ಪ್ರಚಲಿತ

ಬಹಿರಂಗ ಪತ್ರ…ನನಗೆ ಈಗಲೂ ಕಳೆದ ಯುಪಿಎ ಸರಕಾರದ ಮೇಲೆ ಡೌಟಿದೆ… 2ಜಿ ಹಗರಣದ ಸಾಕ್ಷ್ಯಗಳನ್ನು ಹೇಗೆ ತಿರುಚಿದ್ದೀರಿ ಸ್ವಾಮಿ?

ಇದು ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ನಮಗೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೇ ಅನುಮಾನ ಶುರುವಾಗಿದೆ. ದೇಶವನ್ನು ಲೂಟಿ ಮಾಡಿದ್ದ ಆರೋಪಿಗಳು ನಿರ್ದೋಶಿಗಳು ಎಂದು ಯಾವಾಗ ಸಿಬಿಐ ವಿಶೇಷ ಕೋರ್ಟು ತೀರ್ಪಿತ್ತಿತೋ ಅಂದೇ ನ್ಯಾಯಾಂಗದ ಮೇಲಿನ ಭರವಸೆಗಳೆಲ್ಲಾ ಹುಸಿಯಾದಂತಾಗಿದೆ. ಇಲ್ಲದೇ ಹೋಗಿದ್ದರೆ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದ್ದ ಆರೋಪಿಗಳು ನಿರ್ದೋಶಿ ಎಂದು ಸಾಬೀತಾಗುತ್ತಿದ್ದರೇ? ನನಗೆ ಇಂದಿಗೂ ಯುಪಿಎ ಸರಕಾರದ ಮೇಲೆಯೇ ಡೌಟಿದೆ. ಯಾಕೆಂದರೆ ಸಿಬಿಐ ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ತಿರುಚಿದ್ದರೂ ತಿರುಚಿರಬಹುದು…

ದೇಶಕಂಡ ಅತ್ಯಂತ ದೊಡ್ಡ ಹಗರಣವೆಂದೇ ಸಾಬೀತಾಗಿದ್ದ 2ಜಿ ಹಗರಣದ ಅಲ್ಲಾ ಆರೋಪಿಗಳನ್ನೂ ಸಿಬಿಐ ವಿಶೇಷ ನ್ಯಾಯಾಲು ದೋಷಮುಕ್ತಗೊಳಿಸಿದೆ ಎಂದರೆ ಏನರ್ಥ? ಸಿಐಜಿ ತನಿಖೆಯಲ್ಲಿ ನಡೆದಿರುವುದು ಸಾಬೀತಾಗಿದ್ದರೂ ಸಿಬಿಐ ತನಿಖೆಯಲ್ಲಿ ಆರೋಪ ಸಾಬೀತುಪಡಿಸಲು ವಿಫಲವಾಗಿರುವುದು ಯಾಕೆ ಎನ್ನುವ ಪ್ರಶ್ನೆ ನನ್ನಂಥಾ ಅನೇಕ ಭಾರತೀಯರಲ್ಲಿ ಬೃಹದಾಕಾರವಾಗಿ ಕಾಡುತ್ತದೆ. ಒಂದು ಪ್ರಕರಣದಲ್ಲಿ ಆರೋಪ ಕೇಳಿ ಬಂದರೆ ಅದಕ್ಕೆ ಸೂಕ್ತ ದಾಖಲೆ, ಸಾಕ್ಷಿಯನ್ನು ಒದಗಿಸುವುದು ತನಿಖೆ ನಡೆಸುವ ಅಧಿಕಾರಿಗಳ ಕೆಲಸ. ಹಾಗಾದರೆ ಈ ಪ್ರಕರಣದಲ್ಲಿ ನಡೆದಿರುವುದಾದರೂ ಏನು ಸ್ವಾಮೀ?

ಒಂದು ವೇಳೆ ತನಿಖಾಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದೇ ಆದರೆ ಇಂದು ಆರೋಪಿಗಳೆಲ್ಲಾ ಜೈಲಿಗೆ ಹೋಗಿ ಮುದ್ದೆಮೆಲ್ಲುತ್ತಿದ್ದರು. ಆದರೆ ಈ ಹಗರಣದಲ್ಲಿ ಮಾತ್ರ ಸಾಧ್ಯವಾಗಲಿಲ್ಲವೇ ಯಾಕೆ ಹೀಗಾಯಿತು…? ನನಗೊಂದು ಅನುಮಾನವಿದೆ. ಯಾಕೆಂದರೆ ಈ ಹಗರಣ ನಡೆದಿರುವುದು ಯುಪಿಎ ಅವಧಿಯಲ್ಲಿ.. ಯುಪಿಎ ಅವಧಿಯಲ್ಲೇ ಈ ಪ್ರಕರಣದ ತನಿಖೆಯನ್ನು ಸಿಬಿಐ ವಿಶೇಷ ಕೋರ್ಟು ಆರಂಭಿಸಿತ್ತು. ಯುಪಿಎ ಸರಕಾರ ತನಿಖೆಯ ಮೇಲೆ ಪ್ರಭಾವ ಬೀರಿರುವುದರಿಂದ ಇಂದು ಆರೋಪಿಗಳಾದ ಖನಿಮೋಳಿ, ಎ. ರಾಜಾ ಸೇರಿ ಜೈಲಾತಿಥ್ಯದಿಂದ ಮಿಸ್ ಆಗಿದ್ದಾರೆ. ತನ್ನದೇ ಸರಕಾರ ಇರುವಾಗ ತನಿಖೆಯ ಮೇಲೆ ಪ್ರಭಾವ ಬೀರದೇ ಇರುತ್ತದೆಯೇ? ಛೇ ಹೀಗಾಗಬಾರದಿತ್ತು.

2007-08ನೇ ಸಾಲಿನಲ್ಲಿ 2ಜಿ ತರಂಗಾಂತರ ಹಂಚಿಕೆ ಸಂದರ್ಭದಲ್ಲಿ ಈ ಹಗರಣ ನಡೆದಿತ್ತು. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ 1 ಲಕ್ಷದ 76 ಸಾವಿರ ಕೋಟಿ ನಷ್ಟವುಂಟಾಗಿತ್ತು ಎಂದು ಸಿಎಜಿ ತಮ್ಮ ವರದಿಯಲ್ಲಿ ತಿಳಿಸಿದ್ದರು. ಇದರ ಜಾಡು ಹಿಡಿದು ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು 2011ರಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಹಾಗೂ ಕನಿಮೊಳಿ ಸೇರಿದಂತೆ 19 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದರು. ಸಿಐಜಿ ತನ್ನ ತನಿಖೆಯಲ್ಲಿ ಆರೋಪ ಸಾಬೀತುಪಡಿಸಿದ್ದರೂ ಸಿಬಿಐ ವಿಶೇಷ ಕೋರ್ಟು ಸರಿಯಾದ ಸಾಕ್ಷಿಗಳನ್ನು ಒದಗಿಸುವಲ್ಲಿ ವಿಫಲರಾಗಿರುವುದರಿಂದಲೇ ಆರೋಪಿಗಳು ಇಂದು ಜೈಲಿಗೆ ಹೋಗುವುದರಿಂದ ಮಿಸ್ ಆಗಿದ್ದಾರೆ.

ಈ ಬೃಹತ್ ಹಗರಣ ಜನರನ್ನು ಖಂಡಿತಾ ತಪ್ಪು ದಾರಿಗೆ ಎಳೆಯಲಿದೆ ಯಾಕೆಂದರೆ ಎಷ್ಟು ಕೋಟಿ ಹಗರಣ ಮಾಡಿದರೂ ಸಾಕ್ಷಿ ನಾಶ ಮಾಡಿದರೆ ಎಷ್ಟು ಬೇಕಾದರೂ ಹಗರಣ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. ಇದೇ ಕಾರಣದಿಂದಲೇ ನನಗೆ ಈ ದೇಶದ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಿದೆ. ನನಗೆ ಈಗಲೂ ಕಳೆದ ಯುಪಿಎ ಸರಕಾರದ ಅವಧಿಯ ರಾಜಕಾರಣಿಗಳ ಮೇಲೆ ಡೌಟಿದೆ.

ನಿಮಗೆ ನೆನಪಿದಿಯೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ನನಗಂತೂ ಇನ್ನೂ ಸ್ಪಷ್ಟವಾಗಿ ನೆನಪಿದೆ. ಈ ವರದಿಯನ್ನು ನಾನು ರಿಪಬ್ಲಿಕ್ ಟಿ.ವಿಯಲ್ಲಿ ನೋಡಿದ್ದೆ. ನಾನು ಆವಾಗಲೇ 2ಜಿ ಹಗರಣದ ಕಥೆ ಏನಾಗಬಹುದು ಎಂದು ಅಂದೇ ನಿರ್ಣಯಿಸಿದ್ದೆ.

ಯಾಕೆಂದರೆ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಹನ್ನೊಂದು ಮಹಾ ಹಗರಣಗಳ ಬಗ್ಗೆ ಮಾಜಿ ಮಹಾಲೇಖಪಾಲರಾದ ಆರ್.ಬಿ. ಸಿಂಗ್ ಅವರು (ಸಿಎಜಿ) ರಿಪಬ್ಲಿಕ್ ಟಿ.ವಿ. ಜೊತೆ ಮಾತಾಡಿ ಬಹಿರಂಗಪಡಿಸಿದ್ದರು. ಅವರ ಪ್ರಕಾರ 2ಜಿಗಿಂತಲೂ ಇನ್ನೂ ಹನ್ನೊಂದು ಹಗರಣಗಳನ್ನು ಮುಚ್ಚಿಹಾಕಲಾಗಿದೆ ಎಂದು ಬಹಿರಂಗಪಡಿಸಿದ್ದರು. ಈ ರೀತಿ ಸೋನಿಯಾ ಗಾಂಧಿ ಸರಕಾರ ಹನ್ನೊಂದು ಹಗರಣಗಳನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದೆ ಎಂದು ಅವರು ವಿವರಿಸಿದ್ದರು.

ಆರ್.ಬಿ. ಸಿನ್ಹಾ ಅವರು ಯುಪಿಎ ಸರಕಾರದ ಅವಧಿಯಲ್ಲಿ ನಡೆದ 11 ಹಗರಗಳ ಬಗ್ಗೆ ಸಿಎಜಿ ಆಡಳಿತ ಮಂಡಳಿಗೆ ವರದಿ ಸಲ್ಲಿಸಿದ್ದರು. ಆದರೆ ಈ ವರದಿ ಬಹಿರಂಗಗೊಳ್ಳದಂತೆ ಮನಮೋಹನ್ ಸಿಂಗ್ ಸರಕಾರ ಪ್ರಭಾವ ಬೀರಿದೆ. ಆದರೆ ಈ ಹಗರಣಗಳನ್ನು ಬಹಿರಂಗಪಡಿಸಲು ಇದು ಸೂಕ್ತ ಸಮಯವಲ್ಲ ಎಂದು ವಿವರಿಸಿದ್ದರು. ಯುಪಿಎ ಸರಕಾರ 2014ರ ಚುನಾವಣೆಯ ಅವಧಿಯಲ್ಲಿ ಚುನಾವಣೆಯ ಮೇಲೆ ಪ್ರಭಾವ ಬೀಳಬಹುದೆಂದು ಈ ವರದಿಯ ಉಲ್ಲೇಖಿತ ಅಂಶಗಳನ್ನು ಬಹಿರಂಗವಾಗದಂತೆ ಮುಚ್ಚಿ ಹಾಕಿದೆ ಎಂದು ವಿವರಿಸಿದ್ದರು.

2ಜಿ ಹಗರಣದ ಬಗ್ಗೆಯೂ ಬೆಳಕು ಚೆಲ್ಲಿದ್ದ ಆರ್. ಸಿನ್ಹಾ ಅವರು, 2ಜಿ ಹಗರಣದ ಬಗ್ಗೆ ಪ್ರಧಾನಿ ಕಾರ್ಯಾಲಯದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದರು. ಅಲ್ಲದೆ ಯುಪಿಎ ಸರಕಾರವಿದ್ದ ಸಂದರ್ಭದ 11 ಹಗರಣಗಳ ಬಗ್ಗೆ ವರದಿ ಮಂಡಿಸಿದ್ದರೂ ಸಹ ವರದಿ ಸಲ್ಲಿಕೆಯಾಗದಂತೆ ಯುಪಿಎ ಸರಕಾರ ಪ್ರಭಾವ ಬೀರಿದೆ. ವಂಚನೆ ಮತ್ತು ಅಕ್ರಮ ಸಂಪಾದನೆಯ ಬಗ್ಗೆ ಸುಳಿವು ಸಿಗದಂತೆ ಮಾಡಲಾಗಿದೆ ಎಂದು ಅವರು ಗಂಭೀರ ಆರೋಪವನ್ನು ಮಾಡಿದ್ದರು.

ಸಿಬಿಐ ಅಧಿಕಾರಿಗಳು ವರದಿ ಸಲ್ಲಿಸಿದ್ದರೂ ತನ್ನ ವರದಿಯ ಮೇಲೆ ಯುಪಿಎ ಸರಕಾರ ಪ್ರಭಾವ ಬೀರಿದ್ದು, ಅದನ್ನು ಸಿಎಜಿ ಕಚೇರಿಯಲ್ಲಿ ವಂಚನೆಯ ಮೂಲಕ ವರ ತಿರುಚಲಾಗಿದ್ದು, ಕೆಲವೊಂದು ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಲ್ಲದೆ ಕೆಲವೊಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಮಾಜಿ ಸಿಎಜಿ ಶಶಿಕಾಂತ್ ಶರ್ಮಾ ಅವರು ಒಳ್ಳೆಯ ಸ್ವಭಾವದವರಗಿದ್ದು, ಶರ್ಮಾ ಅವರಿಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಿಎಜಿ ಮೇಲೆ ಪ್ರತಿಬಾರಿಯೂ ರಾಜಕೀಯ ಪ್ರಭಾವ, ಒತ್ತಡ ಹೇರಲಾಗುತ್ತಿತ್ತು ಎಂದಿದ್ದರು.

ಆರ್.ಬಿ. ಸಿನ್ಹಾ ಅವರು ಆಡಿಟ್ ವರದಿಗಳ ಮೇಲೆ ಪ್ರಮುಖ ಪಾತ್ರವಹಿಸಿದ್ದರು. 2010ರ ಯುಪಿಎ ಅವಧಿಯಲ್ಲಿ 2ಜಿ ಹಗರಣದ ಮೊತ್ತ 1.76 ಲಕ್ಷ ಕೋಟಿ ರೂ ಅಂದಾಜಿಸಿ ಮಾಹಿತಿ ನೀಡಿದದವರೂ ಕೂಡಾ ಆರ್.ಬಿ ಸಿನ್ಹಾ ಅವರೇ. ತನ್ನ ಅಧಿಕಾರವಧಿ ಮುಕ್ತಾಯದ ನಂತರ ಸಿನ್ಹಾ ಅವರ ಹುದ್ದೆಯನ್ನು ಮೀರಾ ಸ್ವರೂಪ್ ತೆಗೆದುಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಸಿಬಿಐ ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಯುಪಿಎ ಅವಧಿಯಲ್ಲಿ ತಿರುಚದೇ ಇರುತ್ತದೆಯೇ.. ಆದ್ದರಿಂದಲೇ ಇಂದು ಆರೋಪಿಗಳೆಲ್ಲಾ ಹೊರಬರುವಂತಾಗಿದೆ.

2ಜಿ ಹಗರಣದ ಕಥೆ ಈ ರೀತಿಯಾದರೆ ಏರ್ಸೆಲ್ ಮ್ಯಾಕ್ಸಿಸ್ ಭ್ರಷ್ಟಾಚಾರ ಹಗರಣದ ಕೃಎ ಏನು ಸ್ವಾಮಿ? ಯಾಕೆಂದರೆ ಈ ಹಗರಣದಲ್ಲಿ ಬರೋಬ್ಬರಿ ಆರು ಲಕ್ಷ ಕೋಟಿ ರೂ ಖೋತಾ ಆಗಿದೆ. ಈ ಹಗರಣದ ಆರೋಪಿಗಳಾದ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಯಾವ ರೀತಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ನಮಗೆಲ್ಲಾ ತಿಳಿದೇ ಇದೆ. ಇವರಿಬ್ಬರ ಬಳಿ ಹೊರದೇಶದಲ್ಲಿ ಬರೋಬ್ಬರಿ 21 ಸೀಕ್ರೆಟ್ ಬ್ಯಾಂಕ್ ಖಾತೆ ಇದ್ದು ಅದರಲ್ಲಿ ಕೋಟಿಗಟ್ಟಲೆ ದುಡ್ಡು ಕೂಡಿಟ್ಟಿದ್ದಾರೆ. ಇವರಿಬ್ಬರಿಗೆ ತನಿಖೆಗೆ ಆಗಮಿಸುವಂತೆ ಸಮನ್ಸ್ ನೀಡುತ್ತಿದ್ದರೂ ಏನಾದರೊಂದು ನೆಪ ಹೇಳಿ ತಪ್ಪಿಸುತ್ತಲೇ ಇದ್ದು, ಆರೋಪಗಳಿಂದ ಮುಕ್ತವಾಗಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ. ಒಂದು ವೇಳೆ ಇವರು ಎಲ್ಲಾ ಸಾಕ್ಷಿಗಳನ್ನು ನಾಶಪಡಿಸಿದರೆ ಇವರು ಕೂಡಾ ಕೋಟಿಗಟ್ಟಲೆ ಹಣವನ್ನು ನುಂಗಿ ನೀರು ಕುಡಿದು ಆರಾಮವಾಗಿ ತಿರುಗಾಡುತ್ತಾ ಇರುತ್ತಾರೆ.

ಯಾಕೋ ಏನೋ ಭಾರತದ ಕಾನೂನು ಹಣವಂತರಿಗೆ ಮಾತ್ರ ಎನ್ನುವುದು ಈ ತೀರ್ಪು ಬಹಿರಂಗಪಡಿಸಿದೆ. ಒಬ್ಬ ಬಡ ಕಳ್ಳ ಅಡಿಕೆ ಕದ್ದರೂ ಅವನನ್ನು ಜೈಲಿಗೆ ಹಾಕಿ ಅವನ ಸೊಂಟ ಮುರಿದು ಅವನನ್ನು ಜೀವಮಾನವಿಡೀ ಜೈಲಲ್ಲೇ ಕೊಳೆಯುವಂತೆ ಮಾಡುತ್ತಾರೆ. ಆದರೆ ಇಡೀ ದೇಶವನ್ನೇ ಲೂಟಿ ಹೊಡೆದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಛೆ ಭಾರತದ ಕಾನೂನು ಹಣವಂತರಿಗಷ್ಟೇ ಮೀಸಲು ಎನ್ನುವುದನ್ನು ಈ ತೀರ್ಪು ಸಾಬೀತುಪಡಿಸಿದೆ.

ಒಂದು ವೇಳೆ ದೇಶದ ದೊಡ್ಡದೊಡ್ಡ ದರೋಡೆಕೋರರೆಲ್ಲಾ ಈ ರೀತಿ ಜೈಲಿನಿಂದ ಹೊರಬಿದ್ದರೆ ಏನಾಗಬಹುದು ಎಂಬ ಅರಿವಿದೆಯೇ? ಇದು ಹೀಗೆಯೇ ಮುಂದುವರಿದರೆ ಜನರೆಲ್ಲಾ ದಂಗೆ ಏಳಬಹುದಾದ ಕಾಲ ದೂರವಿಲ್ಲ. ಬಡವರು ಚಿಕ್ಕ ತಪ್ಪು ಮಾಡಿದರೂ ಅದೊಂದು ದೊಡ್ಡ ವಿಷಯ. ಆದರೆ ಕೋಟಿಗಟ್ಟಲೆ ಲೂಟಿ ಮಾಡಿದವರು ನಿರ್ದೋಶಿಗಳಾಗಿ ರಾಜಾರೋಷವಾಗಿ ತಿರುಗುತ್ತಾರೆ. ಇದೇ ರೀತಿ ಮುಂದುವರಿದರೆ ಈ ದೇಶದ ಕಾನೂನಿನ ಬಗ್ಗೆ ಜನರಿಗೆ ನಂಬಿಕೆ ಕಳೆದುಕೊಂಡು ಈ ದೇಶದಲ್ಲಿ ಕ್ರಾಂತಿ ಏಳಬಹುದು. ಒಂದು ವೇಳೆ ಇಂಥಾ ಕ್ರಾಂತಿ ಎದ್ದರೆ ಅದನ್ನು ಶಮನಗೊಳಿಸಲು ಯಾರಿಂದಲೂ ಸಾಧ್ಯವಾಗದೇ ಇರದು. ಆದ್ದರಿಂದ ತಪ್ಪು ಯಾರೇ ಮಾಡಿದರೂ ಅವರ ಮೇಲೆ ಅನುಕಂಪ ತೋರದೆ, ಸಾಕ್ಷಿಗಳನ್ನು ತಿರುಚದಂತೆ ನೋಡಿಕೊಂಡು ನೈಜ ಅಪರಾಧಿಗಳನ್ನು ಜೈಲಿಗಟ್ಟಿ ಎನ್ನುವುದು ನನ್ನ ವಿನಂತಿಯಾಗಿದೆ.

2ಜಿ ಹಗರಣದ ಆರೋಪಿಗಳನ್ನು ಹಾಗೆಯೇ ಸುಮ್ಮನೆ ಬಿಡುವುದು ಬೇಡ. ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಆರೋಪಿಗಳ ವಿರುದ್ಧದ ಪ್ರಬಲ ಸಾಕ್ಷಿಗಳನ್ನು ಸಂಗ್ರಹಿಸಿ ಜೈಲಾಗುವಂತೆ ಮಾಡಿ. ಆರೋಪಿಗಳು ಯಾವ ಕಾರಣಕ್ಕೂ ಹೊರಬರಬಾರದು. ಈ ಹಗರಣದ ಮಾಸ್ಟರ್ ಮೈಂಡ್ ಯಾರೆಂದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಆ ಮಾಸ್ಟರ್‍ಮೈಂಡ್ ಶಿಕ್ಷೆ ಅನುಭವಿಸುವುದನ್ನು ನಾನು ನನ್ನ ಕಣ್ಣಾರೆ ನೋಡಬೇಕು…

ಮುಂದಿನ ಪತ್ರದೊಂದಿಗೆ ಸಿಗುತ್ತೇನೆ… ಇತೀ ನಿಮ್ಮ ವಿಶ್ವಾಸಿ

ಕೆ. ಎಸ್. ಮನೋಜ್ ಶೆಣೈ, ಮಂಗಳೂರು

Tags

Related Articles

Close