ಪ್ರಚಲಿತ

ಪ್ರತೀಕಾರ ತೀರಿಸಿದ ಗಡಿಭದ್ರತಾ ಪಡೆ! ಅಮರನಾಥ್ ದಾಳಿಯ ಮಾಸ್ಟರ್‍ಮೈಂಡ್ ಉಗ್ರ ಅಬು ಇಸ್ಮಾಯಿಲ್ ಫಿನಿಷ್!!!

ಲಷ್ಕರೆ ಇ ತೈಬಾ (ಎಲ್‍ಇಟಿ) ಉಗ್ರ ಸಂಘಟನೆಯ ಟಾಪ್‍ಮೋಸ್ಟ್ ಉಗ್ರ, ಅಮರನಾಥ ಯಾತ್ರಿಗಳ ಬಸ್ ಮೇಲೆ ದಾಳಿ ನಡೆಸಿ ಹಲವರ ಮಾರಣಹೋಮ ನಡೆಸಿದ್ದ ಮಾಸ್ಟರ್‍ಮೈಂಡ್ ಉಗ್ರ ಅಬು ಇಸ್ಮಾಯಿಲ್‍ನನ್ನು ಎನ್‍ಕೌಂಟರ್ ಮೂಲಕ ಹತ್ಯೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ನೌಗಾಮ್ ಅರಿಯಾಭಾಗ್ ಹಳ್ಳಿಯಲ್ಲಿ ಗುರುವಾರ ಪೊಲೀಸರ ಗುಂಡಿನ ದಾಳಿಗೆ ಈತ ಬಲಿಯಾಗಿದ್ದಾನೆ. ಅಮರನಾಥ್ ದಾಳಿ ನಡೆದು ಬರೇ ಎರಡೇ ತಿಂಗಳಲ್ಲಿ ಇಸ್ಮಾಯಿಲ್‍ನನ್ನು ಹತ್ಯೆ ಮಾಡಿದ ಭದ್ರತಾ ಪಡೆಯ ಸೈನಿಕರು ಪ್ರತೀಕಾರ ತೀರಿಸಿದ್ದಾರೆ. ಈ ಉಗ್ರ ಎಲ್ಲೇ ಅಡಗಿದ್ದರೂ ಮುಗಿಸದೆ ಬಿಡುವುದಿಲ್ಲ ಎಂದು ತೊಡೆ ತಟ್ಟಿದ್ದ ಅಜಿತ್ ಧೋವಲ್ ಹೇಳಿದಂತೆ ಮಾಡಿ ತೋರಿಸಿದ್ದಾರೆ.

ಪಾಕಿಸ್ತಾನದ ಲಷ್ಕರ್ ಇ ಸಂಘಟನೆಯ ಉಗ್ರ ಅಬು ಇಸ್ಮಾಯಿಲ್ ಅಡಗಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾಪಡೆಯ ಪೊಲೀಸರು ಗುಂಡಿನ ದಾಳಿ ನಡೆಸಿ ಕೊಂದು 72 ವರ್ಜಿನ್ ಕನ್ಯೆಯರಿರುವ ಲೋಕಕ್ಕೆ ಕಳಿಸಿದ್ದಾರೆ.

ಕಳೆದ ಜುಲೈನಲ್ಲಿ ಅಮರನಾಥ್ ಯಾತ್ರಿಗಳ ಬಸ್ ಮೇಲೆ ದಾಳಿ ನಡೆದಿದ್ದು ಇದರಲ್ಲಿ 7 ಯಾತ್ರಿಗಳು ಹತರಾಗಿದ್ದರೆ, 32 ಯಾತ್ರಿಗಳು ಗಾಯಗೊಂಡಿದ್ದರು. ಅಬು
ಇಸ್ಮಾಯಿಲ್ ದಕ್ಷಿಣ ಕಾಶ್ಮೀರದಲ್ಲಿದ್ದಾನೆಂಬ ಗುಪ್ತಚರ ಇಲಾಖೆಯ ಮಾಹಿತಿಯನ್ನು ಅನುಸರಿಸಿ ಗಡಿ ಭದ್ರತಾ ಸಿಬ್ಬಂದಿ ಕಳೆದ ಜುಲೈ 12ರಿಂದಲೇ ಈತನ ಬೇಟೆಯಲ್ಲಿ ತೊಡಗಿದ್ದರು.

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಪೊಲೀಸರು ಅಬು ಇಸ್ಮಾಯಿಲ್‍ನ ಚಲನವಲನದ ಬಗ್ಗೆ ತೀವ್ರ ನಿಗಾ ಇಟ್ಟಿದ್ದರು. ಈತ ಪಾಕಿಸ್ತಾನದಲ್ಲಿದ್ದಾನೆಂಬ ಸುಳ್ಳನ್ನು ಹರಡಿಸಿ ಪೊಲೀಸರ ದಿಕ್ಕು ತಪ್ಪಿಸಲು ನೋಡಲಾಗಿತ್ತು. ಈತ ಎಲ್ಲಿಗೂ ತಪ್ಪಿಸದಂತೆ ತೀವ್ರ ನಿಗಾ ಇರಿಸಲಾಗಿತ್ತು. ಆದರೆ ಖಚಿತ ಮಾಹಿತಿಯನ್ನಾಧರಿಸಿ ದಕ್ಷಿಣ ಕಾಶ್ಮೀರದಲ್ಲಿ ತಲಾಶೆಯನ್ನಾರಂಭಿಸಿದ್ದ ಪಡೆ ಕೊನೆಗೂ ಅಬು ಇಸ್ಮಾಯಿಲ್‍ನನ್ನು ಕೊಂದು ಅಮರನಾಥ ಯಾತ್ರೆಯ ಭೀಭತ್ಸ ಕೊಲೆಗೆ ಪ್ರತೀಕಾರ ತೀರಿಸಿದ್ದಾರೆ. ಪೊಲೀಸರ ಗುಂಡಿಗೆ ಬಲಿಯಾದ ಅಬು ಇಸ್ಮಾಯಿಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ನಾಲ್ಕನೇ ಟಾಪ್ ಉಗ್ರ ಎಂದು ತಿಳಿದುಬಂದಿದೆ. ಈ ಮುಂಚೆ ಬುರ್ಹಾನ್ ವಾನಿ, ಸಬ್ಝರ್ ಭಟ್ ಮತ್ತು ಅಬು ದುಜಾನಾ ಎಂಬವರನ್ನು ರಕ್ಷಣಾ ಪಡೆಯ ಸೈನಿಕರು ಮುಂಚೆಯೇ ಹತ್ಯೆ ಮಾಡಿದ್ದರು. 30 ವರ್ಷ ವಯಸ್ಸಿನ ಇಸ್ಮಾಯಿಲ್ ಕಳೆದ 7 ವರ್ಷಗಳಿಂದ ಲಷ್ಕರ್ ಇ ತೈಬಾದಲ್ಲಿ ಸಕ್ರಿಯನಾಗಿದ್ದ. ಭಾರತದ ಮೇಲೆ ದಾಳಿ ನಡೆಸಲು ತರಬೇತಿ ನೀಡಿದ್ದ 200 ಉಗ್ರರ ಕ್ಯಾಂಪಿನಲ್ಲಿ ಓರ್ವನಾಗಿದ್ದ. ಭಾರತದ ಮೇಲೆ ದಾಳಿ ಮಾಡಲು 5-6 ಜನರ ತಂಡವನ್ನು ಈತ ಕಟ್ಟಿದ್ದ.

ಅಮರನಾಥ ಯಾತ್ರಿಗಳ ಬಸ್ ಮೇಲೆ ದಾಳಿ ನಡೆಸಿ ಒಂದಷ್ಟು ಮಂದಿಯನ್ನು ಕೊಲ್ಲಬೇಕೆಂದು ಸಾಕಷ್ಟು ಪೂರ್ವ ತಯಾರಿ ಮಾಡಿದ್ದ ಉಗ್ರ ಅಬು ಇಸ್ಮಾಯಿಲ್
ಯಾತ್ರಿಗಳ ಬಸ್‍ಗಾಗಿ ಸಾಕಷ್ಟು ಹೊಂಚು ಹಾಕಿ ಕುಳಿತಿದ್ದ. ಯಾತ್ರಿಗಳಿಗೆ ಭದ್ರತಾ ಪಡೆ ಸಾಕಷ್ಟು ರಕ್ಷಣೆ ಒದಗಿಸಿತ್ತು. ಆದರೆ ಭದ್ರತಾಪಡೆಗಳ ಕಣ್ತಪ್ಪಿಸಿದ್ದ
ಯಾತ್ರಿಗಳನ್ನು ಹೊಂದಿದ್ದ ಬಸ್ ಉಗ್ರರ ಕೈಗೆ ಸುಲಭವಾಗಿ ತುತ್ತಾಗಿತ್ತು. ಸ್ಥಳೀಯ ಪ್ರದೇಶಗಳ ಅರಿವಿದ್ದ ಸ್ಥಳೀಯ ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರರ ಜತೆ ಸೇರಿದ್ದ ಲಷ್ಕರ್ ಉಗ್ರರ ತಂಡ ದಾಳಿಗೆ ಯೋಜನೆ ರೂಪಿಸಿತ್ತು. ಮೂರು ದಿನಗಳ ನಂತರ ದಾಳಿ ನಡೆಸುವ ಯೋಜನೆ ಸಿದ್ದಪಡಿಸಿಡಲಾಗಿತ್ತು. ಹಲವರನ್ನು ಕೊಂದು ಇನ್ನೂ ಹಲವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವುದು ಉದ್ದೇಶಿತ ಯೋಜನೆಯಲ್ಲಿ ಸೇರಿತ್ತು.

ಆದರೆ ಸೋಮವಾರ ಉಗ್ರರ ಅಡಗುದಾಣಗಳ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದ ಬೆನ್ನಲ್ಲೇ ಆತ ಏಕಾಏಕಿ ದಾಳಿ ನಡೆಸಲು ಮುಂದಾದ. ಹೀಗಾಗಿ ಬಸ್
ಮೇಲೆ ದಾಳಿ ನಡೆಸಿ ಒಂದಷ್ಟು ಯಾತ್ರಿಗಳನ್ನು ಒತ್ತೆಯಾಳುಗಳನ್ನಾಗಿಟ್ಟುಕೊಳ್ಳಲು ಇಸ್ಮಾಯಿಲ್ ನಿರ್ದೇಶನ ನೀಡಿದ್ದ. ಆದರೆ ಉಗ್ರರಿಗೆ ಯಾತ್ರಿಗಳನ್ನು ಕೊಲ್ಲುವುದು ಮಾತ್ರ ಸಾಧ್ಯವಾಗಿತ್ತು. ಒತ್ತೆಯಾಳುಗಳಾಗಿಟ್ಟುಕೊಳ್ಳುವ ಯೋಜನೆ ವಿಫಲವಾಗಿತ್ತು.

-Chekitan

Tags

Related Articles

Close