ಪ್ರಚಲಿತ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಂದೇ ಒಂದು ಹೇಳಿಕೆಯಿಂದ ರಾಹುಲ್ ಗಾಂಧಿಯ ಮರ್ಯದೆಯನ್ನು ಹರಾಜಿಗಿಟ್ಟಿದ್ದು ಹೀಗೆ! ರಾಹುಲ್ ಗಾಂಧಿಯ ನೈತಿಕ ಗೆಲುವು ತಿರುಗಿ ಬಡಿದ ರೋಚಕ ಕಥೆ!

ಕಾಂಗ‌್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ‘ನೈತಿಕ ಗೆಲುವು’ ಎಂದು ಬೋಂಗು ಬಿಡಲು ಇನ್ನೊಂದು ಅವಕಾಶವನ್ನು ಗಿಟ್ಟಿಸಿದ್ದಾನೆ! ಇತ್ತ, ಹಿಮಾಚಲ್ ಹಾಗೂ ಗುಜರಾತಿನಲ್ಲಿ ಹೇಗೆ ರಾಹುಲ್ ಗಾಂಧಿ ನೈತಿಮವಾಗಿಯೇ ಸೋತಿದ‌್ದಾನೆ ಎಂಬುದನ್ನು ಇನ್ನೂ ಮರೆತಿಲ್ಲ. ಈ ಎರಡು ಸೋಲುಗಳನ್ನು ಅರಗಿಸಲಾಗದೇ ಇರುವ ಬೆನ್ನಲ್ಲೇ, ಭಾನುವಾರ ಹೊರಬಿದ್ದ ಬೈಪೋಲ್ ಚುನಾವಣೆಯ ಫಲಿತಾಂಶವೊಂದು ಕಾಂಗ್ರೆಸ್ ಹೇಳಿದ ಹಾಗೆ, ರಾಹುಲ್ ಗಾಂಧಿ ನೈತಿಕ ಗೆಲುವನ್ನು ಭರ್ಜರಿಯಾಗಿ ಸಾಧಿಸಿದ್ದಾನೆ ಬಿಡಿ!

5 ಬೈಪೋಲ್ ಗಳಲ್ಲಿ, ಬಿಜೆಪಿ ಮೂರು ಪ್ರದೇಶಗಳನ್ನು ತನ್ನದಾಗಿಸಿಕೊಂಡಿದ್ದರೆ, ರಾಹುಲ್ ಗಾಂಧಿ, ‘ಶೂನ್ಯ’ ಸಂಪಾದನೆಯ ಮೂಲಕ ತಮ್ಮ ‘ನೈತಿಕ ಗೆಲುವು’ ಸಾಧಿಸಿದ್ದಾರೆ! ಅರುಣಾಚಲದಲ್ಲಿ ಎರಡು ಸ್ಥಾನಗಳನ್ನು,ಹಾಗೂ, ಉತ್ತರ ಪ್ರದೇಶದ ಗ್ರಾಮೀಣ ಭಾಗದಲ್ಲಿ ಒಂದು ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಬಿಜೆಪಿಯ ಗೆಲುವು ಕಾಂಗ್ರೆಸ್ಸಿಗರಿಗೆ ಬರ್ನಾಲ್ ಖರ್ಚು ಮಾಡಿಸಿದರೂ ಸಹ, ಭಾರತೀಯರು ‘ಅಭಿವೃದ್ಧಿ ಬೇಕಾದರೆ ಬಿಜೆಪಿಯೇ ಪರಿಹಾರ” ಎಂಬುದಾಗಿ ಸಾಬೀತು ಪಡಿಸುತ್ತಿದ್ದಾರೆ!

ಬಿಜೆಪಿಯದ್ದೇ 3 ಸ್ಥಾನಗಳನ್ನು ಬಿಟ್ಟು, ಮಮತಾ ಬ್ಯಾನರ್ಜೀ ತ್ರಿನಾಮೂಲ್ ಕಾಂಗ್ರೆಸ್ ಕೂಡಾ ಒಂದು ಸ್ಥಾನವನ್ನು ಗೆದ್ದಿದೆ. ಅದಲ್ಲದೇ, ಆರ್ ಕೆ ನಗರ ಬೈಪೋಲ್ ನಲ್ಲಿ ಟಿಟಿವಿ ದಿನಕರನ್ ಭರ್ಜರಿ ಗೆಲುವು ಸಾಧಿಸಿದ್ದಾರೆ! ಆದರೆ, ರಾಹುಲ್ ಗಾಂಧಿ ಮಾತ್ರ ಶೂನ್ಯ ಸಂಪಾದನೆಯ ಮೂಲಕ ನೈತಿಕ ಗೆಲುವು ಸಾಧಿಸಿದ್ದಾರೆ!

https://twitter.com/rishibagree/status/944876563522240513

ಅಮಿತ್ ಷಾ ಕಾಂಗ್ರೆಸ್ ಅಧ್ಯಕ್ಷನನ್ನು ಟೀಕಿಸಿದ್ದು ಹೇಗೆ ಗೊತ್ತಾ?!

ಅಮಿತ್ ಷಾ ಮತ್ತೆ ಸಾಬೀತು ಪಡಿಸಿದ್ದಾರೆ! ಕಾಂಗ್ರೆಸ್ ನ ಈ ಎಲ್ಲಾ ಕೊಳಕು ರಾಜಕೀಯ ಬಿಜೆಪಿಯನ್ನು ಏನು ಮಾಡಲೂ ಸಾಧ್ಯವಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸಿದ್ದಾರೆ! ಇತ್ತ, ಗುಜರಾತಿನಲ್ಲಿ 1995 ರಿಂದ ನಿರಂತರವಾಗಿ ಸೋಲುತ್ತಿರುವುದು ಕಾಂಗ್ರೆಸ್ ಆದರ ಸಹ, ರಾಹುಲ್ ಗಾಂಧಿಗದು ನೈತಿಕ ಗೆಲುವಂತೆ! ಇದು ನೋಡಿ! ಧನಾತ್ಮಕ ಚಿಂತನೆಯ ಪರಮಾವಧಿ!

“ಇವತ್ತೂ ಸಹ, ಕಾಂಗ್ರೆಸ್ ನಾಯಕರು ‘ನೈತಿಕ ಗೆಲುವು’ ಎಂದು ಬೆನ್ನುತಟ್ಟಿಕೊಳ್ಳಲಾರರು ಎಂಬ ಭರವಸೆ ಹೊಂದಿದ್ದೇನೆ! ಗುಜರಾತ್ ಹಾಗೂ ಹಿಮಾಚಲ್ ದಲ್ಲಿ ಕಾಂಗ್ರೆಸ್ ನನ್ನು ಅಲ್ಲಿಯ ಪ್ರಜೆ ತಿರಸ್ಕರಿಸಿದ ಮೇಲೆ, ಮತ್ತೊಮ್ಮೆ ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿಯೂ ಜನ ಕಾಂಗ್ರೆಸ್ ನನ್ನು ಮೂಲೆಗುಂಪಾಗಿಸಿದ್ದಾರೆ. ಭಾರತೀಯರು ಮತ್ತದೇ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ನ ದುರಾಡಳಿತವನ್ನು ಒಪ್ಪಲು ತಯಾರಿಲ್ಲ.” ಎಂದು ಅಮಿತ್ ಷಾ ಗೊಳ್ಳೆಂದು ಮನದಲ್ಲೆ ನಗೆಯಾಡಿದ್ದಾರೆ!

ನೀವಿದನ್ನು ನಂಬುವಿರಾ?!

ರಾಹುಲ್ ಗಾಂಧಿಗೆ ಪಟ್ಟಾಭಿಷೇಕವಾದ ಎಂಟು ದಿನಗಳೊಳಗೇ, ಕಾಂಗ‌್ರೆಸ್ ಪಕ್ಷ ಉತ್ತರ ಪ್ರದೇಶ, ಹಿಮಾಚಲ್, ಅರುಣಾಚಲ್, ಗುಜರಾತ್, ಪಶ್ಚಿಮ ಬಂಗಾಳ ದಲ್ಲಿ ತನ್ನ ಅಧಿಕಾರವನ್ನೇ ಕಳೆದುಕೊಂಡಿದೆ! ಆದರೂ ಸಹ,ಒಂದಷ್ಟು ಕಾಂಗ‌್ರೆಸ್ ಪಕ್ಷಕ್ಕೆ ತಮ್ಮ ತಾ ಮಾರಿಕೊಂಡ ಮಾಧ್ಯಮಗಳು ರಾಹುಲ್ ಗಾಂಧಿ ಒಬ್ಬ ನವಯುಗದ ನಾಯಕ ಎಂದು ಬಿಂಬಿಸುತ್ತಿದೆ.

ತದನಂತರ, ಸರಣಿ ಟ್ವೀಟ್ ಗಳ ಮೂಲಕ, ಹೇಗೆ ಮತದಾರರು ಬಿಜೆಪಿಯ ಕಡೆಗೆ ವಾಲುತ್ತಿದ್ದಾರೆ ಎಂದು ವಿಸ್ತೃತವಾಗಿ ತಿಳಿಸಿದ್ದಾರೆ!

1. ಪಶ್ಚಿಮ ಬಂಗಾಳದಲ್ಲಿ, ಸಬಂಗ್ ಪ್ರದೇಶದಲ್ಲಿ ಬಿಜೆಪಿಗೆ ಸಿಗುತ್ತಿರುವ ಬೆಂಬಲ ನಿಜಕ್ಕೂ ಪ್ರಶಂಸನೀಯವಾದುದು. ನಮ್ಮ ಪಕ್ಷ ಶೀಘ್ರದಲ್ಲಿ ಎಡಪಂಥ ಪಕ್ಷಕ್ಕೆ ಸಡ್ಡು ಹೊಡೆಯಲು ತಯಾರಾಗುತ್ತಿದೆ! ನಾವು ಪಶ್ಚಿಮ ಬಂಗಾಳ ದ ಜನತೆಗೋಸ್ಕರ ಕೆಲಸ ಮಾಡುತ್ತೇವೆ! ಪಶ್ಚಿಮ ಬಂಗಾಳದ ಬಿಜಪಿ ಘಟಕಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ.

2. ಅರುಣಾಚಲದ ಲಿಕಾಬಾಲಿ, ಹಾಗೂ ಪಕ್ಕೆ ಕೆಸಾಂಗ್ ಮೋದಿಯವರ ”Act East Policy’ ಗೆ ಬಹಳಷ್ಟು ಬೆಂಬಲ ನೀಡಿದ್ದಲ್ಲದೇ, ಪಕ್ಷಕ್ಕೂ ಸಹ ಬೆಂಬಲ ನೀಡುತ್ತಿದ್ದಾರೆ! ನಾವು ಈಶಾನ್ಯ ರಾಜ್ಯಗಳಲ್ಲಿ ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ! ಪ್ರಜಾಪ್ರಭುತ್ವದ ಸೌಲಭ್ಯಗಳು ಪ್ರತಿಯೊಬ್ಬ ಪ್ರಜೆಗೂ ಸಿಗುವಂತೆ ಮಾಡುತ್ತೇವೆ. ಮುಖ್ಯಮಂತ್ರಿ ಪ್ರೇಮಖಂಡ್ ಹಾಗೂ ಅರುಣಾಚಲದ ಬಿಜೆಪಿ ಘಟಕಕ್ಕೆ ಅಭಿನಂದನೆಗಳು.

3. ಸಿಕಂದ್ರದಲ್ಲಿ ಸಿಕ್ಕ ಜಯ ನಮಗೆ ರೈತರ ಪ್ರೀತಿ ಯನ್ನು ಸಾಬೀತು ಪಡಿಸಿದೆ. ಬಿಎಸ್ ಪಿ ಹಾಗೂ ಎಸ್ ಪಿ ಯ ಯಾವ ತಂತ್ರಗಳೂ ರೈತರನ್ನು
ಮೂರ್ಖರನ್ನಾಗಿಸಲಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಡಾ.ಎಮ್ ಎನ್ ಪಾಂಡೆ ಮತ್ತು ಬಿಜೆಪಿಯ ಕಾರ್ಯಕರ್ತರಿಗೆ ಅಭಿನಂದನೆಗಳು.

4. ಗುಜರಾತ್ ಮತ್ತು ಹಿಮಾಚಲದ ಗೆಲುವಿನ ನಂತರ, ಬಿಜೆಪಿ ಐದು ಪ್ರದೇಶಗಳಲ್ಲಿ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಪಕ್ಷಕ್ಕೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎಂಟು ಪಟ್ಟು ತನ್ನ ಮತಗಳನ್ನು ಹೆಚ್ಚಿಸಿಕೊಂಡಿದೆ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲದಿರಬಹುದು. ಆದರೆ, 2016 ರಲ್ಲಿ ಬಿಜೆಪಿಗೆ ಸಿಕ್ಕಿದ್ದು 4600 ಮತಗಳು. ಆದರೆ, ಈ ಸಲ ಬಿಜೆಪಿಗೆ ಸಿಕ್ಕಿರುವುದು 37,476 ಮತಗಳು! ಹಿಂದಿನ ವರ್ಷ ಸಬಂಗ್ ಕಾಂಗ್ರೆಸ್ ನ ಪಾಲಾಗಿ್ತು. ಆದರೆ, ಈ ವರ್ಷ ಕಾಂಗ್ರೆಸ್ ನನ್ನು ಮೂಸಿಯೂ ನೋಡಲಿಲ್ಲ ಬಂಗಾಳದ ಜನ.

https://twitter.com/rishibagree/status/944943520225271810

ಉತ್ತರ ಪ್ರದೇಶದಲ್ಲಿ ಗಳಿಸಿದ ಮತಗಳೆಷ್ಟು ಗೊತ್ತೇ?!

ಬಿಜೆಪಿಯ ಅಜಿತ್ ಸಿಂಗ್ ಪಾಲ್ 73,284 (44 .86 %) ಮತಗಳನ್ನು ಗಳಿಸಿದ್ದರೆ, ಸಮಾಜವಾದಿ ಪಕ್ಷದ ಸೀಮಾ ಸಚನ್ 61,423 ( 37.60 %) ಮತಗಳನ್ನು ಗಳಿಸಿದ್ದಾರೆ! ಕಾಂಗ್ರೆಸ್ ನ ಪ್ರಭಾಕರ್ ಪಾಂಡೆ ಗಳಿಸಿದ್ದು ಕೇವಲ 19,084 ಮತಗಳನ್ನು ಮಾತ್ರ.

– ಪೃಥು ಅಗ್ನಿಹೋತ್ರಿ

Tags

Related Articles

Close