ಪ್ರಚಲಿತ

ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಕಂಡು ಬೆಚ್ಚಿಬಿದ್ದ ಸಿದ್ದುಖಾನ್ ಸರಕಾರ ಜನಸಾಗರವನ್ನು ತಡೆಯಲು ಮಾಡಿದ ಕುತಂತ್ರವೇನು ಗೊತ್ತೇ?

ಬಿಜೆಪಿಯ ಪರಿವರ್ತನಾ ಯಾತ್ರೆಗೆ ಬೆಚ್ಚಿಬಿದ್ದ ಸಿದ್ದುಖಾನ್ ಸರಕಾರ ಯಾತ್ರೆಗೆ ಬರುವ ಜನಸಾಗರವನ್ನು ತಡೆಯಲು ವ್ಯವಸ್ಥಿತ ಹುನ್ನಾರವೊಂದನ್ನು ನಡೆಸಿತು. ಆದರೆ ಕುತಂತ್ರವನ್ನು ಯಾವುದೇ ಮಾಧ್ಯಮಗಳು ತೋರಿಸದೆ ಪರಿವರ್ತನಾ ಯಾತ್ರೆಗೆ ನೀರಸ ಪ್ರತಿಕ್ರಿಯೆ ಎಂದು ಪ್ರಕಟಿಸಿ ಕಾಂಗ್ರೆಸ್ ಕೃಪೆಗೆ ಪಾತ್ರವಾಯಿತು. ಪರಿವರ್ತನಾ ಯಾತ್ರೆಗೆ ಬಿಜೆಪಿ ವ್ಯವಸ್ಥಿತ ಸಿದ್ಧತೆಯನ್ನೇ ಮಾಡಿಕೊಂಡಿದೆ. ಯಾವ ಜಿಲ್ಲೆಯ ಯಾವ ಯಾವ ಬೂತ್‍ನಿಂದ ಎಷ್ಟೆಷ್ಟು ಜನರು ಭಾಗಿಯಾಗಬೇಕೆಂದು ಮೊದಲೇ ಪೂರ್ವನಿರ್ಧರಿತವಾಗಿತ್ತು. ಆ ನಿರ್ಧಾರದಂತೆ ಬಿಜೆಪಿಯ ಕಾರ್ಯಕರ್ತರ ದಂಡು ತಂಡೋಪತಂಡವಾಗಿ ಬರುತ್ತಲೇ ಇದೆ. ಆದರೆ ಈ ಜನಸಾಗರವನ್ನು ತಡೆಯಲು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಬಲಪ್ರಯೋಗ ಮಾಡುತ್ತಿದೆ.. ಇದರರ್ಥ ಕಾಂಗ್ರೆಸ್ ಪರಿವರ್ತನಾಯಾತ್ರೆಯಿಂದ ಬೆಚ್ಚಿಬಿದ್ದಿದೆ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಬೆಂಗಳೂರಿನಲ್ಲಿ ಚಾಲನೆಗೊಂಡ ಪರಿವರ್ತನಾ ಯಾತ್ರೆಗೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು ಎನ್ನುವುದನ್ನು ಮಾಧ್ಯಮಗಳೆಲ್ಲಾ ಖಾಲಿ ಖುರ್ಚಿಯನ್ನು ತೋರಿಸುತ್ತಿದ್ದವು. ಆದರೆ ಜನರೆಲ್ಲಾ ಬಿಸಿಲಿಗೆ ಬೆಂಡಾಗಿ ನೆರಳಲ್ಲಿ ನಿಂತುಕೊಂಡಿದ್ದರು ಎನ್ನುವ ಸತ್ಯ ಕೊನೆಗೂ ಬಯಲಾಯಿತು. ಆದರೆ ಈ ವೇಳೆ ರಾಜ್ಯ ನಾಯಕರನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡರು ಎಂದು ಮಾಧ್ಯಮಗಳಲ್ಲಿ ಬಿತ್ತರವಾಯಿತು.

ಮಾಧ್ಯಮಗಳು ಬಿತ್ತರಿಸಿದ ಪ್ರಕಾರ ಪರಿವರ್ತನಾ ಯಾತ್ರೆಯಲ್ಲಿ ಕಡಿಮೆ ಜನರಿರುವುದನ್ನು ಕಂಡು ರಾಜ್ಯನಾಯಕರನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡರು ಎಂದವು. ಆದರೆ ಅಮಿತ್ ಶಾ ಜನರು ಕಡಿಮೆ ಇದ್ದಾರೆಂದು ತರಾಟೆಗೆ ತೆಗೆದುಕೊಂಡಿದ್ದಲ್ಲ. ಬದಲಿಗೆ ಯಾತ್ರೆಗೆ ಬರುವ ಕಾರ್ಯಕರ್ತರಿಗೆ ಸರಿಯಾದ ವ್ಯವಸ್ಥೆ ಅಂದರೆ ಪೆಂಡಾಲ್, ಯಾಕೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಮಾಧ್ಯಮಗಳೆಲ್ಲಾ ಇದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಅಂತೆ ಸಂತೆಗಳನ್ನು ಕಂತೆಗಳನ್ನೇ ಪ್ರಚಾರ ಮಾಡಿದವು.

ಅಮಿತ್ ಶಾ ಅವರನ್ನು ಕಾಣಲು ಸಾವಿರಾರು ಜನ ಬೇರೆ ಬೇರೆ ಊರುಗಳಿಗಿಂತ ಬರುತ್ತಾರೆ ಅಂತ ಮೊದಲೇ ಗೊತ್ತಿತ್ತು. ಅದನ್ನು ತಡೆಯಲು ಸಿದ್ದುಖಾನ್ ಸರಕಾರ ತನ್ನ ಕೈಗೊಂಬೆಯಂತಿರುವ ಪೊಲೀಸ್ ಇಲಾಖೆಯನ್ನು ಬಳಸಿತು. ದೂರದೂರುಗಳಿಂದ ಬರುತ್ತಿದ್ದ ಬೈಕ್‍ಗಳನ್ನು ತಡೆದ ಪೊಲೀಸರು ನಿಗದಿತ ಸ್ಥಳಕ್ಕೆ ಹೋಗದಂತೆ, ಗಮ್ಯ ಸ್ಥಳವನ್ನು ತಲುಪದಂತೆ ತಡೆದರು. ಇದರಿಂದ ಇನ್ನಷ್ಟು ಜನರು ಸೇರಲು ಅಡ್ಡಿಯಾಯಿತು.

ಪರಿವರ್ತನಾ ಯಾತ್ರೆಯಲ್ಲಿ ವಾಹನದಟ್ಟಣೆಯಾಗದಂತೆ ಮೊದಲೇ ವ್ಯವಸ್ಥೆ ಮಾಡಿಕೊಂಡೇ ಕಾರ್ಯಕರ್ತರು ಹೊರಟಿದ್ದರು. ಆದರೆ ಪೊಲೀಸರು ಸರಕಾರದ
ಆಣತಿಯಂತೆ ಅಲ್ಲಲ್ಲಿ ತಡೆದು ರಸ್ತೆಯ ಮಧ್ಯೆಯೇ ನಿಲ್ಲಿಸಿ ವಾಹನದಟ್ಟಣೆಯಾಗುವಂತೆ ನೋಡಿಕೊಂಡರು. ಪರಿವರ್ತನಾ ಯಾತ್ರೆ ಎಲ್ಲಿಗೆಲ್ಲಾ ಹೋಗುತ್ತದೋ ಅಲ್ಲೆಲ್ಲಾ ಪೊಲೀಸರು ಇದನ್ನೇ ನಡೆಸಿಕೊಂಡು ಬರುತ್ತಿದ್ದಾರೆ. ಒಟ್ಟಿನಲ್ಲಿ ಪರಿವರ್ತನಾ ಯಾತ್ರೆಗೆ ಜನರು ಸೇರದಂತೆ ಮಾಡುವುದನ್ನು ವ್ಯವಸ್ಥಿತವಾಗಿ ನಡೆಸಿಕೊಂಡರು. ವಿಪರ್ಯಾಸವೆಂದರೆ ಈ ಸತ್ಯವನ್ನು ಯಾವುದೇ ಮಾಧ್ಯಮಗಳೂ ವರದಿಯನ್ನೇ ಮಾಡದೆ ಪಕ್ಷಪಾತಿ ಧೋರಣೆಯನ್ನು ತೋರಿದರು.

ಪರಿವವರ್ತನಾ ಯಾತ್ರೆ ಯಶಸ್ವಿಯಾಗುವುದನ್ನು ಮನಗಂಡ ಕಾಂಗ್ರೆಸ್ ವಿರೋಧಿ ಪಕ್ಷಗಳು ಯಾತ್ರೆಗೆ ಕಲ್ಲುತೂರಾಟ ನಡೆಸಿ ಅದನ್ನು ಬಿಜೆಪಿ ಮಧ್ಯೆ ಇರುವ
ಭಿನ್ನಮತ ಎಂದು ತೋರಿಸಿಕೊಂಡರು. ಆದರೆ ಅಲ್ಲಿ ನಡೆದಿದ್ದೇ ಬೇರೆ…

ಶುಕ್ರವಾರ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಬಾಣಸಂದ್ರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಬರುತ್ತಿದ್ದಾಗ ವಾಹನದ ಮೇಲೆ ಶುಕ್ರವಾರ ಕಲ್ಲು ತೂರಾಟ ನಡೆಯಿತು. ಮೂಲತಃ ಅಲ್ಲಿ ಕಲ್ಲುತೂರಾಟ ನಡೆಸಿದ್ದು ಬಿಜೆಪಿ ಕಾರ್ಯಕರ್ತರಲ್ಲ ಎನ್ನುವುದನ್ನು ಪೊಲೀಸರೇ ಒಪ್ಪಿಕೊಂಡಿದ್ದಾರೆ. ಬಿಜೆಪಿ ವಿರೋಧಿ ಪಕ್ಷದ ಕಾರ್ಯಕರ್ತರು ಹೊಟ್ಟೆಕಿಚ್ಚಿನಿಂದ ನಡೆಸಿದ ಕಲ್ಲುತೂರಾಟದಿಂದ ಪರಿವರ್ತನಾ ಯಾತ್ರೆಯ ವಾಹನದ ಮುಂಭಾಗದ ಗಾಜು ಪುಡಿಯಾಯಿತು. ಆದರೆ ಈ ಬಗ್ಗೆ ಸ್ಪಷ್ಟವಾದ ವರದಿ ನೀಡಲು ಯಾವುದೇ ಮಾಧ್ಯಮಗಳು ಮುಂದಾಗಲಿಲ್ಲ.

`ನವ ಕರ್ನಾಟಕ ಪರಿವರ್ತನಾ ಯಾತ್ರೆ’ಭಾರಿ ಮುಖಭಂಗ ಎಂದು ತೋರಿಸುವ ಮೀಡಿಯಾಗಳು ಇದರ ಹಿಂದಿನ ಕಾಂಗ್ರೆಸ್ ಸರಕಾರದ ಹುನ್ನಾರವನ್ನು
ಬಹಿರಂಗಗೊಳಿಸಲು ವಿಫಲವಾದವು. ಮೈಸೂರು, ಚನ್ನರಾಯಪಟ್ಟಣ, ಪಾಂಡವಪುರ, ಕೊಡಗಿನಿಂದ ಬರುತ್ತಿರುವ ಸಾವಿರಾರು ಕಾರ್ಯಕರ್ತರನ್ನು ಪೊಲೀಸರನ್ನು ಬಳಸಿ ತಡೆದು ತನ್ನ ಭಂಡತನವನ್ನು ಮತೊಮ್ಮೆ ಸಾಬೀತುಪಡಿಸಿದ್ದಾರೆ. ನವ ಕರ್ನಾಟಕ ಪರಿವರ್ತನಾ ಯಾತ್ರೆ ತುರುವೆಕೇರಿ ತಲುಪಿದಾಗ ಅಲ್ಲಿನ ಅಪಾರ ಜನಸ್ತೋಮವನ್ನು ಕಂಡು ಕಾಂಗ್ರೇಸ್‍ಗೆ ಹೊಟ್ಟೆಕಿಚ್ಚಿನಿಂದ ತಡೆಯಲಾಗಲಿಲ್ಲ. ಜೊತೆಗೆ ಮಾಧ್ಯಮಗಳಂತೂ ಇದನ್ನು ತೋರಿಸಲು ವಿಫಲವಾದವು.

ಬಿಜೆಪಿ ನಡೆಯುತ್ತಿರುವ ಈ ಪರಿವರ್ತನಾ ಯಾತ್ರೆ ರಾಜ್ಯ ರಾಜಕಾರಣದ ಮಟ್ಟಿಗೆ ಇದೊಂದು ಐತಿಹಾಸಿಕ ಯಾತ್ರೆಯಾಗಲಿದ್ದು, ದಾಖಲೆ ಮೆರೆಯಲಿದೆ. ಸುಮಾರು 75 ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಹಲವು ಮುಖಂಡರು ಅಂದಾಜು 7,500 ಕಿ.ಮೀ. ಗಳನ್ನು ಕ್ರಮಿಸುವ ಗುರಿ ಹೊಂದಲಾಗಿದೆ. ಪ್ರತೀ ಪ್ರದೇಶಗಳಲ್ಲೂ ನಿರೀಕ್ಷಿಸದ ಮಟ್ಟಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಒಟ್ಟು 75 ದಿನಗಳ ಕಾಲ ನಡೆಯುವ ಪರಿವರ್ತನಾ ರ್ಯಾಲಿಗೆ ಅಭೂತಪೂರ್ವ ಯಶಸ್ಸನ್ನು ಕಂಡು ಬೆಚ್ಚಿಬಿದ್ದ ಸಿದ್ಧುಖಾನ್ ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ
ಹೊರಿಸುತ್ತಿದ್ದಾರೆ. ಪ್ರಧಾನಿ ಕಂಡ್ರೆ ಭಯವಿಲ್ಲ ಎಂದು ಹೇಳುವ ಸಿದ್ದುಖಾನ್ ಪರೋಕ್ಷವಾಗಿ ಭಯಪಟ್ಟಿದ್ದಾರೆ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಮತ ಹಾಕಿದ ಸಾಮಾನ್ಯ ಜನಕ್ಕೆ, ಜನರ ಭಾವನೆಗಳಿಗೆ ಬೆಲೆ ಕೊಡದ ಭಂಡತನದ ವ್ಯಕ್ತಿ ಈ ಸಿದ್ದರಾಮಯ್ಯ, ಪ್ರಧಾನಿಯವರಿಗೆ ಗೌರವ ಕೊಡೋದು ದೂರದ ಮಾತು.

ಮುಂದೆ ಏನೇ ಸರ್ಕಸ್ ಮಾಡಿದರೂ ಸರಕಾರ ಬರೋಲ್ಲ ಎಂದು ಸಿದ್ದುಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ಹತಾಶೆಯಿಂದ ಬಿಜೆಪಿಗೆ ಜನಬೆಂಬಲವಿಲ್ಲ ಎಂದು
ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಪರಿವರ್ತನಾ ಯಾತ್ರೆ ಶುರುವಾಗುವ ಮುಂಚೆ ಸಿದ್ದು ಏನು ಮಾಡಿದ್ದರು ಎಂದು ಗೊತ್ತಾದರೆ ಖಂಡಿತಾ ಸಿದ್ದರಾಮಯ್ಯ
ಯಾತ್ರೆಗೆ ಹೆದರಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು.

ಪಬ್ಲಿಕ್ ಟಿವಿಯವರು ಎಕ್ಸ್‍ಕ್ಲೂಸಿವ್ ಆಗಿ ಬಯಲು ಮಾಡಿರುವ ಸುದ್ದಿಯ ಪ್ರಕಾರ ಸಿದ್ದು ಮಾಡಿದ್ದಿಷ್ಟು…

ಮುಂಬರುವ ಚುನಾವಣೆಗೆ ಬಿಜೆಪಿಯಿಂದ ಹಿಂದುತ್ವ ಅಜೆಂಡಾ ಘೋಷಣೆಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇಂದು ಹಿರಿಯ ಪೆÇಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆ ವೇಳೆ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಎಸ್‍ಪಿ, ಪೊಲೀಸ್ ಆಯುಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯಲ್ಲಿ ಸಿಎಂ ಬರೀ ಪರಿವರ್ತನಾ ರ್ಯಾಲಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಪರಿವರ್ತನಾ ರ್ಯಾಲಿಯಾವ ರೀತಿ ನಡೆಯುತ್ತದೆ, ಎಲ್ಲೆಲ್ಲಿ ಏನೇನಾಗುತ್ತದೆ
ಎಂಬುದರ ಬಗ್ಗೆ ಇಂಚಿಚು ಮಾಹಿತಿ ನೀಡಬೇಕು. ಯಾತ್ರೆ ವೇಳೆ ಎಲ್ಲಿಯಾದರೂ ಉದ್ಧಟತನ ಮಾಡಿದ್ರೆ ಮುಲಾಜಿಲ್ಲದೆ ಅವರ ವಿರುದ್ಧ ಕೇಸ್‍ಗಳನ್ನು ಹಾಕಬೇಕು. ಪರಿವರ್ತನಾ ಯಾತ್ರೆಯ ಅಲೆ ಹೇಗಿದೆ? ಅದಕ್ಕೆ ಎಷ್ಟು ಜನ ಸೇರಿದ್ರು, ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ತಿಳಿಸಿದ್ದಾರೆ ಎಂದು ಸುದ್ದಿ ಮಾಡಿದೆ.

ಸಾಧ್ಯವಾದರೆ ಪರಿವರ್ತನಾ ಯಾತ್ರೆಗೆ ಅಡ್ಡಗಾಲು ಹಾಕಿ, ಭಯಪಡುವ ಅಗತ್ಯ ಇಲ್ಲ. ಸೂಕ್ಷ ಪ್ರದೇಶಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವವರು ಯಾರಾದರೂ ಬಂದರೆ ಅವರನ್ನು ತಡೆಯಿರಿ. ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ತಿಳಿದರೆ ತಕ್ಷಣ ನಿಷೇಧಾಜ್ಞೆ ಜಾರಿ ಮಾಡಿ. ನಿಷೇಧಾಜ್ಞೆ ಜಾರಿ ಮಾಡಿದ ಪ್ರದೇಶದಲ್ಲಿ ಯಾತ್ರೆ ಆಗದಂತೆ ನೋಡಿಕೊಳಬೇಕು. ಈ ಯಾತ್ರೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು. ಜೊತೆಗೆ ಸಾರ್ವಜನಿಕರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು. ಟಿಪ್ಪು ಜಯಂತಿ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಕಾಪಾಡಬೇಕು. ಹಾಗೇನಾದರೂ ಅಹಿತಕರ ಘಟನೆ ನಡೆದರೆ ತಲೆದಂಡ ಗ್ಯಾರೆಂಟಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡುವ ನಾಯಕರ ಪಟ್ಟಿ ತಯಾರಿಸಿ, ಭದ್ರತೆ ನೋಡಿಕೊಳ್ಳಿ. ಅದನ್ನು ಬಿಟ್ಟು ಚಮಚಗಿರಿ ಮಾಡೋಕೆ ಹೋದ್ರೆ ನಿಮಗೆ ಬಹುಮಾನ ಸಿಕ್ಕುತ್ತೆ ನೋಡಿ ಎಂದು ಎಚ್ಚರಿಸಿದ್ದಾರೆ ಎಂದು ಬಿತ್ತರಿಸಿದೆ.

ಒಟ್ಟಾರೆ ಪರಿವರ್ತನಾ ಯಾತ್ರೆಗೆ ಸಿದ್ದುಸರಕಾರ ಬೆದರಿದ್ದು, ಅದಕ್ಕಾಗಿಯೇ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮೊದಲೇ ತಯಾರಿಸಿಟ್ಟುಕೊಂಡಿದೆ ಎನ್ನುವುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು..

-ಚೇಕಿತಾನ

Tags

Related Articles

Close