ಪ್ರಚಲಿತ

ಬಿಜೆಪಿ ಗುಜರಾತಿನಲ್ಲಿ ಅತೀ ಸುಲಭವಾಗಿ 115 ಕ್ಷೇತ್ರಗಳನ್ನು ಗೆಲ್ಲಬಹುದಿತ್ತು! ಉಳಿದ 16 ಕ್ಷೇತ್ರಗಳನ್ನು ಸೋಲಿಸಿದ್ದು ಕಾಂಗ್ರೆಸ್ ಅಲ್ಲ! ಯಾರೆಂದು ತಿಳಿದರೆ ದಂಗಾಗುವಿರಿ!!!

ಸುಮಾರು 10 ಕ್ಕೂ ಹೆಚ್ಚು ಪೂರ್ವ ಚುನಾವಣಾ ಸಮೀಕ್ಷೆಗಳುನರೇಂದ್ರ ಮೋದಿ ನೇತೃತ್ವದ ಬಿಜೆಪಿಯೇ ಭರ್ಜರಿಯಾಗಿ ಗೆಲ್ಲುತ್ತದೆಂದು ಹೇಳಿದ್ದರು. ಆದರೆ, ಇವತ್ತಿನ ಫಲಿತಾಂಶ ಮಾತ್ರ ‘ಬಿಜೆಪಿ ಗೆದ್ದಿದೆ’ ಅಷ್ಟೇ! ಬಿಜೆಪಿಯೇ ಸರಕಾರ ರಚನೆ ಮಾಡುವುದಾದರೂ ಸಹ, ಎಲ್ಲರಿಗೂ ಸಹ ಪ್ರಶ್ನೆ ಇರುವುದು ಅದೇ! 2012 ರಲ್ಲಿ 116 ಸ್ಥಾನಗಳ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ ಇದ್ದಕ್ಕಿದ್ದ ಹಾಗೆ ಯಾಕೆ ಇಷ್ಟು 99 ರ ಅಂಕಿಯಲ್ಲಿ ನಿಲ್ಲಬೇಕಾಯಿತೆಂಬುದೇ! ಹಾಗಾದರೆ, ಮೋದಿಯ ವರ್ಚಸ್ಸು ಕಳೆಗುಂದಿತೇ?!

ಹೌದು! ಅಪಪ್ರಚಾರವಾಗಿದ್ದು ಕಾಂಗ್ರೆಸ್ ನಾಯಕರಿಂದಲ್ಲ. ಬದಲಾಗಿ, ಬಿಜೆಪಿಯವರಿಂದ!

1. ಬರೋಬ್ಬರಿ ಐದು ಲಕ್ಷ ಜನ NOTA (None Of The Above) ಕೆ ಮತ ನೀಡಿದ್ದಾರೆಂಬುದನ್ನು ನಂಬುವಿರಾ?! ಈ ಐದು ಲಕ್ಷ ಜನ ಮತದಾರರೂ ಸಹ ಬಹುಷಃ ಬಿಜೆಪಿಯ ಪರವಿದ್ದವರೇ! ಇದೊಂದೇ ಸತ್ಯ ಇಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿರಬಹುದೇ?!

2. ಅದೆಷ್ಟೋ ಪ್ರದೇಶಗಳಲ್ಲಿ 100 ಮತಗಳ ಆಸುಪಾಸಿನ ಅಂತರದಲ್ಲಿ ಬಿಜೆಪಿ ಸೋಲುಂಡಿದೆ! ಅದೇ, ಈ NOTA ಸಂಖ್ಯೆಯನ್ನು ಕಡಿಮೆ ಮಾಡಿದ್ದರೂ ಸಹ, ಬಿಜೆಪಿ ಸುಲಭವಾಗಿ ಗೆಲುವಿನತ್ತ ದಾಪುಗಾಲಿಡುತ್ತಿತ್ತು.

3. ಈ 16 ಸ್ಥಾನಗಳನ್ನೂ ಸಹ ಬಿಜೆಪಿ ಕಳೆದುಕೊಂಡಿದ್ದು NOTA ದಿಂದಲೇ! ಈ NOTA ಹೆಚ್ಚಳವಾಗುವುದಕ್ಕೆ ಕಾರಣ ಕೂಡಾ ಇದೆ! ದಲಿತರು, ಪಾಟೀದಾರ ಸಮುದಾಯ ಹಾಗೂ ಉದ್ಯಮಿಗಳು ಯಾವ ಪಕ್ಷಕ್ಕೂ ಮತ ನೀಡದೇ ಇರುವುದು!! ಉತ್ತರ ಮಾತ್ರ ಸ್ಪಷ್ಟ! ಬಿಜೆಪಿಯ ನಡೆಯಿಂದ ನೊಂದಿದ್ದರು! ಕೆಲ ಪ್ರದೇಶಗಳಲ್ಲಿ ಬಿಜೆಪಿ ತಪ್ಪು.ಮಾಡಿದ್ದರೆ, ಇನ್ನು ಕೆಲ ಪ್ರದೇಶಗಳಲ್ಲಿ ಕಾಂಗ್ರೆಸ್ ಯಶಸ್ವಿಯಾಗಿ ಮತದಾರರನ್ನು ಯಶಸ್ವಿಯಾಗಿ ದಾರಿ
ತಪ್ಪಿಸಿತ್ತು.

ಈ ಕೆಳಗೆ, ನಾವು ಒಂದಷ್ಟು ಅವಲೋಕನವನ್ನು ತೆರೆದಿಟ್ಟಿದ್ದೇವೆ! ಯಾವ್ಯಾವ ಪ್ರದೇಶಗಳಲ್ಲಿ, ಯಾವ್ಯಾವ ಅಭ್ಯರ್ಥಿ ಎಷ್ಟೆಷ್ಟು ಮತಗಳನ್ನು ಪಡೆದಿದ್ದಾರೆ ಎಂಬುದನ್ನು ಗಮನಿಸಿದರೆ, ಖಂಡಿತವಾಗಿ ನಮಗೆ ಬಿಜೆಪಿ ಸೋತಿದ್ದು NOTA ದಿಂದಲೇ ಎನ್ನುವುದು ಸ್ಪಷ್ಟವಾಗುತ್ತದೆ!

ಛೋಟಾ ಉದಯ್ ಪುರ್ ನಲ್ಲಿ NOTA ಮಾರ್ಜಿನ್ ಇದ್ದದ್ದು 5870, ಮತ್ತು ಬಿಜೆಪಿಯ ಸೋಲಿಗೆ ಕಾರಣವಾಗಿದ್ದು 1000 ಕ್ಕಿಂತ ಕಡಿಮೆ ಇದ್ದ ಅಂತರದಿಂದ!

[media-credit id=3 align=”aligncenter” width=”708″][/media-credit]

ಡಾಂಗ್ ನಲ್ಲಿ, NOTA 2184 ಹಾಗೂ ಬಿಜೆಪಿ ಗೆ ಸೋಲಾಗಿದ್ದು 800 ಮತಗಳ ಅಂತರದಿಂದ!

[media-credit id=3 align=”alignnone” width=”708″][/media-credit]

ದಸದಾ ದಲ್ಲಿ, Nota 3797, ಆದರೆ ಬಿಜೆಪಿಗೆ ಸಿಕ್ಕ ಮಾರ್ಜಿನ್ ಸೋಲುಂಡಿದ್ದು 4000 ಮತಗಳ ಅಂತರದಿಂದ. ಇದೂ ಕೂಡ, ಸುಲಭವಾದ ಗೆಲುವಾಗಿತ್ತು ಬಿಜೆಪಿಗೆ.

[media-credit id=3 align=”alignnone” width=”544″][/media-credit]

ದಿಯೋದಾರ್ ನಲ್ಲಿ, nota 2988 ಹಾಗೂ ಬಿಜೆಪಿ ಸೋತಿದ್ದು 1000 ಮತಗಳ ಅಂತರದಲ್ಲಿ.

 

[media-credit id=3 align=”alignnone” width=”552″][/media-credit]

ಧನೇರಾದಲ್ಲಿ, NOTA 2341 ಹಾಗೂ ಬಿಜೆಪಿ ಸೋತಿದ್ದು 2000 ಮತಗಳ ಅಂತರದಿಂದ.

 

[media-credit id=3 align=”alignnone” width=”492″][/media-credit]

ಜಮ್ಝೋಧ್ ಪುರದಲ್ಲಿ, NOTA 3214, ಮತ್ತು ಬಿಜೆಪಿಗೆ 3000 ಮತಗಳ ಅಂತರದಿಂದ ಸೋಲು.

 

[media-credit id=3 align=”alignnone” width=”496″][/media-credit]

ಕಪ್ರಡಾ ದಲ್ಲಿ, NOTA 3868! ಬಿಜೆಪಿ ಗೆ ಸೋಲಾಗಿದ್ದು ಕೇವಲ 178 ಮತಗಳ ಅಂತರದಲ್ಲಿ!!!!

 

[media-credit id=3 align=”alignnone” width=”520″][/media-credit]

ಮನ್ಸಾದಲ್ಲಿ, NOTA 3000! ಬಿಜೆಪಿಗೆ ಸೋಲಾಗಿದ್ದು 600 ಮತಗಳ ಅಂತರದಿಂದ!

ಮಡೋಸಾದಲ್ಲಿ, NOTA 3515! ಬಿಜೆಪಿ ಗೆ 200 ಮತಗಳ ಅಂತರದಲ್ಲಿ ಸೋಲು!

 

[media-credit id=3 align=”alignnone” width=”516″][/media-credit]

ಮೊರ್ಬಿಯಲ್ಲಿ, ನಷ್ಟ ಹಾಗೂ NOTA ಎರಡೂ ಸಹ ಸಮನಾಂತರವಾಗಿತ್ತು.

 

[media-credit id=3 align=”alignnone” width=”528″][/media-credit]

ಮೊರ್ವಾ ಹಡಾಫ್ ನಲ್ಲಿ, 5000 NOTA ವಿದ್ದರೂ, ಬಿಜೆಪಿ ಸೋತಿದ್ದು 400 ಮತಗಳ ಅಂತರದಲ್ಲಿ.

 

[media-credit id=3 align=”alignnone” width=”516″][/media-credit]

ಸೋಜಿತ್ರಾದಲ್ಲಿ, NOTA 3112, ಬಿಜೆಪಿಗೆ 2000 ಮತಗಳ ಅಂತರದಿಂದ ಸೋಲು.

 

[media-credit id=3 align=”alignnone” width=”532″][/media-credit]

ತಲಜಾ ದಲ್ಲಿ, NOTA 3000! ಬಿಜೆಪಿಗೆ 1000 ಮತಗಳ ಅಂತರದಲ್ಲಿ ಸೋಲು!

 

[media-credit id=3 align=”alignnone” width=”520″][/media-credit]

ವಂಕನೇರ್ ನಲ್ಲಿ, NOTA 3000! ಸಾವಿರ ಮತಗಳ ಅಂತರದಲ್ಲಿ ಬಿಜೆಪಿಗೆ ಸೋಲು.

[media-credit id=3 align=”alignnone” width=”504″][/media-credit]

ಲುನಾವಡಾದಲ್ಲಿ, 4000 ಮತಗಳಂತರದಲ್ಲಿ ಬಿಜೆಪಿಗೆ ಸೋಲಾದರೆ, NOTA ಮಾರ್ಜಿನ್ ಕೂಡಾ ಅಷ್ಟೇ ಇದ್ದದ್ದು.

[media-credit id=3 align=”alignnone” width=”524″][/media-credit]

 

ಇದೊಂದು ಅನಿರೀಕ್ಷಿತ ತಿರುವು! ಬಿಜೆಪಿ ಯಾಕೆ ಇಷ್ಟು ಸ್ಥಾನಗಳನ್ನು ಕಳೆದುಕೊಂಡಿದ್ದು ಗೊತ್ತೇ?!

1. ಜಿಎಸ್ ಟಿ ಅಳವಡಿಕೆಯಿಂದಾಗಿ ಬೇಸರವಾಯಿತೆಂಬ ಕಾರಣಕ್ಕೆ ಬಿಜೆಪಿಗೆ ಮತ ನೀಡದವರೂ ಇದ್ದಾರೆ ! ಅಲ್ಲದೇ, ಬೇರಾವ ಆಯ್ಕೆಯೂ ಇಲ್ಲದ್ದಕ್ಕೆ ನೋಟಾ ಗೆ ಮತ ನೀಡಿ ಜೈ ಎಂದರು !

2. ದಲಿತರ ಮೇಲಿನ ಹಲ್ಲೆ ಎಂಬುದು ಸುಳ್ಳು ಸುದ್ದಿಯಾಗಿದ್ದರೂ ಸಹ, ಕಾಂಗ‌್ರೆಸ್ ಅದನ್ನೇ ಅದನ್ನೇ ಸತ್ಯಸುದ್ದಿ ಎಂದು ಯಶಸ್ವಿಯಾಗಿ ಬಿತ್ತರಿಸಿ ಜನರನ್ನು ದಿಕ್ಕುತಪ್ಪಸುವಲ್ಲಿ ಯಶಸ್ವಿಯಾಯಿತು.

3. ಪಾಟೀದಾರರ ಮತ ವಿಭಜನೆಯೂ ಸಹ ನೋಟಾ ಹೆಚ್ಚಾಗಲು ಕಾರಣ!

4. ಒಟ್ಟಾರೆಯಾಗಿ, ಇದ್ಯಾವುದೂ ರಾಹುಲ್ ಗಾಂಧಿಯ ಪ್ರಭಾವವಲ್ಲ. ಬದಲಿಗೆ, ಬಿಜೆಪಿ ನಾಯಕರೇ ಮಾಡಿಕೊಂಡ ಕೆಲವು ತಪ್ಪುಗಳಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close