ಪ್ರಚಲಿತ

ಬೆಂಗಳೂರಿನ ರುದ್ರೇಶ್ ಹತ್ಯೆಯಲ್ಲಿ ಬಯಲಿಗೆ ಬಂತು ಸ್ಫೋಟಕ ಮಾಹಿತಿ!! NIA ಹೇಳಿದ್ದೇನು ಗೊತ್ತೇ?!

ಬಹುಷಃ ಬೆಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತರಾಗಿದ್ದ ರುದ್ರೇಶ್ ನ ಕಗ್ಗೊಲೆ ಕರ್ನಾಟಕದ ರಾಜಧಾನಿಯನ್ನು ನಡುಗಿಸಿದ್ದು ಸುಳ್ಳಲ್ಲ ಬಿಡಿ! ಹಾಡಹಗಲೇ, ಜನದಟ್ಟಣೆಯಿರುವ ಪ್ರದೇಶದಲ್ಲಿಯೇ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದರು ರುದ್ರೇಶ್ !! ಸಿದ್ಧರಾಮಯ್ಯನ ಸರಕಾರಾವಧಿಯಲ್ಲಿ ನಡೆದ ಈ ಹತ್ಯೆ ಸಿಎಂ ಕುರ್ಚಿಯವರೆಗೆ ತಾಗಲಿಕ್ಕೆ ಅವಕಾಶವೇ ಆಗಲಿಲ್ಲ ಅನ್ನುವುದು ಸತ್ಯವಾದರೂ, ಪ್ರಕರಣ ವಹಿಸಿಕೊಂಡಿದ್ದ ಎನ್ ಐ ಎ ಸ್ಫೋಟಕ ಮಾಹಿತಿಯೊಂದನ್ನು ನೀಡಿದೆ!

ಈ ಮುಂಚೆಯೇ, ಎನ್ ಐ ಎ ಎಚ್ಚರಿಸಿತ್ತು! ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಹಾಗೂ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಎಂಬ ಎರಡು ಸಂಘಟನೆಗಳು ರಾಷ್ಟ್ರದ್ರೋಹದ ಕಾರ್ಯಗಳಲ್ಲಿ ಭಾಗಿಯಾಗಿದೆ ಎಂದು ವರದಿ ನೀಡಿತ್ತು! ಅಷ್ಟಾದರೂ ಕೂಡ, ಆ ಸಂಘಟನೆಗಳ ಮೇಲೆ ನಿಷೇಧ ಹೇರುವುದು ಸಾಯಲಿ, ಕಾರ್ಯಕರ್ತರನ್ನೇ ಕರೆದು ಊಟ ನೀಡಿತ್ತು ಸಿದ್ಧರಾಮಯ್ಯ ಸರಕಾರ!

ಈಗ ಹೊರ ಬಿದ್ದಿದೆ ರುದ್ರೇಶ್ ಹತ್ಯೆಯ ಹಿಂದಿನ ರಹಸ್ಯ!

Image result for rudresh RSS

PFI ಸದಸ್ಯರಾದ, ಗೋವಿಂದಪುರದ ಇರ್ಫಾನ್ ಪಾಶಾ (32), ಆಸ್ಟೀನ್ ಟೌನ್ ನ ವಾಸೀಮ್ ಅಹ್ಮದ್ (32), ಮರಪ್ಪ ಗಾರ್ಡನ್ ನ ಮಹಮ್ಮದ್ ಸಾದಿಕ್ (35), ಆರ್ ಟಿ ನಗರದ ಮುಹಮ್ಮದ್ ಮುಜೀಬ್ ಉಲ್ಲ (46), ಬೆನ್ಸನ್ ಟೌನ್ ನ ಆಸಿಮ್ ಶೆರಿಫ್ (40), ಎಂಬುವವರು PFI ನ ಪ್ರಮುಖ ಸದಸ್ಯರಾಗಿದ್ದವರನ್ನು ಎನ್ ಐ ಎ ಬಂಧಿಸಿದೆ! ಜೊತೆಗೆ, SDPI ಯ ಸದಸ್ಯರ ಜೊತೆಗೂ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ!

ರುದ್ರೇಶ್ ಗಾಗಲಿ, ಅಥವಾ ಈ ಐವರಿಗಾಗಲಿ, ವೈಯುಕ್ತಿಕ ದ್ವೇಷವಿರಲಿಲ್ಲವಾದರೂ, ಕೇವಲ ರುದ್ರೇಶ್ ಸಂಘದ ಪ್ರಮುಖ ಪ್ರಚಾರಕ್ ಆಗಿದ್ದೇ ಹತ್ಯೆಗೆ ಕಾರಣವಾಗಿ ಹೋಗಿದೆ! ಸೈದ್ಧಾಂತಿಕ ದ್ವೇಷದ ಹಿನ್ನೆಲೆಯನ್ನಿಟ್ಟುಕೊಂಡು, ಕೇವಲ ಸಂಘ ಎಂಬ ಕಾರಣಕ್ಕೇ ಅಕ್ಸ್ವಾ ಮತ್ತು
ಚೋಟಿ ಚಾರ್ ಮಿನಾರ್ ಮಸೀದಿಗಳಲ್ಲಿ, ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬುದನ್ನು ಸ್ವತಃ ಎನ್ ಐ ಎ ತಿಳಿಸಿದೆ!

ಎಲ್ಲದಕ್ಕಿಂತ ಹೆಚ್ಚಾಗಿ, ಈ ಹತ್ಯೆಯ ಹಿಂದಿದ್ದ ಉದ್ದೇಶಗಳೇನು ಗೊತ್ತಾ?!

ಬಂಧಿಸಲ್ಪಟ್ಟ ಆರೋಪಿಗಳು ಬಾಯಿ ಬಿಟ್ಟಿದ್ದರು! ಸ್ವತಃ ಎನ್ ಐ ಎ ದಂಗಾಗಿ ಹೋಗಿತ್ತು!

1. ಕರ್ನಾಟಕದಲ್ಲಿ ಜನರನ್ನು ಸಂಘಕ್ಕಾಗಲಿ, ಅಥವಾ ಬಿಜೆಪಿ ಗಾಗಲಿ ಸೇರುವುದರಿಂದ ವಿಮುಕ್ತಿಗೊಳಿಸಬೇಕಿತ್ತು! ಕರ್ನಾಟಕದ ಜನರನ್ನು ಭಯಭೀತರನ್ನಾಗಿಸಲು ಅಕ್ಟೋಬರ್ 16, 2016 ರಂದು ನಡೆದ ಸಂಘದ ಪಥ ಸಂಚಲನದ ನಂತರ, ರುದ್ರೇಶ್ ಸೇರಿ ಇನ್ನೂ ಇಬ್ಬರನ್ನು ಹತ್ಯೆ ಮಾಡುವ ಯೋಜನೆ ನಡೆದಿತ್ತು!

2. ಕೇವಲ ಸೈದ್ಧಾಂತಿಕ ದ್ವೇಷವಲ್ಲ! ಬದಲಾಗಿ, ಜಿಹಾದ್ ಮೂಲಕ ಜಗತ್ತನ್ನೇ ಇಸ್ಲಾಮೀಕರಣ ಮಾಡಬೇಕೆಂದು ಹೊರಟಿರುವ ಮುಸಲ್ಮಾನರಿಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ಕಾಫಿರರ ಲೆಕ್ಕ! ಆದ್ದರಿಂದ, ಅವರಿಬ್ಬರೂ ಇರಕೂಡದು!

ಅಷ್ಟೇ ಇರುವುದು ಸಿದ್ಧಾಂತ!

ಇನ್ಯಾವ ದ್ವೇಷವೂ ಇಲ್ಲ! ಇಸ್ಲಾಂ ನನ್ನು ಒಪ್ಪದವರು ಜಗದಲ್ಲಿರಕೂಡದು ಎಂಬುದಷ್ಟೇ! ಕರ್ನಾಟದಲ್ಲಿ ಅಶಾಂತಿಯನ್ನು ಸೃಷ್ಡಿಸಬೇಕಿತ್ತು! ಅಷ್ಟೇ!

ಎನ್ ಐ ಎ ದೃಢಪಡಿಸಿಬಿಟ್ಟಿದೆ, ಹತ್ಯೆ ಮಾಡಿದವನಿಗೆ ಕೇವಲ ಅಶಾಂತಿಯನ್ನು ಸೃಷ್ಟಿಸಬೇಕಿತ್ತು ಎಂದು!

ಆದರೆ. , ಎಲ್ಲಿ ಎನ್ ಐ ಎ ಮೊಕದ್ದಮೆ ದಾಖಲಿಸಿತೋ, ಆರೋಪಿಗಳು ಉಲ್ಟಾ ಹೊಡೆದಿದ್ದಾರೆ! ನಮಗೆ ಎನ್ ಐ ಎ ಯ ಬಗ್ಗೆ ನಂಬಿಕೆಯೇ ಇಲ್ಲ ಎಂದಿದ್ದಾರೆ!

ಆದರೆ,

ಸಿದ್ಧರಾಮಯ್ಯ ಸರಕಾರ ಇದೇ ಪಿಎಫ್ ಐ ಹಾಗೂ ಎಸ್ ಡಿ ಪಿ ಐ ನಾಯಕರ ಜೊತೆ ಕುಳಿತು ಚರ್ಚಿಸುತ್ತಾರೆ! ಚುನಾವಣಾ ಪೂರ್ವ ಮಾತುಕಥೆಯಾಗುತ್ತದೆ! ಸ್ವತಃ ಇಂಟೆಲಿಜೆನ್ಸ್ ವರದಿ ನೀಡಿದರೂ, ಸಿದ್ಧರಾಮಯ್ಯರವರ ಸರಕಾರ ಮಾತ್ರ ಆ ಎರಡಯ ಸಂಘಟನೆಗಳನ್ನು ನಿಷೇಧಿಸುವುದಿಲ್ಲ! ಬದಲಾಗಿ, ಆರ್ ಎಸ್ ಎಸ್ ಮತ್ತು ಭಜರಂಗದಳವನ್ನು ನಿಷೇಧಿಸುತ್ತೇವೆ ಎನ್ನುತ್ತಾರೆಂದರೆ, ಬೇರೆ ಏನಾದರೂ ಸಾಕ್ಷಿ ಬೇಕೆ?!

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪಿಎಫ್ ಐ ಜಾಸ್ತಿಯೇ ಬಾಲ ಬಿಚ್ಚಿದೆ! 21 ಹಿಂದೂಗಳ ಹತ್ಯೆಯಾಗಿದೆ! ಅಷ್ಟಾದರೂ ತಲೆ ಕೆಡಿಸಿಕೊಳ್ಳದ ಸರಕಾರ, ಇಂತಹ ಸಂಘಟನೆಗಳನ್ನು ನಿಷೇಧಿಸುವ ಪ್ರಯತ್ನ ಮಾಡುವುದಿಲ್ಲವೆಂದರೆ?!

ರುದ್ರೇಶ್ ಹತ್ಯೆಯಾಗುವುದಕ್ಕಿನ್ನ ಮುಂಚೆಯೇ ಎನ್ ಐ ಎ ವರದಿ ನೀಡಿತ್ತು ಸಿದ್ಧು ಸರಕಾರಕ್ಕೆ! ರುದ್ರೇಶ್ ಹತ್ಯೆಯಾಗುವುದಕ್ಕಿನ್ನ ತಿಂಗಳ ಹಿಂದೆಯೂ ರಾಜ್ಯ ಸರಕಾರಕ್ಕೆ ಎನ್ ಐ ಎ ಜಾಗೃತೆ ವಹಿಸಿ ಎಂದಿದ್ದರೂ ಸಿದ್ಧರಾಮಯ್ಯ ಸುಮ್ಮನಿದ್ದದ್ದು ಯಾಕೆ?! ಮತ್ತೆ ಬಾಯಿ ಬಿಟ್ಟು ಹೇಳಬೇಕಿದೆಯೇ?! ಆಡಿಸುವವನು ಗದ್ದುಗೆಯಲ್ಲಿ ಕುಳಿತಾಗಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close