ಪ್ರಚಲಿತ

ಪಾಕಿಸ್ಥಾನದ ಮೇಲೆ ಯುದ್ಧ ಸಾರಲಿದೆಯಾ ಅಮೇರಿಕಾ?! ಅಷ್ಟಕ್ಕೂ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು ಗೊತ್ತಾ?!

ಪಾಕಿಸ್ತಾನವೆಂಬುದು ಭಯೋತ್ಪಾದಕರಿಗೆ ಸ್ವರ್ಗ ಎಂದು ಯಾರಿಗೆ ಗೊತ್ತಿಲ್ಲ ಹೇಳಿ?! ಅದರಲ್ಲೂ, ತಮಗೆ ಅನ್ನ ಕೊಟ್ಟವರಿಗೇ ಕನ್ನ ಬಗೆಯುವ ಜಾತಿಗೆ ಸೇರಿರುವ ಪಾಕಿಸ್ಥಾನಕ್ಕೆ ಈಗ ಪ್ರತಿ ರಾಷ್ಟ್ರಗಳೂ ತಿರುಗಿ ಬೀಳುತ್ತಿವೆ!

ಈ ಹಿಂದೆಯೂ, ಭಯೋತ್ಪಾದಕರಿಗೆ ರಕ್ಷಣೆ ಕೊಡದೇ ಇರಲು ಅಮೇರಿಕಾ ಪದೇ ಪದೇ ಹೇಳಿತ್ತು! ಎಚ್ಚರಿಕೆಯನ್ನೂ ನೀಡಿತ್ತು!! ಬಿನ್ ಲಾಡೆನ್ ನ ವಿಷಯದಲ್ಲಿ, ಪಾಕಿಸ್ಥಾನ ಅಮೇರಿಕಾಗೆ ಸುಳ್ಳು ಮಾಹಿತಿ ರವಾನಿಸಿದ್ದರ ಪರಿಣಾಮವನ್ನೂ ಪಾಕಿಸ್ಥಾನ ಎದುರಿಸಬೇಕಾಯಿತು! ಪಾಕಿಸ್ಥಾನಕ್ಕೆ ನುಗ್ಗಿ ಬಿನ್ ಲಾಡೆನ್ ನನ್ನು ಗುಂಡಿಟ್ಟು ಸಮುದ್ರದ ಮಧ್ಯದಲ್ಲಿ ಎಸೆದು ಹೋಗಿತ್ತು ಅಮೇರಿಕಾದ ಸೈನ್ಯ ಪಡೆ! ಆಗಲೂ, ಅಂದು ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಎಚ್ಚರಿಸಿದ್ದರು! “ನಾವು ಸಂಪೂರ್ಣವಾಗಿ ಭಯೋತ್ಪಾದನೆಯ ನಿರ್ಮೂಲನೆ ಮಾಡುತ್ತೇವೆ’ ಎಂದು ಹೇಳಿದ್ದರು!

ಈಗ ಟ್ರಂಪ್ ಸರದಿ!!

ಹಾ! ಮೊದಲೇ., ಅಮೇರಿಕಾದ ಪ್ರಸ್ತುತ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಗೆ ಪಾಕಿಸ್ಥಾನವೆಂದರೆ ಅಷ್ಟಕ್ಕಷ್ಟೇ! ಅದರಲ್ಲೂ, ಭಯೋತ್ಪಾದನೆಯ ಕಟು ವಿರೋಧಿಯಾಗಿರುವ ಟ್ರಂಪ್ ಬಹಳ ಸಲ ಎಚ್ಚರಿಕೆ ನೀಡಿದ್ದಾರೆ. ಆದರೆ, ಪದೇ ಪದೇ ಮತ್ತದೇ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ಥಾನಕ್ಕೆ ಈ ಸಲ ಮಾತ್ರ ಡೊನಾಲ್ಡ್ ಟ್ರಂಪ್ ಥರಗುಟ್ಟುವಂತೆ ಮಾಡಿದ್ದಾರಷ್ಟೇ!

ಪಾಕಿಸ್ಥಾನ ಪತರುಗುಟ್ಟಿ ನಡುಗಿದ್ದು ಟ್ರಂಪ್ ರ ಒಂದೇ ಒಂದು ಟ್ವೀಟ್ ಗೆ!

” ಕಳೆದ 15 ವರ್ಷಗಳಿಂದಲೂ ಸಹ, ಮೂರ್ಖರ ಹಾಗೆ ಅಮೇರಿಕಾ ಪಾಕಿಸ್ಥಾನಕ್ಕೆ 33 ಬಿಲಿಯನ್ ನ ಕೊಟ್ಟು ಸಹಕರಿಸುತ್ತಾ ಬಂದಿದೆ! ಅದೇ ರೀತಿ, ನಮ್ಮ ನಾಯಕರು ಮೂರ್ಖರೆಂದುಕೊಂಡು ಪಾಕ್ ಕೂಡಾ ಇಲ್ಲಿಯ ತನಕ ನಮಗೆ ನೀಡಿದ್ದು ಸುಳ್ಳುಗಳು ಮತ್ತು ವಿಶ್ವಾಸ ದ್ರೋಹಗಳನ್ನು! ನಾವು ಅಫ್ಘನ್ ನಲ್ಲಿ ಬೇಟೆಯಾಡಿದ್ದ ಭಯೋತ್ಪಾದಕರಿಗೆ ಸಹಾಯ ಮಾಡಿ ಪಾಕಿಸ್ಥಾನ ತನ್ನ ನೆಲದಲ್ಲಿ ರಕ್ಷಣೆ ನೀಡಿತ್ತು ! ಆದರೆ, ಇನ್ನಿಲ್ಲ!” ಎಂದು ಟ್ವೀಟಿಸಿದ್ದಾರೆ ಡೊನಾಲ್ಡ್ ಟ್ರಂಪ್!

‘No more’ ಎಂದಿದ್ದರ ಅರ್ಥವೇನು?!

ಕಳೆದ ವರ್ಷದ ಆಗಸ್ಟ್ ನಲ್ಲಿ, ಯುಎಸ್ ಆರ್ಮಿ ಪಾಕಿಸ್ಥಾನಕ್ಕೆ ಅಫ್ಘನ್ ಉಗ್ರರಿಗೆ ರಕ್ಷಣೆ ಕೊಟ್ಟರೆ ಪಾಕಿಸ್ಥನವನ್ನು ಮುಗಿಸುತ್ತೇವೆಂಬ ಅರ್ಥದಲ್ಲಿ ಸರಿಯಾಗಿ ಎಚ್ಚರಿಕೆ ನೀಡಿತ್ತು. ಆದರೆ, ಯಾವಾಗ ಕಾಬೂಲಿನಲ್ಲಿ ಪಾಕಿಸ್ಥಾನ ತಾಲಿಬಾನ್ ಉಗ್ರರ ಜೊತೆ ಸರಕಾರದಿಂದಲೂ ಸಂಪರ್ಕ ಕಲ್ಪಿಸಿತೋ, ಡೊನಾಲ್ಡ್ ಟ್ರಂಪ್ ನ ಕಣ್ಣು ಕೆಂಪಗಾಗಿತ್ತು.

ಅದಾದ ಮೇಲೆ, ಪಾಕಿಸ್ಥಾನದ ಮೇಲೆ ಹದ್ದುಗಣ್ಣಿಟ್ಟಿರುವ ಡೊನಾಲ್ಡ್ ಟ್ರಂಪ್ ಈಗ ಮತ್ತೆ ಕಿಡಿ ಕಾರಿದ್ದಲ್ಲದೇ, ಆರ್ಥಿಕ ಸಹಾಯವನ್ನು ನಿಲ್ಲಿಸಲು ಯೋಚಿಸಿದ್ದಾರೆ! ಅದಲ್ಲದೇ, ತನ್ನ ಸೇನಾ ನೆಲೆಯನ್ನೂ ಪಾಕಿಸ್ಥಾನದಲ್ಲಿ ಸ್ಥಾಪಿಸಿರುವ ಅಮೇರಿಕಾ, ಪಾಕ್ ನ ಬಾಲ ಕತ್ತರಿಸುವುದು ಬಹುತೇಕ ಖಚಿತವಾಗಿದೆ!

ಅದರಲ್ಲಿಯೂ, ರಾಜಕೀಯಕ್ಕಿಳಿಯಲು ಹೊರಟಿರುವ ಮೋಸ್ಟ್ ವಾಂಟೆಡ್ ಉಗ್ರನಾದ ಹಫೀಜ್ ಸಯೀದ್ ನ ವಿಷಯವೊಂದು ಜಗತ್ತಿನಲ್ಲೆಡೆ ಸದ್ದು ಮಾಡಿದ್ದರೆ, ಇತ್ತ ಟ್ರಂಪ್ ಪಾಕ್ ಗೆ ಕಡಿವಾಣ ಹಾಕಲು ಸಿದ್ಧರಾಗಿದ್ದಾರೆ!

ಯುದ್ಧವೆಂದರೆ ಅದೇ! ಆರ್ಥಿಕವಾದ ಸಹಾಯವನ್ನು ನಿಲ್ಲಿಸಿದರೆ, ಪಾಕ್ ನ ಬೊಕ್ಕಸ ಬರಿದಾಗುತ್ತದೆ! ಇತ್ತ ಭಾರತ ವೀಸಾ ಕೊಡುವುದನ್ನೂ ಕಡಿಮೆ ಮಾಡಿರುವುದರಿಂದ, ಅಲ್ಲದೇ, ಸಿಂಧೂವಿಗೆ ಅಣೆಕಟ್ಟು ಕಟ್ಟಲು ಯೋಚಿಸಿರುವ ಮೋದಿ ಸರಕಾರದಿಂದ ಪಾಕ್, ಸಿಗುವ ನೀರಿಗೂ ಭಾರತದ ಕಾಲಿಗೆ ಬೀಳಬೇಕಾಗುತ್ತದೆ!

ಅದಲ್ಲದೇ, ಅಮೇರಿಕಾ ಮತ್ತು ಇಸ್ರೇಲ್ ರಾಷ್ಟ್ರಗಳು ಭಾರತದ ಪರ ನಿಂತಿರುವುದು ಪಾಕ್ ಗೆ ಇನ್ನೂ ತಲೆಬಿಸಿ! ಟ್ರಂಪ್ ರವರ ‘ನೋ ಮೋರ್ ‘ ಪಾಕ್ ರಾಷ್ಟ್ರಕ್ಕೋ ಅಥವಾ ಪಾಕ್ ಗೆ ನೀಡುತ್ತಿದ್ದ ಸಹಾಯಕ್ಕೋ ಎಂದು ಕಾದು ನೋಡಬೇಕಿದೆ!

ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ, ಸಮರ್ಥಿಸಿಕೊಂಡಿತು ಪಾಕ್!

ಪಾಕಿಸ್ಥಾನದ DG ISPR, ಮೇಜರ್ ಜನರಲ್ ಆಸಿಫ್ ಗಫಾರ್, ” ನಾವು ಈಗಾಗಲೇ ಎರಡು ಬಾರಿ ಹೇಳಿದ್ದೇವೆ. ಪಾಕಿಸ್ಥಾನದೊಳಗೇ ಉಗ್ರರ ಜೊತೆ ಹೋರಾಡಿದ್ಧೇವೆ. ನಾವು ಬಹಳ ತ್ಯಾಗವನ್ನೂ ಮಾಡಿದ್ದೇವೆ. ನಾವು, ರಕ್ತದಲ್ಲಿಯೂ, ನಿಧಿಯಲ್ಲಿಯೂ ಬಹಳಷ್ಟನ್ನು ಕೊಟ್ಟಿದ್ದೇವೆ. ನಾವು ಈಗಾಗಲೇ ಬಹಳಷ್ಟನ್ನು ಮಾಡಿದ್ದೇವೆ ಮತ್ತು ಇನ್ಜೂ ಮಾಡಲು ಸಾಧ್ಯವಿಲ್ಲ. ನಾವಿನ್ನೇನೇ ಮಾಡಿದರೂ ಪಾಕ್ ಗೆ ಮಾತ್ರ ಮತ್ತು ಅದನ್ನೇ ಮಾಡುವುದು.” ಎಂದಿದ್ದಾರೆ!

ಮನುಷ್ಯನಿಗೆ ನಿಜಕ್ಕೂ ಕೇಳಬೇಕಿದೆ! ತ್ಯಾಗದ ಅರ್ಥದ ಬಗ್ಗೆ ನಿಜಕ್ಕೂ!

ಪಾಕಿಸ್ಥಾನದ ವಿದೇಶಾಂಗ ಸಚಿವ ಖವಾಜಾ ಎಮ್ ಆಸಿಫ್, ‘ನಾವು ಅಧ್ಯಕ್ಷ ಟ್ರಂಪ್ ರ ಟ್ವೀಟ್ ಗೆ ಶೀಘ್ರದಲ್ಲಿಯೇ ಪ್ರತಿಕ್ರಿಯಿಸುತ್ತೇವೆ! ಇನ್ಶಾ ಅಲ್ಲಾಹ್! ನಾವು ಜಗತ್ತಿಗೆ ಸತ್ಯವನ್ನು ತಿಳಿಸಿಕೊಡುತ್ತೇವೆ! ಕಲ್ಪನೆಗೂ ವಾಸ್ತವಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿಕೊಡುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ!

ಅದ್ಯಾವ ಸತ್ಯವನ್ನು ತಿಳಿಸಿಕೊಡಲಿದ್ದಾರೋ ಆ ಅಲ್ಲಾಹ್ ನೇ ಹೇಳಬೇಕು ಬಿಡಿ!

– ಪೃಥು ಅಗ್ನಿಹೋತ್ರಿ

Tags

Related Articles

Close