ಪ್ರಚಲಿತ

ಬಿಪಿನ್ ರಾವರ್ ರಿಂದ ಸ್ಪೋಟಕ ಮಾಹಿತಿ ಬಯಲು!! ಜಗತ್ತಿಗೆ ಭಾರತದ ಸೇನಾ ಮುಖ್ಯಸ್ಥ ನೀಡಿದ ಎಚ್ಚರಿಕೆ ಏನು ಗೊತ್ತಾ!?

ಪಾಕಿಸ್ತಾನ ಎಂದರೆ ಸಾಕು ವಿಶ್ವವೇ ಹೇಳುತ್ತದೆ ‘ಅದೊಂದು ಭಯೋತ್ಪಾದಕ ರಾಷ್ಟ್ರ’ ಎಂದು.
ಯಾಕೆಂದರೆ ಉಗ್ರರಿಗೆ ಆಶ್ರಯ ನೀಡುತ್ತಾ ಬಂದಿರುವ ಪಾಕಿಸ್ತಾನ ಭಾರತದ ವಿರುದ್ದ ಸದಾ ಕತ್ತಿಮಸೆಯುತ್ತಲೇ ಇರುವ ದೇಶ.

ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಬಳಿಕ ಭಾರತದ ಮೇಲೆ‌ ಉಗ್ರಗಾಮಿಗಳ ದಾಳಿ ಸತತವಾಗಿ ನಡೆಯುತ್ತಲೇ ಬಂದಿದೆ. ಗಡಿಭಾಗದಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ಉಪಟಳ ನೀಡುತ್ತಿರುವ ಪಾಕಿಸ್ತಾನ ಭಾರತೀಯ ಸೇನೆಯ ಮೇಲೆಯೂ ಕದನವಿರಾಮ‌ ಉಲ್ಲಂಘನೆ ಮಾಡಿ ಸೇನೆಯ ಮೇಲೂ ದಾಳಿ ನಡೆಸುತ್ತಿದೆ.

‘ಭಾರತದ ಪ್ರಜಾಸತ್ತೆಯ ದೇಗುಲ’ ಎಂದು ಕರೆಸಿಕೊಳ್ಳುವ ಪಾರ್ಲಿಮೆಂಟ್ ಮೇಲೂ ಉಗ್ರರ ದಾಳಿ ನಡೆದಿತ್ತು.
ಈ ದಾಳಿಯಿಂದಾಗಿ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ವಾಣಿಜ್ಯ ನಗರಿ ಮುಂಬಯಿ ಮೇಲೆ‌ ನಡೆದ ಉಗ್ರರ ದಾಳಿ ಭಾರತದ ಪಾಲಿಗೆ ಕರಾಳ ದಿನವಾಗಿತ್ತು. ಅದೆಷ್ಟೋ ಅಮಾಯಕರ ಜೀವ ಬಲಿಪಡೆದುಕೊಂಡ ಈ ದಾಳಿ ಭಾರತ ಪಾಲಿಗೆ ಎಂದೂ ಮರೆಯಲಾಗದ ಘಟನೆ…!

ಭಾರತ – ಪಾಕಿಸ್ತಾನ ವಿಭಜನೆಯಾದ ದಿನದಿಂದಲೂ ಭಾರತ ಉಗ್ರರ ದಾಳಿಗೆ ತುತ್ತಾಗುತ್ತಲೇ ಇದೆ…! ಗುಜರಾತಿನ ಅಕ್ಷರ ಧಾಮ ದೇವಸ್ಥಾನವೂ ಇಸ್ಲಾಮಿಕ್ ಉಗ್ರರ ಬಾಂಬ್ ದಾಳಿಗೆ ನಲುಗಿತ್ತು. ‘ಭೂಲೋಕ ಸ್ವರ್ಗ’ ಎಂದೇ ಕರೆಸಿಕೊಳ್ಳುವ ಭಾರತದ ಮುಕುಟ ಜಮ್ಮು ಕಾಶ್ಮೀರ ನರಕವಾಗಲು ಕಾರಣ ಇದೇ ಜಿಹಾದಿ ಉಗ್ರರು…! ಈ ಎಲ್ಲಾ ದಾಳಿಗಳನ್ನು ಸಹಿಸಿಕೊಂಡು ಪಾಕಿಸ್ತಾನಕ್ಕೆ ಅದರದ್ದೇ ರೀತಿಯಲ್ಲಿ ಭಾರತೀಯ ಸೇನೆಯೂ ಕೂಡ ತಕ್ಕ ಪಾಠ ಕಲಿಸಿದೆ.

ಭಾರತದ ವಾಯುನೆಲೆ ಉರಿ ಪ್ರದೇಶದ ಮೇಲೆ‌ ಉಗ್ರರು ದಾಳಿ ನಡೆಸಿ ಭಾರತೀಯ ಕೆಲ‌ ಸೈನಿಕರನ್ನು ಹತ್ಯೆ ಮಾಡಿತ್ತು.
ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಸೇನೆಗೆ ಆದೇಶ ನೀಡಿತ್ತು.
ಕೆಲವೇ ದಿನಗಳಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಗಡಿ ದಾಟಿ ಪಾಕಿಸ್ತಾನದ ಸೈನಿಕರ ಮೇಲೆ “ಸರ್ಜಿಕಲ್ ಸ್ಟ್ರೈಕ್” ಮಾಡಿ ಹಲವಾರು ಪಾಕ್ ಸೈನಿಕರನ್ನು ಮತ್ತು ಉಗ್ರರ ಅಡಗು ತಾಣಗಳನ್ನು ನಾಶಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಅದರದೇ ರೀತಿಯಲ್ಲಿ ಪಾಠ ಕಲಿಸಿತ್ತು.

ಭಾರತದ ಈ ಮಹತ್ತರವಾದ ದಾಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ಯಾಕೆಂದರೆ ಯಾರೂ ಊಹಿಸದ ರೀತಿಯಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಗಡಿ ದಾಟಿ ದಾಳಿ ನಡೆಸಿತ್ತು…! ಭಾರತದ ಈ ದಿಟ್ಟ ಕ್ರಮಕ್ಕೆ ಹಲವಾರು ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು.

ಆದರೆ ಇದೀಗ ಮತ್ತೊಮ್ಮೆ ಭಾರತ ಉಗ್ರರ ಬೆದರಿಕೆಯನ್ನು ಇನ್ನಷ್ಟು ಭಯಾನಕವಾಗಿ ಎದುರಿಸುತ್ತಿದೆ ಎಂಬ ಆತಂಕ ಹಾಗೂ ದೇಶವೇ ಭಯಭೀತಗೊಳ್ಳುವಂತಹ ವರದಿಯನ್ನು ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೊರಹಾಕಿದ್ದಾರೆ…!! ಇದರ ಜೊತೆಗೆ ‘ಭವಿಷ್ಯದಲ್ಲಿ ಅಣ್ವಸ್ತ್ರಗಳು ಕೂಡ ಉಗ್ರರ ಕೈವಶವಾಗುವ ಸಾಧ್ಯತೆ ಇದೆ’ ಎಂದು ಹೇಳುವ ಮೂಲಕ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿದ್ದಾರೆ…!

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದೇನು…?

ಭಾರತದ ಗಡಿ ನುಸುಳಿ ಬರುವ ಉಗ್ರರ ಬಳಿ ಈಗಾಗಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ,ಭವಿಷ್ಯದಲ್ಲಿ ಅಣ್ವಸ್ತ್ರಗಳು ಕೂಡ ಉಗ್ರರ ಕೈವಶವಾಗುವ ಎಲ್ಲಾ ಸಾಧ್ಯತೆ ಇದೆ ಎಂದಿದ್ದಾರೆ. ಹೀಗಾಗಿ ದೇಶಕ್ಕೆ ಉಗ್ರರಿಂದ ಅಣು ಸಮರದ ಬೆದರಿಕೆ ಇದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ…!

ದಿಲ್ಲಿಯಲ್ಲಿ ನಡೆದ 2018 ರೈಸಿನಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಪಿನ್ ರಾವತ್ ‘ಉಗ್ರರಿಗೆ ಅಣ್ವಸ್ತ್ರಗಳು ಸುಲಭದಲ್ಲಿ ಕೈವಶವಾಗುವ ಅಪಾಯ ಇರುವುದರಿಂದ ಮನುಕುಲ ನಾಶಕ್ಕೆ ಇದು ಕಾರಣವಾಗಲಿದೆ’ ಎನ್ನುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಉಗ್ರರ ದಾಳಿಗೆ ವಿಶ್ವದ ಎಲ್ಲಾ ರಾಷ್ಟ್ರಗಳು ನಲುಗಿ ಹೋಗಿದೆ. ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ಮೇಲೂ ಉಗ್ರರು ಅನೇಕ ದಾಳಿ ಮಾಡಿ ಜೀವ ಬಲಿಪಡೆದುಕೊಂಡಿದ್ದರು…! ಅಣ್ವಸ್ತ್ರಗಳು ಮತ್ತು ರಾಸಾಯನಿಕ ಅಸ್ತ್ರಗಳು ಉಗ್ರರ ಕೈ ಸೇರುವ ಬೆದರಿಕೆ ಇರುವುದರಿಂದ ಇಡಿಯ ಮನುಕುಲವೇ ನಾಶಗೊಳ್ಳುವ ಅಪಾಯವಿದೆ ಎಂದು ಜನರಲ್ ರಾವತ್ ಹೇಳಿದರು.

ಪಾಕಿಸ್ತಾನದ ವಿರುದ್ಧ ಪರೋಕ್ಷ ದಾಳಿ ಮಾಡಿದ ಬಿಪಿನ್ ರಾವತ್ ,ಉಗ್ರ ಸಂಘಟನೆಗಳನ್ನು ಪ್ರೋತ್ಸಾಹಿಸುವ ದೇಶಗಳನ್ನು ಜಗತ್ತಿನ ಇತರ ಎಲ್ಲಾ ರಾಷ್ಟ್ರಗಳು ದೂರ ಇಡಬೇಕು.ಅಂತಹ ದೇಶಕ್ಕೆ ಯಾವುದೇ ರೀತಿಯ ಬೆಂಬಲ ನೀಡಬಾರದು ಎನ್ನುವ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಈಗಾಗಲೇ ದೇಶದ ಯುವಜನತೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜಿಹಾದ್ ವಿಚಾರವನ್ನು ಯುವಕರ ತಲೆಗೆ ತುಂಬಿ ಯುವಜನರನ್ನು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೆಪಿಸುತ್ತಾರೆ…!

ಆದ್ದರಿಂದ ಅತ್ಯಂತ ಸಕ್ರಿಯವಾಗಿರುವ ಉಗ್ರ ಸಂಘಟನೆಗಳ ಇಂಟರ್ನೆಟ್ ಜಾಲವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ…

ಭಾರತ ಮಾತ್ರವಲ್ಲದೇ ಜಗತ್ತಿನ ಎಲ್ಲಾ ರಾಷ್ಟ್ರಗಳು ಉಗ್ರರ ದಾಳಿಗೆ ತುತ್ತಾಗಿರುವುದರಿಂದ ಬಿಪಿನ್ ರಾವತ್ ರವರ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದರೆ ಮಾತ್ರ ಮುಂದಾಗುವ ಭೀಕರ ಅನಾಹುತವನ್ನು ತಪ್ಪಿಸಬಹುದು…!?
–ಅರ್ಜುನ್

Tags

Related Articles

Close