ಪ್ರಚಲಿತ

ಬ್ರೇಕಿಂಗ್: ದೀಪಕ್ ರಾವ್ ಹಂತಕರನ್ನು ಬಿಟ್ಟು ಹಿಂದೂಗಳನ್ನೇ ಬಂಧಿಸಲು ಆದೇಶ ನೀಡಿದ ಸಿದ್ದರಾಮಯ್ಯ..! ಶವ ನೀಡದೆ ಮೋಸ ಮಾಡಿದ ಉಸ್ತುವಾರಿ ಸಚಿವ!

ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಿದ ಸಂಬಂಧ ಈಗ ಕರಾವಳಿ ಕೆಂಡವಾಗಿದೆ. ಸಂಘಟನೆಯ ಕಾರ್ಯಕರ್ತನನ್ನು ಕಳೆದುಕೊಂಡ ಧುಖಃದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಇದ್ದರೆ ಮತ್ತೊಂದೆಡೆ ಕಾಂಗ್ರೆಸ್‍ನ ರಾಜಕಾರಣಿಗಳು ತಮ್ಮ ನೀಚ ರಾಜಕೀಯ ಬುದ್ಧಿಯನ್ನು ಮುಂದುವರೆಸಿದ್ದಾರೆ.

ಈ ಮುಖ್ಯಮಂತ್ರಿಗಳ ಅಹಂಕಾರ ಎಷ್ಟಿದೆಯೆಂದರೆ, ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡ ನೋವಿನಲ್ಲಿ ಸಮಸ್ತ ಹಿಂದೂ ಸಮಾಜ ಇಂದು ನರಳುತ್ತಿದೆ. ಧುಃಖ ಮಡುಗಟ್ಟಿದೆ. ಹೀಗಿರುವಾಗ ಹಿಂದೂಗಳ ಮೇಲೆಯೇ ಕೇಸು ದಾಖಲಿಸಿ ಎಂದು ಆದೇಶ ನೀಡುತ್ತಿದ್ದಾರೆ ಮಾನ್ಯ ಮುಖ್ಯಮಂತ್ರಿಗಳು. ಅಂತ್ಯಸಂಸ್ಕಾರದ ವೇಳೆ ಏನಾದರು ಅವಘಡ ನಡೆದರೆ ಅದಕ್ಕೆ ಬಜರಂಗದಳದವರೇ ಹೊಣೆ. ಮೊದಲು ಅವರನ್ನು ಬಂಧಿಸಿ ಎಂದು ಆದೇಶ ನೀಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಶಂಡತನ ಮೆರೆದ ಸರ್ಕಾರ…!

ನಿನ್ನೆ ತಾನೇ ದೀಪಕ್ ರಾವ್‍ನ ಹತ್ಯೆ ಮಂಗಳೂರಿನ ಜನತೆಯನ್ನು ಬೆಚ್ಚಿ ಬೀಳಿಸಿದ್ದು ಆಕ್ರೋಷ ಮುಗಿಲು ಮುಟ್ಟಿತ್ತು. ದೀಪಕ್ ರಾವ್‍ನ ಶವ ಯಾತ್ರೆಯನ್ನು ಇಂದು ಬೆಳಿಗ್ಗೆ ಮಾಡುವುದಾಗಿ ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಜನತಾ ಪಕ್ಷ ಘೋಷಿಸಿತ್ತು. ಈ ಮೂಲಕ ತಮ್ಮ ಕಾರ್ಯಕರ್ತನನ್ನು ಕಳೆದುಕೊಂಡ ಚಿಂತೆಯಲ್ಲಿರುವ ಹಿಂದೂ ಸಂಘಟನೆಗಳು ಆತನ ಶವಯಾತ್ರೆಯನ್ನು ಮಾಡಿ ಆತನನ್ನು ಹುತಾತ್ಮ ಎಂದು ಸಾರಲು ಸಿದ್ದವಾಗಿ ನಿಂತಿದ್ದರು. ಆದರೆ ಹಿಂದೂ ಸಂಘಟನೆಗಳ ಈ ತಯಾರಿಗೆ ಸರಕಾರ ಒಲ್ಲೆ ಎಂದಿತ್ತು. ನಿನ್ನೆಯೇ ಸರ್ಕಾರ ಅನುಮತಿಯನ್ನು ನೀಡೋದಿಲ್ಲ ಎಂದು ಘೋಷಿಸಿತ್ತು.

ಆದರೆ ಹಿಂದೂ ಸಂಘಟನೆಗಳು ಮಾತ್ರ ತಮ್ಮ ಪಟ್ಟನ್ನು ಬಿಡಲೇ ಇಲ್ಲ. ಶವಯಾತ್ರೆ ನಡೆಸಿಯೇ ಸಿದ್ದ ಅದೇನೇ ಆಗಲಿ ಎಂದು ಘಂಟಾಘೋಷವಾಗಿ ಸಾರಿದ್ದರು. ಆದರೆ ಇಂದು ಬೆಳಗ್ಗೆ ಕಥೆನೇ ಬೇರೆಯಾಗಿತ್ತು. ಮಂಗಳೂರಿನ ಎಜೆ ಆಸ್ಪತ್ರೆಯ ಮುಂಬಾಗದಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ತನ್ನ ಸಮಾಜದ ಹುತಾತ್ಮನನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಆತನಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಕಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಸರ್ಕಾರ ಮಾತ್ರ ಶಂಡತನ ಮೆರೆದಿತ್ತು. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮಾತ್ರವಲ್ಲದೆ ಮೃತ ದೀಪಕ್ ರಾವ್‍ನ ಕುಟುಂಬಸ್ಥರು ಸಮೇತ ಆಸ್ಪತ್ರೆಯ ಮುಂದೆ ಕಾದು ಕುಳಿತಿದ್ದರೂ ದೀಪಕ್ ರಾವ್‍ನ ಮೃತ ದೇಹವನ್ನು ಆಸ್ಪತ್ರೆಯ ಹಿಂಬಾಗಿಲ ಮೂಲಕ ಕಳ್ಳರ ಹಾಗೆ ನೇರ ಮನೆಗೆ ಸಾಗಿಸಿತ್ತು ಸರಕಾರ. ಮೃತದೇಹವನ್ನು ಆಸ್ಪತ್ರೆಯಲ್ಲಿದ್ದ ಕುಟುಂಬಸ್ಥರಿಗೆ ಹಸ್ತಾಂತರ ಮಾಡದೆ ವಾಮಮಾರ್ಗ ಹಿಡಿದು ಕಳ್ಳರ ಹಾಗೆ ಯಾರಿಗೂ ಮಾಹಿತಿ ನೀಡದೆ ಶವವನ್ನು ಮನೆಗೆ ಸಾಗಿಸಿ ತನ್ನ ಶಂಡತನವನ್ನು ಮೆರೆದಿದೆ.

ಹಿಂದೂಗಳ ಮೇಲೆಯೇ ಗೂಬೆ ಕೂರಿಸಿದ ಉಸ್ತುವಾರಿ ಸಚಿವ…!

ಅಲ್ಲಾಹುವಿನ ಕೃಪೆಯಿಂದ ಶಾಸಕರಾಗಿ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ್ ರೈ ಮತ್ತೆ ಹಿಂದೂಗಳ ಮೇಲೆಯೇ ಗೂಬೆ ಕೂರಿಸಿದ್ದಾರೆ. “ಶವಯಾತ್ರೆಗೆ ಅನುಮತಿ ನೀಡಿದರೆ ಮೆರವಣೆಗೆಯಲ್ಲಿ ಬಜರಂಗದಳ ಕಾರ್ಯಕರ್ತರು ಪುಂಡಾಟಿಕೆಯನ್ನು ಮೆರೆಯುತ್ತಾರೆ. ಮಾತ್ರವಲ್ಲದೆ ಅವರು ಅಂಗಡಿಗಳನ್ನು ಪುಡಿ ಮಾಡುತ್ತಾರೆ. ಕಳೆದ ಬಾರಿಯ ಬಂಟ್ವಾಳದ ಶರತ್ ಮಡಿವಾಳ ಹತ್ಯೆಯ ಸಂದರ್ಭದಲ್ಲಿ ಮೆರವಣಿಗೆ ನಡೆಯುವಾಗಲೂ ಗಲಾಟೆಗಳು ನಡೆದಿದ್ದವು” ಎಂದು ಉಸ್ತುವಾರಿ ಸಚಿವರು ಉಡಾಫೆ ಉತ್ತರವನ್ನು ನೀಡಿದ್ದಾರೆ.

ಅರೆ ಉಸ್ತುವರಿಗಳೇ. ನಿಮ್ಮ ತಲೆಯಲ್ಲಿ ಬುದ್ದಿ ಇದೆಯೋ ಅಥವಾ ಲದ್ದಿ ಇದೆಯೋ. ದೇಹ ಬೆಳೆಸಿದರೆ ಸಾಲದು, ಸ್ವಲ್ಪ ಗೇಹವನ್ನೂ ಬೆಳಸಿಕೊಳ್ಳಿ. ನಾಚಿಕೆಯಾಗಲ್ವಾ ನಿಮಗೆ. ಬಂಟ್ವಾಳದಲ್ಲಿ ಶರತ್ ಶವಯಾತ್ರೆಯ ವೇಳೆ ಕಲ್ಲು ತೂರಾಟ ಮಾಡಿದ್ದು ನಿಮ್ಮ ಪ್ರೀತಿಯ ಮುಸಲ್ಮಾನರು. ಅಲ್ಲಿ ನಡೆದ ಅಷ್ಟೂ ಗಲಾಟೆಗೂ ಅವರೇ ಕಾರಣರು. ಮೊದಲೇ ಕಾರ್ಯಕರ್ತನನ್ನು ಕಳೆದುಕೊಂಡ ಬೇಸರದಲ್ಲಿದ್ದ ಕಾರ್ಯಕರ್ತರ ಮೇಲೆ ಕಲ್ಲು ಎಸೆದು ಗಲಾಟೆ ಎಬ್ಬಿಸುವಂತೆ ಮಾಡಿದ್ದು ಅದೇ ನಿಮ್ಮ ಸಂತಾನದ ಮುಸಲ್ಮಾನರು. ಅದೇ ಪಿಎಫ್‍ಐ ಗೂಂಡಾಗಳು. ಅದಕ್ಕೆ ಸಾಕ್ಷಿಗಳನ್ನು ಮಾಧಗ್ಯಮಗಳೇ ಬಿತ್ತರಿಸಿದೆ. ಆದರೆ ನೀವು ಯಾರನ್ನು ಮೋಸಗೊಳಿಸಲು ಹೊರಟಿದ್ದೀರಿ. ಅದನ್ನು ಹಿಂದೂ ಕಾರ್ಯಕರ್ತರೇ ಮಾಡಿದ್ದು ಎಂದು ಅವರ ಮೇಲೆನೇ ಪ್ರಕರಣ ದಾಖಲಿಸುವಂತೆ ಮಾಡಿದ್ದೀರಲ್ಲ.

ಈಗ ಮತ್ತೊಬ್ಬ ಕಾರ್ಯಕರ್ತನ ತಲೆ ಉರುಳಿದೆ. ಅದಕ್ಕೆ ಅಲ್ಲಾಹುವಿನ ಕೃಪೆಯಿಂದ ಗೆಲುವು ಕಂಡ ನೀವೇ ಹೊಣೆಗಾರರು. ನಿಮ್ಮಿಂದಲೇ ಇಷ್ಟೆಲ್ಲಾ ಕೊಲೆಗಳು ನಡೆದಿವೆ ಎನ್ನುವುದಕ್ಕೆ ಬೇರೇನೂ ಸಾಕ್ಷಿಗಳು ಬೇಕಾ..? ಈಗ ಮತ್ತೆ ದೀಪಕ್ ರಾವ್‍ನ ಶವ ಯಾತ್ರೆಗೆ ಅನುಮತಿ ನೀಡದೆ, ಆತನ ಮೃತದೇಹವನ್ನು ಕಳ್ಳರಂತೆ ವಾಮ ಮಾರ್ಗ ಹಿಡಿದು ಕುಟುಂಬಸ್ಥರಿಗೂ ತಿಳಿಯದ ರೀತಿಯಲ್ಲಿ ಮನೆಗೆ ಸಾಗಿಸಿದ್ದೀರಲ್ಲ ನಿಮಗೇನಾದರೂ ನಾಚಿಗೆ ಮಾನ ಮರ್ಯಾದೆ ಇದಿಯಾ..?

ಇನ್ನೆಷ್ಟು ಕೊಲೆಗಳು ನಡೆಯಬೇಕು ನಿಮಗೆ. ನಿಮ್ಮ ರಕ್ತದ ದಾಹ ಅದ್ಯಾವಾಗ ತೀರುತ್ತದೆ. ನಿಮ್ಮ ಓಟಿನ ಓಲೈಕೆಗಾಗಿ ನೀವೇ ಸಾಕಿದ ಪಿಎಫ್‍ಐ ಗಿಣಿಗಳು ಇಂದು ರಣ ಹದ್ದುಗಳಾಗಿ ಮನುಷ್ಯರ ರಕ್ತವನ್ನೇ ಹೀರುತ್ತಿದೆ. ಆದರೆ ನೀವೇನು ಮಾಡುತ್ತಿದ್ದೀರಿ. ಹಿಂದೂಗಳ ನೆತ್ತರನ್ನು ಹೀರುವ ಅದೇ ಪಿಎಫ್‍ಐ ಹಾಗೂ ಕೆಎಫ್‍ಡಿ ಉಗ್ರರನ್ನು ನೀವು ಯಾವ ರೀತಿ ಬೆಳಸುತ್ತಿದ್ದೀರಿ. ಇಂತಹ ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಅದೆಷ್ಟು ಬಾರಿ ಪ್ರತಿಭಟನೆ ನಡೆಸಿದರೂ ಯಾಕಿನ್ನೂ ಕ್ರಮ ಕೈಗೊಂಡಿಲ್ಲ.

ತಾಕತ್ತಿದ್ದರೆ ಕೇಂದ್ರ ಸರ್ಕಾರ ಈ ಸಂಘಟನೆಗಳನ್ನು ಬ್ಯಾನ್ ಮಾಡಲಿ ಎಂದು ಬೊಬ್ಬೆ ಬಿಡುತ್ತಿದ್ದೀರಲ್ಲಾ ನಿಮಗೆ ನಾಚಿಗೆ ಆಗೋದಿಲ್ವಾ..? ಹಾಗಾದರೆ ನಿಮ್ಮ ರಾಜ್ಯ ಸರ್ಕಾರಕ್ಕೆ ತಾಕತ್ತಿಲ್ವಾ..? ಮಾತು ಆಡುವ ಮುನ್ನ ಎಚ್ಚರಿಕೆ ವಹಿಸಿ ಉಸ್ತುವಾರಿಗಳೇ. ನಿಮ್ಮ ಪಾಪದ ಕೊಡ ತುಂಬಿ ತುಳುಕುತ್ತಿದೆ. ಇನ್ನೇನಿದ್ದರೂ ನಿಮಗೆ ಮನೆಯ ಕಡೆಗೇ ದಾರಿ. ಮುಂದಿನ ಚುನಾವಣೆಯಲ್ಲಿ ಇದೇ ಹಿಂದೂ ಸಮಾಜ ನಿಮ್ಮನ್ನು ಅದ್ಯಾವ ರೀತಿಯಲ್ಲಿ ಮನೆಗೆ ಕಳಿಸುತ್ತೆ ಅನ್ನೋದನ್ನು ನೀವೇ ನೋಡುತ್ತೀರಿ. ನಿಮ್ಮ ಕುತಂತ್ರಿ ಬುದ್ಧಿಯಿಂದ ಅದೆಷ್ಟೋ ಮಕ್ಕಳನ್ನು ಕಳೆದುಕೊಂಡ ತಾಯಂದಿರ ಶಾಪ ನಿಮ್ಮನ್ನು ತಟ್ಟದೇ ಇರದು.

-ಹರಿಶ್

Tags

Related Articles

Close