ಅಂಕಣಇತಿಹಾಸದೇಶಪ್ರಚಲಿತ

ಭಾರತದ ಎಲ್ಲಾ ದೇವಾಲಯಗಳ ಮೇಲೂ ಮೊಘಲರು ದಾಳಿ ಮಾಡಿ ದೋಚಿದ್ದರೂ, ತಿರುಪತಿ ತಿಮ್ಮಪ್ಪನನ್ನು ಮುಟ್ಟಲಿಲ್ಲವೇಕೆ?

ಮುಸಲ್ಮಾನ ಆಕ್ರಮಣಕಾರರು ಭಾರತದ ಬಹುತೇಕ ಎಲ್ಲಾ ದೇವಸ್ಥಾನಗಳನ್ನೂ ಲೂಟಿ ಮಾಡಿ, ವಿಗ್ರಹಗಳನ್ನು ನಾಶ ಮಾಡಿದ್ದು ಬಹುಷಃ ಹಿಂದುತ್ವದ ಒಂದಷ್ಟು
ಧಾರ್ಮಿಕ ಮಜಲುಗಳನ್ನೇ ಬದಲಿಸಿತೆಂದರೆ ಅತಿಶಯೋಕ್ತಿಯಲ್ಲ! ಆದರೆ, ಇತಿಹಾಸದಲ್ಲೆಲ್ಲಿಯೂ ಸಹ ತಿರುಪತಿ ತಿಮ್ಮಪ್ಪನ ಮೇಲಿನ ಯಾವ ಆಕ್ರಮಣದ
ದಾಖಲೆಗಳೂ ಇಲ್ಲವೆಂಬುದೇ ಆಶ್ಚರ್ಯ!

ಎರಡು ದಂತಕಥೆಗಳು! ಎರಡು ವ್ಯಾಖ್ಯಾನಗಳು!!

ಪ್ರತೀ ದಂತಕಥೆಗಳೂ ಸಹ ನಿಜವಲ್ಲವಾದರೂ ಸಹ, ಕಾಲಗರ್ಭದೊಳ ಹುದುಗಿ ಹೋದ ಒಂದಷ್ಟು ಇತಿಹಾಸಗಳ ನಿಗೂಢತೆಗಳ ಮೇಲೆ ಬೆಳಕು ಚೆಲ್ಲುವುದು
ಎಂಬುವುದಷ್ಟೇ ಸತ್ಯ!

‘ಕೊಯಿಲ್ ಉಲುಕು’ ಎಂಬ ಶ್ರೀ ರಂಗ ದೇಗುಲದ ಪ್ರತೀತಿಯಂತೆ, 14 ನೇ ಶತಮಾನದಲ್ಲಿ ಟರ್ಕಿಯ ಮುಸಲ್ಮಾನರ ಆಕ್ರಮಣದಿಂದ ಶುರುವಾಯಿತಷ್ಟೇ! ದೆಹಲಿ ಸುಲ್ತಾನನ ಬೆಂಬಲದಿಂದ, ತುರ್ಕರು ಶ್ರೀರಂಗ ದೇಗುಲದ ಮೇಲೆ ದಾಳಿ ಮಾಡಿದ್ದಲ್ಲದೆಯೇ, ಅಲ್ಲಿಂದ ಅಪಾರ ಧನ ಸಂಪತ್ತನ್ನೂ ಕೊಳ್ಳೆ ಹೊಡೆದು, ಕೊನೆಗೆ ‘ಅಳಕಿಯಮಾನವಲ ಪೆರ್ಮಾಳ್’ ಎಂಬ ಪ್ರಮುಖ ಪೂಜಾರಾರ್ಹವಾದ ವಿಷ್ಣುವಿನ ಮೂರ್ತಿಯನ್ನು ದೋಚಿ, ಸುಲ್ತಾನ ತನ್ನ ದೆಹಲಿಯ ಅರಮನೆಯಲ್ಲಿ ಉಳಿದ ಸಂಪತ್ತಿನ ಜೊತೆಗೆ ಇರಿಸುತ್ತಾನೆ!

ಇತ್ತ ತಿರುಪತಿಯ ಬ್ರಾಹ್ಮಣ ಮುಖಂಡರು ಎಲ್ಲಾ ರೀತಿಯ ಪೂಜೆ ಪುನಸ್ಕಾರಗಳನ್ನು ನಿಲ್ಲಿಸಿ, ಹೇಗಾದರೂ ಶ್ರೀ ರಂಗನನ್ನು ವಾಪಾಸು ಕರೆತರಲು ದೆಹಲಿಗೆ ಪ್ರಯಾಣ ಬೆಳೆಸುವ ಹೊತ್ತಲ್ಲೇ, ದೆಹಲಿಯ ಸುಲ್ತಾನನ ಮಗಳ ಕಣ್ಣಿಗೆ ಸುಂದರವಾದ ಶ್ರೀ ರಂಗನ ವಿಗ್ರಹ ಕಂಡು, ತನ್ನ ಅಂತಃಪುರದಲ್ಲಿಯೇ ವಿಗ್ರಹವನ್ನಿಟ್ಟು ಆಟವಾಡಲು ತೊಡಗಿರುತ್ತಾಳಷ್ಟೇ!

ತಿರುಪತಿಯ ಬ್ರಾಹ್ಮಣ ಮುಖಂಡರ ಜೊತೆ ಬಂದಿದ್ದ ಸ್ತ್ರೀ ಉಪಾಯದಿಂದ ಅರಮನೆ ಪ್ರವೇಶಿಸಿ ವಿಗ್ರಹವನ್ನು ಪತ್ತೆ ಹಚ್ಚಬೇಕೆಂಬ ಸಮಯದಲ್ಲಿಯೇ, ‘ಶ್ರೀ ರಂಗ
ಹಗಲಲ್ಲಿ ಮೂರ್ತಿಯಾಗಿದ್ದು, ರಾತ್ರಿ ರಾಜಕುಮಾರಿಯ ಜೊತೆ ಮಾನವಾಕಾರದಲ್ಲಿ ಆಟವಾಡುವ ಸೋಜಿಗವನ್ನು ತಿಳಿಯುತ್ತಾಳೆ!’ ಎಂಬುದನ್ನು ಹರಿ ರಾವ್ ತನ್ನ ಗ್ರಂಥದಲ್ಲಿ ಉಲ್ಲೇಖ ಮಾಡಿರುವರು!

ಆಹಾ! ಎಂತಹ ಸೋಜಿಗ!

ತಿರುಪತಿಯ ಬ್ರಾಹ್ಮಣ ಮುಖಂಡರು ಸುಲ್ತಾನನ್ನು ವಿಧವಿಧದ ಕಾಣಿಕೆಗಳ ನೀಡಿ, ವಿಗ್ರಯ ಹಿಂದಿರುಗಿಸುವಂತೆಯೂ, ಆ ವಿಗ್ರಹವು ರಾಜಕುಮಾರಿಯ ಅಂತಃಪುರದಲ್ಲಿ ನೆಲೆನಿಂತಿರುವುದಾಗಿಯೂ ಮನವರಿಕೆ ಮಾಡಿದಾಗ, ಕೋಪಗೊಂಡ ಸುಲ್ತಾನನು ಬ್ರಾಹ್ಮಣರಿಗೆ ಒಂದು ಶರತ್ತು ವಿಧಿಸುತ್ತಾನೆ! ‘ನೀವೆ ನಿಮ್ಮ ರಂಗನನ್ನು ಕರೆಯಬೇಕು! ನಿಮ್ಮ ಕೂಗು ಕೇಳಿ ನಿಮ್ಮ ರಂಗ ಅಂತಃಪುರದಿಂದ ಹೊರಗೆ ಬರಬೇಕು.

‘ ಹಿಂದೂಗಳ ಧಾರ್ಮಿಕ ಭಾವನೆಯ ಮಹತ್ವ ಅದೇ! ಕಲ್ಲಿಗೂ ಸುಂದರ ರೂಪ ನೀಡಿ ಪ್ರಾಣಪ್ರತಿಷ್ಟೆ ನೀಡುವ ತಾಕತ್ತು ಸುಲ್ತಾನನಿಗೆ ತಿಳಿದಿರಲಿಲ್ಲವಷ್ಟೇ! ಸುಲ್ತಾನನ ಅಣತಿಯಂತೆ ಭಕ್ತ ಶ್ರೀ ರಂಗನ ಭಜನೆ ಪ್ರಾರಂಭಿಸಿದಾಗ ಅಂತಪುರದಲ್ಲಿದ್ದ ಶ್ರೀರಂಗನ ವಿಗ್ರಹ ಮನುಷ್ಯಾಕಾರ ತಾಳಿ ಭಕ್ತರ ಬಳಿ ನಡೆದು ಬರುವ ಸೋಜಿಗವೊಂದು ಸ್ವತಃ ಸುಲ್ತಾನನೇ ನೋಡಿದಾಗ ಬೆಪ್ಪಾಗಿ ನಿಂತುಬಿಟ್ಟ ತುರ್ಕರ ಅಧಿಪತಿ!

ನಂತರ ಒಂದೂ ಮಾತನಾಡದೇ ಬ್ರಾಹ್ಮಣ ಮುಖಂಡರ ಜೊತೆಯೇ ರಂಗನ ವಿಗ್ರಹವನ್ನು ಕಳಿಸಿಕೊಡುತ್ತಾನೆ ಸುಲ್ತಾನ್!

ನಿದ್ದೆ ಹೋಗಿದ್ದ ರಾಜಕುಮಾರಿ, ಮಾರನೇ ದಿನ ಆಕೆಯ ರಂಗನ ನಿರ್ಗಮನದ ಸುದ್ದಿ ತಿಳಿಯುತ್ತಲೇ ಮೂರ್ಛೆ ಹೋಗುತ್ತಾಳೆ! ಆಕೆಯ ದುಃಖವನ್ನು ನೋಡಲಾಗದ ಸುಲ್ತಾನ ಆಕೆಯ ಜೊತೆ ಇನ್ನೊಂದಿಷ್ಟು ಕಾವಲುಗಾರರನ್ನು ತಿರುಪತಿಗೆ ಕಳುಹಿಸಿಕೊಡುತ್ತಾನೆ! ಅಷ್ಟರಲ್ಲೇ, ಸುಲ್ತಾನನ ಭಟರು ಬರುತ್ತಿರುವ ಸುದ್ದಿ ತಿಳಿದ ಬ್ರಾಹ್ಮಣ ಮುಖಂಡರು ತಿರುಪತಿಯ ದೇವಸ್ಥಾನಕ್ಕೆ ಬೀಗ ಹಾಕಿಸಿ, ‘ಶ್ರೀ ರಂಗ’ ನ ವಿಗ್ರಹವನ್ನು ನಿರ್ಜನವಾದ ಬೆಟ್ಟದ ಗುಹೆಯೆಡೆಗೆ ಕಳುಹಿಸಿಬಿಡುತ್ತಾರೆ! ಇತ್ತ, ತಿರುಪತಿಗೆ ಬಂದ ರಾಜಕುಮಾರಿ ಮುಚ್ಚಿದ ಬಾಗಿಲು ತೆರೆಯಬಹುದೇನೋ, ರಂಗನನ್ನು ಕಾಣಬಹುದೇನೋ ಎಂಬ ಕಾಯುವಿಕೆಯಲ್ಲಿಯೇ ದಿನಗಳ ಕಳೆದ ಆಕೆ ದುಃಖದಿಂದ ಇಹಲೋಕ ತ್ಯಜಿಸುತ್ತಾಳೆ!

ಆದರೆ, ಆಕೆಯ ಆತ್ಮ ಇವತ್ತಿಗೂ ಶ್ರೀರಂಗನನ್ನು ನೋಡಲು ಕಾಯುತ್ತಲೇ ದೇವಸ್ಥಾನ ಹೊರವಲಯದಲ್ಲಿ ನೆಲೆಸಿದೆ ಎಂಬ ಪ್ರತೀತಿಯೊಂದಿದೆ!

ಮಗಳ ಸಾವಿನ ನಂತರ, ಸುಲ್ತಾನ ‘ಯಾವ ಮುಸಲ್ಮಾನನೂ ಸಹ ತಿರುಪತಿಯನ್ನಾಕ್ರಮಿಸಬಾರದು’ ಎಂಬ ಕಟ್ಟಾಜ್ಞೆ ಹೊರಡಿಸುತ್ತಾನೆ! ಅಂದಿನಿಂದ, ಯಾವ
ಮುಸಲ್ಮಾನನೂ ತಿರುಪತಿಯನ್ನು ಆಕ್ರಮಣಗೈದು ದೋಚುವ ಸಾಹಸಕ್ಕೆ ಕೈ ಹಾಕಲಿಲ್ಲ!

ಮೊಘಲರು ಒಬ್ಬ ತೆಲುಗಿನ ಕವಿಗೆ ಹೆದರಿದ್ದರೇ?!

ಹೌದೆನ್ನುತ್ತದೆ ಪ್ರತೀತಿ! ಗೋಲ್ಕೊಂಡದ ಸುಲ್ತಾನ ಅಬ್ದುಲ್ ಕುತುಬ್ ಷಾ ಎಂಬವನ ಆಡಳಿತಾವಧಿಯಲ್ಲಿ ತಿರುಪತಿಯ ಮೇಲೆ ಆಕ್ರಮಣ ನಡೆಸಿದ್ದನಂತೆ!

ಅದೇ ಅವಧಿಯಲ್ಲಿ ತೆಲುಗಿನ ಅನಾಮಿಕ ಕವಿಯೊಬ್ಬ ತಾ ನೋಡಿದ ಮೊಘಲರ ಆಕ್ರಮಣದ ಬಗ್ಗೆ, ಸಾವಿರಾರು ಹಿಂದೂಗಳ ಅತ್ಯಾಚಾರ, ಕೊಲೆ, ಸುಲಿಗೆ
ಮುತಾದವುಗಳನ್ನೆಲ್ಲ ಬರೆಯಲು ತೊಡಗುತ್ತಾನೆ!

ಮುಂದೆ ಅದೇ ಕವಿತೆ ‘ವೆಂಕಟಾಚಲ ವಿಹಾರ ಸತಕಮು’ ಎಂದು ಪ್ರಸಿದ್ಧಿಯಾಗುತ್ತದೆ! ಅದರಲ್ಲಿ, “ನಾನು ಹೇಗೆ ನನ್ನ ಗಾಯತ್ರಿ ಮಂತ್ರವನ್ನು ತೊರೆದು, ಮುಸಲ್ಮಾನರ ಮಂತ್ರವನ್ನು ಪಠಿಸಲಿ?! ನಾನು ಹೇಗೆ ಅಪರಾಧಿಯಾಗಿ ಉಳಿಯಲಿ?! ನಾನು ಹೇಗೆ ವಿಶ್ವಕ್ಕೆ ತಂದೆಯಾದ ನನ್ನ ಧರ್ಮವನ್ನು ತುಳಿದ ನವಾಬನನ್ನು ಸ್ತುತಿಸಲಿ?!” ಎಂದು ಉಲ್ಲೇಖಿಸುತ್ತಾನೆ!

ಇಂತಹ ಅದೆಷ್ಟೋ ಆತನ ಕವಿತೆಗಳು ಮೊಘಲರ ಸಾಮ್ರಾಜ್ಯವನ್ನು ಬುಡಸಹಿತ ಕೀಳುವಂತಹ ಅದೆಷ್ಟೋ ಹೋರಾಟಗಾರರನ್ನು ಸೃಷ್ಟಿಸುತ್ತ ನಡೆಯುತ್ತದೆ! ಆ
ಭಾವಗಳೆಲ್ಲ ಆತ್ಮದೊಳ ಹುದುಗಿದ ಹಿಂದುತ್ವವನ್ನು ಬಡಿದೆಬ್ಬಿಸಿದ್ದೇ ಮೊಘಲರ ಬುಡವನ್ನು ಅಲ್ಲಾಡಿಸಲು ತೊಡಗಿತು!

ಮೊಘಲರು 1656 – 1668 ರ ಅವಧಿಯಲ್ಲಿ ಈಸ್ಟ್ ಇಂಡಿಯಾದ ಕಂಪೆನಿಯ ಬೆಂಬಲದ ಮೂಲಕ ಆಕ್ರಮಣ ಮಾಡಲು ಯತ್ನಿಸಿದ್ದಷ್ಟೇ! ಆದರೆ,
ಮಂದಿರವನ್ನುಳಿಸಿಕೊಳ್ಳಲು ಅಪಾರ ಪ್ರಮಾಣದ ‘ಜಜಿಯಾ’ ತೆರಿಗೆ ಕೊಡಲು ಪ್ರಾರಂಭಿಸಿದರು ಹಿಂದೂಗಳು!

ವರಾಹನೆಂಬ ರಕ್ಷಕ!!

ಹಾ! ಯಾವಾಗ ಮೊಘಲರು ಆಕ್ರಮಣ ಮಾಡಲು ಕಾಲಿಟ್ಟರೋ, ಆಗಲೇ ಬೆಟ್ಟದ ತಪ್ಪಲಿನಲ್ಲಿ ನೆಲೆ ನಿಂತಿದ್ದ ‘ವರಾಹ-ವಿಗ್ರಹ’ವೊಂದು ಆಕ್ರಮಣವನ್ನು ತಡೆದಿತ್ತು!! ಎಲ್ಲಾ ಮೊಘಲರೂ ಸಹ ಮೂರ್ಛೆ ಬೀಳುಚ ಸ್ಥಿತಿ ತಲುಪಿದಾಗ, ‘ಅಲಿ’ ವರಾಹನ ಜಾಗದಿಂದ ಹಿಂತಿರುಗಿ ‘ಚಂದ್ರಗಿರಿ’ ಬೆಟ್ಟದ ಬದಿಯಿಂದ ದಾಳಿ ನಡೆಸಲು ಸಂಚು ಮಾಡಿದಾಗಲೂ ಸಹ ಲಕ್ಷ ವರಾಹಗಳು ಎದುರಾಗುತ್ತವೆ! ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗುತ್ತಾನೆ ಅಲಿ! ಅಂದಿನಿಂದ, ‘ಅಲಿಪಿರಿ (ಅಲಿ ಈ ಜಾಗದಿಂದ ಹಿಂತಿರುಗಿದನು)” ಎಂಬ ಹೆಸರು ಆ ಬೆಟ್ಟಕ್ಕೆ ಬಂದಿತೆಂದು ಪ್ರತೀತಿ!!!

ಅಲ್ಲದೆಯೇ, ದೇವಸ್ಥಾನದ ವೈಷ್ಣವ ಬ್ರಾಹ್ಮಣರ ಯುಕ್ತಿಯ ಮುಂದೆ ಯಾರ ಮೊಘಲರ ಆಟವೂ ನಡೆಯಲೇ ಇಲ್ಲ ಬಿಡಿ!

ಪುರಾಣಕಥೆಗಳಿಂದ ಪ್ರೇರಿತರಾಗಿದ್ದರು ಮೊಘಲರು!

ಪುರಾಣ ಕಥೆಗಳಲ್ಲಿ ‘ಬಾಲಾಜಿಯು ಪದ್ಮಾವತಿಯನ್ನು ಮದುವೆಯಾಗಲು ಅಪಾರ ಪ್ರಮಾಣದ ಧನಸಂಪತ್ತನ್ನು ಕುಬೇರನಿಂದ ತೆಗೆದುಕೊಂಡಿದ್ದ’ ಎಂಬ ಇನ್ನಷ್ಟು
ಪುರಾಣದ ಕಥೆಗಳೇ ಮೊಘಲರ ನಿದ್ದೆಗೆಡಿಸಿದವು!

ಗೋಲ್ಕೊಂಡದ ಸುಲ್ತಾನ ಹಾಗೂ ಕರ್ನಾಟಕದ ನವಾಬರಿಬ್ಬರೂ ಸೇರಿ ತಿರುಪತಿಯ ದೇವಸ್ಥಾನವನ್ನು ಉಳಿಸಬೇಕೆಂದರೆ ‘ಜಜಿಯಾ’ ತೆರಿಗೆ ನೀಡಿ ಎಂದು ಸುಲಿಗೆ ಮಾಡಿದರಷ್ಟೇ ವಿನಃ ತಿರುಪತಿಯನ್ನು ಮುಟ್ಟಲಿಲ್ಲ. ಇತ್ತ, ವಾರ್ಷಿಕ 2 ಲಕ್ಷಕ್ಕೂ ಅಧಿಕವಾದ ತೆರಿಗೆಯನ್ನು ಕಟ್ಟಲು ಪ್ರಾರಂಭಿಸಿದರು ಹಿಂದೂಗಳು!

ಈ ರೀತಿಯ ಪ್ರತೀತಿಗಳು ತಿರುಪತಿಯ ಇತಿಹಾಸವನ್ನು ಇನ್ನಷ್ಟು ನಿಗೂಢಗೊಳಿಸಿದ್ದೂ ಅಲ್ಲದೇ, ನಂಬಲಸಾಧ್ಯವಾದಂತಹ ಪುಟಗಳನ್ನೂ ದಾಖಲಿಸಿತ್ತು!

– ತಪಸ್ವಿ

Tags

Related Articles

Close