ಪ್ರಚಲಿತ

ಬಿಗ್ ಬ್ರೇಕಿಂಗ್: ರಾಜ್ಯದಲ್ಲಿ ಬಜರಂಗದಳ, ರಾಮಸೇನೆ ಸಹಿತ ಹಿಂದೂ ಸಂಘಟನೆಗಳ ನಿಷೇಧ.! ರಾಜ್ಯ ಸರ್ಕಾರದಿಂದ ಮತ್ತೆ ಇಬ್ಬಗೆ ನೀತಿ..!

ಮಂಗಳೂರಿನ ಸುರತ್ಕಲ್‍ನ ಕಾಟಿಪಳ್ಳ ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಎಂಬಾತನನ್ನು ಪಿಎಫ್‍ಐ ಉಗ್ರರು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದರು. ಇದು ಕರಾವಳಿ ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸಾಲು ಸಾಲು ಹಿಂದೂ ಕಾರ್ಯಕರ್ತರನ್ನು ಕಳೆದುಕೊಂಡಿರುವ ಕರ್ನಾಟಕದಲ್ಲಿ ಈಗ ಮತ್ತೊಬ್ಬ ಬಡ ಕುಟುಂಬದ ಹಿಂದೂ ಕಾರ್ಯಕರ್ತನನ್ನು ಹಿಂದೂ ಸಮಾಜ ಕಳೆದುಕೊಂಡು ಧುಖಃದ ಮಡುವಿನಲ್ಲಿ ಮುಳುಗಿದೆ. ಕೋಮು ಗಲಭೆಗಳಿಂದಲೇ ಸುದ್ದಿಯಾಗುತ್ತಿರುವ ಮಂಗಳೂರು ಈಗ ಮತ್ತೆ ಧರ್ಮೀಯ ಹತ್ಯೆಗಳು ತಾಂಡವಾಡುತ್ತಿದೆ. ಶರತ್ ಮಡಿವಾಳನನ್ನು ಕಳೆದುಕೊಂಡು ಕೆಲವೇ ತಿಂಗಳುಗಳಾಗಿವೆ. ಅಷ್ಟರಲ್ಲೇ ಮತ್ತೊಬ್ಬ ಹಿಂದೂ ಯುವಕನ ತಲೆಯನ್ನು ಜಿಹಾದಿಗಳು ಉರುಳಿಸಿದ್ದಾರೆ. ಮುಸಲ್ಮಾನ ಉಗ್ರರ ಜಿಹಾದಿ ಕೃತ್ಯಕ್ಕೆ ಈಗ ಮತ್ತೊಂದು ಹೆಣ ಬೀದಿಯಲ್ಲಿ ಬೀಳಿಸಿದ್ದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಹಿಂದೂ ಸಂಘಟನೆಗಳನ್ನು ಬ್ಯಾನ್ ಮಾಡಲು ರಾಜ್ಯ ಸರ್ಕಾರದ ಚಿಂತನೆ..?

ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಸಾಲು ಸಾಲಾಗಿ ಹತ್ಯೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಿಂದೂ ಸಂಘಟನೆಗಳಲ್ಲಿ ಅಥವಾ ಭಾರತೀಯ ಜನತಾ ಪಕ್ಷವೆಂಬ ರಾಜಕೀಯ ಪಕ್ಷದಲ್ಲಿ ಕಾರ್ಯಕರ್ತನಾಗಿರೋದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಗಲಭೆಗಳಿಗೆ ಕಾರಣವಾಗಿರುವ ಪಿಎಫ್‍ಐ ಹಾಗೂ ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸಿ ಎಂದು ನೂರಾರು ಪ್ರತಿಭಟನೆಗಳೂ ನಡೆಯುತ್ತಿವೆ. ಪಿಎಫ್‍ಐ ಮುಸ್ಲಿಂ ಸಂಘಟನೆಯ ವಿರುದ್ಧ ಇರುವ ಸುಮಾರು 185ಕ್ಕೂ ಅಧಿಕ ಪ್ರಕರಣಗಳಲ್ಲಿ ಈ ಸಂಘಟನೆಯ ಪಾತ್ರ ಸಾಭೀತಾಗಿದೆ. ಮೊದಲಿನಿಂದಲೂ ಇಂತಹ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಿ ಎಂದು ಬೊಬ್ಬೆ ಹೊಡೆಯುತ್ತಲೇ ಬಂದಿದ್ದರು ಇಲ್ಲಿನ ಬಲಪಂಥೀಯ ಸಂಘಟನೆಗಳು.

ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಇಂತಹ ಸಂಘಟನೆಗಳಿಗೆ ಬೆಂಬಲವನ್ನು ನೀಡುತ್ತಾ ಬಂದಿದ್ದು ಈಗ ಹಿಂದೂ ಪರ ಸಂಘಟನೆಗಳನ್ನು ನಿಷೇಧಿಸಲು ಮಾಸ್ಟರ್ ಪ್ಲಾನ್ ನಡೆಸುತ್ತಿದೆ. ಹಿಂದೂ ಸಂಘಟನೆಗಳ ಭೀಕರ ಹತ್ಯೆ ನಡೆಯುತ್ತಿದ್ದರೂ ಅದೇ ಸಂಘಟನೆಗಳನ್ನು ನಿಷೇಧಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿರುವುದು ಮಾತ್ರ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ವ್ಯಾಪಕವಾಗಿ ಮೂಡುತ್ತಿದೆ.

ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಸುಳಿವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ ಸಂಘಟನೆಗಳನ್ನು ನಿಷೇಧ ಮಾಡುವ ಸುಳಿವನ್ನು ನೀಡಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿಯೂ ಸುಳಿವು ನೀಡಿದ್ದಾರೆ. ಬಜರಂಗದಳ, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ ಸಹಿತ ಎಲ್ಲಾ ಹಿಂದೂ ಸಂಘಟನೆಗಳನ್ನು ನಿಷೇಧಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಪಿಎಫ್‍ಐ, ಕೆಎಫ್‍ಡಿ ಅಂತಹ ಯಾವುದೇ ಮತೀಯ ಸಂಘಟನೆಗಳನ್ನು ನಿಷೇಧ ಮಾಡುವಷ್ಟು ಧೈರ್ಯವನ್ನು ತೋರುತ್ತಿಲ್ಲ ನಮ್ಮ ಘನತೆ “ತೆತ್ತ” ಮುಖ್ಯಮಂತ್ರಿಗಳು.
ಪಿಎಫ್‍ಐ ಬ್ಯಾನ್ ಮಾಡಲ್ಲ ಎಂದ ಗೃಹ ಸಚಿವ..?

“ಪಿಎಫ್‍ಐ, ಕೆಎಫ್‍ಡಿ ಸಹಿತ ಯಾವುದೇ ಮತೀಯ ಸಂಘಟನೆಗಳನ್ನು ನಿಷೇಧ ಮಾಡಲು ಈವರೆಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಮಾತ್ರವಲ್ಲದೆ ಈ ಬಗ್ಗೆ ಚಿಂತಿಸಿಲ”್ಲ ಎಂದು ಸಾರಾಗವಾಗಿಯೇ ಹೇಳಿಕೆ ನೀಡುವ ಮಾನ್ಯ ಗೃಹ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿಂದೂ ಸಂಘಟನೆಗಳನ್ನು ನಿಷೇಧ ಮಾಡುವಷ್ಟು ತಾಕತ್ತು ಬಂದೊದಗಿದೆ. ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಬಗ್ಗೆ ಮಾತನಾಡುವಷ್ಟು ತಾಕತ್ತಿಲ್ಲದ ಈ ಸೋಗಲಾಡಿ ಮಂತ್ರಿಗಳಿಗೆ ಹಿಂದೂ ಸಂಘಟನೆಗಳ ಬಗ್ಗೆ ಘಂಟಾಘೋಷವಾಗಿ ಮಾತನಾಡುತ್ತಾರೆಂದರೆ ಇದರ ಅರ್ಥವೇನು? ಎಷ್ಟರ ಮಟ್ಟಿಗಿದೆ ತುಷ್ಟೀಕರಣದ ನೀತಿ?

ಈ ರಾಜ್ಯದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹಿಂದೂ ಸಂಘಟನೆಗಳಿಗೆ ಹಾನಿಯುಂಟಾಗುತ್ತಿದೆಯೇ ಹೊರತು ಹಿಂದೂ ಸಂಘಟನೆಗಳಿಂದ ಈವರೆಗೂ ಯಾವುದೇ ಮುಸಲ್ಮಾನ ವ್ಯಕ್ತಿಗಳಿಗೆ ತೊಂದರೆ ಉಂಟಾಗಿರುವ ಉದಾಹರಣೆಗಳಿಲ್ಲ. ಇದೇ ಮುಸ್ಲಿಂ ಭಯೋತ್ಪಾದಕರಿಂದ ಸಾಲು ಸಾಲು ಹತ್ಯೆಗಳು ನಡೆಯುತ್ತಿದ್ದರೂ ಬಾಯಿ ಮುಚ್ಚಿ ಕುಳಿತು ಅವರಿಗೆ ಸಹಕರಿಸುತ್ತಿದ್ದ ಸರ್ಕಾರ, ಬಜರಂಗದಳ, ಶ್ರೀರಾಮ ಸೇನೆ ಸಹಿತ ಹಿಂದೂ ಸಂಘಟನೆಗಳನ್ನು ನಿಷೇಧಿಸಲು ಚಿಂತಿಸುವುದು ಮಾತ್ರ ರಾಜ್ಯ ಕಾಂಗ್ರೆಸ್ ಸರ್ಕಾರ ಕೊನೇ ಘಳಿಗೆಯನ್ನು ಎನಿಸುತ್ತಿದೆ ಎನ್ನುವುದನ್ನು ಸಾರಿ ಸಾರಿ ಹೇಳುವಂತಿದೆ.

ಈ ರಾಜ್ಯದಲ್ಲಿ ಹಿಂದೂಗಳಿಗೆ ಬದುಕಲು ಸಾಧ್ಯವಾಗದ ಸಮಯ ಎದುರಾಗಿದೆ. ಅದನ್ನು ಸರಿದೂಗಿಸಿ ಮತೀಯ ಶಕ್ತಿಗಳನ್ನು ಧಮನಿಸಿವುದು ಬಿಟ್ಟು ಬಜರಂಗದಳ ಸಹಿತ ಹಿಂದೂ ಸಂಘಟನೆಗಳನ್ನು ನಿಷೇಧ ಮಾಡಲು ಹೊರಟಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಇಬ್ಬಗೆ ನೀತಿಯನ್ನು ಪ್ರದರ್ಶಿಸುತ್ತದೆ. ಮಾತ್ರವಲ್ಲದೆ ರಾಜ್ಯದಲ್ಲಿ ಮತ್ತೆ ಹಿಂದೂ ಶಕ್ತಿ ಪ್ರದರ್ಶನಗೊಳ್ಳುವ ಸಮಯ ಬಂದಿರುತ್ತದೆ ಎನ್ನುವುದನ್ನು ಸಾರುತ್ತಿದೆ.

ನೆನಪಿರಲಿ: ರಾಜ್ಯದಲ್ಲಿ 24 ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಗಳು ನಡೆದಿವೆ… ಈ ಎಲ್ಲಾ ಕೊಲೆಗಳನ್ನೂ ಮಾಡಿದ್ದು ಮುಸ್ಲಿಂ ಸಂಘಟನೆಗಳು… ಹಾಗಾದರೆ ನಿಷೇಧ ಆಗಬೇಕಾದದ್ದು ಯಾವುದು.?

-ಸುನಿಲ್ ಪಣಪಿಲ

Tags

Related Articles

Close