ಪ್ರಚಲಿತ

ಬ್ರೇಕಿಂಗ್!! ರಾಷ್ಟ್ರೀಯ ಸೇನೆಯ ದಿನವೇ ಭಾರತೀಯ ಸೇನೆಯ ಪ್ರತಿದಾಳಿಗೆ ಏಳು ಪಾಕ್ ಉಗ್ರರು ಬಲಿ! ವ್ಯಗ್ರವಾದ ಭಾರತೀಯ ಸೇನೆ!

ಪಾಕ್ ಗೆ ಬುದ್ಧಿ ಬರುವುದಿಲ್ಲವೆಂಬುದು ಬಹುತೇಕ ಖಚಿತವಾಗಿದೆ ಬಿಡಿ! ಪ್ರತೀ ಬಾರಿಯೂ ಎಚ್ಚರಿಕೆ ನೀಡಿ ಸುಮ್ಮನಾಗುತ್ತಿದ್ದ ಭಾರತ ಈಗ , ಗುಂಡಿಗೆ ಗುಂಡಿನ ದಾಳಿಯನ್ನೇ ಪ್ರತಿಯಾಗಿಯೇ ಕೊಡುತ್ತಿದೆ! ಅದೆಷ್ಟೇ ಹೇಳಿದರೂ ಕೇಳದ ಪಾಕಿಸ್ಥಾನಕ್ಕೆ ಅವರದೇ ಭಾಷೆಯಲ್ಲಿ ಉತ್ತರ ಕೊಡಬೇಕಲ್ಲವೇ?!

ಇವತ್ತಿನ ಬೆಳಗ್ಗಿನ ಜಾವ, ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಜಮ್ಮು ಕಾಶ್ಮೀರದ ಮೆಂಧರ್ ಸೆಕ್ಟರ್ ನ ಕೋಟ್ಲ ಎಂಬಲ್ಲಿ ಭಾರತೀಯ ಸೇನೆಯ ಮೇಲೆ ಶೆಲ್ ದಾಳಿ ನಡೆಸಲು ತೊಡಗಿದ್ದರು! ತಕ್ಷಣವೇ ಎಚ್ಚೆತ್ತುಕೊಂಡ ಭಾರತೀಯ ಸೈನಿಕರು ಪಾಕ್ ಉಗ್ರರನ್ನು ಅಟ್ಟಾಡಿಸಿ ಹೊಡೆದುರುಳಿಸಿದ್ದರ ಪರಿಣಾಮ ಏಳು ಜನ ಪಾಕ್ ಉಗ್ರರು ಸಾವನ್ನಪ್ಪಿದ್ದಾರೆ!

ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರರೆಂದು ಗುರುತಿಸಲಾಗಿದ್ದು, ಇಲ್ಲಿಯವರೆಗೆ ಅದೆಷ್ಟೋ ಜನ ಉಗ್ರರನ್ನು ಕಾಶ್ಮೀರದ ಕಣಿವೆಯಲ್ಲಿ ಹೊಡೆದುರುಳಿಸಿದ್ದಾರೆ!

ಕೇವಲ ಇವತ್ತು ಮಾತ್ರವಲ್ಲ!  ಇದೇ ಮೊದಲಲ್ಲ ಪ್ರತೀಕಾರ!

ಯಾವಾಗ ಜನರಲ್ ಬಿಪಿನ್ ರಾವತ್ ಸೈನ್ಯದ ಜವಾಬ್ದಾರಿ ತೆಗೆದುಕೊಂಡರೋ, ಅಲ್ಲಿಂದ ಭಾರತೀಯ ಸೈನಿಕರು ನಿರ್ಭಯದಿಂದ ಪಾಕ್
ಗಡಿಗಳಿಗೆ ನುಗ್ಗಿ ಉಗ್ರ ನಿಗ್ರಹ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ!

ಕಳೆದ ತಿಂಗಳಷ್ಟೇ, ಪಾಕಿಸ್ಥಾನದ ಗಡಿ ದಾಟಿ, 15 ಕ್ಕೂ ಹೆಚ್ಚು ಪಾಕಿಗಳನ್ನು ಕೊಂದಿದ್ದ ಭಾರತೀಯ ಸೇನೆ, ಪಾಕಿಸ್ಥಾನದ ಮೂರು ಸ್ನಿಪ್ಪರ್ ಗಳನ್ನು ಸಂಹರಿಸಿತ್ತು. ಒಬ್ಬ ಭಾರತೀಯ ಯೋಧನ ಮೇಲೆ ಗುಂಡಿನ ಪ್ರಹಾರ ಮಾಡಿದ್ದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಗಿ ಬಂದಿದ್ದ ಪಾಕ್ ಸೇನೆಗೆ ಇಷ್ಟಾದರೂ ಬುದ್ಧಿ ಬರದೇ ಇರುವುದು ವಿಪರ್ಯಾಸವೇ ಸರಿ!

ಕಳೆದೆರಡು ವಾರಗಳಿಂದಲೂ, ಪಾಕ್ ನ ಹುಚ್ಚಾಟ ಮಿತಿ ಮೀರುತ್ತಿದೆಯಷ್ಟೇ! ಅದಕ್ಕೆ ತಕ್ಕನಾಗಿಯೇ, ಭಾರತೀಯ ಸೈನಿಕರು ತಿರುಗೇಟು ನೀಡುತ್ತ ಬಂದಿದ್ದಾರೆ! ಪರಿಣಾಮ, ಕಳೆದೆರಡು ವಾರಗಳಲ್ಲಿ, ಸರಾಸರಿ 25 ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ!

ಮುಂಚೆ,ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹೆಸರಿಗಷ್ಟೇ ಯೋಧ ಬಂದೂಕು ಹಿಡಿದಿರುತ್ತಿದ್ದ, ಆದರೆ, ಒಂದು ಗುಂಡು ಹಾರಿಸಲೂ ಸಹ, ಕಾಂಗ್ರೆಸ್ ಸರಕಾರದ ಪರವಾನಗಿಯನ್ನು ಕೇಳುವ ಪರಿಸ್ಥಿತಿಯತ್ತು! ಆದರೆ, ಈಗ ಪರಿಸ್ಥಿತಿ ಬದಲಾಗಿದೆ! ಪ್ರಧಾನಿ ನರೇಂದ್ರ ಮೋದಿ, ಯೋಧರಿಗೇ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಭಾರತ ನಿಧಾನವಾಗಿ, ತನ್ನ ಶತ್ರುಗಳಿಗೆ ಸ್ಪಂದಿಸುತ್ತಿದೆ! ಪ್ರತೀಕಾರ ತೆಗೆದುಕೊಳ್ಳುತ್ತಿದೆ!

ಪ್ರತೀ ಸಲ, ಪಾಕಿಸ್ಥಾನಿ ಸೇನೆ ಒಳನುಗ್ಗಿ ಗುಂಡಿನ ಚಕಮಕಿ ನಡೆಸಿದ ತಕ್ಷಣ, ಟ್ವಿಟ್ಟರ್ ಗಳಲ್ಲಿ, ದೇಶದ ಪ್ರಧಾನಿ ಮೋದಿಯವರಿಗೆ, ರಕ್ಷಣಾ ಇಲಾಖೆಯವರಿಗೆ ಬಿಟ್ಟಿ ಸಲಹೆಗಳು ಹೋಗುತ್ತವೆ! ಒಂದು ದಿನವೂ ಪಿಸ್ತೂಲು ನೋಡದವರು ಇದ್ದಕ್ಕಿದ್ದಂತೆ ರಕ್ಷಣಾ ಸಲಹೆಗಾರರಾಗಿಬಿಡುತ್ತಾರೆ! ಇಂತಹವರೊಮ್ಮೆ ಯೋಚಿಸಬೇಕಿದೆ! ಗಡಿಭಾಗವನ್ನು ದಾಟುವುದು, ಪಾಕಿಸ್ಥಾನದ ಯೋಧರಿಗೆ ಗುರಿಯಿಡುವುದು ಸುಲಭದ ಮಾತಲ್ಲ. ಗಡಿ ದಾಟಲು ಸರಕಾರದ ಪರವಾನಗಿ ಪಡೆಯಲೇ ಬೇಕಾಗುತ್ತದೆ! ಈ ಹಿಂದೆ ಕಾರ್ಗಿಲ್ ಸಮಯದಲ್ಲಿ ವಾಜಪೇಯಿಯವರೂ ಸಹ, ಭಾರತೀಯ ಯೋಧರನ್ನು ಗಡಿ ದಾಟಲು ಪರವಾನಗಿ ಕೊಟ್ಟಿರಲಿಲ್ಲ. ಹೋದರೆ ಹೋಗಲಿ ಎನ್ನುವುದಕ್ಕೆ ಅದು, ವಸ್ತುಗಳೂ ಅಲ್ಲ, ಬದಲಿಗೆ ಅಮೂಲ್ಯ ಜೀವಗಳು.

Image result for jaish e muhammad

 ಕಳೆದ ಸಲ ಭಾರತೀಯ ಸೇನೆ ಪಾಕ್ ಉಗ್ರರಿಗೆ ಬುದ್ಧಿ ಕಲಿಸಿದಾಗ, ಟ್ವಿಟ್ಟರಾಯಿಗಳು ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದ್ದರಷ್ಟೇ!

ಮೇಜರ್ ಗೌರವ್ ಆರ್ಯ, ” ಪ್ರತೀಕಾರದ ನಡೆಗೆ, ಭಾರತೀಯ ಯೋಧರು ಗಡಿ ದಾಟಿ, ಪಾಕಿಸ್ಥಾನಿಗಳನ್ನು ಯಮಪುರಿಗೆ ಕಳುಹಿಸಿದ್ದಾರೆ. ನಮ್ಮ ತಂಡಕ್ಕೆ ಯಾವ ಹಾನಿಯೂ ಆಗದೆ, ಸುರಕ್ಷಿತವಾಗಿದೆ! ಪಾಕಿಸ್ಥಾನಿ ಸೇನೆ 4 ಯೋಧರನ್ನು ಕಳೆದುಕೊಂಡಿದೆ ಎಂದು ಸ್ವತಃ ಖಚಿತಪಡಿಸಿದೆ. ಹೇಗಾದರೂ ಇರಲಿ, ಪಾಕಿಸ್ಥಾನಿಗಳು ಜಾಸ್ತಿ ಸಂಖ್ಯೆಯಲ್ಲಿಯೇ ಹತರಾಗಿದ‌್ದಾರೆ!” ಎಂದು ದಾಳಿಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು!

” ಮೋದಿ ಹೇಳಿದ್ದಾರೆ! ನಾವು ನಮ್ಮ ಯೋಧರಿಗೆ ನಿರ್ಧಾರ ತೆಗೆದುಕೊಳ್ಳುವ ಸ್ವತಂತ್ರ್ಯವನ್ನು ನೀಡಿದೆವು! ಅವರು, ಅದಕ್ಕೆ ಅರ್ಹರೆಂದು ಸಾಬೀತು ಪಡಿಸಿದರು ಕೂಡ. ಭಾರತೀಯ ಸೇನೆ Loc ಯ ದಾಟಿ, 3 ಜನ ಸ್ನಿಪ್ಪರ್, ಒಬ್ಬ ಮೇಜರ್, ಮತ್ತು ನಾಲ್ಕು ಜನ ಸಿಪಾಯಿಗಳನ್ನು ಕೊಂದಿದ್ದಲ್ಲದೇ, JeM ಉಗ್ರ ನೂರ್ ಮಹಮ್ಮದ್ ನನ್ನೂ ಯಮಪುರಿಗಟ್ಟಿದೆ. ಇದು, ನಮ್ಮ ಹುತಾತ್ಮರಿಗೆ ಸಿಕ್ಕ ಅತ್ಯಮೂಲ್ಯ ಗೌರವ” ಎಂದು ಅನ್ಮೋಲ್ ಕತಿಯಾರ್ ಟ್ವೀಟಿಸಿದ್ದರು!

Image result for modi with indian soldiers

– ಪೃಥು ಅಗ್ನಿಹೋತ್ರಿ

Tags

Related Articles

Close