ಪ್ರಚಲಿತ

ಬಿಗ್ ಬಜೆಟ್!! ಪ್ರತ್ಯೇಕಗೊಂಡ ರೈಲ್ವೆ ಬಜೆಟ್‍ಗೆ ಜೇಟ್ಲಿಯಿಂದ ಭರಪೂರ ಘೋಷಣೆ!!

2014ರ ನಂತರ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತದ ಆರ್ಥಿಕತೆ ಸುಧಾರಿಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದು, ವಿಶ್ವಸಂಸ್ಥೆ ಯ ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಜಿಗಿದು ಭಾರತ 100ನೇ ಸ್ಥಾನವನ್ನು ಪಡೆದಿದೆ ಎಂದು ಹೇಳಿದ್ದಾರೆ. ಆದರೆ 2017ರ ಸೆಪ್ಟೆಂಬರ್ ನಲ್ಲಿ ಬುಲೆಟ್ ಟ್ರೈನ್ ಗಾಗಿ ಅಡಿಗಲ್ಲು ಹಾಕಲಾಗಿರುವ ಬಗ್ಗೆ ಪ್ರಸ್ತಾಪಿಸಿರುವ ಜೇಟ್ಲಿ ರೈಲ್ವೇ ವಿಚಾರವಾಗಿ ವಿಸ್ಕøತ ವರದಿಯನ್ನು ಇದೀಗ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2018-19ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆರಂಭವಾಗಿದ್ದು, ಪ್ರಸಕ್ತ ವರ್ಷದ ಎಂಟು ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷದ ಲೋಕಸಭೆ ಚುನಾವಣೆಗಳನ್ನು ಎದುರು ನೋಡುತ್ತಿರುವ ಕೇಂದ್ರ ಸರ್ಕಾರ ಇಂದು ಬಜೆಟ್ ಮಂಡಿಸಿದೆ. ಹಿಂದಿ ಭಾಷೆಯ ಬದಲು ಆಂಗ್ಲ ಮತ್ತು ಹಿಂದಿ ಮಿಶ್ರ ಭಾಷೆಯಲ್ಲಿ ಬಜೆಟ್ ಮಂಡನೆ ಆರಂಭಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತ ಸದ್ಯದಲ್ಲಿಯೇ ಆರ್ಥಿಕವಾಗಿ 5ನೇ ಅತ್ಯಂತ ಸುಭದ್ರ ರಾಷ್ಟ್ರವಾಗಲಿದೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೇ, ಬಜೆಟ್ ಪ್ರಮಾಣ 19 ಪಟ್ಟು ಹೆಚ್ಚಿದೆ, ಆರ್ಥಿಕತೆ 9 ಪಟ್ಟು ಮತ್ತು ಆದಾಯ 5 ಪಟ್ಟು ಹೆಚ್ಚಿದೆ ಎಂದೂ ತಿಳಿಸಿದ್ದಾರೆ.

ದೇಶಕ್ಕೆ ಹೆಚ್ಚಿನ ಆದಾಯ ನೀಡುವ ರೈಲ್ವೆ ವಿಚಾರವಾಗಿ ಬಜೆಟ್ ಮಂಡಿಸಿರುವ ಹಣಕಾಸು ಸಚಿವರು, 2017ರ ಸೆಪ್ಟೆಂಬರ್ ನಲ್ಲಿ ಬುಲೆಟ್ ಟ್ರೈನ್ ಗಾಗಿ ಅಡಿಗಲ್ಲು ಹಾಕಲಾಗಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆಯೇ, ಹೈಸ್ಪೀಟ್ ರೈಲು ಯೋಜನೆಗಳಿಗಾಗಿ ತರಬೇತಿ ನೀಡಲು ಬರೋಡಾದಲ್ಲಿ ಸಂಸ್ಥೆ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, 160 ಕಿ.ಮೀ. ಉದ್ದದ ಬೆಂಗಳೂರು ಸಬರ್ಬನ್ ಯೋಜನೆಗಾಗಿ 17 ಸಾವಿರ ಕೋಟಿ ರೂಪಾಯಿ ನಿಯೋಜನೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಹವಾಯಿ ಚಪ್ಪಲಿ ಧರಿಸುವವರು ಕೂಡ ಹವಾಯಿ ಜಹಾಜ್ (ವಿಮಾನದಲ್ಲಿ) ಹೋಗುವಂತಾಗಿದೆ ಎಂದು ಹೇಳಿರುವ ಇವರು ಪ್ರತಿದಿನ 25 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆಯೂ ತಮ್ಮ ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ. ಎಲ್ಲ ನಿಲ್ದಾಣಗಳಲ್ಲಿ ವೈಫೈ, ಸಿಸಿಟಿವಿ ಅಳವಡಿಸಲಾಗುವ ಬಗ್ಗೆಯೂ ಪ್ರಸ್ತಾಪಿಸಿರುವ ಹಣಕಾಸು ಸಚಿವರು, ಮುಂಬೈ ರೈಲು ಸಂಪರ್ಕವನ್ನು 11 ಕೋಟಿ ರೂಪಾಯಿ ಯೋಜನೆಯಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದೂ ತಮ್ಮ ಬಜೆಟ್ ನಲ್ಲಿ ಮಂಡಿಸಿದ್ದಾರೆ.

 

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 99 ನಗರಗಳನ್ನು ಆಯ್ಕೆ ಮಾಡಲಾಗಿದ್ದು, 2.04 ಲಕ್ಷ ಕೋಟಿ ರೂಪಾಯಿ ಅನುದಾನ ನಿಗದಿ ಪಡಿಸಲಾಗಿರುವ ಕೇಂದ್ರ ಬಜೆಟ್ ನಲ್ಲಿ ಸುಮಾರು 600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿದ್ದು, ಟೆಕ್ಸ್‍ಟೈಲ್ ಉದ್ಯಮಕ್ಕೆ 7148 ಕೋಟಿ ರೂಪಾಯಿ ಕೊಡುಗೆ ನೀಡಿದೆ.

ಬಡವರಿಂದ ಹಿಡಿದು ಶ್ರೀಮಂತ ಜನರ ಅಪಾರ ನಿರೀಕ್ಷೆಗಳ ಮೂಟೆಯನ್ನು ಹೊತ್ತುಕೊಂಡು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು 2018-19ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭಿಸಿದ್ದು, ರೈಲ್ವೆ ವಿಚಾರವಾಗಿ ಹೆಚ್ಚಿನ ಸವಲತ್ತುಗಳನ್ನು ನೀಡುವುದರ ಜೊತೆಗೆ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಿರುವುದು ವಿಶೇಷವಾಗಿದೆ!!

  • ಅಲೋಖಾ
Tags

Related Articles

Close