ಪ್ರಚಲಿತ

ಬೆಂಗಳೂರಿನ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಗೆ ಸ್ಫೋಟಕ ಟ್ವಿಸ್ಟ್!! ಅಷ್ಟಕ್ಕೂ, ಸಂತೋಷನ ತಾಯಿ ಹೇಳಿದ್ದೇನು ಗೊತ್ತೇ?!

ಬಹುಷಃ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ! ನೆನ್ನೆ ಹತ್ಯೆಯಾದ ಸಂತೋಷ್ ಸೇರಿ ಬರೋಬ್ಬರಿ ೨೩ ಹಿಂದೂಗಳನ್ನು ಬಲಿ ತೆಗೆದುಕೊಂಡಿದೆ ಕಾಂಗ್ರೆಸ್ ಸರಕಾರ! ಅಷ್ಟಾದರೂ ಸಹ, ಮತ್ತೆ ಮತ್ತೆ ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆಗಳನ್ನು ಸಮರ್ಥಿಸಿಕೊಳ್ಳುತ್ತ, ಮೊನ್ನೆಯಷ್ಟೇ ಅಕ್ಪಸಂಖ್ಯಾತರ ಮೇಲಿದ್ದ ಮೊಕದ್ದಮೆಗಳನ್ನು ಮುಚ್ಚುವಂತೆ ರಾಜ್ಯ ಕಾಂಗ್ರೆಸ್ ಹುಕುಂ ಹೊರಡಿಸಿದ ಒಂದು
ವಾರದೊಳಗೇ ಮತ್ತೊಬ್ಬ ಹಿಂದೂವಿನ ಹತ್ಯೆ!

ಬ್ಯಾನರ್ ಕಟ್ಟುವ ವಿಚಾರಕ್ಕೆ ಕೊಲೆಯಾದದ್ದೋ ಅಥವಾ. . ‌ ..

ಸಂತೋಷ್ ರ ಸಹೋದರ ಬಿಜೆಪಿ ಕಾರ್ಯಕರ್ತರಾಗಿದ್ದಾರೆ! ಅದಲ್ಕದೇ, ಮುಂಚೆ ಮೋದಿಯವರ ಆಗಮನಕ್ಕೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಜಗಳವಾಗಿ ಮುಸಲ್ಮಾನ ಮತಾಂಧರು ನೆತ್ತರು ಹರಿಸಿದ್ದಾರೆ ಎಂದು ನಂಬಲಾಗಿದ್ದರೂ ಈಗ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ‌ ಪ್ರಕರಣಕ್ಕೆ ಸಂಬಂಧಿಸಿ ವಾಸೀಂ ಮತ್ತು ಫಿಲಿಪ್ಸ್ ಎಂಬುವವರನ್ನು ಪೋಲಿಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ಸಂತೋಷ್ ಆಟೋ ಓಡಿಸಿ ಜೀವನ ನಡೆಸುತ್ತಿದ್ದರೂ ಕೂಡ, ಬಾಲ್ಯದಿಂದಲೂ ಕೂಡ ಸ್ವಯಂ ಸೇವಕದ ಬಗ್ಗೆ ಒಲವಿಟ್ಟುಕೊಂಡಿದ್ದ ಸಂತೋಷ್ ಆಗಾಗ್ಗೆ ಬಿಜೆಪಿಯ ಸಮಾರಂಭಗಳಲ್ಲಿ ಮತ್ತು ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು‌ ಎನ್ನಲಾಗಿದೆ. ಆದಲ್ಲದೇ, ಗಲಾಟೆಯಾಗುವ ಸಮಯದಲ್ಲಿ ಸಂತೋಷ್ ರವರ ಇನ್ನಿಬ್ಬರು ಸ್ನೇಹಿತರಾದ ಪ್ರಕಾಶ್ ಮತ್ತು ರಾಜೇಶ್ ಜೊತೆಯಲ್ಲೇ ಇದ್ದರು ಎನ್ನಲಾಗಿದ್ದು, ಗಲಾಟೆಯ ವೇಳೆ ಪಕ್ಷದ ಮಾತು ಬಂದಿರಲಿಲ್ಲವಾದರೂ, ಸಂತೋಷ್ ನ ಮೇಲೆ ಇಲ್ಲಸಲ್ಲದ ಅಪವಾದ ಮಾಡುತ್ತಲೇ ಇದ್ದ ವಾಸೀಂ ಎಂದು ಹೇಳಿದ್ದಾರೆ.

ಅಷ್ಟಕ್ಕೂ, ಸಂತೋಷನ ತಾಯಿ ಹೇಳಿದ್ದೇನು ಗೊತ್ತಾ?!

ಅಸಹನೀಯ ವೆನ್ನಿಸುವುದು ಇಲ್ಲೇ! ಮಗಳನ್ನು ಹೆರಿಗೆಗೆಂದು ಕರೆದುಕೊಂಡು ಹೋದಾಗಲೇ ಒಂದು ಪ್ರಾಣ ಭುವಿಗೆ ಕಾಲಿಡುವಾಗಲೇ ಇತ್ತ ಹೆತ್ತ ಮಗನ ಹತ್ಯೆಯಾಗಿ ಹೋಗಿದೆ. ಸಂತೋಷ್ ರವರ ತಾಯಿ ಹೇಳಿರುವಂತೆ, ಒಂದು ವಾರದ ಹಿಂದೆ ಪೋಲಿಸರಿಗೆ ಸಂತೋಷ್ ವಾಸೀಂ ಮತ್ತು ಆತನ ಬಳಗದ ವಿರುದ್ಧ. ದೂರನ್ನು ನೀಡಿದ್ದ‌ರು. ದೂರಿನಲ್ಲಿ, ವಾಸೀಂ ಮತ್ತು ಆತನ ಬಳಗ ಗಾಂಜಾ ಮಾರುತ್ತಿದ್ದಾರೆ ಎಂದು ಆರೋಪಿಸಿದ್ದ ಸಂತೋಷ್ ಪೋಲಿಸರಿಗೆ ತನಿಖೆ ನಡೆಸುವಂತೆ ಕೋರಿದ್ದ. ಅದಲ್ಲದೇ., ದಾರಿಯಲ್ಲಿ ಬರುವ ಹೆಣ್ಣು ಮಕ್ಕಳ ಕುರಿತು ಅಸಭ್ಯವಾಗಿ ಮಾತನಾಡುತ್ತಿದ್ದ ವಾಸೀಂ ಮತ್ತು ಆತನ ಬಳಗಕ್ಕೆ ಹುಡುಗಿಯರನ್ನು ಚುಡಾಯಿಸುವುದೇ ಕೆಲಸವಾಗಿತ್ತು. ಇದರ ಬಗ್ಗೆಯೂ ಅಸಮಾಧಾನ ತೋರಿದ್ದ ಸಂತೋಷ್ ಬಾರಿ ಬಾರಿಗೂ ವಾಸಿಂ ಮತ್ತು ಆತನ ಗ್ಯಾಂಗ್ ಗೆ ಎಚ್ಚರಿಕೆ ನೀಡಿದ್ದ. ಅವತ್ತಿನಿಂದ ವಾಸೀಂ ಗೆ ಸಂತೋಷ್ ನನ್ನು ಕಂಡರೆ ಆಗುತ್ತಿರಲಿಲ್ಲ. ವಾಸೀಂ ನ ತಂದೆ ಮತ್ತು ಆತ ಕಾಂಗ್ರೆಸ್ ಕಾರ್ಯಕರ್ತರು. ಅವರಿಗೆ ಕಾಂಗ್ರೆಸ್ ಬೆಂಬಲವಿದೆ. ಪೋಲಿಸರು ಕೂಡ ಅವರಿಗೆ ಬೆಂಬಲಿಸುತ್ತಾರೆ. ನಮಗೆ ಯಾರೂ ಬೆಂಬಲಿಸುವುದಿಲ್ಲ. ನನ್ನ ಮಗ ಒಬ್ಬನೇ ಸಿಕ್ಕಿ ಹಾಕಿಕೊಂಡ. ನನ್ನ ಮಗನನ್ನು ಕೊಂದೇ ಬಿಟ್ಟರು ನೋಡಿ..””ಎಂದು ಆ ಹೆತ್ತವಳು ಅಳುವಾಗಲೂ ಕಾಂಗ್ರೆಸ್ಸಿನ ರಾಮಲಿಂಗಾ ರೆಡ್ಡಿ ಮತ್ತೆ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.

ಸಂಘದವರೇನು ಕೊಂದಿಲ್ಲವೇ!?

ಬಹುಷಃ ಕಾಂಗಿಗಳಿಗೆ ಹೆಣದ ಮೇಲೆ ರಾಜಕೀಯ ಮಾಡುವ ಇರಾದೆಗೆ ಅವರದೇ ಮನೆಯ ಹೆಣಗಳು ಸಾಕ್ಷಿಯಾಗಿದ್ದರೆ ಹೆತ್ತವರ ನೋವು ಅರ್ಥವಾಗುತ್ತಿತ್ತೇನೋ? ಆದರೆ, ದುರಾದೃಷ್ಟ! ಮೊನ್ನೆಯಷ್ಟೇ ರಾಮಲಿಂಗಾರೆಡ್ಡಿಯವರು ತರಾತುರಿಯಾಗಿ, ಅಲಕ್ಪಸಂಖ್ಯಾತರ ಮೇಲಿರುವ ಮೊಕದ್ದಮೆ ತೆಗೆಯಿರಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿರುವಾಗಲೇ, ಸ್ವ ಕ್ಷೇತ್ರದಲ್ಲಿಯೇ ಹಿಂದೂ ಯುವಕನ ಬರ್ಬರ ಹತ್ಯೆಯಾಗಿದೆ.

ವಿನಯ್ ಬಾಳಿಗನ ಹತ್ಯೆ ನಿಮ್ಮವರೇ ಅಲ್ಲವೇ ಮಾಡಿದ್ದು? ಹರೀಶ್ ಪೂಜಾರಿ ಹತ್ಯೆಯನ್ನು ಸಂಘದವರೇ ಮಾಡಿದ್ದಲ್ಲವೇ ಎನ್ನುವಂತಹ ಹುಚ್ಚುತನದ ಹೇಳಿಕೆ ಕೊಡುತ್ತಿರುವ ರಾಮಲಿಂಗಾರೆಡ್ಡಿಗೆ ಇದೂ ಬಹುಷಃ ಬ್ಯಾನರ್ ಕಟ್ಟುವ ಸಮಯದಲ್ಲಿ ಬ್ಯಾನರ್ ಹರಿದು ಆಕಸ್ಮಿಕ ಸಾವಾಗಿದೆ ಎಂದು ವರದಿ
ನೀಡಬಹುದೇನೋ! ಇಂತಹ ಬೇಜವಾಬ್ದಾರಿ ಗೃಹಮಂತ್ರಿಯೋರ್ವರು ಮುಸಲ್ಮಾನರನ್ನು ದತ್ತು ತೆಗೆದುಕೊಂಡ ರೀತಿ ಆಡುವುದು ಯಾಕೋ?!

Related image

ತಟ್ಟಲಿದೆ ಪ್ರತಿ ಹೆತ್ತವಳ ಶಾಪ!

ನೋಡಿ! ಪ್ರತಿ ಹಿಂದೂ ಕಾರ್ಯಕರ್ತನ ಹತ್ಯೆಯಾದಾಗಲೂ ಸಹ, “ಅವರಿಗೇನು ಕಾಂಗ್ರೆಸ್ ನ ಬೆಂಬಲವಿದೆ ಬಿಡಿ’ ಎನ್ನುವ ಆರೋಪವೊಂದು ಎಷ್ಟು
ಸಹಜವಾಒ ಅಷ್ಟೇ ಸತ್ಯ ಕೂಡಾ! ಚುನಾವಣೆಯಲ್ಲಿ ಗೆಲ್ಲಲು ಅಲ್ಪಸಂಖ್ಯಾತರನ್ನು ಓಲೈಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಪರೋಕ್ಷವಾಗಿ ಭಯೋತ್ಪಾದನೆಗೂ ಬೆಂಬಲವಿತ್ತಂತೆಯೇ ಅಲ್ಲವೇ!!?

ಅಧಿಕಾರಕ್ಕೆ ಬಂದ ತಕ್ಷಣವೇ ಕೆ.ಎಫ್.ಡಿ. ಹಾಗೂ ಪಿ.ಎಫ್.ಐ. ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಾಸ್ ಪಡೆಯಲಾಗಿತ್ತು. ಅಮಾಯಕ ಮುಸ್ಲಿಮರು ಎಂಬ ಅಚ್ಚು ಒತ್ತಿ ಅವರನ್ನು ಬಂಧಮುಕ್ತಗೊಳಿಸಲಾಯಿತು. ಯಾವಾಗ ಈ ಮತಾಂಧರ ಬಿಡುಗಡೆಯಾಗುತ್ತೋ ಅಂದಿನಿಂದ ಮತ್ತೆ ರಾಜ್ಯದಲ್ಲಿ ನೆತ್ತರ ಆರ್ಭಟ ಆರಂಭವಾಗುತ್ತೆ. ಮತ್ತೆ ಸಾಲು ಸಾಲು ಕೊಲೆಗಳು ರಾಜ್ಯದಲ್ಲಿ ನಡೆದೇ ಹೋಗುತ್ತೆ. ರಾಜ್ಯ ಅಕ್ಷರಷಃ ಬೆಚ್ಚಿ ಬೀಳುತ್ತೆ.

ಈಗ ಮತ್ತೆ ಅದೇ ಮತಾಂವರ ಪ್ರಕರಣಗಳನ್ನು ವಾಪಾಸ್ ಪಡೆಯುವ ಪ್ರಕ್ರಿಯೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಸೂಚನೆ ಮೇರೆಗೆ ಮುಸ್ಲಿಮರ ಮೇಲೆದ್ದ ಅಷ್ಟೂ ಪ್ರಕರಣಗಳನ್ನು ವಾಪಾಸ್ ಪಡೆದು ಅಮಾಯಕ ಮುಸ್ಲಿಮರು ಎಂಬ ಪಟ್ಟವನ್ನು ಕಟ್ಟಲಾಗುತ್ತಿದೆ. ಇದರಿಂದ ಮತ್ತಷ್ಟು ಉತ್ತೇಜನಗೊಂಡ ಮುಸ್ಲಿಮರು ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಸಂತೋಷ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಸಿದ್ದರಾಮಯ್ಯನ ದರಿದ್ರ ಆಡಳಿತಕ್ಕೆ ಮತ್ತೋರ್ವ ಬಿಜೆಪಿ ಕಾರ್ಯಕರ್ತ ಬಲಿಯಾಗಿದ್ದು, ಹಿಂದೂ ಸಮಾಜವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಹಿಂದೂಗಳ ಮಾರಮ ಹೋಮವನ್ನೇ ನಡೆಸಿದ ಈ ದುಷ್ಟ ಸರ್ಕಾರಕ್ಕೆ ಜನ ಹಿಡಿ ಶಾಪವನ್ನೇ ಹಾಕುತ್ತಿದ್ದಾರೆ. ತನ್ನ ಮಗನನ್ನು ಕಳೆದುಕೊಂಡ ಆ ಹೆತ್ತವರ ಶಾಪದಿಂದ ಓರ್ವ ಮಗನನ್ನು ಈಗಾಗಲೇ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮತ್ತೆ ಮತ್ತೆ ಶಾಪಕ್ಕೆ ಗುರಿಯಾಗುತ್ತಿದ್ದಾರೆ. ಇದು ಅವರ ಸರ್ವಸ್ವವನ್ನೇ ನಾಶ ಮಾಡುವುದಂತು ಸುಳ್ಳಲ್ಲ…

  • prithu agnihothri
Tags

Related Articles

Close