ಪ್ರಚಲಿತ

“ಭಾರತದ ಪ್ರಧಾನ ಮಂತ್ರಿ ಮೋದಿ ಬರೋಬ್ಬರಿ 585000000000 ಕೋಟಿ ಹಣವನ್ನು ಲೂಟಿಕೋರರಿಂದ ರಕ್ಷಿಸಿದ್ದಾರೆ!” : ಇದನ್ನು ಬಹಿರಂಗಪಡಿಸಿದ್ದು ಇನ್ಫೋಸಿಸ್ ಸಹ – ಸಂಸ್ಥಾಪಕ ಹಾಗೂ ಕಾಂಗ್ರೆಸ್ ನಾಯಕ!!

ಮೋದಿಯನ್ನು ವಿರೋಧಿಸುವವರಿಗೆ ವಿರೋಧಿಸಬೇಕೆಂಬುದನ್ನು ಬಿಟ್ಟರೆ ಬೇರೇನೂ ಗೊತ್ತಿರಲು ಸಾಧ್ಯವೇ ಇಲ್ಲ ಎನ್ನುವುದು ಮೇಲಿಂದ ಮೇಲೆ ಸಾಬೀತಾಗುತ್ತಿರುವಾಗ, ಅದಕ್ಕೆಲ್ಲ ಅಧ್ಯಕ್ಷನಂತೆ ನಿಂತಿರುವ ರಾಹುಲ್ ಗಾಂಧಿಯೂ ಸಹ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ! ‘ಆಧಾರ್ ಕಾರ್ಡ್ ಯೋಜನೆಯೊಂದು ಭಯಂಕರವಾದದ್ದು, ವೈಯುಕ್ತಿಕ ಹಕ್ಕಿಗೆ ಪ್ರಾಧಾನ್ಯತೆಯಿಲ್ಲ, ಸೇಫ್ ಇಲ್ಲ, ದುರುಪಯೋಗ ಜಾಸ್ತಿಯಾಗುತ್ತದೆ, ಕೊಂಬು ಕುರಿ ಎಂದೆಲ್ಲ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ!

ದೇಶದ ಪ್ರತಿಷ್ಟಿತ ಸಂಸ್ಥೆಯಾದ ಇನ್ಫೋಸಿಸ್ ನ ಸಹ – ಸಂಸ್ಥಾಪಕ ಹಾಗೂ ಕಾಂಗ್ರೆಸ್ ನಾಯಕರಾರ ನಂದನ್ ನೀಲೇಕಣಿ, “ಮೋದಿಯ
ಆಧಾರ್ ಯೋಜನೆಯೊಂದು ಕೇಂದ್ರದಲ್ಲಿ ಬರೋಬ್ಬರಿ 585000000000 ಕೋಟಿ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಿದೆ” ಎಂದಿದ್ದಾರೆ!

International Monetary Fund (IMF) ಮತ್ತು World Bank ಜಂಟಿಯಾಗಿ ನಡೆಸಿದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ನಂದನ್
ನೀಲೇಕಣಿ ಮೋದಿಯನ್ನು ಪ್ರಶಂಸಿಸಿದ‌್ದಾರೆ!

62 ವರ್ಷದ ಇನ್ಫೋಸಿಸ್ ನ Non-Executive ಅಧ್ಯಕ್ಷರು”ಇವತ್ತು ಆಧಾರ್ ವ್ಯವಸ್ಥೆಯಲ್ಲಿ ಒಂದು ಬಿಲಿಯನ್ ಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ” ಎಂದಿದ್ದಾರೆ!

ಸರಕಾರದ ಆಧಾರ್ ಯೋಜನೆ ಬರೋಬ್ಬರಿ 9 ಬಿಲಿಯನ್ ಡಾಲರ್ ಹಣವನ್ನು ಲೂಟಿಕೋರರಿಂದ ರಕ್ಷಿಸಿದೆ! ಹೇಗೆಂದರೆ, ಆಧಾರ್ ನ ಏಕಮಾತ್ರ ಸಂಖ್ಯೆಯ ಸಹಾಯದಿಂದ ಫಲಾನುಭವಿ ಹಾಗೂ ನೌಕರರ ಪಟ್ಟಿಯಿಂದ ಸುಳ್ಳು ಹಾಗೂ ತಪ್ಪು ದಾಖಲೆಗಳನ್ನು ತೆಗೆಯಬಹುದಾಗಿದೆ.”

ಹೇಳಬೇಕೆಂದರೆ, ಇವತ್ತು ಅರ್ಧ ಬಿಲಿಯನ್ ಜನರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳ ಜೊತೆ ನೋಂದಾಯಿಸಿಕೊಂಡಿದ್ದಾರೆ. ಜಗತ್ತಿನಲ್ಲಿಯೇ ದೊಡ್ಡದಾದ ಹಣ ವರ್ಗಾವಣೆಯ ವ್ಯವಸ್ಥೆಯಲ್ಲಿ ಸರಕಾರ ಬರೋಬ್ಬರಿ 12 ಬಿಲಿಯನ್ ಡಾಲರ್ ಗಳನ್ನು ಬ್ಯಾಂಕ್ ಗಳಿಗೆ ವರ್ಗಾಯಿಸಿದೆ! ಇದೇ ರೀತಿ ಇನ್ನೊಂದಿಷ್ಟು ಪ್ರಯೋಜನಕಾರಿಯಾದ ವಿಷಯಗಳಿದೆ. ನಿಮಗೆ ಬ್ಯಾಂಕ್ ಕ್ಷೇತ್ರದಲ್ಲಿ, ಆರ್ಥಿಕತೆಯಲ್ಲಿ ಬಡ್ತಿ ಬೇಕೆಂದರೆ ಅದಕ್ಕೆ ತಕ್ಕನಾಗಿ ಸರಿಯಾದ ಡಿಜಿಟಲ್ ಆಧಾರರಚನೆಯೂ ಇರಬೇಂಕೆಬುದು ನನ್ನ ನಂಬಿಕೆ.”

ಈ ಆಧಾರ್ ಯೋಜನೆಯೆಂಬುದು ಡಿಜಿಟಲ್ ಆರ್ಥಿಕತೆಯನ್ನು ಪ್ರೋತ್ಸಾಹಿಸುತ್ತದೆ, ಆಧಾರ್ ಯೋಜನೆಯನ್ನು ತಡೆಯಬೇಕೆಂದು ವಿರೋಧ ಪಕ್ಷಗಳೆಲ್ಲ ಅದೆಷ್ಟು ಕುತಂತ್ರ ಮಾಡಿದರೂ ಸಹ ಮೋದಿ ಸರಕಾರ ದಿಕ್ಕುಗೆಡದೇ ಹಿಡಿದ ಕೆಲಸವನ್ನು ಮಾಡಿ ಮುಗಿಸಿದೆ! ಈ ಆಧಾರ್ ಕಾರ್ಡ್ ನ ಯೋಜನೆ ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತುವುದಲ್ಲದೇ, ಅದೆಷ್ಟೋ ಬಗೆಯಲ್ಲಿ ವಂಚನೆಗಳಾಗುವುದನ್ನೂ ಯಶಸ್ವಿಯಾಗಿ ತಡೆಹಿಡಿಯಲಿದೆ!”

ಅದಲ್ಲದೇ, “ಆಧಾರ್ ಎನ್ನುವುದು ಏಕಮಾತ್ರ ಕಾರ್ಡ್ ನಿಂದ ಎಲ್ಲರನ್ನೂ ಐಕ್ಯಗೊಳಿಸುವ ವೇದಿಕೆಯನ್ನು ಸೃಷ್ಟಿ ಮಾಡಲಿದೆ.” ಎಂದು ಹಣಕಾಸು
ಮಂತ್ರಿ ಅರುಣ್ ಜೇಟ್ಲಿ ಹೇಳಿದ್ದಾರೆ!

ಆಧಾರ್ ಕಾರ್ಡ್ ನ ಉಪಯೋಗಗಳೇನು ಗೊತ್ತೇ?!

1. LPG ಗ್ಯಾಸ್ ನ ಬಳಕೆದಾರರ ಸಂಖ್ಯೆ ಆಧಾರ್ ಸಂಪರ್ಕವಿರುವ ಬ್ಯಾಂಕ್ ಖಾತೆಗೆ ಸಂಪರ್ಕವಾಗಿದ್ದರೆ, ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ ನೇರವಾಗಿ ಖಾತೆಗೆ ವರ್ಗಾವಣೆಯಾಗಲಿದೆ!

2. ಪಾಸ್ ಪೋರ್ಟ್ ಪಡೆಯುವುದು ಬಹಳ ಸುಲಭವಾಗುತ್ತದೆ! ಮುಂಚೆ ಎರಡು ತಿಂಗಳು ತೆಗೆದುಕೊಳ್ಳುತ್ತಿದ್ದ ಪಾಸ್ ಪೋರ್ಟ್ ವಿಚಾರಣೆ ಈಗ 10 ದಿನಗಳೊಳಗೇ ನಡೆದು 15 ದಿವಸಗಳಲ್ಲಿ ಪಾಸ್ ಪೋರ್ಟ್ ಲಭ್ಯವಾಗಲಿದೆ!

3. ಕೂಲಿಯ ಹಣ ಕೂಡ ಕೂಲಿಕಾರರ ಆಧಾರ್ ಸಂಖ್ಯೆಯ ಜೊತೆ ಸಂಪರ್ಕ ಹೊಂದಿದ ಖಾತೆಗೆ ಜಮಾವಣೆಯಾಗಲಿದೆ!

4. ಹಿರಿಯ ನಾಗರಿಕರೆಲ್ಲರಿಗೂ ಆಧಾರ್ ಕಾರ್ಡ್ ಒಂದು ವರವಾಗಿ ಪರಿಣಮಿಸಿದೆ! ಒಂದು ಸಲ ಆಧಾರ್ ಸಂಖ್ಯೆ ಯನ್ನು ಬ್ಯಾಂಕ್ ಖಾತೆಯಲ್ಲಿ ನೋಂದಣಿ ಮಾಡಿಸಿದರೆ ಪಿಂಚಣಿ ಎಲ್ಲವೂ ಕೂಡ ನೇರವಾಗಿ ಖಾತೆಗೆ ವರ್ಗಾವಣೆಯಾಗಲಿದೆ!

5. ಅತಿ ಮುಖ್ಯವಾಗಿ ಆಧಾರ್ ಕಾರ್ಡ್ ನಿವೃತ್ತರಾದವರ ಸರಕಾರಿ ನೌಕರರ ಖಾತೆಗೆ ನೇರವಾಗಿ ಪ್ರಾವಿಡೆಂಟ್ ಫಂಡ್ ಅನ್ನು ಪಾವತಿಸಲಾಗುತ್ತದೆ!

ಇನ್ನೇನು ಬೇಕು ಹೇಳಿ!!?

ಮೋದಿಯ ದೂರದೃಷ್ಟಿ ವಿರೋಧಿಗಳನ್ನೂ ಅಭಿವೃದ್ಧಿಯತ್ತ ಸೆಳೆಯುಂತೆ ಮಾಡುತ್ತಿದೆ! ಒಂದಷ್ಟು ಅವಿವೇಕಿಗಳಿಗೆ ಮಾತ್ರ ಗಣಿತ ಗೊತ್ತಿಲ್ಲದೇ, ಆರ್ಥಿಕತೆಯ ಯೋಚನೆಗಳೂ ಇಲ್ಲದೆಯೇ ಹಲುಬುತ್ತಿದ್ದಾರಷ್ಟೇ! ಆದರೆ, ಮುಂಬರುವ ದಿನಗಳಲಿ ಭಾರತ ಏಕರೂಪ ನೀತಿಯಿಂದ ಜಗತ್ತಿನಲ್ಲಿಯೇ ಸಧೃಢ ರಾಷ್ಟ್ರವಾಗುವ ಸಮಯ ಬರಲಿದೆ!

– ತಪಸ್ವಿ

Tags

Related Articles

Close