ಪ್ರಚಲಿತ

ಬಿಗ್ ಬ್ರೇಕಿಂಗ್: ಕೇರಳದಲ್ಲಿ ನೆತ್ತರು ಹರಿಸಿದ ಹಂತಕರ ಬಂಧನ… ಮತ್ತೆ ಬಯಲಾಯಿತು ಈ ಸಂಘಟನೆಯ ಕರಾಳ ಮುಖ! ಕೆಂಪು-ಹಸಿರಿನ ಮಧ್ಯೆ ಬಡವಾಯಿತೇ ಕೇಸರಿ.!!

ಕೇರಳ… ದೇವರ ನಾಡು ಎಂದೇ ಖ್ಯಾತಿ ಪಡೆದಿದ್ದ ನಾಡು. ಅದೆಷ್ಟೋ ದೇವತೆಗಳ ತವರು ಕೇರಳ. ಶಬರಿ ಮಲೆ ಸಹಿತ ಅನೇಕ ದೇವಸ್ಥಾನಗಳನ್ನು ಪಡೆದಿರುವ ಈ ರಾಜ್ಯವನ್ನು ಜಗತ್ತೇ ಒಮ್ಮೆ ತಿರುಗಿ ನೋಡುತ್ತದೆ. ಆದರೆ ಆ ರಾಜ್ಯದಲ್ಲಿ ನಡೆಯುವ ರಕ್ತ ಪಾತ ಮಾತ್ರ ಇಂದಿಗೂ ಅನೇಕ ಸಮಸ್ಯೆಗಳಿಗೆ ಆಗರವಾಗಿದೆ. ದೇವರ ನಾಡಿನಲ್ಲಿ ಶ್ರಧ್ಧಾ ಭಕ್ತಿಯಿಂದ ದೇವರ ಸ್ಮರಣೆ ಮಾಡಿ, ಭಯ ಭಕ್ತಿಯಿಂದ ಇರಬೇಕಾಗಿದ್ದ ಅಲ್ಲಿನ ಜನರು ದಿನ ನಿತ್ಯ ಚೆಲ್ಲುತ್ತಿರುವ ರಕ್ತಕ್ಕೆ ಕಂಗಾಲಾಗಿ ಹೋಗಿದ್ದಾರೆ.

ದೇವರ ನಾಡಿನಲ್ಲಿ ಚೆಲ್ಲುತ್ತಲೇ ಇದೆ ರಕ್ತ…

ನಾವು ಇಲ್ಲಿ ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹರಿಸುತ್ತಿರುವ ಹಿಂದೂಗಳ ರಕ್ತವನ್ನು ಕಂಡು ಬೆಚ್ಚಿ ಬಿದ್ದಿದ್ದರೆ ಅಲ್ಲಿ ಕೇರಳದಲ್ಲಿ ಕೆಂಪು ಧ್ವಜ ಹಿಡಿದು ಕಮ್ಯುನಿಸ್ಟರು ಹಾಗೂ ಹಸಿರು ಧ್ವಜ ಹಿಡಿದು ಮುಸಲ್ಮಾನ ಉಗ್ರರು ನಡೆಸುತ್ತಿರುವ ದೌರ್ಜನ್ಯವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಕೇರಳ ಎಂಬ ರಾಜ್ಯದಲ್ಲಿ ಕೊ
ಲೆಗಡುಕರ ಅಟ್ಟಹಾಸ ಮುಗಿಲು ಮುಟ್ಟಿದೆ. ಅಲ್ಲಿ ಕೇವಲ ಮುಸಲ್ಮಾನರ ಉಗ್ರ ಚಟುವಟಿಕೆಗಳು ಮಾತ್ರವಲ್ಲದೆ ಕಮ್ಯುನಿಸ್ಟ್ ಪ್ರೇರಿತ ನರ ಹಂತಕರ ಉಗ್ರ ಚಟುವಟಿಕೆಗಳೂ ಹೆಚ್ಚಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣ ವೇಷ ಧರಿಸಿಕೊಂಡು ಬಂದರೆ ಸಾಕು ಅವರನ್ನು ಹತ್ಯೆ ಮಾಡುವಷ್ಟು ಕ್ರೂರತನ ಕೇರಳದಲ್ಲಿ ಮಾಮೂಲಾಗಿ ಬಿಟ್ಟಿದೆ.

ಕೇಸರೀ ಶಲ್ಯ ಧರಿಸಿ, ಕುಂಕುಮ ಧಾರಣೆ ಮಾಡಿ ಜೈ ಶ್ರೀ ರಾಮ್ ಅಲ್ಲಿಗೆ ಅವರ ಕಥೆ ಮುಗಿಯಿತು ಅಂತಾನೆ ಅರ್ಥ. ಎಡಪಂಥೀಯರು, ಕೆಎಫ್‍ಡಿ, ಪಿಎಫ್‍ಐ ಉಗ್ರರು ಅವರನ್ನು ಕೊಚ್ಚಿಕೊಲೆ ಮಾಡಿ ಬಿಡುತ್ತಾರೆ. ದೇವರ ನಾಡಿನಲ್ಲಿ ಧರ್ಮ ರಕ್ಷಣೆಗೆ ನೆಲನೇ ಇಲ್ಲ ಎಂಬ ಪರಿಸ್ಥಿತಿ ಕೇರಳದಲ್ಲಿ ನಿರ್ಮಾಣವಾಗಿದೆ.

ಮತ್ತೆ ಹರಿಯಿತು ನೆತ್ತರು-ಎಬಿವಿಪಿ ಕಾರ್ಯಕರ್ತನ ಕೊಂದೇ ಬಿಟ್ಟರು…

ನೋಡ ನೋಡುತ್ತಲೇ ಕೇರಳದಲ್ಲಿ ಮತ್ತೆ ರಕ್ತ ಬೀಜಾಸುರರ ಅಟ್ಟಹಾಸ ತಾಂಡವವಾಡುತ್ತಿದೆ. ಹಿಂದೂಗಳನ್ನು ಹತ್ಯೆ ಮಾಡುವ ಅಲ್ಲಿನ ನೀಚ ಸಂಸ್ಕøತಿ ಈಗ ಮತ್ತೆ ಆರಂಭವಾಗಿದೆ. ಕೆಲ ಕಾಲ ಶಾಂತವಾಗಿದ್ದ ಕೇರಳ ಇಂದು ಮತ್ತೆ ತನ್ನ ಉಗ್ರ ರೂಪವನ್ನು ಪಡೆದುಕೊಂಡಿದೆ.

ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತ ದೀಪರ್ ರಾವ್ ಹತ್ಯೆ ಪ್ರಕರಣ ಜನಮಾನಸದಿಂದ ಮರೆಮಾಚುವ ಮುನ್ನವೇ ಕೇರಳದಲ್ಲಿ ಮತ್ತೊಬ್ಬ ಹಿಂದೂವನ್ನು ಹತ್ಯೆ ಮಾಡಲಾಗಿದ್ದು, ಹಿಂದೂಗಳ ವಿರುದ್ಧದ ಮನಸ್ಸುಗಳ ಅಸ್ತಿತ್ವ ಢಾಳಾಗಿದೆ. ಅಲ್ಲದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಇಸ್ಲಾಮಿಕ್ ಮೂಲಭೂತವಾದಿಗಳೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೌದು, ಕಣ್ಣೂರು ಜಿಲ್ಲೆಯ ಪೆರವೂರ್ ಎಂಬಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತ ಶಾಮ್ ಪ್ರಸಾದ್ ಎಂಬುವವರ ಮೇಲೆ ಮೂವರು ಮುಸುಕುಧಾರಿಗಳು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಮ್ಮೇರಿ ಗೋಟ್ ಫಾರ್ಮ್ ಬಳಿ ಶ್ಯಾಮ್ ಪ್ರಸಾದ್ ಬೈಕ್ ಮೇಲೆ ತೆರಳುತ್ತಿರುವಾಗ ಮೂವರು ಮುಸುಕುಧಾರಿಗಳು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡರೂ ತಪ್ಪಿಸಿಕೊಳ್ಳಲು ಯತ್ನಿಸಿದ ಶ್ಯಾಮ್, ಯಾವುದೋ ಮನೆಗೆ ನುಗ್ಗಿದ್ದಾರೆ. ಇಷ್ಟಾದರೂ ಸುಮ್ಮನಿರದ ದುಷ್ಕರ್ಮಿಗಳು ಬೆನ್ನತ್ತಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಶ್ಯಾಮ್ ಪ್ರಸಾದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟರು ಎಂದು ಮೂಲಗಳಿಂದ ತಿಳಿದುಬಂದಿದೆ.

ಪೆರವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, “ಪ್ರಾಥಮಿಕ ವರದಿಯ ಆಧಾರದಂತೆ ಹತ್ಯೆಯ ಹಿಂದೆ ಪಿಎಫ್ಐನ ಇಸ್ಲಾಮಿಕ್ ಭಯೋತ್ಪಾದಕರ ಕೈವಾಡ ಇರಬಹುದು” ಎಂದು ಎಬಿವಿಪಿ ಟ್ವೀಟ್ ಮಾಡಿದೆ.

ಒಟ್ಟಿನಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಹಿಂದೂಗಳ ಹತ್ಯಾ ಕೇಂದ್ರಸ್ಥಾನಗಳಾಗಿದ್ದು, ಬಿಜೆಪಿ, ಆರೆಸ್ಸೆಸ್ ಹಾಗೂ ಎಬಿವಿಪಿ ಕಾರ್ಯಕರ್ತರೇ ಟಾರ್ಗೆಟ್ ಆಗುತ್ತಿದ್ದಾರೆ. ಇಷ್ಟಾದರೂ ಕೇರಳದ ಸಿಪಿಎಂ ಹಾಗೂ ಕರ್ನಾಟಕದ ಕಾಂಗ್ರೆಸ್ ಸರ್ಕಾರಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.

ಹಂತಕರನ್ನು ಬಂಧಿಸಿದ ಪೊಲೀಸರು-ಬಂಧಿತರು ಪಿಎಫ್‍ಐ ಕಾರ್ಯಕರ್ತರು..!!!

ಈ ಬಗ್ಗೆ ತನಿಖೆಯನ್ನು ಕೈಕೊಂಡ ಕೇರಳ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುತ್ತಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತ ಕೇರಳದ ಶ್ಯಾಮ್ ಪ್ರಸಾದ್ ಎಂಬಾತನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾದ ನಾಲ್ಕು ಮಂದಿ ಆರೋಪಿಗಳನ್ನು ಕೇರಳ ಪೊಲೀಸ್‍ರು ಬಂಧಿಸಿದ್ದಾರೆ.

ಬಂಧಿತರು ಎಸ್‍ಡಿಪಿಐ ಹಾಗೂ ಪಿಎಫ್‍ಐ ಉಗ್ರ ಸಂಘಟನೆಗಳ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಎಸ್‍ಡಿಪಿಐ ಕಾರ್ಯಕರ್ತರಾದ ಮಹಮ್ಮದ್, ಮಿನಿಕಾಲ್ ಸಲೀಂ, ನೀವೆಲಿ ಅಮೀರ್ ಹಾಗೂ ಶಹೀಮ್ ಎಂಬಾತರನ್ನು ಬಂಧಿಸಿದ್ದಾರೆ. ಎಬಿವಿಪಿ ಕಾರ್ಯಕರ್ತ ಶ್ಯಾಮ್ ಪ್ರಸಾದ್‍ನನ್ನು ಬಂಧಿಸಿ ಪರಾರಿಯಾಗುತ್ತಿದ್ದ 4 ಜನ ಹಂತಕರನ್ನು ವಯನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆಯೂ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಹಿತ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಈ ಕೊಲೆಗಳನ್ನು ಮಾಡುತ್ತಲೇ ಬರುತ್ತಿದ್ದು ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳುತ್ತಲೇ ಬರುತ್ತಿದೆ. ಆದರೆ ಅಲ್ಲಿನ ಪಿಣರಾಯಿ ವಿಜಯನ್ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಗಮನ ನೀಡದೆ ಕೊಲೆಗಳತ್ತವೇ ಗಮನವನ್ನು ಹರಿಸುತ್ತಿದೆ.

ಕರ್ನಾಟಕ ಕೇರಳ ಬಾಯಿ ಬಾಯೀ…

ಹತ್ಯೆಗಳನ್ನು ನಡೆಸುವುದರಲ್ಲಿ ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಅಣ್ಣ ತಮ್ಮಂದಿರಂತೆ ವರ್ತಿಸುತ್ತಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಡ್ಡೆತನವನ್ನು ಅನುಸರಿಸುತ್ತಿದ್ದರೆ ಕೇರಳದಲ್ಲಿ ಪಿಣರಾಯಿ ವಿಜಯನ್ ಸರ್ಕಾರ ಹಿಂದೂಗಳ ಧಮನ ನೀತಿಯನ್ನು ಅನುಸರಿಸುತ್ತಿದೆ. ದೇಶದ ಯಾವ ಮೂಲೆಯಲ್ಲೂ ನಡೆಯದ ಕೊಲೆಗಳಂತಹ ಪಾತಕೀ ಕೃತ್ಯಗಳನ್ನು ಕೇರಳದಲ್ಲಿ ನಡೆಯುತ್ತದೆ.

ಈ ಹಿಂದೆ ಮಂಗಳೂರಿಗೆ ಆಗಮಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ಗೆ ಮಂಗಳೂರಿನ ಜನತೆಗೆ ಧಿಕ್ಕಾರ ಕೂಗಿದ್ದರು. ಮಾತ್ರವಲ್ಲದೆ ಪಿಣರಾಯಿ ವಿಜಯನ್ ಮಂಗಳೂರು ಭೇಟಿ ವಿರೋಧಿಸಿ ಮಂಗಳೂರು ಬಂದ್‍ಗೆ ಕರೆ ನೀಡಿದ್ದರು. ಪ್ರತಿಭಟನೆಗಳು ತಾರಕಕ್ಕೇರಿದ್ದವು. ಆದರೂ ಬಂದ್‍ನ ಮಧ್ಯೆಯೇ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿದ್ದರು. ಯಾವಾಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿದ್ದರೋ ಅಂದಿನಿಂದ ಕರಾವಳಿಯಲ್ಲಿ ಮತ್ತೆ 3 ಕೊಲೆಗಳು ನಡೆದೇ ಹೋಗಿವೆ.

ಒಟ್ಟಾರೆ ದೇವರ ನಾಡು ಕೇರಳದಲ್ಲಿ ರಕ್ಕಸರ ಹಾವಳಿಯೇ ಹೆಚ್ಚಾಗಿ ಹೋಗಿದ್ದು ಇದಕ್ಕೆ ಆದಷ್ಟು ಬೇಗ ಕಡಿವಾಣ ಬೀಳಬೇಕಾಗಿದೆ. ಹಿಂದೂ ಸಂಘಟನೆಯ ಪ್ರಮುಖ ನಾಯಕರು, ಭಾರತೀಯ ಜನತಾ ಪಕ್ಷದ ಮುಖಂಡರು ಇಂತಹ ಹತ್ಯೆಗಳನ್ನು ಎದುರಿಸುವುದು ಹಾಗೂ ಜೀವ ಕೊಡುವುದು ಇಲ್ಲಿ ಮಾಮೂಲಾಗಿ ಬಿಟ್ಟಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಬೇರೇನು ಸಾಕ್ಷಿ ಬೇಕು? ಇನ್ನಾದರು ದೇವರ ನಾಡು ದೇವರ ಹಾಗೆಯೇ ಬಾಳುವಂತಾಗಲಿ. ರಕ್ಕಸರ ಸಂತಾನ ನಾಶವಾಗಲಿ.

-ಹರೀಶ್

Tags

Related Articles

Close