ಪ್ರಚಲಿತ

ಭಾರತದಲ್ಲಿ ದೀಪಾವಳಿ ಆಚರಣೆ ಮಾಡುತ್ತಿರುವ ಹಿಂದಿರುವ ಕಾರಣವಾದರೂ ಏನು ಗೊತ್ತೇ??

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ದೀಪಾವಳಿ ಎಲ್ಲರ ಮನ ಮನೆಯನ್ನು ಕತ್ತಲಿನಿಂದ ಬೆಳಕಿಗೆ ತರುವ ಒಂದು ವಿಶೇಷವಾದ ಆಚರಣೆ!! ದೀಪಾವಳಿ ಹಬ್ಬವು ಒಂದು ದಿನದಲ್ಲಿ ನಡೆಯುವ ಹಬ್ಬವಲ್ಲ; ಬದಲಾಗಿ ನಾಲ್ಕೈದು ದಿನಗಳ ಕಾಲ ಹಬ್ಬಿಕೊಂಡಿರುವ ಪರ್ವವಿದು!! ಈ ದಿನಗಳಲ್ಲಿ ನಡೆಸುವ ವಿವಿಧ ಕಲಾಪಗಳಿಗೆ ಅನುಗುಣವಾಗಿ ದೀಪಾವಳಿಯನ್ನು ಹಲವು ಹೆಸರುಗಳಿಂದ ಕರೆಯುವುದುಂಟು: ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ನರಕಚತುರ್ದಶೀ, ಬಲಿಪಾಡ್ಯಮೀ, ವೀರಪ್ರತಿಪದಾ, ಭಗಿನೀದ್ವತೀಯಾ, ಸೋದರಬಿದಿಗೆ ಹೀಗೆ ಹಲವು ಹೆಸರುಗಳಿವೆ ಈ ದೀಪಾವಳಿಗೆ!!

ದೀಪಾವಳಿ, ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಸನಾತನ ಧರ್ಮದಲ್ಲಿ ಆಶ್ವಯುಜ ಕೃಷ್ಣ ತ್ರಯೋದಶಿ, ಆಶ್ವಯುಜ ಕೃಷ್ಣ ಚತುರ್ದಶಿ(ನರಕ ಚತುರ್ದಶಿ) ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ, ಮತ್ತು ಆಶ್ವಯುಜ ಶುಕ್ಲ ಪಾಡ್ಯಯಂದು ಬಲಿಪಾಡ್ಯಮಿ ಆಚರಣೆ ಮಾಡುವ ಮೂಲಕ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತದೆ. ಹಾಗಾಗಿ ‘ನಹಿ ಜ್ಞಾನೇನ ಸದೃಶಂ'(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ‘ಜ್ಞಾನ ವಿನಃ ಪಶು:'(ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ. ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ.

ಹಿಂದೂಗಳಿಗೆ ದೀಪಾವಳಿ ಬಂತೆಂದರೆ ಸಾಕು ಅತ್ತಿಂದಿತ್ತಾ ಓಡಾಡುತ್ತಾ ಸಂಭ್ರಮಿಸುವ ದಿನ ಎಂದರೆ ತಪ್ಪಾಗಲಾರದು. ಮಕ್ಕಳಂತೂ ಹಟ ಹಿಡಿದು ಪಟಾಕಿಗಾಗಿ ಹಠ ಮಾಡುತ್ತಾ, ಅದಕ್ಕಾಗಿ ಹಾತೊರೆಯುತ್ತಾ, ಹೊಸ ಬಟ್ಟೆಗಳು, ವಿವಿಧ ದೀಪಗಳಿಂದ ಅಲಕಂಕರಿಲ್ಪಟ್ಟ ಬೀದಿಗಳು, ಮನೆತುಂಬಾ ದೀಪಗಳ ಸಾಲು, ಘಮ ಘಮಿಸುವ ಕಜ್ಜಯಗಳು ಅಹಾ…! ಎಲ್ಲವೂ ಹೇಳುವಾಗಲೇ ಎಷ್ಟೊಂದು ಖುಷಿ ಕೊಡುತ್ತೆ, ಇನ್ನೂ ಅದನ್ನು ಅನುಭವಿಸುವಾಗಂತೂ ಅದರ ಖುಷಿ ಹೇಳ ತೀರದು!!

ಭಾರತದಲ್ಲಿ ದೀಪಾವಳಿಯ ಆಚರಣೆಗೆ 12 ವಿವಿಧ ಕಾರಣಗಳು ಇವೆ!! ಹೌದು.. ಪ್ರತಿಯೊಂದು ಕಾರಣವು ವಿವಿಧ ರೀತಿಯ ಅರ್ಥವನ್ನು ನೀಡುತ್ತಾ, ಈ ಒಂದು ಹಬ್ಬಕ್ಕೆ ಹೆಚ್ಚಿನ ಮಹತ್ವವನ್ನು ನೀಡುವಲ್ಲಿ ಕಾರಣವಾಗಿರುವುದಂತೂ ನಿಜ!! ದೀಪಾವಳಿ ಎಂದರೆ ಭಾರತೀಯರಿಗೆ ಭಾಗ್ಯ ತರುವ ಹಬ್ಬ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ!! ಹಾಗಾದರೆ, ನಮ್ಮ ಭಾರತ ದೇಶದಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಲು ಮುಖ್ಯವಾದ ಕಾರಣವೇನು ಗೊತ್ತೇ??

ದೀಪಾವಳಿ ಲಕ್ಷ್ಮೀ ದೇವತೆಯ ಹುಟ್ಟುಹಬ್ಬ

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವತೆಯ ಹುಟ್ಟು ಹಬ್ಬವೇ ದೀಪಾವಳಿ. ಯಾಕೆಂದರೆ, ಕ್ಷುಲ್ಲಕ ಸಮುದ್ರದ ಅರಸನ ಮಗಳು ಲಕ್ಷ್ಮೀ ದೇವತೆಯಾಗಿದ್ದು, ಈಕೆ ಕಾರ್ತಿಕ ತಿಂಗಳ ಅಮಾವಾಸ್ಯೆಯ ದಿನದಂದು ಹುಟ್ಟಿದಳು ಎಂದು ಪುರಾಣಗಳು ತಿಳಿಸಿವೆ. ಅಷ್ಟೇ ಅಲ್ಲದೇ, ಲಕ್ಷ್ಮೀಯು ತನ್ನ ಹುಟ್ಟುಹಬ್ಬದ ದಿನದ ರಾತ್ರಿಯಲ್ಲಿ ವಿಷ್ಣುವಿನೊಂದಿಗೆ ವಿವಾಹವಾದಳು ಎನ್ನುವುದನ್ನು ಹೇಳಲಾಗಿದೆ!! ಹಾಗಾಗಿ ಲಕ್ಷ್ಮೀ ದೇವಿಯು ಭಗವಾನ್ ವಿಷ್ಣುವಿನೊಂದಿಗೆ ವಿವಾಹವಾದ ಸಂದರ್ಭದಲ್ಲಿ ಈಡೀ ಲೋಕವು ಅದ್ಭುತವಾದ ದೀಪಾಲಂಕಾರಗಳಿಂದ ಕಂಗೊಳಿಸಿತ್ತು. ಹಾಗಾಗಿಯೇ ದೀಪಾವಳಿಯ ಹಬ್ಬದ ದಿನದಂದು ದೀಪಗಳೊಂದಿಗೆ ಲಕ್ಷ್ಮೀ ದೇವಿಯನ್ನು ಹಿಂದೂಗಳು ತಮ್ಮ ಮನೆಗಳಿಗೆ ಬರಮಾಡಿಕೊಳ್ಳುತ್ತಾರೆ!!

ಭಾಗವತ ಪುರಾಣದ ಪ್ರಕಾರ

ಅತ್ಯಂತ ಪವಿತ್ರವಾದ ಭಾಗವತ ಪುರಾಣದ ಪ್ರಕಾರ ವಿಷ್ಣುವಿನ 5 ನೇ ಅವತಾರವೇ ವಾಮನ ಅವತಾರ!! ತೇತ್ರಾಯುಗದಲ್ಲಿ ಹಿರಣ್ಯಕಶಿಪುವಿನ ಮರಿಮೊಮ್ಮಗನಾದ ಬಲಿ ಚಕ್ರವರ್ತಿಯು ಇಂದ್ರನನ್ನು ಗೆದ್ದು ಮೂರು ಲೋಕಗಳ ಅಧಿಪತಿಯಾಗುತ್ತಾನೆ. ಭೂಮಿಯ ಪಾಲನೆ ಮಾಡುತ್ತಿದ್ದ ರಾಕ್ಷಸ ಮಹಾಬಲೀಯು ಭಗವಾನ್ ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ಇದರಿಂದ ಬೆದರಿದ ದೇವತೆಗಳು ಶ್ರೀಮಾನ್ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ದಾನ ಶೂರನಾದ ಬಲಿ ಚಕ್ರವರ್ತಿಯು ಒಂದು ಯಜ್ಞ ಮಾಡುತ್ತಿರುವಾಗ, ಶ್ರೀಮಾನ್ ಮಹಾವಿಷ್ಣುವು ಒಬ್ಬ ಕುಬ್ಜ ಬ್ರಾಹ್ಮಣ ಬಾಲಕನಾಗಿ ಯಜ್ಞ ಮಾಡುತ್ತಿರುವ ಸ್ಥಳಕ್ಕೆ ಬರುತ್ತಾನೆ. ಮಹಾಬಲಿಗೆ ಆ ಬ್ರಾಹ್ಮಣ(ವಿಷ್ಣು) ತನ್ನ ರಾಜಸತ್ವವನ್ನು ಹಾಗು ಸಂಪತ್ತನ್ನು ತ್ಯಜಿಸುವಂತೆ ಹೇಳುತ್ತಾನೆ. ಅದಕ್ಕೆ ಒಪ್ಪಿದ ಮಹಾಬಲಿಯು ತನ್ನ ರಾಜ ಪದವಿಯನ್ನು ಮತ್ತು ಆತನಲ್ಲಿದ್ದ ಸಂಪತ್ತನ್ನು ತ್ಯಜಿಸುತ್ತಾನೆ. ಇದರಿಂದಾಗಿ ಲಕ್ಷ್ಮೀ ದೇವಿಯು ಮುಕ್ತಳಾಗುತ್ತಾಳೆ. ಬಲಿ ಚಕ್ರವರ್ತಿಯ ಭಕ್ತಿಗೆ ಮೆಚ್ಚಿದ ಶ್ರೀಹರಿಯು ಬಲಿಯನ್ನು ಅಮರನನ್ನಾಗಿ ಮಾಡಿ ಪಾತಾಳ ಲೋಕಕ್ಕೆ ಚಕ್ರವರ್ತಿಯನ್ನಾಗಿ ನೇಮಿಸಿದನು!! ಅಸುರನಿಂದ ಮುಕ್ತಳಾದ ಲಕ್ಷ್ಮೀ ದೇವಿಯನ್ನು ಆರಾಧಿಸುವುದಕ್ಕೋಸ್ಕರವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ಭಾಗವತದಲ್ಲಿ ಹೇಳಲಾಗಿದೆ!! ಅಷ್ಟೇ ಅಲ್ಲದೇ, ಪುರಾಣಗಳು ಹೇಳುವ ಪ್ರಕಾರ ಬಲಿ ಚಕ್ರವರ್ತಿಯ ಭಕ್ತಿಗೆ ಮೆಚ್ಚಿದ ಶ್ರೀಹರಿಯು ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆಗೈಯುವರು. ವರ್ಷದಲ್ಲಿ ಒಂದು ದಿನ ಭೂಮಂಡಲದಲ್ಲಿ ಬಲಿಯ ರಾಜ್ಯ ನಡೆಯುವಂತೆ ಅನುಗ್ರಹಿಸಿದ. ಬಲಿಪಾಡ್ಯದಂದು ಪೂರ್ತಿ ದಿನ ಬಲಿಯ ರಾಜ್ಯಭಾರ ನಡೆಯುತ್ತದೆ ಎಂಬುದು ನಂಬಿಕೆ. ಅಹಂಕಾರವೆಂಬುದು ತೊಲಗಿ ತ್ಯಾಗ, ನಿಷ್ಠೆ, ದೃಢತೆಗಳು ನೆಲೆಯಾಗಲಿ ಎಂಬುದು ಇದರ ಹಿಂದಿನ ಆಶಯವಾಗಿದೆ!!

ನರಕಾಸುರನ ಸಂಹಾರ

ಭಾಗವತದಲ್ಲಿ ದುಷ್ಟ ರಾಜನಾದ ನರಕಾಸುರನ ಬಗ್ಗೆ ತಿಳಿಸುತ್ತದೆ. ನರಕಾಸುರನು ಅತ್ಯಂತ ಶಕ್ತಿಶಾಲಿಯಾಗಿದ್ದ ಈತ ಲೋಕಕಂಡಕನಾಗಿದ್ದ ಈತ 16 ಸಾವಿರ
ರಾಜಪುತ್ರಿಯರನ್ನು ಸೆರೆಯಲ್ಲಿಟ್ಟದ್ದನು. ಹೀಗಾಗಿ ಆತನ ಪರಾಕ್ರಮದಿಂದ ಸ್ವರ್ಗ ಹಾಗು ನರಕ ಎರಡನ್ನು ವಶಪಡಿಸಿಕೊಂಡಿದ್ದನು!! ಇದರಿಂದ ಇವನ ಉಪಟಳ
ತಾಳಲಾರದೆ ಇಂದ್ರಾದಿ ದೇವತೆಗಳು ಶ್ರೀಕೃಷ್ಣನಲ್ಲಿ ಮೊರೆಹೋದರು. ಅಶ್ವೀಜ ಮಾಸದ ಬಹುಳ ಕೃಷ್ಣಪಕ್ಷ ಚತುದರ್ಶಿಯಂದು ಸಂಹಾರ ಮಾಡಿದನು. ತದನಂತರ ನರಕಾಸುರ ಬಂಧಿಖಾನೆಯಲ್ಲಿದ್ದ 16,000 ಮಹಿಳೆಯರನ್ನು ಕೃಷ್ಣನು ರಕ್ಷಣೆ ಮಾಡಿದನಂತೆ. ನರಕಾಸುರನನ್ನು ಶ್ರೀ ಕೃಷ್ಣನು ಕೊಂದ ಕಾರಣವೇ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ!!

ಪಾಂಡವರು ಹಿಂದಿರುಗುವಿಕೆ

ಮಹಾಭಾರತದ ಪ್ರಕಾರ ಪಾಂಡವರು ಕೌರವರೊಂದಿಗೆ ಸೋಲುತ್ತಾರೆ. ಇದರ ಪ್ರತಿಯಾಗಿ ಪಂಚ ಪಾಂಡವರಿಗೆ 12 ವರ್ಷಗಳ ಕಾಲ ಬಹಿಷ್ಕಾರ ಮಾಡಲಾಗುತ್ತದೆ. 12 ವರ್ಷಗಳ ಕಾಲ ಯಾವುದೇ ಆಧಾರವಿಲ್ಲದೇ ಸಾಮಾನ್ಯರಂತೆ ಜೀವನ ಸಾಗಿಸುತ್ತಾರೆ!! ತದನಂತರ ತಮ್ಮ 12 ವರ್ಷಗಳ ಬಹಿಷ್ಕಾರದಿಂದ ವಿಮುಕ್ತರಾಗಿದ್ದು, ಕಾರ್ತಿಕ ಅಮಾವಾಸ್ಯೆಯಂದು ಹಾಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.

ರಾಮನ ಜಯ

ಶ್ರೇಷ್ಟ ಹಿಂದೂ ಮಹಾಕಾವ್ಯ “ರಾಮಾಯಣ”ದ ಪ್ರಕಾರ, ದುಷ್ಟ ರಾಜನಾದ ರಾವಣನು ಸೀತೆಯನ್ನು ಅಪಹರಿಸಿರುತ್ತಾನೆ. ಹಾಗಾಗಿ ರಾವಣನನ್ನು ರಾಮನು ಕೊಂದು ತನ್ನ 14 ವರ್ಷಗಳ ವನವಾಸದ ನಂತರ ತಮ್ಮ ರಾಜಧಾನಿ ಅಯೋಧ್ಯಾಗೆ ಮರಳುತ್ತಾರೆ. ಆ ದಿನವು ಕಾರ್ತಿಕ ಅಮಾವಸ್ಯೆ ದಿನವಾಗಿರುತ್ತದೆ. ತಮ್ಮ ಅಚ್ಚುಮೆಚ್ಚಿನ ಅರಸನ ಮರಳುವಿಕೆಯಿಂದ ಜನರು ಮಣ್ಣಿನಿಂದ ದೀಪಗಳನ್ನು ಬೆಳಗಿಸಿ ಇಡೀ ನಗರವನ್ನೇ ಭವ್ಯವಾದ ರೀತಿಯಲ್ಲಿ ಅಲಂಕಾರ ಮಾಡಿ ಸ್ವಾಗತಿಸುತ್ತಾರೆ. ಹೀಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ರಾಮಾಯಣದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ವಿಕ್ರಮಾದಿತ್ಯನ ಪಟ್ಟಾಭಿಷೇಕ

ವಿಕ್ರಮಾದಿತ್ಯನ ಅಸಾಮಾನ್ಯವಾದ ಬುದ್ಧಿವಂತಿಕೆ, ಶೌರ್ಯ ಮತ್ತು ವೈಭವದಿಂದ ಪ್ರಸಿದ್ಧ ಭಾರತೀಯ ರಾಜನಾಗಿದ್ದಾನೆ. ಇದನ್ನು ವಾರ್ಷಿಕವಾಗಿ ಆಚರಣೆ ಮಾಡುವ ಮೂಲಕ ಗುರುತಿಸಲಾಗುತ್ತದೆ. ಶ್ರೇಷ್ಟ ಹಿಂದೂ ರಾಜರಲ್ಲಿ ಒಬ್ಬನಾದ ವಿಕ್ರಮಾದಿತ್ಯನು ಪೂರ್ವದ ಆಧುನಿಕ ಥೈಲ್ಯಾಂಡ್‍ನ ಪಶ್ಚಿಮದ ಆಥುನಿಕ ಸೌದಿ ಅರೇಬಿಯಾದ ಗಡಿಯವರೆವಿಗೂ ವಿಕ್ರಮಾದಿತ್ಯನು ಸಾಮ್ರಾಜ್ಯವನ್ನು ವಿಸ್ತರಿಸಿ ಆಳಿದನು. ಹೀಗಾಗಿ ದೀಪಾವಳಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಒಂದು ಧಾರ್ಮಿಕವಾದ ಉತ್ಸವೇ ಅಲ್ಲದೇ ಒಂದು ಐತಿಹಾಸಿಕವಾದ ಸಹಭಾಗಿತ್ವವನ್ನು ಕೂಡ ದೀಪಾವಳಿ ಹಬ್ಬ ಹೊಂದಿದೆ.

ಕಾಳಿ ದೇವತೆ

ಕಾಳಿ ದೇವತೆಯನ್ನು ಶ್ಯಾಮ ಕಾಳಿ ಎಂದು ಕೂಡ ಕರೆಯುತ್ತಾರೆ. ಕಾಳಿಯ 10 ಅವತಾರಗಳಲ್ಲಿ ಈ ಅವತಾರ ಮೊದಲನೆಯದು. ಪಾರ್ವತಿಯ ಸ್ವರೂಪವಾದ ಕಾಳಿಯು ಸ್ವರ್ಗ ಹಾಗು ಭೂಮಿಯ ಮೇಲೆ ಇರುವ ದುಷ್ಟರನ್ನು ಸಂಹಾರ ಮಾಡಲು ಜನಿಸಿದವಳು. ಈಕೆಯು ಕ್ರೌಯದಿಂದ ಮೆರೆಯುತ್ತಿದ್ದ ರಾಕ್ಷಸರನ್ನು ಕೊಂದ ನಂತರ ತನ್ನ ಕೋಪದ ನಿಯಂತ್ರಣ ಕಳೆದುಕೊಳ್ಳುತ್ತಾಳೆ. ತನ್ನ ದಾರಿಗೆ ಅಡ್ಡ ಬಂದವರನ್ನು ನಾಶ ಮಾಡುತ್ತಾ ಇರುತ್ತಾಳೆ ಆ ಸಮದಲ್ಲಿ ಮಹಾ ಶಿವನು ಅಡ್ಡ ಹೋಗುತ್ತಾನೆ. ಆಕೆಯ ಕಾಲಿನ ಕೆಳಗೆ ಶಿವನು ಇರುತ್ತಾನೆ. ಇದನ್ನು ನೆನೆಪಿಸಿಕೊಳ್ಳುವ ಸಲುವಾಗಿಯೇ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ಕೂಡ ಹೇಳುತ್ತಾರೆ.

ಸುಗ್ಗಿ

ಈ ದೀಪಾವಳಿಯು ಬೇಳೆಗಳ ಸಮಯದಲ್ಲಿ ಬರುವುದರಿಂದ ಶ್ರೀಮಂತವಾದ ಅಕ್ಕಿ ಸಾಗುವಳಿಗಳನ್ನು ನೀಡಿ ಅದರ ಫಲವನ್ನು ನೀಡುತ್ತದೆ. ಭಾರತವು ಕೃಷಿ-ಆರ್ಥಿಕ ಸಮಾಜವಾಗಿದ್ದು, ಸುಗ್ಗಿಯ ಮಹತ್ವವನ್ನು ನೀಡಿ ಆಚರಣೆ ಮಾಡುತ್ತದೆ ಎಂದೇ ಆಗಿದೆ. ಹಾಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು
ಹೇಳಲಾಗುತ್ತಿದೆ.

ಹೊಸ ವರ್ಷ

ಹಿಂದೂ ಧರ್ಮ ಪ್ರಪಂಚದ ಮೂರನೆಯ ದೊಡ್ಡ ಧರ್ಮವಾಗಿದೆ. ಈ ಸಮಯದಲ್ಲಿ ಹಿಂದೂ ಉದ್ಯಮಿಗಳು ಪೂಜೆಗಳನ್ನು ಮಾಡುತ್ತಾರೆ. ಇದರ ಸಂಕೇತ ಹಿಂದು
ಧರ್ಮದ ಹೊಸ ವರ್ಷ ಪ್ರಾರಂಭವಾಗಿದೆ ಎಂದೇ ಆಗಿದೆ. ಹಾಗಾಗಿಯೇ ದೀಪಗಳನ್ನು ಬೆಳಗಿ ದೀಪಾವಳಿ ಹಬ್ಬದಂದು ಹೊಸವರ್ಷವನ್ನು ಆಚರಿಸುತ್ತಾರೆ ಎಂದು
ಹೇಳಲಾಗಿದೆ.

ಸಿಖ್‍ರಿಗೆ ವಿಶೇಷವಾದ ದಿನ

ಸಿಖ್‍ರಿಗೆ ದೀಪಾವಳಿ ಅತ್ಯಂತ ವಿಶೇಷವಾದ ದಿನವೆಂದು ಮಹತ್ವವನ್ನು ಪಡೆದಿದೆ. 3 ನೇ ಸಿಖ್ ಗುರುವಾದ ಅಮರ್ದಾಸ್ ಎಲ್ಲಾ ಸಿಖ್ ಗುರುಗಳ ಆಶೀರ್ವಾದಗಳನ್ನು ಪಡೆದುಕೊಳ್ಳಲು ಸಂಧಿಸುವ ಸಂದರ್ಭದಲ್ಲಿ ದೀಪಗಳ ಉತ್ಸವವನ್ನು ಸ್ಥಾಪಿಸಿದರು. ಅಮೃತಸರದ ಗೋಲ್ಡನ್ ಟೆಂಪಲ್ ಅಡಿಪಾಯವನ್ನು 1577 ರಲ್ಲಿ ದೀಪಾವಳಿದಿನದಂದು ಹಾಕಲಾಯಿತು.

ವರ್ಧಮಾನ ಮಹಾವೀರ ಜ್ಞಾನೋದಯ

ಜೈನರಿಗೆ ದೀಪಾವಳಿ ಹಬ್ಬವು 15,527 ಬಿ.ಸಿಯಲ್ಲಿಯೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಜೈನರ 24 ಮತ್ತು ಕೊನೆಯ ತೀರ್ಥಂಕರರು ಮತ್ತು ಆಥುನಿಕ ಜೈನ ಧರ್ಮದ ಸ್ಥಾಪಕನ ಜ್ಞಾನೋದಯವನ್ನು ನೆನಪಿಸುತ್ತದೆ.

ಸ್ವಾಮಿ ದಯಾನಂದ ಸರಸ್ವತಿ ಜ್ಞಾನೋದಯ

ಕಾರ್ತಿಕ ದೀಪಾವಳಿ ದಿನದಂದು ಹಿಂದೂ ಧರ್ಮದ ಶ್ರೇಷ್ಠ ಸುಧಾರಣಾಧಿಕಾರಿಗಳಾದ ಸ್ವಾಮಿ ದಯಾನಂದ ಸರಸ್ವತಿಯವರು ಜ್ಞಾನೋದಯ ಪಡೆದಿದ್ದರಿಂದ ಆ
ಮಹತ್ವಾಕಾಂಕ್ಷೆಯ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. 1857 ರಲ್ಲಿ ಹಿಂದೂ ಧರ್ಮವನ್ನು ಶುದ್ಧಿಕರಿಸಲು ಹಿಂದೂ ಸುಧಾರಣಾ ಚಳುವಳಿ “ಸೊಸೈಟಿ ಆಫ್ ನೊಬೆಲ್ಸ್” ಎಂಬ ಆರ್ಯ ಸಮಾಜವನ್ನು ಸ್ಥಾಪನೆ ಮಾಡಿದರು. ಪ್ರತಿ ದೀಪಾವಳಿಯಂದು ಈ ಮಹಾನ್ ಸುಧಾರಕರನ್ನು ಹಿಂದೂಗಳು ನೆನಪಿಸಿಕೊಳ್ಳುತ್ತಾರೆ.

“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ”

ಎನ್ನುವ ಶರಣರ ನುಡಿಯಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಸಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದದ ಪ್ರಾಪ್ತಿಮಾಡಿಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ!!

ಎಲ್ಲರಿಗೂ ದೀಪವಾಳಿ ಹಬ್ಬದ ಶುಭಾಷಯಗಳು…………!!

ಮೂಲ:https://kannada.nativeplanet.com/travel-guide/12-reasons-celebrate-diwali-part-2-001942.html

-ಅಲೋಖಾ

Tags

Related Articles

Close