ಪ್ರಚಲಿತ

ಬಿಗ್ ಬ್ರೇಕಿಂಗ್: ಜನವರಿ 25ಕ್ಕೆ ಭಾರತ್ ಬಂದ್. !! ಸಿಡಿದೆದ್ದ ಹಿಂದೂಗಳಿಂದ ಸುಪ್ರೀಂ ಕೋರ್ಟ್‍ಗೆ ಸೆಡ್ಡು!!

“ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ನಮ್ಮ ಧರ್ಮವನ್ನು ಅವಹೇಳನ ಮಾಡಿದ ಯಾವುದೇ ವಿಚಾರವನ್ನು ನಾವು ಸಹಿಸುವುದಿಲ್ಲ. ಹೀಗಾಗಿ ನಾವು ಜನವರಿ 25ಕ್ಕೆ ಭಾರತ್ ಬಂದ್‍ಗೆ ಕರೆ ಕೊಡುತ್ತಿದ್ದೇವೆ”…

ಇದು ಪದ್ಮಾವತಿ ಚಿತ್ರ ವಿರೋಧಿಸಿ ರಜಪೂತ್ ಕರ್ಣಿ ಸೇನಾ ಸಂಘಟನೆಯಿಂದ ಹೊರ ಬಿದ್ದ ಮಹತ್ವದ ಘೋಷಣೆ.

ಪದ್ಮಾವತಿ ಚಿತ್ರ… ಬಾಲಿವುಡ್ ಚಿತ್ರ ನಿರ್ಧೇಶಕ ಬನ್ಸಾಲಿಯವರ ಚಿತ್ರ. ಆರಂಭದಿಂದಲೇ ಒಂದಲ್ಲಾ ಒಂದು ವಿವಾದದಿಂದಲೇ ಸುದ್ಧಿ ಮಾಡುತ್ತಿದ್ದ ಚಿತ್ರ. ಜಾತಪೂತರ ರಾಣಿಯಾಗಿದ್ದ ಮಾತೆ ಪದ್ಮಾವತಿಯನ್ನು ಅವಹೇಳನ ಮಾಡಿ ನಿರ್ಮಿಸಿದ ಈ ಚಿತ್ರ ಬೆಳ್ಳಿ ತೆರೆಗೆ ಅಪ್ಪಳಿಸುವ ಮುನ್ನವೇ ನಿಷೇಧಕ್ಕೊಳಪಟ್ಟು ವಿವಾದಕ್ಕೆ ತುಪ್ಪ ಸುರಿಸಿದ ಚಿತ್ರ. ಬಿಡುಗಡೆಗೂ ಮುನ್ನವೇ ಹಲವಾರು ಬಾರಿ ನಿಷೇಧವಾದ ಚಿತ್ರ.

ಪದ್ಮಾವತಿಗೆ ಯಾಕೆ ವಿರೋಧ..?

ಪದ್ಮಾವತಿ ಅನ್ನುವವಳು ರಾಜಸ್ಥಾನದ ಚಿತ್ತೋರ್‍ನ ಮಹಾರಾಣಿ. ರಾಜಪೂತ ವಂಶದ ರಾಣಿಯಾದ ಈಕೆ ಹಿಂದೂ ಧರ್ಮದ ಪಾಲಿನ ಸ್ಪೂರ್ತಿದಾಯಕವಾದ ಮಹಿಳೆ. ಆಕ್ರಮಣಕಾರಿ ಮುಸ್ಲಿಂ ದೊರೆ ಖಿಲ್ಜಿಯ ಕಾಮದ ಅಂಕುಶಕ್ಕೆ ಬಲಿಯಾಗದೆ, ಆತನ ಕಪಿಮುಷ್ಟಿಗೆ ಸಿಲುಕಿ ತನ್ನ ಶೀಲವನ್ನು ಕಳೆದುಕೊಳ್ಳುವುದಕ್ಕಿಂತ ಸಾಯುವುದೇ ಮೇಲು ಎಂಬ ನಿರ್ಧಾರವನ್ನು ತಳೆದು, ಸಾಧ್ಯವಾದಷ್ಟು ಆಕ್ರಮಣಕಾರಿಗಳೊಂದಿಗೆ ಯುಧ್ಧವನ್ನು ಮಾಡಿ, ಕೊನೆಗೆ ದಾರಿ ತೋಚದೆ ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡ ಶ್ರೇಷ್ಟ ರಾಣಿ ಪದ್ಮಾವತಿ.

ಆದರೆ ಬಾಲಿವುಡ್‍ನ ಚಲನ ಚಿತ್ರ ನಿರ್ದೇಶಕ ಬನ್ಸಾಲಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಆಕ್ರಮಣಕಾರಿ ಖಿಲ್ಜಿ ಹಾಗೂ ಮಾತೆ ಪದ್ಮಾವತಿಗೆ ಸಂಬಂಧವಿತ್ತು ಎನ್ನುವಂತಹ ದೃಶ್ಯಗಳನ್ನು ನಿರ್ಮಿಸಿದ್ದು, ಖಿಲ್ಜಿ ಹಾಗೂ ಮಾತೆ ಪದ್ಮಾವತಿ ಸರಸವಾಡುವ ದೃಶ್ಯಗಳನ್ನೂ ನಿರ್ಮಿಸಿದ್ದಾರೆ. ಇದು ಕೇವಲ ರಜಪೂತ ಜಾತಿ ಮಾತ್ರವಲ್ಲದೆ ಸಮಸ್ತ ಹಿಂದೂ ಸಮಾಜವೇ ಸಿಡಿದೆದ್ದು ನಿಲ್ಲುವಂತೆ ಮಾಡಿದೆ.

ದೇಶದೆಲ್ಲೆಡೆ ಪದ್ಮಾವತಿ ಚಿತ್ರಕ್ಕೆ ನಿಷೇಧ ಹೇರುವಂತೆ ಪ್ರತಿಭಟನೆಗಳೂ ನಡೆದಿದ್ದವು. ರಾಜಸ್ಥಾನ, ಹರಿಯಾಣ, ಗುಜರಾತ್, ಮಹಾರಾಷ್ಟ್ರ ಸಹಿತ ಭಾರತೀಯ ಜನತಾ ಪಕ್ಷ ಇರುವ ಅನೇಕ ರಾಜ್ಯಗಳಲ್ಲಿ ಈ ಚಿತ್ರವನ್ನು ನಿಷೇಧಿಸಲಾಯಿತು. ಮಾತ್ರವಲ್ಲದೆ ಸ್ವತಃ ಕಾಂಗ್ರೆಸ್ ಸರ್ಕಾರ ಇರುವ ಪಂಜಾಬ್ ರಾಜ್ಯದಲ್ಲೂ ಈ ಸಿನೆಮಾವನ್ನು ಬಿಡುಗಡೆಗೆ ಮುನ್ನವೇ ನಿಷೇಧ ಮಾಡಲಾಯಿತು.

ಆದರೆ ಕರ್ಣಾಟಕ ಮಾತ್ರ ಈ ಬಗ್ಗೆ ಸಹಮತವನ್ನು ವ್ಯಕ್ತ ಪಡಿಸಿತ್ತು. “ಪದ್ಮಾವತಿ ಚಿತ್ರದ ನಾಯಕಿ ನಟಿ ದೀಪಿಕಾ ಪಡುಕೋಣೆ ನಮ್ಮ ರಾಜ್ಯದ ಮಗಳು. ನಾವು ಅ ಚಿತ್ರವನ್ನು ಬೆಂಬಲಿಸುತ್ತೇವೆ. ಅದರಲ್ಲಿ ಯಾವುದೇ ಧರ್ಮಬಾಹಿರ ದೃಶ್ಯಗಳು ಇಲ್ಲ” ಎಂದೇ ರಾಜ್ಯ ಕಾಂಗ್ರೆಸ್ ಸರ್ಕಾರ ವಾದಿಸಿಕೊಂಡು ಬರುತ್ತಿತ್ತು. ಅದರಲ್ಲೇನು ಅಚ್ಚರಿ ಇಲ್ಲ ಬಿಡಿ. ಸದಾ ಹಿಂದೂ ಧರ್ಮದ ವಿರುದ್ಧ ಸಮರ ಸಾರುತ್ತಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಹಿಂದೂಗಳ ಮಾರಣ ಹೋಮ ನಡೆಸುತ್ತಿರುವ ಸರ್ಕಾರಕ್ಕೆ ಕೇವಲ ಒಂದು ಚಿತ್ರ ಏನು ಮಾಡಿದರೇನು…

 

ಕಟ್ ಆಯಿತು ದೃಶ್ಯಗಳು-ನಿಂತಿಲ್ಲ ಪ್ರತಿಭಟನೆಗಳು…

ಹಲವಾರು ವಾದ ವಿವಾದಗಳ ನಂತರ ಪದ್ಮಾವತಿ ಸಿನಿಮಾ ಸೆನ್ಸಾರ್ ಮಂಡಳಿಗೆ ತಲುಪಿ ಹಲವಾರು ದೃಶ್ಯಗಳನ್ನು ಕತ್ತರಿಸಲಾಯಿತು. ಒಂದು ಹಾಡು ಹಾಗೂ ಸರಸ ದೃಶ್ಯಗಳ ಸಹಿತ ಅನೇಕ ದೃಶ್ಯಗಳನ್ನೂ ಕತ್ತರಿಸಲಾಗಿತ್ತು ಎಂದು ಹೇಳಲಾಯಿತು. ದೇಶದೆಲ್ಲೆಡೆ ತೀವ್ರಗೊಂಡ ಪ್ರತಿಭಟನೆಗಳಿಗೆ ಬೆದರಿದ ನಿರ್ಧೇಶಕ ಬನ್ಸಾಲಿ ದೃಶ್ಯಗಳನ್ನು ಕತ್ತರಿಸಲು ಮುಂದಾದರು. ಮತ್ತೆ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿತ್ತು.

ನಿಲ್ಲಲೇ ಇಲ್ಲ ಆಕ್ರೋಷ-ಮತ್ತೆ ನಿಷೇಧ…

ಕೆಲವು ದೃಶ್ಯಗಳನ್ನು ಕತ್ತರಿಸಿದರೂ ಆ ಚಿತ್ರದ ನಿಷೇಧದ ಕೂಗು ನಿಲ್ಲಲೇ ಇಲ್ಲ. ಸಮಸ್ತ ಹಿಂದೂ ಸಮಾಜದ ಅಬ್ಬರಕ್ಕೆ ಮತ್ತೆ ಹಲವಾರು ರಾಜ್ಯಗಳಲ್ಲಿ ಈ ಚಿತ್ರ ನಿಷೇಧಕ್ಕೊಳಪಟ್ಟಿತ್ತು. ಮತ್ತೆ ಗುಜರಾತ್, ರಾಜಸ್ಥಾನ, ಹರ್ಯಾಣ ಸಹಿತ ಕೆಲವು ಭಾರತೀಯ ಜನತಾ ಪಕ್ಷ ಆಡಳಿತವುಳ್ಳ ರಾಜ್ಯದಲ್ಲಿ ನಿಷೇಧಕ್ಕೊಳಪಟ್ಟಿತ್ತು. ಯಾವುದೇ ಕಾರಣಕ್ಕೂ ನಾವು ನಮ್ಮ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡೋದಿಲ್ಲ ಎಂಬ ಪ್ರಬಲ ವಾದವನ್ನು ಮಂಡಿಸುತ್ತಲೇ ಬಂದಿತ್ತು. ಆದರೆ ಅಷ್ಟರಲ್ಲಿ ಒಂದು ಆಘಾತ ಹಿಂದೂ ಸಮಾಜಕ್ಕೆ ಎದುರಾಗಿತ್ತು.

ನಿಷೇಧಕ್ಕೆ ತಡೆ ಹೇರಿದ್ದ ಸುಪ್ರೀಂ ಕೋರ್ಟ್…

ಯಾವಾಗ ಭಾರತೀಯ ಜನತಾ ಪಕ್ಷಗಳು ಇರುವ ರಾಜ್ಯಗಳಲ್ಲಿ ಮತ್ತೆ ಪದ್ಮಾವತಿ ಸಿನಿಮಾ ನಿಷೇಧವಾಯಿತೋ ಆವಾಗ ಬನ್ಸಾಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರೆ. ಈ ಬಗ್ಗೆ ಪರಿಶೀಲಿಸಿದ ಸುಪ್ರೀಂ ಕೋರ್ಟ್ ನಿಷೇಧ ಹೇರಿದ ರಾಜ್ಯಗಳಿಗೆ ತಡೆಯಾಜ್ನೆ ನೀಡುತ್ತದೆ. “ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಹೀಗಾಗಿ ಈ ಚಿತ್ರವನ್ನು ಯಾವುದೇ ಕಾರಣಕ್ಕೂ ನಿಷೇಧಿಸುವಂತಿಲ್ಲ. ಹಾಗೂ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ರಾಜ್ಯ ಸರ್ಕಾರಗಳೇ ನೇರ ಹೊಣೆ” ಎಂದು ಆದೇಶವಿತ್ತಿತ್ತು.

ಸುಪ್ರೀಂ ಆದೇಶದ ವಿರುದ್ಧ ಸಿಡಿದೆದ್ದ ರಾಜಪೂತರು…

ಸುಪ್ರೀಂ ಕೋರ್ಟ್ ಇಂತಹ ಆದೇಶವನ್ನು ಘೋಷಿಸಿದ್ದೇ ತಡ ರಾಜಪೂತರು ಬೀದಿಗಿಳಿಯುತ್ತಾರೆ. ಸಮಸ್ತ ಹಿಂದೂ ಸಮಾಜವೇ ಸಿಡಿದೇಳುತ್ತೆ. ರಾಜಪೂತ್ ಕರ್ಣಿ ಸೇನೆ ಮಹತ್ವದ ಘೋಷಣೆಯನ್ನು ಘೋಷಿಸಿಬಿಡುತ್ತದೆ. “ನಾವು ಯಾವ ಕಾರಣಕ್ಕೂ ನಮ್ಮ ರಾಣಿ ,ಮಾತೆ ಪದ್ಮಾವತಿಯ ಅವಹೇಳನವನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಪದ್ಮಾವತಿ ಚಿತ್ರವನ್ನು ಕಠೋರವಾಗಿ ವಿತರೋಧಿಸುತ್ತೇವೆ. ಪದ್ಮಾವತ್ ಎಂದು ಹೆಸರು ಬದಲಾಯಿಸಿದ ಕೂಡಲೇ ಇತಿಹಾಸ ಅಥವಾ ಕಥೆ ಬದಲಾಗೋದಿಲ್ಲ. ನಾವು ಸುಪ್ರಿಂ ಕೋರ್ಟ್‍ನ ಈ ಆದೇಶ ಹಾಗೂ ಚಿತ್ರದ ವಿರುದ್ಧ ಜನವರಿ 35ಕ್ಕೆ ಭಾರತ ಬಂದ್‍ಗೆ ಕರೆ ಕೊಡುತ್ತಿದ್ದೇವೆ” ಎಂದು ರಾಜಪೂತ್ ಕರ್ಣಿ ಸೇನಾ ವತಿಯಿಂದ ಭಾರತ್ ಬಂದ್‍ಗೆ ಕರೆ ಕೊಡುತ್ತಿದ್ದಾರೆ.

ಒಟ್ಟಿನಲ್ಲಿ ಪದ್ಮಾವತಿ ಸಿನಿಮಾದ ವಿರುದ್ಧ ಸಮರ ಸಾರಿರುವ ರಾಜಪೂತ ಕರ್ಣಿ ಸೇನಾ ಹಾಗೂ ಹಿಂದೂ ಸಮಾಜ ಯಾವುದೇ ಕಾರಣಕ್ಕೂ ನಾವು ಪದ್ಮಾವತ್ ಸಿನಿಮಾವನ್ನು ಬಿಡುಗಡೆಗೊಳಿಸಲು ಬಿಡೋದೇ ಇಲ್ಲ ಎಂಬ ಹಠವನ್ನು ಮುಂದಿಟ್ಟಿದೆ. ನಮ್ಮ ರಾಣಿಯ ಇತಿಹಾಸವನ್ನು ತಿರುಚುವ ಯಾವ ಚಿತ್ರಕ್ಕೂ ಇಲ್ಲಿ ಅವಕಾಶ ನೀಡೋದಿಲ್ಲ ಎಂಬ ವಾದವನ್ನೂ ಮಂಡಿಸಿದ್ದಾರೆ. ಈಗಾಗಲೇ ನಿಧೇಶಕ ಬನ್ಸಾಲಿಗೆ ರಾಜಸ್ಥಾನದಲ್ಲಿ ಯಾವುದೇ ಚಿತ್ರವನ್ನು ನಿರ್ಧೇಶಿಸಲು ಅವಕಾಶ ನೀಡೋದಿಲ್ಲ ಎಂಬ ಘೋಷಣೆಯನ್ನು ರಾಜಸ್ಥಾನ ಸರ್ಕಾರ ಮಾಡಿದೆ. ಸದ್ಯ ಭಾರತ್ ಬಂದ್‍ಗೆ ಕರೆ ಕೊಟ್ಟಿದ್ದು ಇದು ಯಾವ ಹಂತಕ್ಕೆ ತಲುಪುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close