ಪ್ರಚಲಿತ

ಬಿಗ್ ಬ್ರೇಕಿಂಗ್: ರಾಹುಲ್ ಬರುವ ದಿನವೇ ರಾಜ್ಯ ಬಂದ್?! ರಾಷ್ಟ್ರೀಯ ನಾಯಕರು ಬರುವ ದಿನ ಸರ್ಕಾರವೇ ಬಂದ್‍ಗೆ ಸಪೋರ್ಟ್ ಮಾಡುವ ಕರಾಳ ಮುಖ ಬಯಲು.!!

ಈ ಕಾಂಗ್ರೆಸ್ ಪಕ್ಷ ಎಷ್ಟೊಂದು ನಾಟಕವಾಡುತ್ತೆ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ. ಸರ್ಕಾರ ಜನರ ಒಳಿತಿಗಾಗಿ ಹಾಗೂ ಜನರ ಕ್ಷೇಮಕ್ಕಾಗಿ ಆಡಳಿತ ನಡೆಸಬೇಕೇ ಹೊರತು ರಾಜಕೀಯ ದುರುದ್ಧೇಶವನ್ನು ಇಟ್ಟುಕೊಂಡು ತಮ್ಮ ಅಧಿಕಾರವನ್ನು ನಡೆಸಲೇಬಾರದು. ಆದರೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನದೇ ಹಿಟ್ಲರ್ ಶೈಲಿಯಲ್ಲಿ ಆಡಳಿತವನ್ನು ನಡೆಸುತ್ತಿದೆ. ಕಳೆದ ಐದು ವರ್ಷದಿಂದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಂದು ವಿರೋಧ ಪಕ್ಷವನ್ನು ಮಣಿಸುವತ್ತಲೇ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಮತ್ತೆ ತನ್ನ ಆಡಳಿತವನ್ನು ದುರುಪಯೋಗಪಡಿಸಿಕೊಂಡು ಜನವಿರೋಧಿ ಕೆಲಸಕ್ಕೆ ಇಳಿದಿದೆ.
ಸರಕಾರದಿಂದಲೇ ರಾಜ್ಯ ಬಂದ್..!!!
   ಸಂಶಯವೇ ಇಲ್ಲ. ಕನ್ನಡ ಪರ ಸಂಘಟನೆಗಳು ಘೋಷಿಸಿರುವ ರಾಜ್ಯ ಬಂದ್‍ಗೆ ಹಿಂಬಾಗಿಲಿನಿಂದ ಸಹಕಾರ ನೀಡುತ್ತಿರುವುದೇ ರಾಜ್ಯ ಕಾಂಗ್ರೆಸ್ ಸರಕಾರ. ಈ ಒಂದು ವಿಚಾರ ಈಗ ಬಟಬಯಲಾಗಿದೆ. ಈ ಹಿಂದೆ 28ಕ್ಕೆ ಕರ್ನಾಟಕ ರಾಜ್ಯ ಬಂದ್‍ಗೆ ಕನ್ನಡ ಪರ ಸಂಘಟನೆಗಳು ನಿರ್ಧರಿಸಿದವು. ಮಹದಾಯಿ ನೀರಿನ ವಿಚಾರವಾಗಿ ನ್ಯಾಯಕ್ಕಾಗಿ ಸರ್ಕಾರಗಳ ವಿರುದ್ಧ ಜನವರಿ 28 ಕರ್ನಾಟಕ ಬಂದ್ ಮಾಡಿ ಹೋರಾಟ ನಡೆಸುವುದಾಗಿ ಘೋಷಣೆ ಮಾಡಿದ್ದವು. ಆದರೆ ಈಗ ಧಿಡೀರ್ ರಾಜ್ಯ ಬಂದ್‍ನ ದಿನಾಂಕವೇ ಬದಲಾಗಿ ಹೋಗಿದೆ.
ಬಂದ್ ದಿನಾಂಕ ಶಿಫ್ಟ್ ಆಗಿದ್ದು ಯಾಕೆ..?
   ಜನವರಿ 25ಕ್ಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಜನವರಿ 25ರಂದು ಮೈಸೂರಿನಲ್ಲಿ ನಡೆಯುತ್ತಿದೆ. ಈ ಯಾತ್ರೆಗೆ ಅಮಿತ್ ಶಾ ಆಗಮಿಸಿ ಭಾಗವಹಿಸಲಿದ್ದಾರೆ. ಆದರೆ ಈ ಬೃಹತ್ ಯಾತ್ರೆಯನ್ನು ಶತಾಯಗತಾಯ ವಿಫಲಗೊಳಿಸಲೇ ಬೇಕು ಎಂಬ ಹಠ ಕಟ್ಟಿಕೊಂಡಿರುವ ಕಾಂಗ್ರೆಸ್ ಪಕ್ಷ ಈಗ ಬಂದ್ ರಾಜಕೀಯ ಮಾಡಲು ಮುಂದಾಗಿದೆ.
   ಜನವರಿ 28ಕ್ಕೆ ನಡೆಯಬೇಕಾಗಿದ್ದ ಕರ್ನಾಟಕ ರಾಜ್ಯ ಬಂದ್‍ನ ದಿನಾಂಕ ಬದಲಾವಣೆಯಾಗಿ ಅಮಿತ್ ಶಾ ಮೈಸೂರಿಗೆ ಆಗಮಿಸುವ, ಅಂದರೆ ಜನವರಿ 25ಕ್ಕೆ ರಾಜ್ಯ ಬಂದ್ ಮಾಡಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಆದರೆ ಕನ್ನಡ ಸಂಘಟನೆಗಳು ನಿರ್ಧರಿಸಿದ ಈ ಬಂದ್ ಘೋಷಣೆಯ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಪ್ಲಾನಿಂಗ್ ಇದೆ ಎಂಬುವುದು ಈಗ ಬಯಲಾಗಿದೆ. ಅಮಿತ್ ಶಾ ಭಾಗವಹಿಸುವ ಮೈಸೂರಿನ ಪರಿವರ್ತನಾ ಯಾತ್ರೆಯು ವಿಫಲವಾಗಲೇ ಬೇಕು ಎಂಬ ಉದ್ಧೇಶದಿಂದ ಕನ್ನಡ ಸಂಘಟನೆಗಳೊಂದಿಗೆ ಕೈಜೋಡಿಸಿ ರಾಜ್ಯ ಸರ್ಕಾರವೇ ರಾಜ್ಯ ಬಂದ್‍ಗೆ ಬೆಂಬಲ ನೀಡುತ್ತಿದೆ.
ಮೋದಿ ಆಗಮನದಂದೇ ಮತ್ತೆ ಬಂದ್…
   ಫೆಬ್ರವರಿ 4 ರಂದು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ಪರಿವರ್ತನಾ ಯಾತ್ರೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡ ಕಾಂಗ್ರೆಸ್ ಪಕ್ಷ ಮತ್ತೆ ಫೆಬ್ರವರಿ 4ರಂದು ಬಂದ್ ನಡೆಸಲು ಕನ್ನಡ ಸಂಘಟನೆಗಳಿಗೆ ಬೆಂಬಲವನ್ನು ನೀಡುತ್ತಿದೆ. ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದರೆ ಕಾಂಗ್ರೆಸ್ ಪಕ್ಷ ಬೆಚ್ಚಿ ಬೀಳುತ್ತೆ. ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಹೊರಟಿರುವ ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಕಾಲಿಟ್ಟರೆ ರಾಜ್ಯದಲ್ಲೂ ಬದಲಾವಣೆ ಆಗೋದು ಖಂಡಿತ. ಈ ಕಾರಣದಿಂದಲೇ ರಾಜ್ಯದಲ್ಲಿ ಕನ್ನಡ ಸಂಘಟನೆಗಳು ಬಂದ್‍ಗೆ ಬೆಂಬಲವನ್ನು ನೀಡುತ್ತಿದೆ ಎಂಬುವುದು ಬಿಜೆಪಿ ಆರೋಪ.
ರಾಹುಲ್ ಬರುವಾಗ ನಾವೂ ಬಂದ್ ಮಾಡುತ್ತೇವೆ-ಬಿಜೆಪಿ…
   ಕನ್ನಡ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದಿಂದ ಈ ಬಂದ್‍ಗೆ ಭಾರತೀಯ ಜನತಾ ಪಕ್ಷ ಸೆಡ್ಡು ಹೊಡೆದಿದೆ. “ನೀವು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಆಗಮಿಸುವ ದಿನವೇ ಕರ್ನಾಟಕ ಬಂದ್‍ಗೆ ಕರೆ ನೀಡುವುದಾದರೆ ನಾವೂ ಸುಮ್ಮನಿರೋದಿಲ್ಲ. ನಮಗೂ ರಾಜಕೀಯ ಮಾಡೋಕ್ಕೆ ಬರುತ್ತೆ. ರಾಹುಲ್ ಗಾಂಧಿಗೆ ರಾಜ್ಯಕ್ಕೆ ಬಂದಾವಾಗ ನಾವೂ ಕರ್ನಾಟಕ ಬಂದ್‍ಗೆ ಕರೆಕೊಡುತ್ತೇವೆ” ಎಂದು ವಿಧಾನ ಸಭಾ ವಿಪಕ್ಷ ನಾಯಕ ಜಗಧೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು, “ನಾವು ಈ ರಾಜ್ಯ ಬಂದ್‍ಗೆ ಬೆಂಬಲ ನೀಡೋದಿಲ್ಲ. ಮಹದಾಯಿ ವಿಚಾರವಾಗಿ ಅಮಿತ್ ಶಾ ಸ್ಪಂಧಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ತಾಕತ್ತಿದ್ದರೆ ರಾಹುಲ್ ಗಾಂಧಿಯಿಂದ ಮಹದಾಯಿ ಬಗ್ಗೆ ಪ್ರತಿಕ್ರಿಯೆಯನ್ನು ಕಾಂಗ್ರೆಸ್ ಹೇಳಿಸಲಿ” ಎಂದು ಕಿಡಿಕಾರಿದ್ದಾರೆ.
ಸರ್ಕಾರವೇ ಬಂದ್ ನಡೆಸುವುದು ಎಷ್ಟು ಸರಿ?
   ಈ ಮಧ್ಯೆ ಸರಕಾರದ ವಿರುದ್ಧ ಜನತೆಯೇ ಆಕ್ರೋಷಗೊಂಡಿದ್ದಾರೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ, ಹಾಗೂ ಬಂದ್‍ನಂತಹ ಚಟುವಟಿಕೆಗಳು ನಡೆಯಬಾರದೆಂಬ ಉದ್ಧೇಶವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಟ್ಟುಕೊಂಡಿರಬೇಕು. ಆದರೆ ಸ್ವತಃ ಸರ್ಕಾರವೇ ಇಂತಹ ಬಂದ್‍ಗೆ ಕರೆ ಕೊಟ್ಟಿರುವುದು ಹಾಗೂ ಅದನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ ಎಂಬ ಆಕ್ರೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಯಾಕೆ ತುಟಿ ಬಿಚ್ಚುತ್ತಿಲ್ಲ?
   ರಾಜ್ಯದ ಭಾರತೀಯ ಜನತಾ ಪಕ್ಷದ ನಾಯಕರು ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇವರನ್ನು ಕರೆಸಿ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ನೀಡಿದ್ದಾರೆ. ಸ್ವತಃ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಈ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅದರ ಬೆನ್ನಲ್ಲೇ ಗೋವಾದ ಕಾಂಗ್ರೆಸ್ ಮುಖಂಡರು ಇದರ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಯಾವೊಬ್ಬ ರಾಜ್ಯದ ಕಾಂಗ್ರೆಸ್ಸಿಗನೂ ಇದರ ಬಗ್ಗೆ ಮಾತಾಡಲ್ಲ. ಮಹದಾಯಿ ವಿಚಾರವಾಗಿ ಗೋವಾ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಮನವಿಯನ್ನು ರಾಜ್ಯ ಕಾಂಗ್ರೆಸ್ ಮಾಡಿಲ್ಲ. ಸ್ವತಃ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯೇ ಕರ್ನಾಟಕಕ್ಕೆ ನೀರು ನೀಡಲು ನಾನು ಬಿಡೋದಿಲ್ಲ ಎಂದು ಗೋವಾ ಜನತೆಗೆ ಭರವಸೆ ನೀಡಿದ್ದರು. ಹಾಗಾದರೆ ನಿಜವಾಗಿಯೂ ಪ್ರಶ್ನೆ ಮಾಡಬೇಕಾದದ್ದು ಯಾರನ್ನು?
 ಒಟ್ಟಿನಲ್ಲಿ ಕನ್ನಡ ಸಂಘಟನೆಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು, ಭಾರತೀಯ ಜನತಾ ಪಕ್ಷದ ವಿರುದ್ಧ ಸಮರ ಸಾರುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷ ಅದ್ಯಾವ ನೆಲೆಯಲ್ಲಿ ರಾಜಕೀಯ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಇದುವೇ ಕಾಂಗ್ರೆಸ್ ಪಕ್ಷಕ್ಕೆ ಕಂಟಕವಾಗುವ ಎಲ್ಲಾ ಸಾಧ್ಯತೆಗಳಿವೆ.
-ಸುನಿಲ್ ಪಣಪಿಲ
Tags

Related Articles

Close