ಪ್ರಚಲಿತ

ಪಾಕಿಸ್ಥಾನದ ಪಾಪದ ಕೊಡ ತುಂಬಿದೆ! ಸದ್ಯದಲ್ಲಿಯೇ ನಾವು ಭಾರತೀಯರು ನಿಮಗೆ ಬುದ್ಧಿ ಕಲಿಸಲಿದ್ದೇವೆ! : ಸುಷ್ಮಾ ಸ್ವರಾಜ್

ಇವತ್ತಿನ ರಾಜ್ಯಸಭಾ ಕಲಾಪದಲ್ಲಿ, ಕುಲಭೂಷಣ್ ಜಾಧವ್ ರವರ ವಿಚಾರದ ಬಗ್ಗೆ ಮತ್ತೆ ಚರ್ಚೆಯಾಗಿದೆ! ಮತ್ತೊಂದಿಷ್ಟು ಗುಲಾಬ್ ನಬಿ ಆಜಾದ್ ನಂತವರು ಬರ್ನಾಲ್ ಹಚ್ಚಿಕೊಂಡಿದ್ದಾರೆ! ಅತ್ತ, ರಾಜ್ಯಸಭಾ ಕಲಾಪವನ್ನು ಗಮನಿಸುತ್ತಿರುವ ಪಾಕ್ ಮಾಧ್ಯಮಗಳಿಂದ ಪಾಕಿಸ್ಥಾನಿಗಳಿಗೆ ಒಂದು ಸಂದೇಶವನ್ನೂ ರವಾನಿಸಲಾಗಿದೆ! ಪಾಕಿಸ್ಥಾನ ಈಗ ಒತ್ತಡದಲ್ಲಿ.ಕೂತಿದೆ! ಕಾರಣ ಏನು ಗೊತ್ತಾ?!

ಅವರೊಬ್ಬರೇ! ಮೋದಿ ಸರಕಾರದ ಹಿರಿಯ ಸಿಂಹಿಣಿ!

ಹಾ! ವಿದೇಶಾಂಗ ಸಚಿವೆಯಾಗಿರುವ ಸುಷ್ಮಾ ಸ್ವರಾಜ್ ಇವತ್ತು ಮತ್ತೆ ಘರ್ಜಿಸಿದ್ದಾರೆ! ಒಂದು ಸ್ರ್ರೀಯಾಗಿ, ತನ್ನದೇ ದೇಶದ ಸ್ತ್ರೀಗೆ ಅವಮಾನ ಮಾಡಿದ ಪಾಕಿಸ್ಥಾನವನ್ನು ಸುಮ್ಮನೇ ಖಂಡಿಸಿ ಕುಳಿತಿಲ್ಲ. ಬದಲಿಗೆ, ‘ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ’ ಎಂಹ ಎಚ್ಚರಿಕೆಯನ್ನೂ ರವಾನಿಸಿರುವ ಸುಷ್ಮಾ ಸ್ವರಾಜ್ ರ ಮಾತಿಗೆ ಎಂತಹ ಭಾರತೀಯನೂ ಕುದಿಯುತ್ತಾನೆ! ಎಂತಹ ಪಾಕಿಸ್ಥಾನಿಯಾದರೂ ಬೆವರುತ್ತಾನೆ!

ಅಷ್ಟಕ್ಕೂ, ಸುಷ್ಮಾ ಸ್ವರಾಜ್ ಹೇಳಿದ್ದೇನು ಗೊತ್ತೇ?!

” ಡಿಸೆಂಬರ್ 25 ರಂದು ಇಸ್ಲಾಮಾಬಾದ್ ಗೆ ಕುಲಭೂಷಣ್ ಜಾಧವ್ ರನ್ನು ಭೇಟಿ ಮಾಡಲು, ಜಾಧವ್ ರ ಹೆಂಡತಿಯನ್ನು ಮತ್ತು ತಾಯಿಯನ್ನು ಕಳುಹಿಸಿದ್ದೆವು. ಎಲ್ಲರಿಗೂ ತಿಳಿದಿರುವ ಹಾಗೆ, ಕುಲಭೂಷಣ್ ಜಾಧವ್ ರ ಗಲ್ಲುಶಿಕ್ಷೆಯ ವಿಚಾರವಾಗಿ ಅಂತರಾಷ್ಟ್ರೀಯ ನ್ಯಾಯಾಲಯ, (International Court of Justice) ನಲ್ಲಿ ಮೊಕದ್ದಮೆ ಹೂಡಿ ತಡೆ ತಂದೆವು. ಕೊನೆಗೆ, ಕುಲಭೂಷಣ್ ಅವರ ಭೇಟಿಗೆ ಅವಕಾಶ ನೀಡಿರೆಂದು ಪಾಕಿಸ್ಥಾನಕ್ಕೆ ನಿರಂತರವಾಗಿ ವಿನಂತಿಸಿದೆವು. ಅದೆಷ್ಟೋ ಒತ್ತಡಗಳ ನಂತರ,ಪ್ರಯಾಸದ ನಂತರ, ಪಾಕಿಸ್ಥಾನದ ಜೊತೆಗೆ ಒಂದಷ್ಟು ಒಪ್ಪಂದಗಳನ್ನು ಮಾಡಿಕೊಂಡು ಕುಟುಂಬವನ್ನು ಭೇಟಿಗೆ ಕಳುಹಿಸಿಕೊಟ್ಟೆವು. ಆದರೆ, ಪಾಕಿಸ್ಥಾನ ಒಪ್ಪಂದದಂತೆ, ಜಾಧವ್ ರನ್ನು ಭೇಟಿ ಮಾಡಲು ಬಿಡಲಿಲ್ಲ. ಭಾವನಾತ್ಮಕವಾಗಿರಬೇಕಿದ್ದ ಭೇಟಿಯನ್ನು ಪಾಕಿಸ್ಥಾನ ಪ್ರಸಾರಣಾ ಕಾರ್ಯವೆಂಬಂತೆ ವರ್ತಿಸಿತು.”

“ಒಪ್ಪಂದಗಳೇನಿತ್ತು?!

ಮೊದಲನೆಯದಾಗಿ, ಯಾವುದೇ ಕಾರಣಕ್ಕೂ, ಪಾಕ್ ಮಾಧ್ಯಮಗಳು ಜಾಧವ್ ರ ಕುಟುಂಬವನ್ನು ಭೇಟಿ ಮಾಡಕೂಡದು. ಆದರೆ, ಪಾಕ್ ಸ್ವತಃ ಮಾ‌ಧ್ಯಮಗಳನ್ನು ಆಹ್ವಾನಿಸಿ ಕುಟುಂಬವನ್ನು ಅವಮಾನಿಸಿತು. ಬೇಡವಾದ ಪ್ರಶ್ನೆಗಳಿಂದ ಜಾಧವ್ ಕುಟುಂಬಕ್ಕೆ ಪ್ರಶ್ನಿಸುವಂತೆ ಮಾಡಿದ್ದಲ್ಲದೆ, ಕುಲಭೂಷಣ್ ಅವರನ್ನು ಕೊಲೆಗಾರ ಎಂದು ಜರಿದು ಅವಮಾನಿಸುವಂತೆ ಮಾಡಿತು.

ಎರಡನೆಯದಾಗಿ, ಭದ್ರತೆಯ ನೆಪದಲ್ಲಿ, ಉಟ್ಟಿದ್ದ ವಸ್ತ್ರಗಳನ್ನೂ ಬಿಚ್ಚಿಸಿ, ಪಾಕಿಸ್ಥಾನ ಕೊಟ್ಟ ವಸ್ತ್ರಗಳನ್ನು ಉಡುವಂತೆ ಮಾಡಿತು. ಕೇವಲ ಸೀರೆಯನ್ನಷ್ಟೇ ಉಡುವ ಜಾಧವ್ ರ ತಾಯಿಯನ್ನು ಸಲ್ವಾರ್, ಕುರ್ತಾ ತೊಟ್ಟುಕೊಳ್ಳುವಂತೆ ಮಾಡಿ ಮುಜುಗರಕ್ಕೊಳಪಡಿಸಿತು. ಇದೇ ಪಾಕಿಸ್ಥಾನ ಜಾಧವ್ ರ ಪತ್ನಿಯ ಮಂಗಲಸೂತ್ರ, ಬಿಂದಿ, ಬಳೆಗಳನ್ನು ತೆಗೆದು ಹಾಕುವಂತೆ ಮಾಡಿತು. ಯಾವುದನ್ನು ಸಾಬೀತು ಪಡಿಸಲಿಕ್ಕಿತ್ತು ಪಾಕಿಸ್ಥಾನಕ್ಕೆ?! ಕೇವಲ ಹೆಂಡತಿಯದಲ್ಲ, ತಾಯಿಯ ಬಿಂದಿಯನ್ನೂ ತೆಗೆಯುವಂತೆ ಮಾಡಿತು. ಬಳೆಗಳನ್ನೂ ತೆಗೆದಿರಿಸಿತು.

ನಾನು ಆರೋಪಿಸುವುದರಲ್ಲಿ ತಪ್ಪಾದರೆ ಎಂದು ಇವತ್ತು ಬೆಳಗ್ಗೆ ಮತ್ತೆ ಜಾಧವ್ ತಾಯಿಗೆ ಕರೆ ಮಾಡಿ ಕೇಳಿದೆ! ಏನಾಗಿತ್ತೆಂದು ಮತ್ತೆ ಕೇಳಿದೆ. ಆಕೆಯೆಂದರು.. ‘ನನ್ನ ಮಂಗಲಸೂತ್ರವನ್ನು ತೆಗೆಯುವಂತೆ ಹೇಳಿದರು ಪಾಕ್ ಅಧಿಕಾರಿಗಳು. ನಾನು ಸುಮಂಗಲೆ ಎಂದು ಸಾಬೀತು ಪಡಿಸುವುದರ ಸಂಕೇತವಿದು. ಇದನ್ನು ತೆಗೆಯಲಾರೆ ಎಂದು ಪರಿಪರಿ ಹೇಳಿದೆ. ಕೇಳಲಿಲ್ಲ. ಯಾವಾಗ, ಜಾಧವ್ ನನ್ನನ್ನು ನೋಡಿದನೋ, ‘ಅಪ್ಪ ಹೇಗಿದ್ದಾರೆ?!” ಎಂದು ಕೇಳಿದ. ನಾನು ಬರಿ ಹಣೆಯಲ್ಲಿದ್ದದ್ದನ್ನು ನೋಡಿ, ಬಳೆಗಳನ್ನು ಹಾಕದಿದ್ದನ್ನು ನೋಡಿ, ಬಿಂದಿಯನ್ನಿಡದಿದ್ದು ನೋಡಿ, ಆತನಿಗೆ ಅನುಮಾನ ಉಂಟಾಗಿತ್ತು. ಎಲ್ಲಿ, ಅಶುಭವೊಂದು ನಡೆದಿರಬಹುದೋ ಎಂದು ಆತನಿಗೆ ಅನುಮಾನವಾಗಿತ್ತು.

ಜಾಧವ್ ರ ಹೆಂಡತಿ ಹಾಗೂ ತಾಯಿಯನ್ನು ವಿಧವೆಯರ ರೂಪದಲ್ಲಿ ಭೂಷಣ್ ರ ಎದುರಿಗೆ ಕರೆದುಕೊಂಡು ಹೋಗಿದ್ದಾರೆ. ಪಾಕಿಸ್ಥಾನ ಇದಕ್ಕಿಂತ ಹೆಚ್ಚಿನ ಅವಮಾನವನ್ನು ಭಾರತದ ಸ್ತ್ರೀಗೆ ಹೇಗೆ ಮಾಡಲಾದೀತು?! ಆದರೆ, ಅಂತಹ ಅವಮಾನವನ್ನು ಮಾಡಿದೆ ಪಾಕ್!

ತಾಯಿ ಮಗನ ಹತ್ತಿರ ಮರಾಠಿಯಲ್ಲಿ ಮಾತನಾಡುತ್ತಿದ್ದ ಹಾಗೆ, ಮಧ್ಯಕ್ಕೇ ಇಂಟರ್ ಕೋಮ್ ನನ್ನು ತಡೆ ಹಿಡಿದರು, ಮುಂದೆ ತಾಯಿಗೆ ಮಾತನಾಡಲೇ ಆಗದಂತೆ ಮಾಡಿದರು. ಮಗನ ಹತ್ತಿರ ಮಾತೃಭಾಷೆಯಲ್ಲಿ ಮಾತನಾಡಲಿಕ್ಕೂಅವಕಾಶ ಮಾಡಿಕೊಡದ ಪಾಕ್ ಹೇಗೆ ಇದನ್ನು ಮಾನವೀಯತೆ ಎಂದಿತು?!

ಭಾರತದ ಡೆಪ್ಯುಟಿ ಹೈ ಕಮಿಷನರ್ ರವರನ್ನು ಕುಟುಂಬದ ಜೊತೆ ಕಳಿಸಿಕೊಡಲಾಯಿತು. ಆದರೆ, ಅವರಿಗೆ ತಿಳಿಸದೇ, ತಪಾಸಣೆ ಎಂಬ ನೆಪದಲ್ಲಿ ಮತ್ತೊಂದು ಬಾಗಿಲಿನ ಮೂಲಕ ಜಾಧವ್ ಕುಟುಂಬವನ್ನು ಕರೆದುಕೊಂಡು ಹೋಗಿ, ವಸ್ತ್ರ ಬಿಚ್ಚಿಸಿ ಅವಮಾನ ಮಾಡಿದೆ. ಆ ಕಾರಣಕ್ಕೆ ಅವರಿಗೆ ಇಂತಹ ನಡೆಯನ್ನು ಪ್ರಶ್ನಿಸಲೂ ಆಗಲಿಲ್ಲ. ಕೊನೆಗೆ, ಒಪ್ಪಂದದ ಪ್ರಕಾರ ಹೈ ಕಮಿಷನರ್ ಎದುರೇ ನಡೆಯಬೇಕಿದ್ದ ಭೇಟಿಯನ್ನು, ಅವರ ಅನುಪಸ್ಥಿತಿಯಲ್ಲಿ ಪ್ರಾರಂಭಿಸಿತು ಪಾಕ್. ಜಾಧವ್ ರ ಭೇಟಿಗೂ ಅವಕಾಶ ಕೊಡಲಿಲ್ಲ ಕಮಿಷನರ್ ಗೆ ಪಾಕಿಸ್ಥಾನ!

ಭೇಟಿಯಾದ ನಂತರ, ಹೊರಡಬೇಕಾದರೆ ಪಾಕಿಸ್ಥಾನಿ ಅಧಿಕಾರಿಗಳು ಮಾಧ್ಯಮವಿದ್ದ ಕಡೆ ಬೇಕಂತಲೇ ತಡೆ ಹಿಡಿದರು, ಯಾಕೆಂದರೆ, ಮತ್ತೆ ಜಾಧವ್ ಕುಟುಂಬಕ್ಕೆ ಅಶ್ಲೀಲವಾದ ಪ್ರಶ್ನೆಗಳನ್ನು ಕೇಳಲು ಮಾಧ್ಯಮಕ್ಕೆ ಅವಕಾಶ ಸಿಗಲಿ, ನಿಂದಿಸಲು ಅವಕಾಶವಾಗಲಿ, ಸಾಧ್ಯವಾದಷ್ಟು ಅವಮಾನವಾಗಲಿ ಎಂಹ ಉದ್ದೇಶದಿಂದ.

ಭೇಟಿಗೂ ಮುನ್ನ ಜಾಧವ್ ಪತ್ನಿಯ ಶೂಗಳನ್ನು ವಶಕ್ಕೆ ಪಡೆದು ಇನ್ನೊಂದು ಶೂಗಳನ್ನು ಕೊಡಲಾಯಿತು. ಭೇಟಿ ಮುಗಿದ ನಂತರ. ಪಾಕ್ ಆಕೆಯ ಶೂಗಳನ್ನು ಹಿಂದಿರುಗಿಸಲಿಲ್ಲ. ನಾವಂದುಕೊಂಡಿದ್ದು ನಿಜವಾಯಿತು! ಪಾಕಿಸ್ಥಾನ ಶೂ ವಿಚಾರವನ್ನಿಟ್ಟೇ ಬಲೆ ಹೆಣೆಯತ್ತದೆ ಎಂಬ ನಮ್ಮ ಅನುಮಾನವನ್ನು ಸಾಬೀತು ಪಡಿಸುತ್ತಿದೆ ಪಾಕಿಸ್ಥಾನ. ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಲೇ ಇದೆ ಸುದ್ದಿ. ಕೆಲವರು ಹೇಳುತ್ತಿದ್ದಾರೆ ಶೂನಲ್ಲಿ ಚಿಪ್ ಇತ್ತು, ಕೆಲವರು ಹೇಳುತ್ತಿದ್ದಾರೆ ಕ್ಯಾಮೆರಾವಿತ್ತು, ಕೆಲವರು ಹೇಳುತ್ತಿದ್ದಾರೆ ರೆಕಾರ್ಡರ್ ಇತ್ತು ಎಂದು. ಎಂತಹ ತಮಾಷೆ ಇದು?!

ಅದೇ ಶೂಗಳನ್ನು ಹಾಕಿಕೊಂಡೇ, ಜಾಧವ್ ರ ಪತ್ನಿ ಎರಡೆರಡು ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. ಎರಡೆರಡು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೊಳಪಟ್ಟಿದ್ದಾರೆ. ಭಾರತದಿಂದ ದುಬೈಗೆ ಇಂಡಿಯನ್ ಏರ್ ವೇಸ್ ಮೂಲಕ ಹಾಗೂ, ಪಾಕ್ ಗೆ ಎಮಿರೇಟ್ಸ್ ಮೂಲಕ ದುಬೈನಿಂದ ಪ್ರಯಾಣಿಸಿದ್ದಾರೆ. ಇಂಡಿಯನ್ ಏರ್ ವೇಸ್ ಆಕೆಗೆ ಸಹಕರಿಸಿತು ಎಂದಿಟ್ಟುಕೊಳ್ಳೋಣ. ಎಮಿರೇಟ್ಸ್ ಸಹಕರಿಸುತ್ತದೆಯೇ?! ಅಲ್ಲೆಲ್ಲಿಯೂ ಸಿಗದ ಚಿಪ್ಪು ರೆಕಾರ್ಡರ್ ಗಳು ಭೇಟಿಯಾದ ನಂತರ ಹೇಗೆ ಸಿಕ್ಕವು?! ಎಂತಹ ತಮಾಷೆಯ ಆರೋಪವನ್ನು ಮಾಡುತ್ತಿದೆ ಪಾಕಿಸ್ಥಾನ?!

ಭೇಟಿಯಾದ ನಂತರ, ಜಾಧವ್ ರ ಕುಟುಂಬ ನನ್ನನ್ನು ಭೇಟಿ ಮಾಡಿತು. ಆಗ ಹೇಳುದರು, ಕುಲಭೂಷಣ್ ತುಂಬಾ ಒತ್ತಡಕ್ಕೊಳಗಾಗಿದ್ದರು, ಸುಸ್ತಾಗಿದ್ದರು, ಮತ್ತು ಅವರನ್ನು ಹಿಂಸಿಸಲಾಗಿದೆ. ಅವರ ಹಾವಭಾವದಿಂದಲೇ ಗೊತ್ತಾಗುತ್ತಿತ್ತು, ಜಾಧವ್ ಆರೋಗ್ಯವಾಗಿಲ್ಲ ಎಂದು. ಅವರನ್ನು ಮಾತು ಮುಂಚೆಯೇ ಬರೆದಿಟ್ಟು ಉರುಹೊಡೆದ ಮಾತುಗಳಂತಿತ್ತು.

ಪಾಕಿಸ್ಥಾನ ಈ ಭೇಟಿಗೆ ಮಾನವೀಯತೆ ಎಂದು ಕರೆಯಿತು! ಆದರೆ, ಈ ಭೇಟಿಯಲ್ಲಿ ನಮಗೆಲ್ಲಿಯೂ ಸಹ, ಮಾನವೀಯತೆ ಕಾಣಲಿಲ್ಲ. ಸ್ವಾಭಿಮಾನವನ್ನೂ ಪ್ರಶ್ನಿಸಲಾಯಿತು. ಪಾಕಿಸ್ಥಾನದ ಈ ನಡೆ ಅಳತೆಗೆ ನಿಲುಕದಷ್ಟು ಅಸಂಬದ್ಧತೆ! ನನಗೆ ಭರವಸೆ ಇದೆ! ಇಡೀ ಭಾರತ ಈ ನಡೆಯನ್ನು ಖಂಡಿಸುತ್ತದೆ. ಇಡೀ ಭಾರತ ಜಾಧವ್ ಪರ ಒಗ್ಗಟ್ಟಾಗುತ್ತದೆ! ಇದೇ ಭರವಸೆಯೊಂದಿಗೆ, ಪಾಕಿಸ್ಥಾನಕ್ಕೆ ಪಾಠ ಕಲಿಸುವುದಲ್ಲದೇ, ಪಾಕ್ ನ್ನು ನಿಜಕ್ಕೂ ಹೇಳ ಹೆಸರಿಲ್ಲದಂತೆ ಮಾಡುತ್ತೇವೆ.”

ಇದು ಸುಷ್ಮಾ ಸ್ವರಾಜ್ ರವರ ಮಾತುಗಳು! ಜಾಧವ್ ರ ಕುಟುಂಬಕ್ಕಾದ ಅವಮಾನವೊಂದು ಇಡೀ ಭಾರತದ ಸ್ತ್ರೀಕುಲಕ್ಕಾದ ಅವಮಾನವೂ ಹೌದು! ಇತ್ತ ಭಾರತ ಜಾಧವ್ ಪರ ಎದ್ದು ನಿಲ್ಲುವಾಗಲೇ, ಪಾಕ್ ಅತ್ತ ವಿಲವಿಲ ಎನ್ನುತ್ತಿದೆ. ಸದ್ಯದ ದಿನಗಳಲ್ಲೇ, ಪಾಕ್ ತನ್ನ ನಡೆಗೆ ತಕ್ಕ ಶಿಕ್ಷೆಯನ್ನು ಪಡೆಯುವುದಾ ಎಂಬುದನ್ನು ನೋಡಬೇಕಿದೆ.

– ಪೃಥು ಅಗ್ನಿಹೋತ್ರಿ

Tags

Related Articles

Close