ಪ್ರಚಲಿತ

ಪಾಪಿಸ್ಥಾನದ ಈ ನೀಚ ನಡೆಯನ್ನು ಮತ್ತೊಂದು ಮುಸ್ಲಿಂ ರಾಷ್ಟ್ರ ಹೀನಾಯವಾಗಿ ಖಂಡಿಸಿದ್ದು ಯಾಕೆ ಗೊತ್ತ..? ಪಾಕ್ ಮಾಡಿದ ಆ ಘೋರ ತಪ್ಪೇನು..?

ಬೇಹುಗಾರಿಕೆ ಆರೋಪದಲ್ಲಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿ ಗಲ್ಲುಶಿಕ್ಷೆ ವಿಧಿಸಿ ಉದ್ಧಟತನ ಮೆರೆದಿರುವ ಪಾಕಿಸ್ತಾನದ ನಡೆಯನ್ನು ಮತ್ತೊಂದು ಮುಸ್ಲಿಂ ರಾಷ್ಟ್ರವಾದ ಅಫ್ಘಾನಿಸ್ತಾನವೇ ಖಂಡಿಸಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಹೋದ ಅವರ ತಾಯಿ ಹಾಗೂ ಹೆಂಡತಿಯನ್ನು ಅವಮಾನಿಸಿದ ಪಾಕಿಸ್ತಾನದ ನಡೆಯನ್ನು ಅಫ್ಘಾನಿಸ್ತಾನ ಖಂಡಿಸಿದೆ.!!

ಎಂದಿಗೂ ಮನುಷ್ಯರನ್ನು ಮನುಷ್ಯರಂತೆಯೇ ನಡೆಸಿಕೊಳ್ಳಬೇಕು. ಯಾವುದೋ ದ್ವೇಷ, ಯಾವುದೋ ರಾಜಕೀಯ ಸಿಟ್ಟಿಗೆ ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದು ಭಾರತದಲ್ಲಿರುವ ಅಫ್ಘಾನಿಸ್ತಾನ ರಾಯಭಾರಿ ಶೈದಾ ಮೊಹಮ್ಮದ್ ಖಂಡನೆ ವ್ಯಕ್ತಪಡಿಸಿದ್ದಾರೆ.

ಹಲವು ಬಾರಿ ಮನವಿ ಮಾಡಿದ ಬಳಿಕ ಜಾಧವ್ ಅವರನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದ ಪಾಕಿಸ್ತಾನ ಮೊದಲು ಮಾನವೀಯತೆಯ ಆಧಾರದ ಮೇಲೆ ಒಪ್ಪಿಕೊಂಡಿದ್ದಾಗಿ ತಿಳಿಸಿತ್ತು. ಆದರೆ ಜಾಧವ್ ಅವರ ತಾಯಿ ಹಾಗೂ ಪತ್ನಿ ಪಾಕಿಸ್ತಾನಕ್ಕೆ ತೆರಳುತ್ತಲೇ ಉದ್ಧಟತನ ಮೆರೆದಿತ್ತು.

ಜಾಧವ್ ಅವರನ್ನು ಭೇಟಿ ಮಾಡುವ ವೇಳೆ ಅವರ ತಾಯಿ ಹಾಗೂ ಪತ್ನಿಗೆ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಿರಲಿಲ್ಲ. ಅಲ್ಲದೆ ಜಾಧವ್ ಅವರ ಪತ್ನಿಯ ಮಂಗಳಸೂತ್ರ ತೆಗೆಸಿ, ಬಿಂದಿ ತೆಗೆಸಿ ಅವಮಾನ ಮಾಡಿತ್ತು. ಇದನ್ನು ಭಾರತ ಉಗ್ರವಾಗಿ ಖಂಡಿಸಿತ್ತು. ಅಫ್ಘಾನಿಸ್ತಾನ ಸ್ಥಾನ ಕೂಡಾ ಒಂದು ಮುಸ್ಲಿಮ್ ರಾಷ್ಟ್ರದ ನಡೆಯನ್ನು ಇಷ್ಟರ ಮಟ್ಟಿಗೆ ಖಂಡಿಸಿದೆ ಎಂದರೆ ನಿಜವಾಗಿಯೂ ಅವರು ಯಾವ ಕೀಳು ರೀತಿಯ ಮಟ್ಟಕ್ಕೆ ಇಳಿದಿರಲಿಕ್ಕಿಲ್ಲ?

ಅದಲ್ಲದೆ ಬಿಜೆಪಿ ಮುಖಂಡರೊಬ್ಬರು ಚಪ್ಪಲಿ ಕಳುಹಿಸಿ, ಸೇಡು ತೀರಿಸಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡುವ ವೇಳೆ ಕುಲಭೂಷಣ್ ಜಾಧವ್ ಅವರ ತಾಯಿ ಮತ್ತು ಪತ್ನಿಯ ಮಾಂಗಲ್ಯ, ಕುಂಕುಮ ಅಳಿಸಿ, ಬಟ್ಟೆ ಬದಲಾಯಿಸಿ ಮಾತನಾಡಲು ಅವಕಾಶ ನೀಡಿದ್ದರು. ಅಲ್ಲದೇ ಮಾತನಾಡಿ ಹೊರ ಬಂದ ನಂತರ ಜಾಧವ್ ಪತ್ನಿಯ ಶೂಗಳನ್ನು ಬಿಚ್ಚಿಕೊಂಡು ಅವಮಾನ ಮಾಡಿದ್ದರು. ಸಿಟ್ಟಿಗೆ ಸೇಡು ತೀರಿಸಿಕೊಂಡಿರುವ ದೆಹಲಿಯ ಬಿಜೆಪಿ ಮುಖಂಡ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಆನ್ ಲೈನ್ ಮೂಲಕ ಚಪ್ಪಲಿ ಖರೀದಿಸಿ, ಪಾಕ್ ಹೈ ಕಮಿಷನರ್ ಕಚೇರಿಗೆ ಪಾರ್ಸೆಲ್ ಕಳುಹಿಸಿದ್ದರು.

ಪಾಕಿಸ್ತಾನದವರಿಗೆ ನಮ್ಮ ದೇಶದ ಮಹಿಳೆಯರ ಚಪ್ಪಲಿ ಬೇಕಲ್ಲವೇ, ಅದಕ್ಕಾಗಿ ಈ ಚಪ್ಪಲಿಗಳನ್ನು ಕಳುಹಿಸುತ್ತಿದ್ದೇನೆ. ಅವರು ಮಾಡಿದ ಅವಮಾನಕ್ಕೆ ಪ್ರತಿಕ್ರಿಯೆ ಇದು ಎಂದು ಬಗ್ಗಾ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಕುರಿತು ಟ್ವೀಟ್ ಮಾಡಿರುವ ತೇಜಿಂದರ್ ಪಾಲ್ ಸಿಂಗ್ ಬಗ್ಗಾ `ತೆಗೆದುಕೊಳ್ಳಿ ನಿಮಗೆ ಭಾರತದ ಚಪ್ಪಲಿ ಬೇಕಲ್ಲವೇ ಎಂದು ಪ್ರಶ್ನಿಸಿದ್ದು, ದೇಶವಾಸಿಗಳು ಆನ್ ಲೈನ್ ಮೂಲಕ ಪಾಕಿಸ್ತಾನಕ್ಕೆ ಚಪ್ಪಲಿಗಳನ್ನು ಕಳುಹಿಸುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Image result for pakistan jadhav family met

ಪಾಕಿಸ್ತಾನಕ್ಕೆ ಚಪ್ಪಲಿ ಕಳುಹಿಸುವುದು ಒಂದು ಆಂದೋಲನವಾಗಲಿ. ಪಾಕಿಸ್ತಾನ ಮಾಡಿರುವ ಅವಮಾನಕ್ಕೆ ಇದೇ ಸರಿಯಾದ ಉತ್ತರ ಎಂದು ಹೇಳಿದ್ದು, ರಾಷ್ಟ್ರೀಯವಾದಿಗಳು ಪಾಕಿಸ್ತಾನಕ್ಕೆ ಚಪ್ಪಲಿ ಕಳುಹಿಸಬೇಕು ಎಂಬ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ.
22 ತಿಂಗಳುಗಳ ನಂತರ ಮೋದಿಜೀಯವರು ಹರಸಾಹಸ ಮಾಡಿ ಜಾದವ್‍ರವರನ್ನು ಅವರ ಕುಟುಂಬಕ್ಕೆ ಭೇಟಿಯ ಅವಕಾಶ ಮಾಡಿ ಕೊಟ್ಟರು ಆದರೆ ರಾಹುಲ್ ಗಾಂಧಿ ಮಾತ್ರ ಈ ವಿಷಯವಾಗಿ ಯಾವುದೇ ಮಾತುಗಳನ್ನಾಡದೆ ಸುಮ್ಮನ್ನೇ ಕುಳಿತಿರುವುದು ಯಾತಕ್ಕಾಗಿ..!! ಯಾರದ್ದೋ ಹೆಸರನ್ನು ಗಾಂಧಿ ಎಂದು ಇಟ್ಟುಕೊಟ್ಟು ಇವರಂತಹ ಶೋಕಿಲಾಲರನ್ನು ಏನನ್ನ ಬೇಕೋ ತಿಳಿಯದು…ಇದು ಕೇವಲ ಮತಗಳಿಕೆಗೋಸ್ಕರ… ಎಲ್ಲಿ ಪಾಕಿಸ್ತಾನದ ವಿರುದ್ದ ಹೋದರೆ ಇಲ್ಲಿಯ ಅಲ್ಪಸಂಖ್ಯಾತರ ಮತ ಎಲ್ಲಿ ಕಡಿಮೆಯಾಗುತ್ತದೋ ಎಂಬ ಭಯದಿಂದ ಇಂತಹ ವಿಷಯಗಳಿಗೆ ತಲೇನೇ ಹಾಕಲ್ಲ ಅನ್ನುತ್ತಾರೆ ಅಸಾಮಿಗಳು..ಇಂತಹವರನ್ನು ನಾವು ಮತಹಾಕಿ ದೇಶವನ್ನಾಳಾಲು ಬಿಡಬೇಕೇ?

ಜಾದವ್ ಒಬ್ಬ ನಿರಪರಾಧಿ ಎಂದು ಮೊದಲು ಸಾಭೀತುಪಡಿಸಿಕೊಳ್ಳಬೇಕು.. ಅದಕ್ಕಾಗಿ ಏನಾದರೂ ಶ್ರಮಿಸಿ ಅದನ್ನು ಬಿಟ್ಟು ನೀವು ಆ ಮುಸಲ್ಮಾನರ ಹಿಂದೆ ಹೋದಲ್ಲಿ ನಿಮಗೆ ಖಂಡಿತಾ ಒಳಿತಾಗುವುದಿಲ್ಲ.!…ಅದಲ್ಲದೆ ಪಾಕಿಸ್ತಾನ ಕೂಡಾ ಇವರಿಗೆ ಭೇಟಿಯ ಅವಕಾಶ ನೀಡಿ ಅವಮಾಸಿರುವುದು ನಿಜವಾಗಲೂ ಅರಗಿಸಲು ಆಗದಿರುವ ನೋವು ಎಂದೇ ಹೇಳಬಹುದು..

ಜಾದವ್‍ರವರನ್ನು ಭೇಟಿ ಮಾಡಲು ಅವಕಾಶ ಕೊಡುತ್ತೇವೆ ಎಂದು ಜಾದವ್ ಕುಟುಂಬಕ್ಕೆ ಮಾಡಿದ ಅವಮಾನ ಒಂದಾ ಎರಡಾ? ಜಾಧವ್ ಅವರ ಕುಟುಂಬ ಪಾಕಿಸ್ಥಾನಕ್ಕೆ ಹೋಗಿ ಕುಲಭೂಷಣ್ ನನ್ನು ನೋಡಿಕೊಂಡು ಬಂದರೇನೋ ನಿಜ! ಆದರೆ, ಅದಕ್ಕೂ ಮುಂಚೆ, ಇದೇ ಪಾಕಿಸ್ಥಾನ ಒಬ್ಬ ಭಾರತೀಯ ಹೆಣ್ಣು ಮಗಳ ಸಂಸ್ಕೃತಿಯನ್ನು ಗೌರವಿಸಿದೆ ಹಿಂಸಿಸಿದ ಪರಿಯನ್ನು ಎಷ್ಟು ಮಾಧ್ಯಮಗಳು ಹೇಳಬಲ್ಲವು?! ವಿರೋಧಿಸಬಲ್ಲವು?! ಭಾರತಕ್ಕೆ ಮರಳಿದ ಜಾಧವ್ ಕುಟುಂಬವನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಈ ಎಲ್ಲಾ ವಿಷಯಗಳು ಬಯಲಾಗಿದೆ!

“ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗುವ ಮುನ್ನ ಜಾಧವ್ ಅವರ ಪತ್ನಿಗೆ ಅವರ ಮಂಗಲ ಸೂತ್ರವನ್ನು ತೆಗೆಯುವಂತೆ, ಬಿಂದಿಗಳನ್ನು ತೆಗೆಯುವಂತೆ ಮಾಡಿದ್ದಲ್ಲದೇ, ಬಳೆಗಳನ್ನೂ ತೆಗೆಯುವಂತೆ ಮಾಡಿದೆ. ಜೊತೆಗೆ, ತಾಯಿ ಮತ್ತು ಹೆಂಡತಿಯ ಶೂಗಳನ್ನೂ ಬಿಚ್ಚುವಂತೆ.ಮಾಡಿ, ಭೇಟಿಗೂ ಮುನ್ನ ಅವರ ವೇಷವನ್ನೇ ಬದಲಾಯಿಸಿದ ಪಾಕಿಸ್ಥಾನ ಇಷ್ಟನ್ನೂ ಮಾಡಿಸಿದ್ದು ಹಿಂಸಿಸುತ್ತಲೇ! ಇಷ್ಟಾದರೂ, ಕೊನೆಗೆ ಜಾಧವ್ ಅವರ ಪತ್ನಿಯ ಶೂಗಳನ್ನು ಎಷ್ಟು ವಿನಂತಿಸಿದರೂ ಹಿಂದಿರುಗಿಸಿಲ್ಲ” ಎಂದು ವಕ್ತಾರರು ಹೇಳಿದ್ದಾರೆ!
ಇದು ಮಾತ್ರವಲ್ಲದೇ, ಮಗನ ಜೊತೆ ಮರಾಠಿಯಲ್ಲಿ ಮಾತನಾಡಿದ್ದಕ್ಕೂ ಸಹ ತೊಂದರೆ ಮಾಡಿದ ಪಾಕಿಸ್ಥಾನಿಗಳು ಅರ್ಥವಾಗುವ ಭಾಷೆಯಲ್ಲಿಮಾತನಾಡಿ ಎಂದು ತಾಕೀತು ಮಾಡಿದ್ದಾರೆ! ಮಾತೆತ್ತಿದರೆ ತಾನು ಇಸ್ಲಾಂ ರಾಷ್ಟ್ರ ಎನ್ನುವ ಇದೇ ಪಾಕಿಸ್ಥಾನ, ಒಂದು ಹೆಣ್ಣಿನ ಮಂಗಲ ಸೂತ್ರವನ್ನು ಕಸಿಯುವುದನ್ನು ಯಾವ ಇಸ್ಲಾಂ ಅಡಿಯಲ್ಲಿ ಸಮರ್ಥನೆ ಪಡಿಸುತ್ತದೆ?! ಅಥವಾ, ಮತ್ತದೇ ಗೊಡ್ಡು ಹಿಡಿದ ಸಿದ್ಧಾಂತಕ್ಕೆ ಕಟ್ಟು ಬಿದ್ದು ‘ಹೌದು! ನಮ್ಮ ಪಾಕಿಸ್ಥಾನದ ನಡೆಯೇ ಇದು” ಎಂದು ಒಪ್ಪುತ್ತಾರೆಯೇ?! ಅದಲ್ಲದೆ ಶೂಗಳನ್ನು ಹಿಂದಿರುಗಿಸದೆ, ಅದನ್ನೂ ಕದ್ದಿಟ್ಟುಕೊಂಡ ಪಾಕಿಸ್ಥಾನ ಏನನ್ನು ಸಾಬೀತು ಪಡಿಸ ಹೊರಟಿದೆ?!

ವೈಯುಕ್ತಿಕ ಭೇಟಿಗೆ ಅವಕಾಶ ಕೊಡದೇ, ನಾಲ್ಕು ಕಡೆಯಲ್ಲಿ ಎಂಟು ಕ್ಯಾಮರಾಗಳನ್ನಿಟ್ಟು ವೀಡಿಯೋ ಚಿತ್ರೀಕರಣ ಮಾಡಿ, ಜಗತ್ತಿಗೆ ಮಾನವೀಯತೆ ಎಂದು ಇಲ್ಲದ ಮನುಷ್ಯತ್ವವನ್ನು ತೋರುವ ಪ್ರಯತ್ನ ಮಾಡಿದ್ದು ಇಸ್ಲಾಮಿಕ್ ರಾಷ್ಟ್ರಗಳ ನಡೆಯೇ?! ಅಥವಾ, ಯಾವ ಆಧಾರದ ಮೇಲೆ ಈಗ, ಈ ಭೇಟಿಯನ್ನು, ಅಥವಾ ನಡೆಯನ್ನು ‘ಮಾನವೀಯತೆ’ ಎಂಬುದಾಗಿ ತೋರಬಲ್ಲದು ಪಾಕಿಸ್ಥಾನ?! ಮತ್ತೆ ಮತ್ತೆ ಯೋಚಿಸಬೇಕಿದೆ! ಈ ಹಿಂದೆಯೂ, ಭಾಯಿ ಭಾಯಿ ಎಂದು ಪಾಕಿಸ್ಥಾನಕ್ಕೆ ಆಲಂಗಿಸಿದ್ದರ ಪರಿಣಾಮ ಕಾಶ್ಮೀರದಲ್ಲೊಂದು ‘ಪಾಕ್ ಆಕ್ರಮಿತ ಕಾಶ್ಮೀರ’ ವಾಯಿತು! ದೇಶದೊಳ ಸಾಧ್ಯವಾದಷ್ಟು ದಾಳಿಗಳಾದವು! ಸ್ಫೋಟಗಳಾದವು! ರಕ್ತಪಾತಗಳಾದವು! ಈಗ ಸಾಲದ್ದಕ್ಕೆ, ಭಾರತೀಯ ಹೆಣ್ಣು ಮಗಳ ಸ್ವಾಭಿಮಾನವನ್ನೂ ಕೆಣಕಲಾಯಿತು! ಬೇಕಾ ಭಾರತಕ್ಕೆ?! ಮತ್ತೆ ತಿರುಗಿ ಪ್ರೀತಿಸುತ್ತೇನ್ನುವುದು?!
70% ಇಂಡಸ್ ನದಿಯ ನೀರನ್ನು ಪಾಕಿಸ್ಥಾನಕ್ಕೆ ಕಳುಹಿಸಿಕೊಟ್ಟೆವು! ವೈದ್ಯಕೀಯ ವೀಸಾಗಳು ಬೇರೆ! ಸಾಲದ್ದಕ್ಕೆ, ಭಾರತದಲ್ಲಿ ಅದಕ್ಕೊಂದು ಸೆಲೆಬ್ರಿಟಿ ಸ್ಥಾನವನ್ನೂ ಕೊಟ್ಟೆವು! ತಿರುಗಿ ಸಿಕ್ಕಿದ್ದೇನು?! ಒಂದಷ್ಟು ಹೆಣ್ಣಿನ ಮೇಲೆ ಕ್ರೌರ್ಯ! ಸೈನಿಕರ ಶವಗಳು! ಬಿಡಿ! ಇಸ್ಲಾಮಿಕ್ ರಾಷ್ಟ್ರವನ್ನಾಗಿಸುತ್ತೇವೆಂದು ಹೊರಟ ರಾಷ್ಟ್ರಗಳೆಲ್ಲವೂ ನಾಂದಿ ಹಾಡಿದ್ದು, ರಕ್ತಪಾತ, ಅತ್ಯಾಚಾರ, ಚೀರಾಟಗಳಿಂದಲೇ! ಇಂತಹ ಪಾಕಿಸ್ಥಾನದಿಂದ ಇನ್ಯಾವುದನ್ನು ನಿರೀಕ್ಷೆ ಮಾಡಲಾದೀತು?! ಇಂತಹ ಕೆಳಮಟ್ಟದ ಕೆಲಸಗಳಷ್ಟನ್ನೇ! ಕುಲಭೂಷಣ್ ಜಾಧವ್ ರ ತಾಯಿ ಮತ್ತು ಹೆಂಡತಿಗೆ ತೋರಿದ ಅಗೌರವ ಕೇವಲ ಅವರಿಗೆ ಮಾತ್ರ ತೋರಿದ ಅಗೌರವವಲ್ಲ! ಬದಲಿಗೆ, ಭಾರತದ ಪ್ರತಿ ಸ್ತ್ರೀಗೆ ತೋರಿದ ಅಗೌರವವಲ್ಲವೇ?! ಸಾಕು ಮಾಡಬೇಕಿದೆ ಭಾರತ ಇನ್ನಾದರೂ ಕರುಣೆ ಆದರದ ನಡೆಗಳನು! ನೀರನ್ನೊಂದು ನಿಲ್ಲಿಸಿದರೆ ಒಂದು ವರುಷಗಳಲೇ ನಿರ್ನಾಮವಾಗಲಿದೆ ಪಾಕಿಸ್ಥಾನ! ಅಂತಹದ್ದರಲ್ಲಿಯೂ ಸಹ, ಪಾಕಿಸ್ಥಾನ ಈ ಈ ರೀತಿ ವರ್ತನೆ ತೋರಿದೆಯೆಂದರೆ, ತಿರುಗಿ ಪ್ರೀತಿಸಬೇಕಿದೆಯೇ ಭಾರತ?!

ಪವಿತ್ರ

Tags

Related Articles

Close