ಪ್ರಚಲಿತ

ಬಿಗ್ ಬ್ರೇಕಿಂಗ್: ವಿಶ್ವ ದಾಖಲೆ ಮಾಡಿದ ಮೋದಿ ಬಜೆಟ್!! ಜೇಟ್ಲಿ ಘೋಷಿಸಿದ ಆ ಯೋಜನೆ ಏನು ಗೊತ್ತಾ..?!

ಮೋದಿ ಸರ್ಕಾರದ ಬಜೆಟ್ ಅಂದರೆ ಜನರು ಬಿಟ್ಟ ಕಣ್ಣು ಬಿಟ್ಟಂಗೆ ನೋಡುತ್ತಿರುವುದು ಸಾಮಾನ್ಯ. ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ಯಂತಹ ಮಹತ್ವದ ಆದೇಶಗಳನ್ನು ಜಾರಿಗೊಳಿಸಿದ ಮೋದಿ ಸರ್ಕಾರದ ಮೇಲೆ ಭರವಸೆಯ ಮಹಾಪೂರವನ್ನೇ ಜನತೆ ಇಟ್ಟುಕೊಂಡಿದ್ದರು. ಇದನ್ನು ಹುಸಿ ಮಾಡದ ಮೋದಿ ಸರ್ಕಾರ ಭಾರೀ ಘೋಷಣೆಗಳನ್ನೇ ಜನತೆಗೆ ಘೋಷಿಸಿದ್ದಾರೆ. ಇಂದು ಸಂಸತ್‍ನಲ್ಲಿ ಜೇಟ್ಲಿ ಮಂಡಿಸಿದ್ದ ಬಜೆಟ್‍ನಲ್ಲಿ ಭಾರೀ ಕೊಡುಗೆಗಳನ್ನು ಘೋಷಿಸಿದ್ದಾರೆ. ಅಂದುಕೊಂಡಂತೆಯೇ ಮೋದಿ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಿದೆ.

ವಿಶ್ವ ದಾಖಲೆ ಮಾಡಿದ ಮೆಡಿಕಲ್ ಬಜೆಟ್…

ಜೇಟ್ಲಿ ಸೂಟ್‍ಕೇಸ್‍ನಲ್ಲಿ ಅಡಗಿದ್ದ ರಹಸ್ಯ ಇಂದು ಬಹಿರಂಗವಾಗಿದೆ. ಜೇಟ್ಲಿ ಮಂಡಿಸಿದ್ದ ಅನೇಕ ಜನಪರ ಬಜೆಟ್‍ನಲ್ಲಿ ಒಂದು ವಿಶ್ವ ದಾಖಲೆಯನ್ನೇ ಬರೆದಿದೆ. ಅದು ಮೆಡಿಕಲ್ ಬಜೆಟ್. ಭಾರತದ ಬಡ ಪ್ರಜೆಗಳ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸಿದ ಮೋದಿ ಸರ್ಕಾರ ಈ ವಲಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಕಳೆದ ಬಾರಿಯಷ್ಟೇ ಮೆಡಿಕಲ್‍ನಲ್ಲಿ ಭಾರೀ ಬದಲಾವಣೆಯನ್ನು ಹೊರತಂದಿದ್ದ ಮೋದಿ ಸರ್ಕಾರ ಪ್ರತಿ ಕಡೆಗಳಲ್ಲೂ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ಜಾರಿಗೆ ತಂದಿತ್ತು. ಈ ಮೂಲಕ ಅತ್ಯಂತ ಕಡಿಮೆ ದರಗಳಲ್ಲಿ ಭಾರೀ ಜನರಿಗೆ ಔಷಧಿಯನ್ನು ನೀಡಿ ಆಶಾಕಿರಣವಾಗಿತ್ತು. ಈ ಬಾರಿ ಮತ್ತೆ ಈ ವಲಯಕ್ಕೆ ವಿಶೇಷ ಕೊಡುಗೆಯನ್ನು ನೀಡಿ ಬೇಶ್ ಅನ್ನಿಸಿಕೊಂಡಿದೆ.

ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ಉಚಿತ ಚಿಕಿತ್ಸೆ…

ಆರೋಗ್ಯ ವಲಯಕ್ಕೆ ಭಾರೀ ಒತ್ತು ನೀಡಿದ ಮೋದಿ ಸರ್ಕಾರ ಇಂದಿನ ಬಜೆಟ್‍ನಲ್ಲಿ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದಾರೆ. ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದು, ಆ ಕುಟುಂಬದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಯಾವುದೇ ಆಸ್ಪತ್ರೆಯಲ್ಲೂ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಉಚಿತವಾಗಿ ದೊರೆಯಲಿದೆ. ಈ ಯೋಜನೆ ಭಾರತದ 10 ಕೋಟಿ ಕುಟುಂಬಗಳಿಗೆ ತಲುಪಲಿದ್ದು, ಬರೋಬ್ಬರಿ 50 ಕೋಟಿ ಜನರು, ಅಂದರೆ ಭಾರತದಲ್ಲಿ ವಾಸವಿರುವ ಹತ್ತಿರ ಹತ್ತಿರ ಅರ್ಧದಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. 10 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಭಾರತದ ಯವುದೇ ಕುಟುಂಬವೂ ಆರೋಗ್ಯದ ತೊಂದರೆಯಿಂದ ಹಣದ ಸಮಸ್ಯೆಯನ್ನು ಎದುರಿಸಬಾರದು ಎಂಬ ಆಶೋತ್ತರವನ್ನು ಮೋದಿ ಸರ್ಕಾರ ಈಡೇರಿಸಿದೆ.

ಈ ಯೋಜನೆ ವಿಶ್ವದಲ್ಲೇ ಮೊದಲ ಬಾರಿಗೆ ಜಾರಿಗೆ ಬರುತ್ತಿದ್ದು ಇದು ವಿಶ್ವ ದಾಖಲೆಯಾಗಿದೆ. ಸಂಸತ್‍ನಲ್ಲಿ ಬಜೆಟ್ ಮಂಡಿಸಿದ ಅರುಣ್ ಜೇತ್ಲಿಯವರು ಸ್ವತಃ ಈ ಘೋಷಣೆಯನ್ನು ಮಾಡಿದ್ದು, ಇದು ಜಗತ್ತಿನಲ್ಲೇ ಪ್ರಥಮ ಎಂದು ಹೇಳಿದ್ದಾರೆ. ಒಂದು ಕ್ಷಣ ಸಂಸತ್‍ಗೆ ಸಂಸತ್ತೇ ಕರತಾಡನದಲ್ಲಿ ಮುಳುಗಿತ್ತು.

10 ಮೆಡಿಕಲ್ ಕಾಲೇಜು-ಕರ್ನಾಟಕಕ್ಕೂ ಒಂದು…

ದೇಶಕ್ಕೆ ಹತ್ತು ಮೆಡಿಕಲ್ ಕಾಲೇಜುಗಳನ್ನು ಘೋಷಿಸಿದ್ದು ಇದರಲ್ಲಿ ಕರ್ನಾಟಕಕ್ಕೆ ಒಂದು ಮೆಡಿಕಲ್ ಕಾಲೇಜು ಘೋಷಣೆಯಾಗಿದೆ. ಕರ್ನಾಟಕದಲ್ಲಿಯೂ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ಧೇಶದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಅನೇಕ ಬಡ ಕುಟುಂಬಗಳು ಆನಾರೋಗ್ಯ ಭಾಧಿತರಾಗಿ ಸಮರ್ಥ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇದನ್ನು ಧೃಷ್ಟಿಯಲ್ಲಿ ಇಟ್ಟುಕೊಂಡ ಮೋದಿ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತಂದು ಭಾರೀ ಕೊಡುಗೆಯನ್ನು ನೀಡಿದೆ. ಇದು ಪ್ರತಿ ಬಡ ಕುಟುಂಬಗಳ ಹತ್ತಿರಕ್ಕೆ ಹೋಗಿ ಈ ಯೋಜನೆ ಉಪಯೋಗವಾಗಲಿದೆ.

ಅದೆಷ್ಟೋ ಕಡೆಗಳಲ್ಲಿ ಬಡ ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ಆರೋಗ್ಯ ಸಮಸ್ಯೆಯಿಂದ ಧಿಕ್ಕೇ ತೋಚದೆ ಭಿಕ್ಷೆ ಬೇಡುವ ಸ್ಥಿತಿಯನ್ನೂ ತಲುಪುವ ಸನ್ನಿವೇಶಗಳನ್ನು ನಾವು ನೋಡುತ್ತಿರುತ್ತೇವೆ. ದುಬಾರಿಯಾಗುತ್ತಿರುವ ಆಸ್ಪತ್ರೆಗಳ ಬಿಲ್‍ಗಳಿಂದ ಅದೆಷ್ಟೋ ಜೀವಗಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಸರ್ಕಾರ ಅದೆಷ್ಟು ಪ್ರಯತ್ನ ಪಡುತ್ತಿದ್ದರೂ ಸಹ ಈ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನೇ ಇಟ್ಟಿದೆ. ಯಾರೂ ನಿರೀಕ್ಷಿಸದಂತೆ ಅತಿ ದೊಡ್ಡ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸಿದ್ದು, ಬಡವರ ಪಾಲಿಗೆ ಭಾರೀ ಕೊಡುಗೆಯನ್ನೇ ನೀಡಿದ್ದಾರೆ.

ಒಟ್ಟಾರೆ ಆರೋಗ್ಯ ಕ್ಷೇತ್ರಕ್ಕೆ ಭಾರೀ ಕೊಡುಗೆಯನ್ನು ಘೋಷಣೆ ಮಾಡಿದ ಮೋದಿ ಸರ್ಕಾರ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾದಾಖಲೆಯನ್ನೂ ಮಾಡಿದ್ದು ಇದು ಜನರಿಗೆ ನೇರವಾಗಿ ತಲುಪುವ ನಿರೀಕ್ಷೆಯನ್ನೂ ಹುಟ್ಟುಹಾಕಿದೆ.

-ಸುನಿಲ್ ಪಣಪಿಲ

Tags

Related Articles

Close