ಪ್ರಚಲಿತ

ಭಾರತಕ್ಕೆ ಬಂದ ಇಸ್ರೇಲ್ ಪ್ರಧಾನಿ ಮೋದಿ ಮೇಲಿನ ಪ್ರೀತಿಯನ್ನು ವಿಮಾನದಲ್ಲಿ ವ್ಯಕ್ತಪಡಿಸಿದ್ದು ಹೇಗೆ ಗೊತ್ತಾ.?! ಮೋದಿ ನೇತಾನ್ಯಹು ಕುಚಿಕು ಕುಚಿಕು!!

ಭಾರತ ಜಗತ್ತಿನ ಮುಂದೆ ಯಾವ ಮಟ್ಟದಲ್ಲಿ ತನ್ನ ಸ್ಥಾನವನ್ನು ಬಲಗೊಳಿಸುತ್ತಿದೆ ಎಂದರೆ ಇಡೀ ಜಗತ್ತೇ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡುತ್ತಿದೆ. ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಅವರಿಗೆ ಸಿಗುವ ಭವ್ಯ ಸ್ವಾಗತವನ್ನು ಗಮನಿಸಿದರೆ ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ವಿಚಾರ.

ಯಾಕೆಂದರೆ ನರೇಂದ್ರ ಮೋದಿಯವರ ನೇತ್ರತ್ವದ ಭಾರತದ ಅಭಿವೃದ್ಧಿಯ ವೇಗವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ…! ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತದ ಸ್ನೇಹ ಸಂಬಂಧ ಬಯಸುತ್ತಿದೆ ಎಂದರೆ ಭಾರತದ ಪ್ರಾಬಲ್ಯ ಯಾವ ಮಟ್ಟದಲ್ಲಿ ಬೆಳೆಯುತ್ತಿದೆ ಎಂಬುದನ್ನು ನಾವು ಗಮನಿಸಬಹುದು.

70 ವರ್ಷದ ಭಾರತದ ಇತಿಹಾಸದಲ್ಲೇ ಮೊದಲ ಬಾರಿ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಗೆ ಕಳೆದ ವರ್ಷ ಭೇಟಿ ಕೊಟ್ಟಿದ್ದರು. ಅಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಶಿಷ್ಟಾಚಾರ ಬದಿಗೊತ್ತಿ ವಿಮಾನ ನಿಲ್ದಾಣಕ್ಕೆ ಬಂದು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದರು.ಜೊತೆಗೆ ಇಡೀ ಮಂತ್ರಿ ಮಂಡಲವೇ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.

ಇದೇ ರೀತಿ ನಿನ್ನೆ ಭಾರತಕ್ಕೆ ಆಗಮಿಸಿದ ಇಸ್ರೇಲ್ ಪ್ರಧಾನಿಯನ್ನು ಶ್ರೀ ನರೇಂದ್ರ ಮೋದಿಯವರು ಕೂಡ ಶಿಷ್ಟಾಚಾರವನ್ನು ಬದಿಗೊತ್ತಿ ಸ್ವತಃ ತಾನೇ ವಿಮಾನ ನಿಲ್ದಾಣಕ್ಕೆ ಹೋಗಿ ಬೆಂಜಮಿನ್ ನೇತನ್ಯಾಹು ರವರನ್ನು ಬಹಳ ಆತ್ಮೀಯವಾಗಿ ಸ್ವಾಗತಿಸಿದ್ದರು.

ಶ್ರೀ ನರೇಂದ್ರ ಮೋದಿ ಅಂತರಾಷ್ಟ್ರೀಯ ನಾಯಕರ ಜೊತೆ ಅತ್ಯುತ್ತಮ ಸಂಬಂಧದ ಪರಿಣಾಮವಾಗಿ ಭಾರತದ ವಿದೇಶಾಂಗ ನೀತಿಯಲ್ಲಿ ಹೊಸದೊಂದು ಅಧ್ಯಾಯ ಆರಂಭವಾಗಿರುವುದಂತೂ ಸತ್ಯ.

ನಿನ್ನೆ ಭಾರತಕ್ಕೆ ಬಂದಿಳಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತದ ಪ್ರವಾಸವನ್ನು ಬಹಳ ಸಂತೋಷದಿಂದ ಪ್ರಾರಂಭಿಸಿದ್ದಾರೆ…! ಹೌದು,ಇದಕ್ಕೆ ಕಾರಣ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಆಗಮಿಸುವ ತಮ್ಮ ವಿಶೇಷ ವಿಮಾನದಲ್ಲಿ ತಮ್ಮ ದೇಶದ ಇಸ್ರೇಲ್ ಧ್ವಜದ ಜೊತೆಗೆ ಭಾರತದ ತ್ರಿವರ್ಣ ಧ್ವಜವನ್ನು ಹಾಕಿಕೊಂಡಿದ್ದು ಭಾರತಕ್ಕೆ ನೀಡಿದ ವಿಶೇಷ ಗೌರವವಾಗಿತ್ತು.

https://youtu.be/gi4aF2RHPSU

ಕಳೆದ ಬಾರಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಸ್ರೇಲ್ ಗೆ ಹೋಗಿದ್ದ ಸಂದರ್ಭದಲ್ಲಿ ಸ್ವತಃ ಬೆಂಜಮಿನ್ ನೇತನ್ಯಾಹು ವಿಮಾನ ನಿಲ್ದಾಣಕ್ಕೆ ಆಗಮಿಸಿ ಶ್ರೀ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತ ಕೋರಿದ್ದರು.
ರಾಜಾತಿಥ್ಯ ನೀಡಿ ಶ್ರೀ ನರೇಂದ್ರ ಮೋದಿಯವರನ್ನು ಸತ್ಕರಿಸಿದ್ದರು.

ಸೂಟ್ ಮೇಲೆ ತ್ರಿವರ್ಣ ಧ್ವಜ ಹಾಕಿಕೊಂಡಿದ್ದ ಇಸ್ರೇಲ್ ಪ್ರಧಾನಿ…!

ಕಳೆದ ವರ್ಷ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಸ್ವತಃ ತಾವೇ ಆಗಮಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ತಮ್ಮ ಸೂಟ್ ಮೇಲೆ ಭಾರತದ ಧ್ವಜವನ್ನು ಹಾಕಿಕೊಂಡು ಬರುವ ಮೂಲಕ ಭಾರತದ ಮೇಲೆ ತಮಗಿರುವ ಪ್ರೀತಿಯನ್ನು ತೋರಿಸಿದ್ದರು.

ಇಸ್ರೇಲ್ ಪ್ರಧಾನಿಯ ಈ ನಡವಳಿಕೆ ಶ್ರೀ ನರೇಂದ್ರ ಮೋದಿಯವರ ಜೊತೆಗೆ ಇಡೀ ಭಾರತೀಯರ ಮನಸ್ಸನ್ನು ಗೆದ್ದಿತ್ತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತದ ಜೊತೆಗಿನ ಸ್ನೇಹ ಸಂಬಂಧವನ್ನು ಯಾವ ರೀತಿಯಲ್ಲಿ ಬಯಸುತ್ತಾರೆ ಎಂಬೂದಕ್ಕೆ ಇದೊಂದು ಸಣ್ಣ ಉದಾಹರಣೆ…

ಕಳೆದ ಬಾರಿ ಮೋದಿಯವರನ್ನು ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮೆಡಿಟರೇನಿಯನ್ ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿದ್ದರು.
ಮತ್ತು ಇಸ್ರೇಲಿಗರು ಬೆಳೆಯುವ ವಿಶೇಷವಾದ ಹೂವೊಂದಕ್ಕೆ “ಮೋದಿ” ಎಂಬ ಹೆಸರಿಟ್ಟು ವಿಶೇಷವಾಗಿ ಮೋದಿಯವರನ್ನು ಗೌರವಿಸಿತ್ತು.

ಈ ಬಾರಿ ಇಸ್ರೇಲ್ ಪ್ರಧಾನಿಯ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ನೇತನ್ಯಾಹು ಅವರ ಜೊತೆಗೆ ಅಹಮದಾಬಾದ್ ನಲ್ಲಿ ವಿಶೇಷವಾಗಿ ರೋಡ್ ಶೋ ನಡೆಸಲಿದ್ದಾರೆ ಶ್ರೀ ನರೇಂದ್ರ ಮೋದಿಯವರು…! ಬೆಂಜಮಿನ್ ಜೊತೆಗೆ ಈ ‘ಮೋಷೆ’ ಎಂಬ ಬಾಲಕ ಕೂಡ ಆಗಮಿಸಿದ್ದು ಈ ಬಾಲಕನಿಗೆ ಭಾರತಕ್ಕೆ ಬರುವ ಆಸೆಯನ್ನೂ ಪೂರೈಸಿದ್ದಾರೆ.

2008ರಲ್ಲಿ ಮುಂಬೈ ದಾಳಿಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಇಸ್ರೇಲ್ ನ ಬಾಲಕ ‘ಮೋಷೆ’ ಮೋದಿಯವರು ಇಸ್ರೇಲ್ ಗೆ ಹೋಗಿದ್ದ ಸಂದರ್ಭದಲ್ಲಿ ಮುಂಬೈ ಗೆ ಭೇಟಿ ನೀಡುವ ಬಗ್ಗೆ ಆಸೆ ವ್ಯಕ್ತಪಡಿಸಿದ್ದ.
‘ನಿನಗೆ ದೀರ್ಘಾವಧಿಯ ವೀಸಾ ನೀಡುತ್ತೇವೆ,ಬಯಸಿದಾಗ ಭಾರತಕ್ಕೆ ಭೇಟಿ ನೀಡಬಹುದು’ ಎಂದು ಮೋದಿಯವರು ಬಾಲಕನಿಗೆ ಭರವಸೆ ನೀಡಿದ್ದರು. ಈ ಕಾರಣದಿಂದ ಈ ಬಾರಿ ಇಸ್ರೇಲ್ ಪ್ರಧಾನಿಯ ಜೊತೆಗೆ ಬಾಲಕನೂ ಆಗಮಿಸಿದ್ದಾನೆ.

ಇಸ್ರೇಲ್ ಪ್ರಧಾನಿಯ ಈ ಭೇಟಿ ಮಹತ್ವದ್ದಾಗಿದೆ. ಯಾಕೆಂದರೆ ಅನೇಕ ಮಹತ್ತರವಾದ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಲಿವೆ. ಅದೇ ರೀತಿ ಈ ವೇಳೆ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ “ಬಗ್ಗಿ ಜೀಪ್” ಎಂದು ಕರೆಯಲಾಗುವ ಸಮದ್ರ ನೀರನ್ನು ಶುದ್ದೀಕರಿಸುವ ಈ ವಿಶೇಷವಾದ ಜೀಪನ್ನು ಕೊಡುಗೆಯಾಗಿ ನೀಡಲಿದ್ದಾರೆ.
ಈ ಜೀಪ್ ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾದ ರೀತಿಯಲ್ಲಿ ಶುದ್ದೀಕರಿಸುವ ಜೊತೆಗೆ ನೈಸರ್ಗಿಕ ವಿಕೋಪ ಸಂಭವಿಸಿದಾಗ ಸೇನೆಯ ಬಳಕೆಗೂ ಬಳಸುವ ರೀತಿಯಲ್ಲಿ ನಿರ್ಮಿಸಲಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ರವರ ಈ ಭೇಟಿ ಬಹಳ ಮಹತ್ತರವಾಗಿದ್ದು ಭಾರತದಂತಹ ಶಕ್ತಿಶಾಲಿ ರಾಷ್ಟ್ರ ಇಸ್ರೇಲ್ ನಂತಹ ಸಣ್ಣ ದೇಶದೊಂದಿಗೆ ಉತ್ತಮ ಸ್ನೇಹ ಇಟ್ಟುಕೊಂಡಿರುವುದು ವಿರೋಧಿಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ…!

ಭಾರತಕ್ಕೆ ಆಗಮಿಸುವ ವೇಳೆ ತನ್ನ ದೇಶದ ಧ್ವಜದ ಜೊತೆಗೆ ಭಾರತದ ಧ್ವಜವನ್ನೂ ತನ್ನ ಬಳಿ ಇಟ್ಟುಕೊಂಡಿರುವುದು ಭಾರತವನ್ನು ಇಸ್ರೇಲ್ ಯಾವ ರೀತಿಯಲ್ಲಿ ಗೌರವಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಏನೇ ಆಗಲಿ,ಮೋದಿಯವರ ಈ ಆಡಳಿತದಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತದ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವುದಂತೂ ಸತ್ಯ…!

–ಅರ್ಜುನ್

Tags

Related Articles

Close