ಪ್ರಚಲಿತ

ಬಂದ್‍ಗೆ ಅಧಿಕೃತವಾಗಿ ಯಾರೂ ಕರೆ ಕೊಡದಿದ್ದರೂ ಜನರೇ ಉಗ್ರ ಪ್ರತಿಭಟನೆ ನಡೆಸಲು ಕಾರಣವೇನು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಿಂದೂ ಫೈರ್ ಬ್ರಾಂಡ್ ಅನಂತ್‍ಕುಮಾರ್ ಹೆಗಡೆ!!!

ಪರೇಶ್ ಮೇಸ್ತಾನಿಗೆ ಬಂದ ಸ್ಥಿತಿ ಯಾರಿಗೂ ಬಾರದಿರಲಿ!!

ಪರೇಶ್ ಮೇಸ್ತಾನನ್ನು ಯಾವ ರೀತಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದರೆ ಅದನ್ನು ವಿವರಿಸಲೂ ಸಾಧ್ಯವಿಲ್ಲ. ಈ ಭೀಕರ ಕೊಲೆ ಹಿಂದೂಗಳ ಮನಸ್ಸನ್ನು ಜರ್ಝರಿತವನ್ನಾಗಿ ಮಾಡಿದ್ದು, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇಳಿದಿದ್ದಾರೆ. ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕಲು ಲಾಠಿಛಾರ್ಜ್ ನಡೆಸಿದರೂ, ಅಶ್ರವಾಯು ಸಿಡಿಸಿದರೂ ಕೊನೆಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದರೂ ಯಾಕೆ ಪ್ರತಿಭಟನಾಕಾರರು ಜಾಗಬಿಟ್ಟು ಕದಲಲಿಲ್ಲ? ಈ ನಡುವೆ ಸರಕಾರ ಇದು ಕೊಲೆಯಲ್ಲ ಸಾವು ಎಂದು ಷರಾ ಬರೆದರೂ ಪ್ರತಿಭಟನಾನಿರತರ ಆಕ್ರೋಶ ಮುಗಿಲುಮುಟ್ಟಲು ಕಾರಣವೇನು?

ಈ ಬಗ್ಗೆ ಹಿಂದೂ ಫೈರ್‍ಬ್ರಾಂಡ್ ಅನಂತ್ ಕುಮಾರ್ ಇಲ್ಲಿ ಸರಿಯಾಗಿ ಹೇಳಿದ್ದಾರೆ…

ಶಿರಸಿ, ಕುಮಟಾ, ಹೊನ್ನಾವರದಲ್ಲಿ ಯಾವ ಸಂಘಟನೆ ಬಂದಿಗೆ ಕರೆಕೊಟ್ಟಿದೆ? ಅಧಿಕೃತವಾಗಿ ಇಲ್ಲಿ ಯಾವ ಸಂಘಟನೆಯೂ ಬಂದ್‍ಗೆ ಕರೆ ಕೊಟ್ಟಿಲ್ಲ. ಆದರೂ ಅಲ್ಲಿ ಬಂದ್ ನಡೆದಿದೆ. ಪ್ರತಿಭಟನೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹೆಣ್ಮಕ್ಕಳು ಸೇರಿದ್ದಾರೆ. ಪೊಲೀಸರು ಲಾಠಿಛಾರ್ಜ್ ನಡೆಸುತ್ತಾರೆ, ಅಶ್ರವಾಯು ಸಿಡಿಸುತ್ತಾರೆ, ಪರಿಸ್ಥಿತಿ ಕೈ ಮೀರಿದಾಗ ಆಕಾಶದಲ್ಲಿ ಗುಂಡನ್ನೂ ಹಾರಿಸುತ್ತಾರೆ. ಆದರೂ ಪ್ರತಿಭಟನಾ ಸ್ಥಳದಿಂದ ಜನರು ಸ್ಥಳಬಿಟ್ಟು ಕದಲಲಿಲ್ಲ. ಯಾಕೆ ಈ ರೀತಿ ಆಯಿತು..?

ಇದಕ್ಕೆಲ್ಲಾ ಕಾರಣವೇನೆಂಬುವುದನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಅದರ ಸಂಪೂರ್ಣ ಪಾಠ ಇಲ್ಲಿದೆ.

ಪರೇಶ್ ಮೇಸ್ತಾನ ಭೀಕರ ಹತ್ಯೆಯನ್ನ ಮುಚ್ಚಿಹಾಕಲು ಹೊರಟ ರಾಜ್ಯ ಸರ್ಕಾರದ ವಿರುದ್ಧ ಕರುನಾಡ ಹುಲಿ ಅನಂತ್ ಕುಮಾರ್ ಹೆಗಡೆ ಆಕ್ರೋಶ…

تم النشر بواسطة ‏‎Narendra Modi fans from Karunadu‎‏ في 12 ديسمبر، 2017

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ತನ್ನ ಮುಖವನ್ನು ಕನ್ನಡಿಯಲ್ಲಿ ಒಮ್ಮೆ ನೋಡಲಿ. ಅವರದ್ದು ಮನುಷ್ಯರ ಮುಖವೋ ಅಥವಾ ರಾಕ್ಷಸರ ಮುಖವೋ ಎಂದು ಗೊತ್ತಾಗುತ್ತದೆ. ಪರೇಶ್ ಮೇಸ್ತಾನನ್ನು ಎಷ್ಟು ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದರೆ ಅದನ್ನು ವಿವರಿಸಲೂ ಸಾಧ್ಯವಿಲ್ಲ. ಆ ರೀತಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಈರೀತಿ ಚಿತ್ರಹಿಂಸೆ ನೀಡಿ ಕೊಂದಿರುವುದಕ್ಕೆ ಇಡೀ ಸಾರ್ವಜನಿಕರ ಸಾಕ್ಷಿ ಇದೆ. ಅದಕ್ಕಾಗಿಯೇ ಇಷ್ಟು ಮಂದಿ ಜನರು ಭುಗಿಲೆದ್ದಿರುವುದು.

ಯಾರೋ ಒಬ್ಬರು ತನಿಖೆ ನಡೆಸುತ್ತಾರೆ ಯಾರೋ ಒಬ್ಬರು ಅದಕ್ಕೆ ಸಾಕ್ಷಿ ಕೊಡುತ್ತಾರೆ ಎಂದರೆ ಜನಸಮುದಾಯ ಇಷ್ಟೊಂದು ಕೆರಳುವುದಿಲ್ಲ. ಅದರಲ್ಲಿಯೂ ಉತ್ತರ ಕರ್ನಾಟಕದ ಜನರು ತುಂಬಾ ಪ್ರಜ್ಞಾವಂತ, ಶಾಂತಿಪ್ರಿಯ ಜನರು. ಅಷ್ಟು ಸುಲಭದಲ್ಲಿ ಯಾರೋ ಹೇಳಿದ್ದನ್ನು ಕೇಳಿಕೊಂಡು ಪ್ರತಿಭಟನೆ ನಡೆಸುವಂತಹಾ ಜನರಲ್ಲ. ಪ್ರತಿಯೊಂದು ವಿಷಯವನ್ನೂ ತೂಗಿ ನೋಡುತ್ತಾರೆ. ಪರೇಶ್ ಮೇಸ್ತಾ ಸತ್ತಾಗ ಅಕ್ಷರಶಃ ಸುಮಾರು ಹತ್ತಾರು ಸಾವಿರ ಸಂಖ್ಯೆಯಲ್ಲಿ ಹೆಣ್ಮಕ್ಕಳೇ ಸೇರಿದ್ದಾರೆ ಎಂದರೆ ಈ ಸಾವನ್ನು ನೋಡ್ಲಿಕ್ಕೆ ಅವರಿಂದ ಸಾಧ್ಯವಾಗುತ್ತಾ ಇಲ್ಲ. ಕಣ್ಣಲ್ಲಿ ನೋಡಿರುವಂಥವರು ಬಹುತೇಕ ಇದು ಮಾನವೀಯತೆಯ ಕಗ್ಗೊಲೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮುಖ್ಯವಾಗಿ ಮಾಧ್ಯಮದ ಪತ್ರಕರ್ತರೂ ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ ಅವರೂ ಸ್ವತಃ ನೋಡಿಕೊಂಡು ಬಂದಿದ್ದಾರೆ. ವ್ಯವಸ್ಥಿತವಾಗಿ ಕೇಸನ್ನು ಮುಚ್ಚಿಹಾಕುವಂಥಾ ಪ್ರಯತ್ನ ಇದಾಗಿದೆ. ರಾಜ್ಯಸರಕಾರಕ್ಕೆ ಇದನ್ನು ಸರಿಯಾದ ರೀತಿಯಲ್ಲಿ ನ್ಯಾಯಯುತವಾಗಿ ತನಿಖೆ ನಡೆಸಲು ಮನಸ್ಸಿಲ್ಲ. ಇದನ್ನು ಮುಚ್ಚಿಹಾಕುವಂತಹಾ ಪ್ರಯತ್ನವೊಂದು ನಡೆಯುತ್ತಿದ್ದು, ಅಲ್ಪಸಂಖ್ಯಾತರ ಓಟಿನ ತುಷ್ಟೀಕರಣದ ಒಂದು ಪರಮಾವಧಿ ಇದರಲ್ಲಿ ಕಂಡು ಬರುತ್ತಾ ಇದೆ.

ಜಿಲ್ಲೆಯಾದ್ಯಾಂತ ಇಂದು ಪ್ರತಿಭಟನೆ ಕಂಡುಬರುತ್ತಾ ಇದ್ದು, ಈ ಪ್ರತಿಭಟನೆಗೆ ಯಾರೂ ಕೂಡಾ ಕರೆ ಕೊಟ್ಟಿಲ್ಲ. ಬಿಜೆಪಿ ವತಿಯಿಂದಲೂ ಕರೆಕೊಟ್ಟಿಲ್ಲ ಅಥವಾ ಯಾವುದೇ ಹಿಂದೂ ಸಂಘಟನೆಗಳೂ ಅಧಿಕೃತವಾಗಿ ಕರೆ ನೀಡಿಲ್ಲ. ಆದರೆ ಜನರು ತಾವೇ ತಾವಾಗಿ ಪ್ರತಿಭಟನೆ ನಡೆಸುತ್ತಾ ಇದ್ದಾರೆ. ಯಾಕೆಂದರೆ ಈ ಘಟನೆಯನ್ನು ನೋಡಲು ಸಾಧ್ಯವಾಗದೆ ಜನರು ಈ ರೀತಿ ಪ್ರತಿಭಟನೆ ನಡೆಸಿದ್ದಾರೆ. ಸ್ವತಃ ಮಾಧ್ಯಮದವರನ್ನೇ ಕೇಳಿದರೆ ಅವರಿಗೇ ಗೊತ್ತಾಗಿಬಿಡುತ್ತದೆ, ಅವರೇ ಪ್ರತ್ಯಕ್ಷದರ್ಶಿಗಳಾಗಿದ್ದು ಅಲ್ಲಿ ಏನು ನಡೆದಿದೆ ಎಂದು ಅವರಿಗೇ ಚೆನ್ನಾಗಿ ಗೊತ್ತಿದೆ.

ಅಲ್ಲಿನ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ನಾನು ಹೇಳುತ್ತಿಲ್ಲ, ಆದರೆ ಅಲ್ಲಿದ್ದಂತಹಾ ಕೆಲವು
ಮಂದಿ ಅಧಿಕಾರಿಗಳು ಸಂಪೂರ್ಣವಾಗಿ ಸಮಾಜಘಾತುಕ ಶಕ್ತಿಯ ಜೊತೆಗೆ ಶಾಮೀಲಾಗಿದ್ದಾರೆ. ರಾಜ್ಯಾದ್ಯಂತ ಈಗಾಗಲೇ ನಮ್ಮ ಸಂಘಟನೆಗಳು ಒಂದೇ ಧ್ವನಿಯಲ್ಲಿ ಮಾತಾಡಲು ಶುರು ಮಾಡಿವೆ. ಇದರ ಬಗ್ಗೆ ತನಿಖೆ ಆರಂಭವಾಗಬೇಕು. ಆದರೆ ನಮಗೆ ರಾಜ್ಯ ಸರಕಾರದಿಂದ ನ್ಯಾಯ ಸಿಗುತ್ತೆ ಎನ್ನುವುದು ನಂಬಿಕೆ ಇಲ್ಲ. ರಾಜ್ಯ ಸರಕಾರವಿದ್ದ ಸಂದರ್ಭ ಇದುವರೆಗೆ 19 ಮಂದಿ ಹಿಂದೂಗಳ ಕಗ್ಗೊಲೆ ನಡೆದಿತ್ತು. ಇದೀಗ ಪರೇಶ್ ಮೇಸ್ತಾನನ್ನು ಸೇರಿ ಇದು 20ನೇ ಕೊಲೆಯಾಗಿದೆ. ನಮ್ಮವರ ಬದುಕಿಗೆ ಒಂದು ಬೆಲೆ ಇಲ್ಲದಂತಾಗಿದೆ. ಈ ಕಾರಣದಿಂದ ನೇರವಾಗಿ ಕೇಂದ್ರ ಸರಕಾರದಿಂದ ತನಿಖೆ ನಡೆಸಲು ಬಯಸುತ್ತಿದ್ದು, ಆ ನಿಟ್ಟಿನಲ್ಲಿ ನಾವು ಒತ್ತಾಯ ಮಾಡುತ್ತಿದ್ದೇವೆ. ಕೇಂದ್ರ ಸರಕಾರದ ಜೊತೆಗೆ ನಾವೂ ಕೂಡಾ ಇದ್ದು ಅದರ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತೇವೆ. ಆದರೂ ಕೂಡಾ ರಾಜ್ಯ ಸರಕಾರ ಇದಕ್ಕೆ ಸ್ಪಂದಿಸಬೇಕು ಎಂದು ನನ್ನ ಮನವಿ. ರಾಜ್ಯ ಸರಕಾರಕ್ಕೆ ನ್ಯಾಯದ ಬಗ್ಗೆ ನಿಷ್ಠೆ ಇದ್ದರೆ ಸತ್ಯಯುತವಾದ ತೀರ್ಮಾನ ಕೈಗೊಂಡು ಪರೇಶ್ ಮೇಸ್ತಾನಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಜನರೇ ಈ ಸರಕಾರಕ್ಕೆ ಬುದ್ಧಿ ಕಲಿಸಲಿದ್ದಾರೆ.”

ಇದು ಹಿಂದೂ ಫೈರ್‍ಬ್ರಾಂಡ್ ಅನಂತ್ ಕುಮಾರ್ ಹೆಗಡೆ ಅವರ ಗುಡುಗು. ಪ್ರತಿಭಟನೆಗೆ ಯಾರೂ ಕೂಡಾ ಅಧಿಕೃತವಾಗಿ ಕರೆ ನೀಡದೇ ಇದ್ದರೂ ಜನರೇ ಒಗ್ಗಟ್ಟಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರೆ ಪರೇಶ್ ಮೇಸ್ತಾನ ಕೊಲೆ ಜನರ ಅಂತಸತ್ವವನ್ನು ಕಲಕಿದೆ ಎಂದೇ ಅರ್ಥ. ಜನರ ತಾಳ್ಮೆಯ ಕಟ್ಟೆಯನ್ನು ಒಡೆಯುವಂತೆ ಮಾಡಿದ ಸರಕಾರದ ವಿರುದ್ಧ ಜನರು ದಂಗೆ ಎದ್ದಿದ್ದಾರೆ.

ಈ ಹಿಂದೆ ಹಲವಾರು ದೇಶಗಳಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಿ ದುರಾಡಳಿತ ನಡೆಸುತ್ತಿದ್ದರು. ಆದರೆ ಈ ಆಡಳಿತದಿಂದ ಬೇಸತ್ತು ಜನರೆಲ್ಲಾ ದಂಗೆ ಎದ್ದು ಉಗ್ರವಾಗಿ ಪ್ರತಿಭಟನೆ ನಡೆಸಿ ಸರಕಾರವನ್ನೇ ಕಿತ್ತೆಸೆದ ಅನೇಕ ಉದಾಹರಣೆ ಇದೆ. ಅದೇ ರೀತಿ ಕರ್ನಾಟಕದ ಕಾಂಗ್ರೆಸ್ ಸರಕಾರವೂ ನಡೆದುಕೊಳ್ಳುತ್ತಿದ್ದು, ಹಿಂದೂಗಳ ಕೊಲೆಗೆ ಸ್ಪಂದನೆಯನ್ನೇ ನೀಡುತ್ತಿಲ್ಲ. ಮುಖ್ಯವಾಗಿ ಪರೇಶ್ ಮೇಸ್ತ ದಲಿತನಾಗಿದ್ದರೂ ಯಾವೊಬ್ಬ ಗಂಜಿಗಿರಾಕಿಗಳೂ ಮಾತಾಡುತ್ತಿಲ್ಲ ಎಂದರೆ ಅದರ ಅರ್ಥವೇನು ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಂಡಿದ್ದಾರೆ.

-ಚೇಕಿತಾನ

Tags

Related Articles

Close