ಪ್ರಚಲಿತ

ಭಾರತದ ಈ ರಾಜತಾಂತ್ರಿಕ ಸರದಾರನ ಬಗ್ಗೆ ಪಾಕಿಸ್ತಾನದ ಸೈನ್ಯಾಧಿಕಾರಿ ಹಾಡಿ ಹೊಗಳಿದ್ದು ಯಾಕೆ ಗೊತ್ತಾ?!

ಅವರೆಂದರೆ ಭಾರತ ವಿರೋಧಿಗಳು ಗಡ ಗಡ ನಡುಗುತ್ತಾರೆ..ಅವರು ಜಗತ್ತನ್ನೇ ಗೆದ್ದ ಓರ್ವ ಸಾಹಸಿಮಯ ವ್ಯಕ್ತಿ..ಜಗತ್ತಿನ ಭಯೋತ್ಪಾದನಾ ರಾಷ್ಟ್ರ ಎಂಬ ಕುಖ್ಯಾತಿಗೆ ಒಳಗಾದ ಪಾಕಿಸ್ತಾನದಂತಹ ರಾಷ್ಟ್ರದಲ್ಲಿ ಆ ಪಾಪಿಗಳಿಗೆ ಒಂದಿಂಚೂ ಸುಳಿವೂ ಸಿಗದೆ ಅದೆಷ್ಟೋ ವರ್ಷಗಳ ಕಾಲ ಭಾರತದ ಸೈನಿಕನಾಗಿ ಕಾರ್ಯನಿರ್ವಹಿಸಿದ ಎಂಟೆದೆ ಬಂಟ. ಬದಲಾದ ಭಾರತದ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಭದ್ರತಾ ಸಲಹೆಗಾರನಾಗಿ ಮೋದಿಯವರ ಪ್ರತೀ ವಿದೇಶ ಪ್ರವಾಸದಲ್ಲೂ ತನ್ನ ಚಾಣಾಕ್ಷತೆಯನ್ನು ಪ್ರದರ್ಶಿಸಿದ್ದು ಮಾತ್ರವಲ್ಲದೆ ಗಡಿಯಲ್ಲಿ ವಿದೇಶಿ ಪುಂಡರು ನಡೆಸುತ್ತಿದ್ದ ಉಪಟಳಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರಕಾರದ ದಿಟ್ಟ ಕ್ರಮದ ಹಿಂದಿರುವ ಆಧುನಿಕ ಶಿವಾಜಿ ಮಹಾರಾಜ್ ಎಂದೇ ಕರೆಸಿಕೊಳ್ಳುವ ಆ ಅಭಿನವ ಜೇಮ್ಸ್ ಬಾಂಡ್ ಅಜಿತ್ ದೋವಲ್!!..

1988ರಲ್ಲಿ ಪಂಜಾಬ್’ನ ಖಾಲಿಸ್ತಾನಿ ಉಗ್ರರು ಅಪಹರಿಸಿದ್ದ ರೊಮೇನಿಯಾ ರಾಯಭಾರಿ ಲಿವಿಡು ರಾಡು ಬಿಡುಗಡೆಯಲ್ಲಿ ದೋವಲ್ ಪಾತ್ರ ದೊಡ್ಡದು. ಆದರೆ ದೋವಲ್’ರಿಗೆ, `ಭಾರತದ ಜೇಮ್ಸ್ ಬಾಂಡ್’ ಎಂದು ಹೆಸರು ಬಂದಿದ್ದು, ವೇಷ ಬದಲಿಸಿ ನಿರ್ವಹಿಸಿದ ಎರಡು ಪ್ರಕರಣಗಳಿಂದ. 1988ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ನಂತರ ಮರಳಿ ಖಾಲಿಸ್ತಾನಿ ಉಗ್ರರು ಸ್ವರ್ಣಮಂದಿರ ಪ್ರವೇಶಿಸಿ ಕುಳಿತಿದ್ದರು. ಆದರೆ ಎಷ್ಟುಜನ ಇದ್ದಾರೆ ಎಂಬ ಖಚಿತ ಮಾಹಿತಿ ನಮ್ಮ ಸೇನೆಯ ಬಳಿ ಇರಲಿಲ್ಲ. ಆಗ ಒಬ್ಬ ಸಿಖ್ ರಿಕ್ಷಾ ಚಾಲಕನಾಗಿ ಕಾಣಿಸಿಕೊಂಡ ಅಜಿತ್, ಸ್ವರ್ಣಮಂದಿರದಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿ ಕಳುಹಿಸತೊಡಗಿದರು. ಕೇವಲ 40 ಉಗ್ರರಿದ್ದಾರೆ, ಒಳಪ್ರವೇಶಿಸಬಹುದು ಎಂದು ಲೆಕ್ಕ ಹಾಕುತ್ತಿದ್ದ ಸೇನಾ ಕಮಾಂಡರ್‍ಗಳಿಗೆ, 250ಕ್ಕೂ ಹೆಚ್ಚು ಜನರಿದ್ದಾರೆ ಎಂದು ಹೇಳಿ, ದಾಳಿ ನಡೆಸುವುದು ಬೇಡವೆಂದು ಸಲಹೆ ನೀಡಿದ ದೋವಲ್, ಆ ಸ್ಥಳಕ್ಕೆ ನೀರು ಮತ್ತು ಆಹಾರ ಪೂರೈಕೆ ನಿಲ್ಲಿಸಲು ಹೇಳಿದರಂತೆ. ನಂತರ ರಿಕ್ಷಾ ಚಾಲಕನಾಗಿ ಉಗ್ರರನ್ನು ಭೇಟಿಯಾಗಿ, ತಾನೊಬ್ಬ ಪಾಕಿಸ್ತಾನಿ ಏಜೆಂಟ್ ಎಂದು ನಂಬಿಸುವಲ್ಲಿ ಯಶಸ್ವಿಯಾದ ಅಜಿತ್, ಗಡಿ ದಾಟಿಸಿ ಕರೆದುಕೊಂಡು ಹೋಗುವುದಾಗಿ ಪುಸಲಾಯಿಸುತ್ತಲೇ ಶರಣಾಗತಿಗೆ ತಯಾರಿಸಿದರಂತೆ. ಒಂದು ಗುಂಡು ಕೂಡ ಹಾರಿಸದೆ ನಿರ್ವಹಿಸಿದ `ಆಪರೇಷನ್ ಬ್ಲಾಕ್ ಥಂಡರ್’ ಇದೇ.

ಎರಡನೇ ಘಟನೆ, ಪಾಕಿಸ್ತಾನದಲ್ಲಿ ಏಳು ವರ್ಷಗಳ ಕಾಲ ಲಾಹೋರ್, ಕರಾಚಿ ಪೇಶಾವರ್‍ಗಳಲ್ಲಿ ಮುಸ್ಲಿಮನಾಗಿ ದೋವಲ್ ವೇಷ ಮರೆಸಿಕೊಂಡು ಇದ್ದದ್ದು. ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿದು ಕರೆದುಕೊಂಡು ಬರುವ ಕಾರ್ಯಾಚರಣೆ ನಡೆಸಲು ಅಜಿತ್ ಪಾಕ್‍ನಲ್ಲಿದ್ದರು. ಒಮ್ಮೆ, ಅಜಿತ್ ಮುಸ್ಲಿಂ ವೇಷ ಧರಿಸಿ ಲಾಹೋರ್‍ನ ಮಸೀದಿ ಎದುರು ಕುಳಿತಿದ್ದಾಗ, ವೃದ್ಧನೊಬ್ಬ ಕರೆದು, “ನೀನು ಹಿಂದೂ ಅಲ್ಲವೇ?” ಎಂದು ಕೇಳಿದನಂತೆ. ಅಜಿತ್‍ರಿಗೆ ಭೂಮಿ ಬಿರಿದ ಅನುಭವ. ತನ್ನ ಮನೆಗೆ ಕರೆದುಕೊಂಡು ಹೋದ ವೃದ್ಧ, “ನಿನ್ನ ಕಿವಿಯಲ್ಲಿ ರಂಧ್ರವಿದೆ, ನೀನು ಹಿಂದೂ. ಮುಸ್ಲಿಮರಲ್ಲಿ ಈ ಪದ್ಧತಿ ಇಲ್ಲ,” ಎಂದು ಹೇಳಿದನಂತೆ. ಹೀಗಾಗಿ ವಾಪಸು ಭಾರತಕ್ಕೆ ಮರಳಿದಾಗ ದೋವಲ್ ಮಾಡಿದ ಮೊದಲ ಕೆಲಸ, ಕಿವಿಯ ರಂಧ್ರವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಚ್ಚಿಸಿಕೊಂಡಿದ್ದು.

ನಂತರ 2005ರಲ್ಲಿ ಭಾರತೀಯ ಬೇಹುಗಾರಿಕಾ ದಳದ ನಿರ್ದೇಶಕನಾಗಿ ನಿವೃತ್ತರಾದ ದೋವಲ್, ನಂತರ ಆರ್‍ಎಸ್‍ಎಸ್ ವಿಚಾರಧಾರೆ ಒಪ್ಪುವ ಕೆಲ ಚಿಂತಕರ ಜೊತೆ ಸೇರಿಕೊಂಡು ವಿವೇಕಾನಂದ ಫೌಂಡೇಶನ್ ಎಂಬ ಥಿಂಕ್ ಟ್ಯಾಂಕ್ ಸ್ಥಾಪಿಸಿದರು. ಪಾಕಿಸ್ತಾನ ಮತ್ತು ಉಗ್ರರ ಬಗೆಗಿನ ಸ್ಪಷ್ಟಖಚಿತ ಕಠಿಣ ನೀತಿಯಿಂದಾಗಿ ಮೊದಲಿನಿಂದಲೂ ಸಹಜವಾಗಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಜೊತೆ ಆತ್ಮೀಯತೆ ಹೊಂದಿದ್ದ ದೋವಲ್, ನಿವೃತ್ತರಾದ ನಂತರ ಬಿಜೆಪಿ ಆಡಳಿತವಿದ್ದ ಹಲವು ರಾಜ್ಯಗಳ ಭದ್ರತಾ ಸಲಹೆಗಾರರಾಗಿ ಕೂಡ ಕೆಲಸ ಮಾಡಿದ್ದಾರೆ. 1996ರಲ್ಲಿ ಎನ್‍ಡಿಎ ಸರ್ಕಾರ ಬಂದಾಗ ಗೃಹಸಚಿವರಾಗಿದ್ದ ಎಲ್ ಕೆ ಆಡ್ವಾಣಿ ಅವರಿಗೆ, ಉಗ್ರರನ್ನು ಸದೆಬಡಿಯಲು ಪೆÇೀಟಾ ಕಾಯ್ದೆ ಜಾರಿಗೆ ತರುವಂತೆ ಮನವರಿಕೆ ಮಾಡಿಕೊಟ್ಟಿದ್ದೇ ದೋವಲ್ ಎನ್ನಲಾಗುತ್ತದೆ. ಅಷ್ಟೇ ಅಲ್ಲ, ಗುಜರಾತ್‍ನಲ್ಲಿ ಉಗ್ರರನ್ನು ಹತ್ಯೆಗೈಯುವ ಸರಣಿ ಎನ್‍ಕೌಂಟರ್‍ಗಳ ಹಿಂದೆಯೂ ದೋವಲ್ ಸಲಹೆ ಕೆಲಸ ಮಾಡಿತ್ತಂತೆ. ಆಗ ದೋವಲ್, ಕೇಂದ್ರ ಬೇಹುಗಾರಿಕಾ ದಳದ ಮುಖ್ಯಸ್ಥರಾಗಿದ್ದರು.

Image result for ajit doval with modi

ಇಂಥ ಪ್ರಖರ ಚಿಂತನೆಯ ದೋವಲ್, ಸಹಜವಾಗಿ ನರೇಂದ್ರ ಮೋದಿಗೂ ಆತ್ಮೀಯರಾಗಿದ್ದರು. ಹೀಗಾಗಿ 2014ರ ಮೇ 16ರಂದು ಲೋಕಸಭಾ ಚುನಾವಣೆ ಗೆದ್ದ ತಕ್ಷಣ ಮೋದಿ ಕರೆಸಿಕೊಂಡ ಮೊದಲ ಅಧಿಕಾರಿ ಇದೇ ದೋವಲ್. ಆಗ ಮೇ 26ರಂದು ನಡೆದ ಮೋದಿ ಸಂಪುಟದ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಿ ವಿಶ್ವಕ್ಕೆ ಸಂದೇಶ ನೀಡುವ ಸಲಹೆ ನೀಡಿದ್ದೇ ದೋವಲ್. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ವಿದೇಶಾಂಗ ನೀತಿ ಕುರಿತಾಗಿ ನಡೆದ ಮೊದಲ ಸಭೆಯಲ್ಲಿ ಅಜಿತ್ ಸ್ಪಷ್ಟಶಬ್ದಗಳಲ್ಲಿ, “ಶತ್ರುರಾಷ್ಟ್ರ ಸತತವಾಗಿ ನಮ್ಮ ರಕ್ತ ಸುರಿಸುತ್ತಿರುವಾಗ ಒಂದೋ ನಾವು ರಕ್ಷಣಾತ್ಮಕವಾಗಿ ಹೆಜ್ಜೆ ಇಡಬೇಕು, ಇದನ್ನು ನಾವು ಸ್ವಾತಂತ್ರ್ಯ ಸಿಕ್ಕಾಗಿನಿಂದ ಮಾಡಿದ್ದೇವೆ; ಇಲ್ಲವೇ, ಆಕ್ರಮಣಕಾರಿ ರಕ್ಷಣಾತ್ಮಕ ಹೆಜ್ಜೆ ಇಡಬೇಕು, ಅದು ನಡೆಯದಿದ್ದರೆ ಅಂತಿಮವಾಗಿ ಆಕ್ರಮಣ,” ಎಂದು ಹೇಳಿದ್ದರಂತೆ. ಹೀಗಾಗಿ, ವಿಶ್ವದ ಇತರ ನಾಯಕರಿಗೆ ತೋರಿಸಲೆಂಬಂತೆ ಪ್ರಮಾಣವಚನ ಕಾರ್ಯಕ್ರಮಕ್ಕೆ ನವಾಜ್ ಷರೀಫ್‍ರನ್ನು ಆಹ್ವಾನಿಸಿ, ನಂತರ ದಾಳಿಗಳು ನಿಲ್ಲದೆ ಇದ್ದಾಗಲೂ ಒಲ್ಲದ ಪ್ರಧಾನಿಯನ್ನು ಒಪ್ಪಿಸಿ ಷರೀಫ್ ಪುತ್ರಿಯ ಮದುವೆಗೆ ಲಾಹೋರ್‍ಗೆ ಕರೆದುಕೊಂಡು ಹೋದ ದೋವಲ್, ಉರಿ ಘಟನೆ ಆದಾಗ ಮಾತ್ರ, ಇನ್ನು ಆಕ್ರಮಣಕಾರಿ ಹೆಜ್ಜೆ ಇಡಲೇಬೇಕು ಎಂದು ಪ್ರಧಾನಿಗೆ ಸಲಹೆ ನೀಡಿದ್ದರಂತೆ. ಇಂಥದ್ದೊಂದು ಸರ್ಜಿಕಲ್ ದಾಳಿ ಯೋಜಿಸುವ ಹೊಣೆಯನ್ನು ದೋವಲ್’ರಿಗೆ ವಹಿಸಿದ್ದ ಪ್ರಧಾನಿ, ಇದಾದ ನಂತರ ವಿಶ್ವದ ಪ್ರಮುಖ ರಾಷ್ಟ್ರಗಳ ರಾಯಭಾರಿಗಳನ್ನು ಸಮಾಧಾನಪಡಿಸುವ ಹೊಣೆ ವಹಿಸಿದ್ದು ವಿದೇಶಾಂಗ ಕಾರ್ಯದರ್ಶಿ ಎಸ್ ಜಯಶಂಕರ್ ಅವರಿಗೆ.

2015ರಲ್ಲಿ ಮ್ಯಾನ್ಮಾರ್‍ನಲ್ಲಿ ಪ್ರಾಯೋಗಿಕವಾಗಿ ಸರ್ಜಿಕಲ್ ದಾಳಿಯನ್ನು 40 ನಿಮಿಷಗಳಲ್ಲಿ ಕರಾರುವಾಕ್ ಆಗಿ ನಡೆಸಿ ತೋರಿಸಿದ್ದ ದೋವಲ್. ಪಾಕ್‍ನಲ್ಲಿನ ದಾಳಿ ಯೋಜನೆಯನ್ನು ಕೂಡ ಸೇನೆಯ ಅಧಿಕಾರಿಗಳ ಜೊತೆ ಕುಳಿತು ತಾವೇ ತಯಾರಿಸಿದ್ದರಂತೆ. ಮೂರು ದಿನ ಹಗಲೂ ರಾತ್ರಿ ಮಿಲಿಟರಿ ಕಂಟ್ರೋಲ್ ರೂಮ್’ನಲ್ಲಿ ಕುಳಿತು, ಒಂದು ಕೈಯಲ್ಲಿ ನಕಾಶೆ-ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದು ಬೆಳಗಿನ ಜಾವ 4.32ಕ್ಕೆ ಪ್ರಧಾನಿಗೆ ಮಾಡಿದ ಕರೆಯು ಶಾಶ್ವತವಾಗಿ ನಮ್ಮ ವಿದೇಶಾಂಗ ನೀತಿಯ ಮಗ್ಗುಲನ್ನೇ ಬದಲಾಯಿಸಿದೆ ಎಂಬುದು ಸತ್ಯ.

ಅಜಿತ್ ದೋವಲ್‍ರನ್ನು ಹಾಡಿ ಹೊಗಳಿದ ನಶೀರ್ ಖಾನ್

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ನಶೀರ್ ಖಾನ್ ಜಂಜುವಾ ಥಾಯ್ಲೆಂಡ್‍ನಲ್ಲಿ ಡಿಸೆಂಬರ್ 27ರಂದು ಗೌಪ್ಯ ಸಭೆ ನಡೆಸಿದ್ದಾಗಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಪಾಕ್‍ನಲ್ಲಿ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಮತ್ತು ಅವರ ಕುಟುಂಬಸ್ಥರ ನಡುವಿನ ಭೇಟಿಯ ನಂತರದಲ್ಲಿ ಈ ಸಭೆ ನಡೆದಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ. ಸ್ವದೇಶಕ್ಕೆ ಹಿಂದಿರುಗಿದ ಬಳಿಕ ಸಭೆಯಲ್ಲಿನ ಆಗುಹೋಗುಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಜಂಜುವಾ, ಸಭೆ ಉತ್ತಮವಾಗಿ ಸಾಗಿತ್ತು. ಮಾತುಕತೆ ಸಕಾರಾತ್ಮಕವಾಗಿತ್ತು. ದೋವಲ್‍ರ ಮಾತು ಮೃದುವಾಗಿ, ಸೌಹಾರ್ದಯುತವಾಗಿತ್ತು. ಇದರಿಂದಾಗಿ ಉಭಯ ರಾಷ್ಟ್ರಗಳ ನಡುವೆ ಶಾಂತಿ ಮತ್ತು ಸೌಹಾರ್ದ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆ ಆರಂಭವಾಗುವ ಸಾಧ್ಯತೆಗಳು ಗೋಚರಿಸಲಾರಂಭಿಸಿವೆ ಎಂದು ಅಜಿತ್ ದೋವಲ್‍ರನ್ನು ಹಾಡಿ ಹೊಗಳಿದ ನಶೀರ್ ಖಾನ್!!

Image result for ajit doval

ಇಷ್ಟೆಲ್ಲಾ ಸಾಹಸವನ್ನು ಮಾಡಿದ ಅಜಿತ್ ದೋವಲ್ ಎಲ್ಲಿಯೂ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕೆ ಯಾವ ಕಾರ್ಯವನ್ನು ಮಾಡುವುದಿಲ್ಲ..ಇವರ ಉದ್ಧೇಶ ಕೇವಲ ದೇಶವನ್ನು ಉದ್ಧಾರ ಮಾಡುವಂತಹದ್ದು ಮಾತ್ರ..ಕೆಲ ಮಂತ್ರಿಗಳು ಪ್ಚಾರಕ್ಕಾಗಿಯೇ ಇಂತಹ ಕೆಲಸವನ್ನು ಮಾಡುವವರಿದ್ದಾರೆ… ದೇಶದ ಅಭಿವೃದ್ಧಿಗಾಗಿ ಅಜಿತ್ ದೋವಲ್ ಮಾಡಿದ ಕೆಲಸ ನಿಜವಾಗಲೂ ಮೆಚ್ಚುವಂತಹದ್ದು ಭಾರತದ ಶತ್ರು ರಾಷ್ಟ್ರವಾದಂತಹ ಪಾಕಿಸ್ತಾನವೇ ಭಾರತದ ಅಜಿತ್ ದೋವಲ್‍ರನ್ನು ಹಾಡಿ ಹೊಗಳಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯಕರ ಎಂದೇ ಹೇಳ ಬಹುದು..

 

source: vijayavani

-ಪವಿತ್ರ

Tags

Related Articles

Close