ಪ್ರಚಲಿತ

ಬ್ರೇಕಿಂಗ್: ಕಾಂಗ್ರೆಸ್‍ಗೆ ಕೈಕೊಟ್ಟು ಕಮಲ ಹಿಡಿಯಲು ಸಜ್ಜಾದ ಪ್ರಭಾವಿ ಮಿನಿಸ್ಟರ್? ಪಕ್ಷವೇ ಇಲ್ಲದೆ ಪ್ರಚಾರ ಆರಂಭಿಸಿದರ ಮರ್ಮವೇನು?

ರಾಜಕೀಯದಲ್ಲಿ ಯಾವಾಗ ಏನಾಗುತ್ತೆ ಎಂಬ ವಿಚಾರವನ್ನು ಹೇಳೋಕೆ ಸಾಧ್ಯವೇ ಇಲ್ಲ. ಅದರಲ್ಲೂ ಚುನಾವಣಾ ಸಂದರ್ಭದಲ್ಲಿ ಯಾರು ಯಾವ ಪಕ್ಷದ ಕೈ ಹಿಡಿತಾರೆ ಎನ್ನುವ ವಿಚಾರ ಯಾರಿಗೂ ಗೊತ್ತಾಗೋದಿಲ್ಲ ಎಂಬ ವಿಚಾರ ಸುಳ್ಳಲ್ಲ. ಆವರೆಗೂ ಯಾರಿಗೂ ಗೊತ್ತಾಗದ ಹಾಗೆ ಇದ್ದು ನಂತರ ಏಕಾಏಕಿ ಪಕ್ಷವನ್ನು ತೊರೆದು ಮತ್ತೊಂದು ಪಕ್ಷವನ್ನು ಸೇರುವುದು ರಾಜಕೀಯದಲ್ಲಿ ಹೊಸದೇನಲ್ಲ.

ಅಂದಹಾಗೆ ಈ ಬಾರಿಯೂ ಅನೇಕ ರಾಜಕೀಯ ನಾಯಕರು ತಮ್ಮ ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ಪಕ್ಷಾಂತರವಾಗಿರುವ ಉದಾಹರಣೆ ಅನೇಕ ಇವೆ. ಭಾರತೀಯ ಜನತಾ ಪಕ್ಷದ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಪಕ್ಷ ಸೇರಿದ್ದರೆ ಬೆಳಗಾವಿ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿಯ ಸಹೋದರನೇ ಭಾರತೀಯ ಜನತಾ ಪಕ್ಷ ಸೇರಿದ್ದಾರೆ. ಹೀಗೆ ಅನೇಕ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷವನ್ನು ತೊರೆದು ಬೇರೆ ಪಕ್ಷಗಳಿಗೆ ಜಂಪ್ ಆಗೋದು ಕಾಮನ್ ಆಗಿ ಬಿಟ್ಟಿದೆ.

ಕಾಂಗ್ರೆಸ್‍ಗೆ ಕೈ ಕೊಡಲಿದ್ದಾರಂತೆ ಪ್ರಮೋದ್ ಮಧ್ವರಾಜ್..?

ಪ್ರಮೋದ್ ಮಧ್ವರಾಜ್. ಮೀನುಗಾರಿಕಾ ಹಾಗೂ ಯುವಜನ, ಕ್ರೀಡಾ ಸಚಿವರು. ಹುಟ್ಟು ಶ್ರೀಮಂತರು. ಮೊಗವೀರ ಕುಟುಂಬದಲ್ಲಿ ಜನಿಸಿದ ಇವರು
ಮೀನುಗಾರಿಕೆಯಲ್ಲಿ ತನ್ನದೇ ಸ್ವಂತ ಉಧ್ಯಮವನ್ನು ನಡೆಸಿಕೊಂಡು ಬರುತ್ತಿರುವ ಇವರು ಲಾಭದಾಯಕ ಉಧ್ಯಮವನ್ನೇ ನಡೆಸುತ್ತಿದ್ದಾರೆ. ಕೋಟ್ಯಾನುಗಟ್ಟಲೆಯ ಆಸ್ತಿಯನ್ನು ಹೊಂದಿರುವ ಇವರು ಕಾಂಗ್ರೆಸ್ ಪಾಳಯದಲ್ಲಿ ಶ್ರೀಮಂತ ಉಧ್ಯಮಿಯಾಗಿ, ಶಾಸಕರಾಗಿ ನಂತರ ತನ್ನ ಹಣಬಲದಿಂದಲೇ ಮಂತ್ರಿಗಿರಿಯನ್ನೂ ಅನುಭವಿಸುತ್ತಿರುವ ನಾಯಕರು. ಆದರೆ ಈಗ ಕಾಂಗ್ರೆಸ್ ಪಕ್ಷದ ಬಗ್ಗೆ ವೈರಾಗ್ಯ ಏಳುತ್ತಿದಿಯಾ ಎನ್ನುವ ಊಹಾ ಪೋಹಗಳು ಗೋಚರಿಸುತ್ತಿದೆ.

ಪ್ರಚಾರದ ವಾಹನದಲ್ಲಿ ಕಾಂಗ್ರೆಸ್ ಮಾಯ…

ಪ್ರಮೋದ್ ಮಧ್ವರಾಜ್ ಎಲ್ಲರಂತೆ ತಾನೂ ಮುಂದಿನ ವಿಧಾನ ಸಭಾ ಚುನಾವಣೆಗೆ ಪ್ರಚಾರ ತಂತ್ರವನ್ನು ಆರಂಭಿಸಿದ್ದಾರೆ. ಆದರೆ ಈಗ ಇದೇ ವಿಚಾರ ಪ್ರಮೋದ್ ಮಧ್ವರಾಜ್ ಮೇಲೆ ಅನುಮನಗಳ ಹುತ್ತಗಳೇ ಏರ್ಪಡಲು ಕಾರಣವಾಗಿದೆ. ಏಕೆಂದರೆ ತವು ಪ್ರಚಾರ ಆರಂಭಿಸಿರುವ ಎರಡು ವಾಹನಗಳಲ್ಲಿ ಯಾವುದೇ ವಾಹನದಲ್ಲಿಯೂ ಪಕ್ಷದ ಧ್ವಜ ಅಥವಾ ಪಕ್ಷದ ಚಿಹ್ನೆಯನ್ನು ಮುದ್ರಿಸಿಲ್ಲ. ಅದೂ ಅಲ್ಲದೆ ತನ್ನ ಪಕ್ಷದ ನಾಯಕರಾದ, ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅಥವಾ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಭಾವಚಿತ್ರವನ್ನು ಹಾಕಿಕೊಂಡಿಲ್ಲ. ಎಲ್ಲಾ ಬಿಡಿ, ಸ್ವತಃ ತಾನು ಪ್ರತಿನಿದಿಸುತ್ತಿರುವ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನೇ ಪ್ರಮೋದ್ ಮಧ್ವರಾಜ್ ತಮ್ಮ ಪ್ರಚಾರ ವಾಹನದಲ್ಲಿ ಹಾಕಿಕೊಂಡಿಲ್ಲ. ಬಾವುಟ ಇಲ್ಲ, ಚಿಹ್ನೆ ಇಲ್ಲ, ನಾಯಕರೂ ಇಲ್ಲ, ಒಟ್ಟಾರೆ ಪ್ರಮೋದ್ ಮಧ್ವರಾಜ್ ಅಷ್ಟೆ. ಇದು ಈಗ ಗೊಂದಲದ ಗೂಡಾಗಲು ಕಾರಣವಾಗಿದೆ.

ಕಮಲ ಹಿಡಿಯಲಿದ್ದಾರಂತೆ ಪ್ರಮೋದ್…!

ಅಚ್ಚರಿಯೇನಿಲ್ಲ. ಯಾಕೆಂದರೆ ಸಚಿವ ಪ್ರಮೋದ್ ಮಧ್ವರಾಜ್ ಅವರ ತಾಯಿ ಮನೋರಮಾ ಮಧ್ವರಾಜ್ ಭಾರತೀಯ ಜನತಾ ಪಕ್ಷದಲ್ಲಿ ಸಂಸದರಾಗಿದ್ದವರು. ತನ್ನ ಅಮೋಘ ಕಾರ್ಯದಕ್ಷತೆ ಹಾಗೂ ದಿಟ್ಟತನದಿಂದಲೇ ಹೆಸರಾಗಿದ್ದ ಮನೋರಮಾ ಮಧ್ವರಾಜ್ ದಕ್ಷಿಣದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದರು. ಹೀಗಾಗಿ ಪ್ರಮೋದ್ ಮಧ್ವರಜ್ ಕೂಡ ಭಾರತೀಯ ಜನತಾ ಪಕ್ಷ ಸೇರುತ್ತಾರೆ ಎಂಬ ಈ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಈ ಹಿಂದೆಯೇ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷವನ್ನು ಪ್ರಮೋದ್ ಮಧ್ವರಾಜ್ ಅಪ್ಪಿಕೊಳ್ಳುತ್ತಾರೆ ಎಂಬ ಗುಸುಗುಸು ಏರ್ಪಟ್ಟಿತ್ತು. ಆದರೆ ಅದರ ಮಧ್ಯೆ ಬದಲಾದ ಸಚಿವ ಸಂಪುಟದಲ್ಲಿ ಪ್ರಮೋದ್ ಮಧ್ವರಾಜ್ ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಅವರನ್ನು ಸುಮ್ಮನಿರಿಸುವ ಕೆಲಸವೂ ಆಗಿತ್ತು ಎಂದು ಹೇಳಲಾಗುತ್ತಿದೆ. ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಇದೆ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯತಂತ್ರ ಬಹಳನೇ ಜೋರಾಗಿದ್ದು ಈ ಬಾರಿ ಕಮಲ ಅರಳುವುದು ಖಚಿತ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಪ್ರಮೋದ್ ಮಧ್ವರಾಜ್ ಕಮಲದ ಕೈ ಹಿಡಿಯಲೂ ಬಹುದು ಎಂಬ ಊಹಾಪೋಹಗಳೂ ಕೇಳಿ ಬರುತ್ತಿದೆ. ಈ ಬಗ್ಗೆ ಪ್ರಮುಖ ಮಾಧ್ಯಮಗಳೂ ಸುದ್ಧಿಯನ್ನು ಬಿತ್ತರಿಸಿದ್ದು, ಪ್ರಮೋದ್ ಭಾರತೀಯ ಜನತಾ ಪಕ್ಷ ಸೇರಿಕೊಳ್ಳುತ್ತಾರೆ ಎಂಬ ಮುನ್ಸೂಚನೆಯನ್ನೂ ನೀಡಿದ್ದಾರೆ.

ವಂಚನೆ ಕೇಸ್‍ನಲ್ಲಿ ಪ್ರಮೋದ್‍ಗೆ ಹಿನ್ನೆಡೆ..?

ಇತ್ತೀಚೆಗೆ ಸಚಿವ ಪ್ರಮೋದ್ ಮಧ್ವರಾಜ್ ಅವರ ವಂಚನೆ ಪ್ರಕರಣವೊಂದು ಬ್ರೇಕಿಂಗ್ ನ್ಯೂಸ್ ಆಗಿತ್ತು. ಉಡುಪಿಯ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ 199 ಕೋಟಿ ರೂಗಳನ್ನು ವಂಚಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಆದರೆ ತನಗೆ ಅಂತಹಾ ಸಾಲಗಳಿಗೆ ವಂಚಿಸುವ ಪ್ರಮೇಯವೇ ಇಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ ನೀಡಿದ್ದಾರೆ. ಇದು ಸತ್ಯವೋ ಅಥವಾ ಸುಳ್ಳೋ ಎಂದು ಈಗ ವಿಮರ್ಶೆಗಳು ನಡೆಯುತ್ತಿದೆ.

ಒಟ್ಟಾರೆ ಪ್ರಮೋದ್ ಮಧ್ವರಾಜ್ ಈಗ ಕಾಂಗ್ರೆಸ್‍ನೊಂದಿಗೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಕಾಂಗ್ರೆಸ್‍ನಿಂದ ಹೊರ ಬರುವ ಎಲ್ಲಾ ಲಕ್ಷಣಗಳೂ
ಗೋಚರಿಸುತ್ತಿದೆ. ಹೀಗಾಗಿಯೇ ತಾನು ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದರೂ ಕಾಂಗ್ರೆಸ್‍ನ ಪಕ್ಷದ ಚಿಹ್ನೆಯಾಗಲಿ ಅಥವಾ ಪಕ್ಷದ ನಾಯಕರ ಭಾವಚಿತ್ರವನ್ನಾಗಲಿ ಅಳವಡಿಸದೆ ವಾಹನದಲ್ಲಿ ಪ್ರಚಾರ ಆರಂಭಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದ ನಾಯಕರೊಂದಿಗೆ ಈಗಾಗಲೇ ನಿಕಟ ಸಂಪರ್ಕವನ್ನು ಹೊಂದಿದ್ದು ಕಮಲ ಪಡೆಗೆ ಸೇರ್ಪಡೆಯಾಗುವ ಲಕ್ಷಣಗಳೂ ಗೋಚರಿಸುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close