ್ಷಿಯನ್ನು ಕೆಣಕುತ್ತಾ ಬಂದಿವೆ. ಕೆಲ ಅವಕಾಶವಾದಿ ರಾಜಕಾರಣಗಳಿಗೂ ರೈತರು ಆತ್ಮ ಹತ್ಯೆ ಸುದ್ದಿಯಾಗುತ್ತಿದ್ದಂತೆ ಅವರ ಮನೆಗಳಿಗೆ ಧಾವಿಸಿ ಕ್ಯಾಮೆರಾಗಳ ಮುಂದೆಯೇ ಚೆಕ್ ಹರಿದು ಕೊಡುವ ಸಂಪ್ರದಾಯವನ್ನು ನಮ್ಮ ಕಾಂಗ್ರೆಸ್ ಸರಕಾರ ಮಾಡುತ್ತಾನೆ ಬಂದಿದೆ ಹೊರತು ರೈತರು ಬೇಳೆ ಕಾಳುಗಳಿಗೆ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ರೆಕಾರ್ಡ್ ವರದಿಯ ಪ್ರಕಾರ ದೇಶದೆಲ್ಲೆಡೆ ಅದೆಷ್ಟೋ ರೈತರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.

ಬೆಳೆ ನಾಶದಿಂದ ಶೇಕಡಾ 80 ರಷ್ಟು ರೈತರು ಆತ್ಮಹತ್ಯೆ ಮಾಡಿದ್ದಾರೆ. ಯಾವುದೇ ಸಮಸ್ಯೆಗಳಿಗೂ ಪರಿಹಾರವನ್ನು ಆ ಸಮಸ್ಯೆಯ ಆಳವನ್ನು ಬಗೆಯುವ ಮೂಲಕ ಕಂಡುಕೊಳ್ಳ ಬೇಕಾಗಿದೆ. ಆದರೆ ನಮ್ಮ ಸರಕಾರಗಳ ಇಚ್ಛಾಶಕ್ತಿಯ ಕೊರತೆ ಮತ್ತು ರೈತರ ಸಮಸ್ಯೆಗಳು ಸೃಷ್ಟಿಸುವ ಮತಗಳ ಬೇಡಿಕೆಯಿಂದಾಗಿ ಈ ಸಮಸ್ಯೆಗಳು ಕಾಲದಿಂದ ಕಾಲಕ್ಕೆ ಹಾಗೆಯೇ ಉಳಿಯುತ್ತಾ ಬಂದಿದೆ. ವಿದೇಶಿ ಕಂಪನಿಗಳಿಂದ ಕೃಷಿ ಬೀಜಗಳು , ರಾಸಾಯನಿಕ ಗೊಬ್ಬರಗಳನ್ನು ವಿದೇಶದಿಂದ ಪಡೆದುಕೊಳ್ಳ ಬೇಕಾಗುತ್ತದೆ. ಇದಕ್ಕಾಗಿ ಮೋದಿ ಸರಕಾರ ರೈತರ ಗೋಳನ್ನು ಕೇಳಿ ಅದನ್ನು ನೀಗಿಸುವುದಕ್ಕೋಸ್ಕರವೇ ಇಂತಹ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹಾಗಾಗಿ ಈ ಬಾರಿ ರೈತರಿಗೆ ಈ ಯೋಜನೆಯಿಂದ ಸಂತಸವನ್ನುಂಟು ಮಾಡಲಿದೆ.

ಇದಲ್ಲದೆ ಬೆಳೆ ನಷ್ಟ ವಿಫಲಗೊಂಡ ಸಮಯದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಸರಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕೂಡಾ ಜಾರಿಗೆ ತಂದಿದ್ದು ಈ ಯೋಜನೆಯಡಿ 2016ರ ಮುಂಗಾರು ಹಂಗಾಮಿನಲ್ಲಿ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ ಭೂ ಕುಸಿತ ಮತ್ತು ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ವಿಮೆ ಮಾಡಿರುವ ರೈತರು ಈ ಬಗ್ಗೆ ಸಂಬಂಧ ಪಟ್ಟ ಹಣಕಾಸು ಸಂಸ್ಥೆ ವಿಮಾ ಕಛೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಯೊಳಗೆ ತಿಳಿಸಿದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇಕಡಾ 75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇಕಡಾ 25 ರಷ್ಟು ಬೆಳೆ ವಿಮಾ ನಷ್ಟ ನೀಡಲು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜಿಸಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 2ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು. ಅಲ್ಲದೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗೆ(ಹದಿನಾಲ್ಕು ದಿನಗಳು) ಚಂಡಮಾರುತ , ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುತ್ತದೆ. ಹೀಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ನೋಟ್‍ಬ್ಯಾನ್ , ಜಿಎಸ್‍ಟಿ ಇಂತಹ ಯೋಜನೆಯನ್ನು ತಂದಿರುವುದಕ್ಕೆ ಬೊಬ್ಬೆ ಹಾಕತ್ತಾ ಕಾಲ ಕಳೆಯುವ ಕೆಲವರಿಗೆ ರೈತರಿಗಾಗಿ ತಂದ ಈ ಹೊಸ ಯೋಜನೆಯ ಬಗ್ಗೆ ಯಾರೂ ಮಾತಾಡುತ್ತಿಲ್ಲ ಯಾಕೆ? ಸಿದ್ದರಾಮಯ್ಯ ಸರಕಾರ ಕೇವಲ ಓಟಿಗಾಗಿ ಮಾತ್ರ ಜನರ ಮನವೊಲಿಸುತ್ತೆ ಬದಲಾಗಿ ಜನರಿಗೆ ಉಪಯೋಗವಾಗುವಂತಹ ಯೋಜನೆಯನ್ನು ಯಾವತ್ತೂ ಜಾರಿಗೆ ತರುವುದಿಲ್ಲ.

ತಮ್ಮ ತಪ್ಪು ನೀತಿಗಳೇ ರೈತರ ಸಮಸ್ಯೆಗಳ ಮೂಲ ಎನ್ನುವ ಕಠೋರ ಸತ್ಯವನ್ನು ಈಗಲಾದರೂ ನಮ್ಮ ಸಿದ್ದರಾಮಯ್ಯ ಸರಕಾರ ಅರ್ಥಮಾಡಿಕೊಳ್ಳ ಬೇಕಾಗಿದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಸಾಲ ಮನ್ನಾ ಮಾಡುವ ಬದಲು ಕೃಷಿ ಕ್ಷೇತ್ರದಲ್ಲಿ ಅನುಭವಿಸುತ್ತಿರುವ ಅಭಾವವನ್ನು ತೊಡೆದುಹಾಕಲು ಪ್ರಯತ್ನಿಸಬೇಕು ಸಿದ್ದರಾಮಯ್ಯನವರೇ… ಪ್ರಧಾನಿ ನರೇಂದ್ರ ಮೋದಿ ಮಾಡಿದ ಕಾರ್ಯ ಯೋಜಗಳನ್ನೇ ಟೀಕಿಸುತ್ತಾ ರೈತರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.

-ಪವಿತ್ರ

Tags

Related Articles

Close