ಪ್ರಚಲಿತ

ಬ್ರೇಕಿಂಗ್: ಗೌರಿ ಲಂಕೇಶ್ ಹಂತಕರ ಬಂಧನ!! ಹಂತಕರು ಸಂಘಟನೆಯ ಕಾರ್ಯಕರ್ತರು! ಹತ್ಯೆ ಮಾಡಿವರು ಯಾರು ಗೊತ್ತಾ?

ಕಳೆದ 4 ತಿಂಗಳ ಹಿಂದೆ… ಸಂಜೆಯಾಗುತ್ತಲೇ ರಾಜ್ಯ ಬೆಚ್ಚಿ ಬಿದ್ದಿತ್ತು. ಖ್ಯಾತ ಬರಹಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಗುಂಡೇಟಿನಿಂದ ಹತ್ಯೆಗೀಡಾಗಿದ್ದರು. ಇದು ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ದ್ವಚಕ್ರ ವಾಹನದಲ್ಲಿ ಬಂದಿದ್ದ ಹಂತಕರು ಗೌರಿ ಲಂಕೇಶ್ ತನ್ನ ಮನೆಯ ಒಳಗೆ ಇನ್ನೇನು ಪ್ರವೇಶ ಮಾಡಬೇಕು ಅನ್ನುವಷ್ಟರ ಹೊತ್ತಿನಲ್ಲಿ ಹಂತಕರ ಕೈಯಲ್ಲಿದ್ದ ಪಿಸ್ತೂಲಿನ ಟ್ರಿಗರ್ ಪ್ರೆಸ್ ಆಗಿತ್ತು.

ಹಂತಕರ ಪಿಸ್ತೂಲಿನಿಂದ ಬಂದಂತಹ ಗುಂಡು ನೇರವಾಗಿ ಗೌರಿಯ ಎದೆಗೆ ನಾಟಿತ್ತು. ಗೌರಿಯ ದೇಹ ಧರೆಗುರುಳುತ್ತೆ. ಪ್ರಾಣ ಪಕ್ಷಿ ಹಾರಿ ಹೋಗುತ್ತೆ. ರಾಜ್ಯದ ಪೆನ್ನು ಹಿಡಿವ ಕೈಗಳು ಅಕ್ಷರಷಃ ಬೆಚ್ಚಿ ಬಿದ್ದಿದ್ದವು. ಓರ್ವ ಬರಹಗಾರ್ತಿ, ಪತ್ರಕರ್ತೆಯ ಜೀವ ಬೀದಿಹೆಣವಾಗಿದ್ದನ್ನು ಕಂಡ ಪತ್ರಕರ್ತ ವರ್ಗ ದಿಕ್ಕೇ ದೋಚದಂತಾಗಿತ್ತು.

ಒಂದೆಡೆ ಗೌರಿ ಲಂಕೇಶ್ ಎಂಬ ಪತ್ರಕರ್ತೆಯನ್ನು ಕಳೆದುಕೊಂಡಿರುವ ದುಖಃದಲ್ಲಿ ಒಂದು ವರ್ಗವಿದ್ದರೆ, ಮತ್ತೊಂದು ಕಡೆ ಆಕೆಯ ಸಾವು ಹಾಲು ಕುಡಿದಷ್ಟೇ ಸಂತಸವನ್ನು ತಂದಿದೆ ಎಂಬ ವರ್ಗವಿತ್ತು. ಅದಕ್ಕೆ ಕಾರಣವೂ ಇದೆ. ಕಟ್ಟರ್ ಎಡಪಂಥೀಯ ವಾದವನ್ನು ಅನುಸರಿಸುತ್ತಿದ್ದ ಗೌರಿ ಲಂಕೇಶ್ ಎಂಬ ಬರಹಗಾರ್ತಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದಳು.

ಹಿಂದುತ್ವವನ್ನು ಟೀಕಿಸುತ್ತಿದ್ದ ಗೌರಿಯನ್ನು ಕಂಡರೆ ಹಿಂದುತ್ವವಾದಿಗಳು ಉರಿದುಬೀಳುತ್ತಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಪ್ರಧಾನಿ ಮೋದಿ ಸಹಿತ ಅನೇಕರನ್ನು ಗೌರಿ ಧ್ವೇಷಿಸುತ್ತಿದ್ದಳು. ಆದರೆ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸಿ, ಪಾಕಿಸ್ಥಾನದ ಪರ ಘೋಷಣೆಗಳನ್ನು ಕೂಗಿದ ಕನ್ಹಯ್ಯ ಕುಮಾರ್, ಉಮರ್ ಕಾಲಿದ್ ಅಂತವರನ್ನು ತನ್ನ ಮಕ್ಕಳು ಎಂದು ಎನ್ನುತ್ತಿದ್ದಳು.ಇದು ದೇಶವಾಸಿಗಳ ಹಿಡಿಶಾಪಕ್ಕೂ ಕಾರಣವಾಗಿತ್ತು.

ಸಿಗಲೇ ಇಲ್ಲ ಹಂತಕರು…

ಈ ಮಧ್ಯೆ ರಾಜ್ಯ ಸರ್ಕಾರ ಹಂತಕರ ಪತ್ತೆಗೆ ಎಸ್.ಐ.ಟಿ. ರಚನೆ ಮಾಡಿತ್ತು. ಹಂತಕರ ಜಾಡನ್ನು ಹಿಡಿಯಲು ಪ್ರಯತ್ನ ಪಟ್ಟಿತ್ತು. ಆದರೆ ಅದೆಷ್ಟೇ ಪ್ರಯತ್ನ ಪಟ್ಟರೂ ಹಂತಕರ ಸುಳಿವು ಸಿಗಲೇ ಇಲ್ಲ. ಇತ್ತ ಆಕ್ರೋಷ ಮುಗಿಲು ಮುಟ್ಟಿತ್ತು. ಕೆಲವರಂತು ಮೋದಿಯತ್ತ ಬೊಟ್ಟು ಮಾಡಿ ತೋರಿಸಿದ್ರು. ವಿಶೇಷ ತನಿಖಾ ತಂಡಕ್ಕೆ ಹಂತಕರ ಜಾಡು ಹಿಡಿಯಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಬಲಪಂಥೀಯ ಸಂಘಟನೆಳ ಮೇಲೆ ಗೂಬೆ ಕೂರಿಸಲು ಸಿದ್ಧವಾಗಿ ನಿಂತಿತ್ತು.

ಬಲಪಂಥೀಯರನ್ನು ವಿರೋಧಿಸೀದ್ದ ಗೌರಿಯನ್ನು ಬಲಪಂಥೀಯ ಸಂಘಟನೆಗಳೇ ಕೊಂದಿರಬಹುದೆಂದೂ ಹೇಳಿತ್ತು. ಹಂತಕರ ರೇಖಾ ಚಿತ್ರ ಬಿಡುಗಡೆಗೊಳಿಸಿ ಅವರ ಹಣೆಗೆ ಕುಂಕುಮ ಹಚ್ಚುವ ಪ್ರಯತ್ನವನ್ನೂ ಮಾಡಿತ್ತು. ಹೆಲ್ಮೆಟ್ ಹಾಕಿದ್ದ ವ್ಯಕ್ತಿಗಳ ಹಣೆಯ ಕುಂಕುಮ ನಿಮಗೆ ಹೇಗೆ ಕಂಡಿತು ಎನ್ನುವ ಚರ್ಚೆಗಳಾದಾಗ ಸರ್ಕಾರ ಮುಜುಗರಕ್ಕೀಡಾಯಿತು. ನಿಮ್ಮಿಂದಾಗಲ್ಲ, ಸಿಬಿಐಗೆ ವಹಿಸಿ ಎಂಬ ಕೂಗು ಜೋರಾಗಿ ಕೇಳಿಸಿತ್ತು. ಆದರೆ ಕೆಸರಿಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ವಾದ ಮಾಡಿ ನಮ್ಮ ಗೃಹ ಇಲಾಖೆ ಸಧೃಢವಾಗಿದೆ,ಕೇಂದ್ರಕ್ಕೆ ನಕಡುವ ಅಗತ್ಯವೇ ಇಲ್ಲ ಎನ್ನುವ ವಾದವನ್ನೇ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಾ ಬಂದಿತ್ತು. ಆದರೆ ಯಾವ ಫಲಶ್ರುತಿಯೂ ಕಂಡುಬಂದಿರಲಿಲ್ಲ.

ಪತ್ತೆಯಾಗಿದ್ದಾರಂತೆ ಆರೋಪಿಗಳು…

ನಿನ್ನೆ ಸಂಜೆ ವೇಳೆ ಗೌರಿ ಲಂಕೇಶ್ ಹತ್ಯೆಗೈದ ಆರೋಪಿಗಳನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡದ ಪೊಲೀಸರಿಂದ ಆರೋಪಿಗಳ ಬಂಧನವಾಗಿದ್ದು, ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು ಗೌರಿ ಲಂಕೇಶ್ ಹತ್ಯೆಯ ಹಿಂದಿರುವ ಇಂಚಿಂಚೂ ಮಾಹಿತಿಯನ್ನು ಕಳೆಹಾಕುತ್ತಿದ್ದಾರೆ. 4 ತಿಂಗಳಿನಿಂದ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾದ ವಿಶೇಷ ತನಿಖಾ ತಂಡದ ಪೊಲೀಸರು ಈ ಆರೋಪಿಗಳ ಹಿಂದಿರುವ ಇನ್ನುಳಿದ ವ್ಯಕ್ತಿಗಳಿಗೆ ಬಲೆ ಬೀಸಿದ್ದಾರೆ.

 

ಇನ್ನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಹಕರಿಸಿದ ಸ್ಥಳೀಯ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಹಂತಕರಿಗೆ ಗೌರಿ ಲಂಕೇಶ್ ಬಗ್ಗೆ ಖಚಿತ ಮಾಹಿತಿಯನ್ನು ನೀಡಿ, ಆಕೆ ಮನೆಗೆ ಬರುವ ಸಮಯ ಹಾಗೂ ಆಕೆಯ ಚಲನ ವಲನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದ ಸ್ಥಳೀಯ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಗೆ ಸುಪಾರಿ ಕೊಟ್ಟಿದ್ದು ಯಾರು ಎಂಬ ಶೋಧವನ್ನೂ ಪೊಲೀಸರು ಮಾಡುತ್ತಿದ್ದಾರೆ. ಈ ಹಿಂದೆ ಗೌರಿ ಲಂಕೇಶ್‍ರನ್ನು ಖ್ಯಾತ ಪತ್ರಕರ್ತ ಹಾಗೂ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರೆ ಎಂಬ ಊಹಾಪೋಹವೂ ಎಬ್ಬಿತ್ತು. ರವಿ ಬೆಳಗೆರೆಯವರ ಬಂಧನವೂ ಆಗಿತ್ತು. ಆದರೆ ವಿಚಾರಣೆ ವೇಳೆ ಗೌರಿ ಲಂಕೇಶ್ ಹಾಗೂ ರವಿ ಬೆಳಗರೆಗೂ ಯಾವುದೇ ಸಂಬಂಧವಿಲ್ಲ ಎನ್ನುವ ಮಾಹಿತಿಯನ್ನು ವಿಶೇಷ ತನಿಖಾ ತಂಡದ ಪೊಲೀಸರು ನೀಡಿದ್ದರು.

ಹತ್ಯೆ ಮಾಡಿದ್ದವರು ಸಂಘಟನೆಯ ಕಾರ್ಯಕರ್ತರು..?

ಗೌರಿ ಲಂಕೇಶ್‍ರನ್ನು ಹತ್ಯೆ ಮಾಡಿದ್ದು ಸಂಘಟನೆಯೊಂದರ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಆದರೆ ಯಾವ ಸಂಘಟನೆಯ ಕಾರ್ಯಕರ್ತರು ಎಂದು ಈವರೆಗೂ ತಿಳಿದುಬಂದಿಲ್ಲ. ಸದಾ ಹಿಂದೂ ಸಂಘಟನೆಗಳ ಮೇಲೆಯೇ ಗೂಬೆ ಕೂರಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗಾದರೂ ಮಾಡಿ ಬಲಪಂಥೀಯರನ್ನೇ ಎತ್ತಿಕಟ್ಟಬೇಕೆಂಬ ಪ್ರಯತ್ನವನ್ನೂ ಮಾಡಿತ್ತು. ಈ ಮೂಲಕ ಮತ್ತೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿದ್ದಾರಾ ಎಂಬ ಪ್ರಶ್ನೆಯೂ ಮೂಡಿದೆ.

ಗುಂಡು ಹಾರಿಸಿದವನು ಹೊರ ರಾಜ್ಯದವನು…!

ವಿಶೇಷ ತನಿಖಾ ತಂಡದಿಂದ ತನಿಖೆಗೆ ಒಳಪಟ್ಟ ಆರೋಪಿಗಳಿಂದ ಸ್ಪೋಟಕ ಮಾಹಿತಿಯೊಂದು ಹೊರ ಬಿದ್ದಿದೆ. ಪತ್ರಕರ್ತೆ ಗೌರಿ ಲಂಕೇಶ್‍ಗೆ ಗುಂಡು ಹಾರಿಸಿ ಹತ್ಯೆ ಮಾಡಿದವರು ಈ ರಾಜ್ಯದವರೇ ಅಲ್ಲ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಹತ್ಯೆ ಮಾಡಿದ ಹಂತಕ ಹೊರರಾಜ್ಯದವನು. ಆತನಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ನಕ್ಸಲರ ಮೇಲೆ ಸಂಶಯವಿತ್ತು…

ಈ ಹಿಂದೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ನಕ್ಸಲರ ಕೈವಾಡವೂ ಇರಬಹುದು ಎಂಬ ಸಂಶಯ ಇತ್ತು. ಕೆಲವು ನಕ್ಸಲರನ್ನು ಸರ್ಕಾರಕ್ಕೆ ಶರಣಾಗತಿ ಮಾಡಿಸಿದ್ದಾರೆ ಎನ್ನುವ ಆಕ್ರೋಷ ನಕ್ಸಲರಿಗೆ ಇತ್ತು ಎನ್ನಲಾಗುತ್ತಿದೆ. ಆದರೆ ನಕ್ಸಲರ ಸಂಪರ್ಕ ಗೌರಿ ಲಂಕೇಶ್‍ಗೆ ಹೇಗೆ ಆಯಿತು ಎನ್ನುವುದೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಸಧ್ಯ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ. ರಾಜ್ಯ ಸರ್ಕಾರ ಪ್ರೇರಿತ ವಿಶೇಷ ತನಿಖಾ ತಂಡದ ಮೇಲೆ ಜನರಿಗೆ ವಿಶ್ವಾಸವೇ ಮುರಿದು ಬಿದ್ದಿದ್ದು, ಪ್ರಸ್ತುತ ಬಂಧನವಾಗಿರುವ ಆರೋಪಿಗಳೂ ನಕಲಿ ಆಗದಿದ್ದರೆ ಸಾಕಪ್ಪಾ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close