ಪ್ರಚಲಿತ

ಬ್ರೇಕಿಂಗ್: ರಾಜ್ಯ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಪೋಟ! ಮಾಜಿ ಸಂಸದೆ ರಮ್ಯಾ ಸಭೆಯಿಂದ ಅರ್ಧದಿಂದ ಹೊರಹೋಗಿದ್ಯಾಕೆ ಗೊತ್ತಾ..?

ಒಂದಲ್ಲಾ ಒಂದು ಕಾರಣದಿಂದ ಪಕ್ಷದ ವಿರುದ್ಧ ಮುನಿಕೊಳ್ಳುತ್ತಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಇಂದು ಮತ್ತೆ ತನ್ನ ಅಸಮಧಾನವನ್ನು ತೋರಿಸಿದ್ದಾರೆ. ಕಳೆದ ಲೋಕಸಭಾ ಚುನಾವಂಣೆಯ ನಂತರ ಪಕ್ಷದ ಇತರೆ ನಾಯಕರಿಂದ ದೂರವಾಗುತ್ತಿರುವ ರಮ್ಯಾ ಈಗ ಮತ್ತೆ ಒಬ್ಬಂಟಿಯಾಗಿದ್ದಾರಾ ಎನ್ನುವ ಸೂಚನೆ ವ್ಯಕ್ತವಾಗಿದೆ. ಮಾತ್ರವಲ್ಲದೆ ತನ್ನನ್ನು ಪಕ್ಷದ ಯಾವೊಬ್ಬ ನಾಯಕನೂ ಕ್ಯಾರೇ ಎನ್ನುತ್ತಿಲ್ಲ ಎನ್ನುವ ಕೊರಗೂ ರಮ್ಯಾರನ್ನು ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಉಪಚುನಾವಣೆಯಲ್ಲಿ ಗೆದ್ದಿದ್ದ ರಮ್ಯಾ…

ಕಳೆದ ಬಾರಿಯ ಲೋಕಸಭಾ ಚುಣಾವಣೆಗೂ ಮುನ್ನ ಮಂಡ್ಯಾದಲ್ಲಿ ಸಂಸತ್ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ರಮ್ಯಾ ಭಾರೀ ಅಂತರದಲ್ಲಿ ಗೆಲುವನ್ನು ಕಂಡಿದ್ದರು. ಯಾವಾಗ ರಮ್ಯಾಗೆ ಈ ಗೆಲುವು ದಕ್ಕುತ್ತೋ ಅಂದಿನಿಂದ ರಮ್ಯಾ ಖದರ್ ಚೇಂಜ್ ಆಗಿತ್ತು. ರಮ್ಯಾ ಲೆವೆಲ್ ಬದಲಾಗಿತ್ತು. ನಟನೆಯಿಂದ ಸಂಪೂರ್ಣವಾಗಿ ಹೊರಬಂದ ರಮ್ಯಾ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತಾರೆ. ಕೇವಲ ಎರಡೇ ವರ್ಷಗಳಲ್ಲೇ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಾಗುತ್ತದೆ. ಅದರಲ್ಲಿ ರಮ್ಯಾ ಸೋಲುಣ್ಣುತ್ತಾರೆ.

ಹಿರಿಯರನ್ನು ಕಡೆಗಣಿಸಿದ್ದ ರಮ್ಯಾ…

ಹಿರಿಯ ಕಾಂಗ್ರೆಸ್ ನಾಯಕರ ಕೃಪಾ ಕಟಾಕ್ಷದಿಂದ ಸಂಸದ ಸ್ಥಾನವನ್ನು ಅಲಂಕರಿಸಿದ ನಟಿ ರಮ್ಯಾ ತನ್ನ ಗೆಲುವಿನ ನಂತರ ತನಗೆ ಸಹಾಯ ಮಾಡಿದ್ದ ಅಷ್ಟೂ ನಾಯಕರನ್ನೂ ಕಡೆಗಣಿಸಿದ್ದರು. ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್, ಎಸ್‍ಎಂ ಕೃಷ್ಣ ಸಹಿತ ಅನೇಕ ನಾಯಕರನ್ನು ರಮ್ಯಾ ಕಡೆಗಣಿಸಿದ್ದರು. ಹೀಗಾಗಿ ಮತ್ತೆ ಬಂದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಭಾರೀ ಮತಗಳಿಂದ ಸೋಲನ್ನು ಅನುಭವಿಸಿದ್ದರು.

ರಾಹುಲ್‍ಗೆ ಹತ್ತಿರವಾದ ರಮ್ಯಾ..!!!

ದಿನೇ ದಿನೇ ಪಕ್ಷದಲ್ಲಿ ಮೂಲೆಗುಂಪಾದ ರಮ್ಯಾಗೆ ನೆರವಾಗಿದ್ದು ರಾಹುಲ್ ಗಾಂಧಿ. ರಾಜ್ಯ ನಾಯಕರ ಈ ರೀತಿಯ ಅವಮಾನವನ್ನು ಕಂಡಂತಹ ರಮ್ಯಾ ರಾಹುಲ್ ಗಾಂಧಿ ಬಳಿ ರಚ್ಚೆ ಹಿಡಿದು ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾರೆ. ನಟನೆಯಿಂದ ತುಂಬಾನೆ ದೂರವಾಗಿದ್ದು, ಇನ್ನು ನನಗೆ ರಾಜಕೀಯನೇ ಬದುಕಾಗಿದೆ. ಏನಾದರೂ ದಾರಿ ತೋರಿಸಿ ಎಂದಾಗ ರಾಹುಲ್ ಗಾಂಧಿ ರಮ್ಯಾಗೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಜವಬ್ಧಾರಿಯನ್ನು ನೀಡಿ ಸಹಕರಿಸುತ್ತಾರೆ. ಈ ಮೂಲಕ ರಮ್ಯಾ ಮೇಲಿನ ಬೇಸರವನ್ನು ಕಳೆಯುವಂತೆ ಮಾಡುತ್ತಾರೆ. ಇದನ್ನೇ ಬಂಡವಾಳವಾಗಿರಿಸಿಕೊಂಡ ರಮ್ಯಾ ಮತ್ತೆ ರಾಜ್ಯದ ನಾಯಕರ ಮೇಲೆ ಸವಾರಿ ಮಾಡುತ್ತಾರೆ. ತನಗೆ ಅನ್ಯಾಯ ಮಾಡಿದ್ದ ರಾಜ್ಯ ನಾಯಕರ ಮೇಲಿನ ಸೇಡನ್ನು ಸಖತ್ತಾಗಿಯೇ ತೀರಿಸಿಕೊಳ್ಳುತ್ತಾರೆ. ಸರಿ ಸುಮಾರು ರಮ್ಯಾ ಕಾಂಗ್ರೆಸ್ ಯುವರಾಜನನ್ನು ಸಾಮಾಜಿಕ ಜಾಲತಾಣಗಳಲ್ಲಿ ಅರಳಿ ನಿಲ್ಲುವಂತೆ ಮಾಡುತ್ತಾರೆ. ಆದರೆ ಅದು ಹೆಚ್ಚು ದಿನ ಉಳಿಯಲೇ ಇಲ್ಲ. ರಮ್ಯಾ ಮತ್ತೆ ರಾಜ್ಯಕ್ಕೆ ಬರಬೇಕಾಗುತ್ತದೆ. ರಾಹುಲ್ ಗಾಂಧಿ ಆದೇಶದ ಮೇರೆಗೆ ರಮ್ಯಾ ರಾಜ್ಯಕ್ಕೆ ಆಗಮಿಸುತ್ತಾರೆ.

ಮಂಡ್ಯಾದ ಟಿಕೆಟ್ ಆಕಾಂಕ್ಷಿಯಾಗಿದ್ದ ರಮ್ಯಾ ಮಂಡ್ಯಾಕ್ಕೆ ಬಂದ ನಂತರ ಮತ್ತೆ ರಾಜ್ಯ ನಾಯಕರ ಉಪಟಳ ಆರಂಭವಾಗುತ್ತದೆ. ಯಾವುದೇ ಕಾರಣಕ್ಕೂ ಮಂಡ್ಯಾದಲ್ಲಿ ರಮ್ಯಾಗೆ ಟಿಕೆಟ್ ನೀಡೋದಿಲ್ಲ ಎಂದು ಅಬ್ಬರಿಸಿ ಬಿಡುತ್ತಾರೆ ಮಂಡ್ಯಾ ಕಾಂಗ್ರೆಸ್ ನಾಯಕರು. ಹೀಗಾಗಿ ರಮ್ಯಾ ಮತ್ತೆ ದೆಹಲಿಗೆ ತೆರಳಿ ರಾಹುಲ್ ಗಾಂಧಿಯನ್ನು ಕಾಡುತ್ತಾರೆ.

ಮತ್ತೆ ರಾಜ್ಯದ ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆದ ರಮ್ಯಾ ಸಕ್ರಿಯವಾಗುವಂತೆ ಕಾಣುತ್ತಾರೆ. ಆದರೆ ರಮ್ಯಾ ಮನದೊಳಗೆ ಅಸಮಧಾನದ ಸೂಚನೆ ಕಾಣುತ್ತಲೇ ಇತ್ತು. ರಾಜ್ಯದ ನಾಯಕರಿಂದ ಅವಮಾನವನ್ನು ಎದುರಿಸಿದ ರಮ್ಯಾ ಇಂದು ತಮ್ಮ ಆಕ್ರೋಷವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ.

ಮೀಸಲಿಟ್ಟ ಆಸನದಲ್ಲಿ ಕೂರದ ರಮ್ಯಾ!

ಚಲನ ಚಿತ್ರ ಸ್ಟಾರ್ ನಟರಿಗೆಂತನೇ ಮೊದಲ 5 ಸಾಲುಗಳನ್ನು ನಿಗಧಿಪಡಿಸಲಾಗಿತ್ತು. ಆ ಸ್ಥಾನದಲ್ಲಿ ಮಾಲಾಶ್ರೀ, ಸಾಧು ಕೋಕಿಲ, ಅಭಿನಯಾ ಸಹಿತ ಕೆಲವು ನಟರು ಆಸೀನರಾಗುತ್ತಾರೆ. ಆದರೆ ರಮ್ಯಾ ಮಾತ್ರ ಅಲ್ಲಿ ಕೂರೋದಿಲ್ಲ. ತಾನೊಬ್ಬ ಕಾಂಗ್ರೆಸ್‍ನ ರಾಷ್ಟ್ರ ನಾಯಕಿ. ಹೀಗಾಗಿ ತನಗೆ ಅವರ ಪಕ್ಕದಲ್ಲಿ ಆಸನ ನೀಡಿರುವ ಬಗ್ಗೆ ರಮ್ಯಾ ಅಸಮಧಾನಗೊಳ್ಳುತ್ತಾರೆ.

ಬೇಸರಗೊಂಡ ರಮ್ಯಾ ಕೊನೆಯ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಯಾರಲ್ಲೂ ಹೆಚ್ಚಾಗಿ ಮಾತನಾಡುವ ಗೋಜಿಗೆ ಹೋಗದ ರಮ್ಯಾ ಕೊನೆಯ ಸಾಲಿನಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ನಂತರ ಕಹಳೆ ಮೊಳಗಿಸುವ ಸಮಯ. ಈ ವೇಳೆ ರಮ್ಯಾರನ್ನು ವೇದಿಕೆಯಿಂದಲೇ ಕರೆಯುತ್ತಾರೆ.

3 ಬಾರಿ ಕರೆದ ಡಿಕೆಶಿ!!!

ವೇದಿಕೆ ಮೇಲಿದ್ದ ಡಿಕೆ ಶಿವಕುಮಾರ್ ರಮ್ಯಾರನ್ನು 3 ಬಾರಿ ಕರೆದು ಕಹಳೆ ಮೊಳಗಿಸುವಂತೆ ಸೂಚಿಸುತ್ತಾರೆ. ಆದರೆ ರಮ್ಯಾ ಮಾತ್ರ ವೇದಿಕೆ ಮೇಲೇರಲೇ ಇಲ್ಲ. ಕೇಳಿಸದಂತೆ ಕುಂತಿದ್ದ ರಮ್ಯಾರನ್ನು ಡಿಕೆಶಿ ಮತ್ತೆ ಕರೆಯುತ್ತಾರೆ. ಈ ವೇಳೆ ಒಲ್ಲದ ಮನಸ್ಸಿನಲ್ಲಿ ವೇದಿಕೆ ಹತ್ತಿದ್ದ ರಮ್ಯಾ ಕಹಳೆಯನ್ನು ಮೊಳಗಿಸಿ ಮತ್ತೆ ಕೆಳ ಬರುತ್ತಾರೆ. ಈ ಮೂಲಕ ಕಾಂಗ್ರೆಸ್‍ನ ಆ ಕಾರ್ಯಕ್ರಮ ಅಕ್ಷರಷಃ ಗೊಂದಲದ ಗೂಡಾಗಿ ಪರಿಣಮಿಸುತ್ತದೆ.

ಹೊರನಡೆದ ರಮ್ಯಾ!

ಇದಿಷ್ಟೇ ಮಾತ್ರವಲ್ಲದೆ ರಮ್ಯಾ ತನ್ನ ಕಾರ್ಯಕ್ರಮದಿಂದಲೇ ಹೊನಡೆಯುತ್ತಾರೆ. ಆ ಕಾರ್ಯಕ್ರಮದಲ್ಲೂ ಭಾರೀ ಮುಜುಗರವನ್ನೇ ಅನುಭವಿಸಿದ ರಮ್ಯಾ ಕಾರ್ಯಕ್ರಮದಿಂದ ಅರ್ಧದಿಂದಲೇ ಹೊನಡೆಯುತ್ತಾರೆ. ಕಾಂಗ್ರೆಸ್ ಮುಖಂಡರ ಪ್ರಶ್ನೆಗೆ ಉತ್ತರಿಸಿದ್ದ ರಮ್ಯಾ “ತಾನು ದೆಹಲಿಗೆ ಹೋಗಬೇಕಾಗಿರುವುದರಿಂದ ಹೆಚ್ಚು ಸಮಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಸಾಧ್ಯವಾಗುತ್ತಿಲ್ಲ” ಎಂಬ ಸಬೂಬು ನೀಡಿ ತೆರಳಿಯೇಬಿಡುತ್ತಾರೆ ರಮ್ಯಾ.

ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ವಿಚಾರ ಮತ್ತೆ ಬಹಿರಂಗವಾಗುತ್ತದೆ. ರಮ್ಯಾ ಅಸಮಧಾನ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಆಘಾತ ನೀಡುವ ಸಾಧ್ಯತೆಗಳಿವೆ ಎಂಬ ಸೂಚನೆಯೂ ವ್ಯಕ್ತವಾಗುತ್ತಿದೆ. ಇದು ರಾಜ್ಯ ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಂತು ಸುಳ್ಳಲ್ಲ…

source: public tv

-ಸುನಿಲ್ ಪಣಪಿಲ

Tags

Related Articles

Close