ಪ್ರಚಲಿತ

ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನ ಮೋದಿಯ ಈ ಮುಲಾಜಿಲ್ಲದ ಕ್ರಮಕ್ಕೆ ಆ ರಾಷ್ಟ್ರ ಬೆಚ್ಚಿ ಬಿದ್ದಿದ್ಯಾಕೇ?!

ವಿದೇಶಿ ಮಿಲಿಟರಿ ಧನಸಹಾಯದ ಯೋಜನೆಯಲ್ಲಿ 2016ರ ವಿತ್ತೀಯ ವರ್ಷದಲ್ಲಿ ಕೊಡಲುದ್ದೇಶಿಸಿದ್ದ 1,628 ಕೋಟಿ ರೂ. ಧನಸಹಾಯ ಸ್ಥಗಿತಗೊಳಿಸಲು ನಿರ್ಧರಿಸಲಾರ ನಿಜವಾಗಿಯೂ ಪಾಕ್‍ಗೆ ತಡೆಯಲಾರದ ಶಾಕ್ ಎಂದೇ ಹೇಳ ಬಹುದು… ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳಬೇಕು ಎಂಬುದು ಅಧ್ಯಕ್ಷ ಟ್ರಂಪ್ ನಿಲುವಾಗಿದೆ. ಅಮೆರಿಕ ಮಿಲಿಟರಿ ಧನಸಹಾಯವನ್ನು ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಪಾಕಿಸ್ತಾನದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುವ ಬೆನ್ನಲ್ಲೇ ಭಾರತ ಪಾಕ್‍ಗೆ ಮತ್ತೊಂದು ಶಾಕ್ ನೀಡಿದೆ…

ಪಾಕ್‍ಗೆ ಮಿಲಿಟರಿ ಧನಸಹಾಯ ಸ್ಥಗಿತಗೊಳಿಸುವ ನಿರ್ಧಾರವನ್ನು ವೈಟ್‍ಹೌಸ್ ಪ್ರಕಟಿಸಿದ ಬೆನ್ನಲ್ಲೇ ಭಾರತ, ಪಾಕ್ ಬಗೆಗಿನ ತನ್ನ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿತು ಎಂದು ಹರ್ಷ ವ್ಯಕ್ತಪಡಿಸಿದೆ. ಉಗ್ರವಾದಿ ಉಗ್ರವಾದಿಯೇ ಆಗಿರುತ್ತಾನೆ. ಭಯೋತ್ಪಾದನೆ ಕೃತ್ಯ ಭಯೋತ್ಪಾದನೆ ಕೃತ್ಯವೇ ಆಗಿರುತ್ತದೆ. ಇದಕ್ಕೆ ಯಾವುದೇ ದೇಶ, ಪ್ರದೇಶದ ಗಡಿ ಎಂಬುದು ಇರುವುದಿಲ್ಲ. ಪಾಕ್ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿದೆ ಮತ್ತು ಉಗ್ರರಿಗೆ ಸುರಕ್ಷಿತ ಅಡಗುದಾಣ ಒದಗಿಸುತ್ತಿದೆ ಎಂಬ ಭಾರತದ ಆರೋಪಗಳಿಗೆ ಮನ್ನಣೆ ದೊರೆತಿದೆ ಎಂದು ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.. ಅಮೆರಿಕದ ಈ ನಿಲುವು ಪಾಕಿಸ್ತಾನಕ್ಕೆ ಭಾರಿ ಆಘಾತ ನೀಡಿದ್ದು, ಮಂಗಳವಾರ ಕರಾಚಿಯಲ್ಲಿ ಭಾರಿ ಪ್ರತಿಭಟನೆಗಳು ನಡೆದಿವೆ.

ಅಧ್ಯಕ್ಷೀಯ ಚುನಾವಣೆ ಪ್ರಚಾರ ಸಭೆಗಳಲ್ಲಿ ಪಾಕ್ ವಿರುದ್ಧ ಕಿಡಿಕಾರುತ್ತಿದ್ದ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಎರಡೂ ದೇಶಗಳ ಸಂಬಂಧ ಹಳಸಲಾರಂಭಿಸಿದೆ. ಪಾಕ್ ಉಗ್ರರ ಸುರಕ್ಷಿತ ತಾಣ ಎಂಬುದನ್ನು ನೇರವಾಗಿ ಹೇಳುತ್ತಿದ್ದರು ಟ್ರಂಪ್. 2017ರ ಡಿಸೆಂಬರ್‍ನಲ್ಲಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್, ತನ್ನ ನೆಲದಲ್ಲಿರುವ ಉಗ್ರರನ್ನು ಸದೆಬಡಿಯದಿದ್ದರೆ, ಅಮೆರಿಕವೇ ಆ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಮುಂಬೈ ದಾಳಿಯ ಸಂಚುಕೋರ ಸಯೀದ್ ಹಫೀಜ್ ಸಾಕ್ಷ್ಯಾಧಾರಗಳ ಕೊರತೆ ಆಧಾರದ ಮೇಲೆ ಗೃಹಬಂಧನದಿಂದ ಮುಕ್ತವಾದ ಸಂದರ್ಭದಲ್ಲೂ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅಮೆರಿಕವನ್ನು ಸಮಾಧಾನಪಡಿಸುವ ಯತ್ನವಾಗಿ ಇತ್ತೀಚೆಗಷ್ಟೇ ಹಫೀಜ್‍ನ ಸಂಘ-ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಭರವಸೆಯನ್ನು ಪಾಕ್ ಸರ್ಕಾರ ನೀಡಿತ್ತು. ಪಾಕಿಸ್ತಾನವನ್ನು ಹದ್ದುಬಸ್ತಿನಲ್ಲಿಡಲು ಅಮೆರಿಕ ಮತ್ತಷ್ಟು ಕಠಿಣ ಕ್ರಮ ಕೈಗೊಂಡರೆ ಇನ್ನಷ್ಟು ಪ್ರಯೋಜನ.. ಪಾಕಿಸ್ತಾನ ಈಗಾಗಲೇ ಚೀನಾದ ಅವಲಂಬನೆ ಯನ್ನು ಹೆಚ್ಚಿಸಿಕೊಂಡಿರುವುದರಿಂದ ಅಮೆರಿಕ ಕ್ರಮದಿಂದಾದ ನಷ್ಟವನ್ನು ಚೀನಾ ತುಂಬಿಕೊಡುವುದೇ ಎಂಬ ಕುತೂಹಲವಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಧನಸಹಾಯ ಸ್ಥಗಿತದ ನಿರ್ಧಾರ ಪ್ರಕಟಿಸುತ್ತಿದ್ದಂತೆ ಚೀನಾ ತನ್ನ ಆಪ್ತಸ್ನೇಹಿತ ಪಾಕ್ ಬೆಂಬಲಕ್ಕೆ ಬಂದಿದೆ. ಭಯೋತ್ಪಾದನೆ ನಿಗ್ರಹದ ಹೋರಾಟದಲ್ಲಿ ಪಾಕ್ ಕೊಡುತ್ತಿರುವ ಕೊಡುಗೆಯನ್ನು ಜಾಗತಿಕ ಸಮುದಾಯ ಗುರುತಿಸಬೇಕು. ಪರಸ್ಪರ ಗೌರವದೊಂದಿಗೆ ಪಾಕ್ ಮತ್ತು ಅಮೆರಿಕ ಉಗ್ರರ ದಮನ ಕಾರ್ಯಾಚರಣೆ, ಭಾರತ ಉಪಖಂಡದಲ್ಲಿನ ಭದ್ರತೆ ಮತ್ತು ಸ್ಥಿರತೆಗಾಗಿ ಶ್ರಮಿಸುತ್ತಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್‍ಯಿಂಗ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಂದಿನಿಂದಲೂ ಪಾಕಿಸ್ತಾನ ವಿರುದ್ಧ ನಿಲುವುಗಳನ್ನು ಪ್ರಕಟಿಸುತ್ತಿದ್ದಾರೆ. ಆರ್ಥಿಕ ನೆರವು ಕಡಿತ ಅದರ ಒಂದು ಭಾಗ. ಪಾಕಿಸ್ತಾನ ಭಯೋತ್ಪಾದನೆಗೆ ಸಹಕಾರ ನೀಡುವುದು ಗೊತ್ತಿದ್ದರೂ, ಅಫ್ಘಾನಿಸ್ತಾನದಲ್ಲಿ ತನ್ನ ಉಪಸ್ಥಿತಿಗೆ ಪಾಕ್ ಸಹಕಾರ ಅನಿವಾರ್ಯವಾದ್ದರಿಂದ ಅಮೆರಿಕದ ಹಿಂದಿನ ಸರ್ಕಾರಗಳು ಬರೀ ಬಾಯಿ ಮಾತಿನಲ್ಲಿ ಕ್ರಮದ ಮಾತಾಡುತ್ತಿದ್ದವು. ಈಗ ಟ್ರಂಪ್ ಕೈಗೊಳ್ಳುತ್ತಿರುವ ಕ್ರಮಗಳು ಮುಂದೆ ಯಾವ ರೀತಿ ಸಾಗುತ್ತವೆ ಎಂಬುದು ಕಾದುನೋಡಬೇಕಾದ ಸಂಗತಿ. ಏಕೆಂದರೆ, ಉತ್ತರ ಕೊರಿಯಾವನ್ನು ಧೂರ್ತ ದೇಶ ಎಂದು ಪರಿಗಣಿಸಿದಂತೆ, ಅಂತಾರಾಷ್ಟ್ರೀಯ ವಾಗಿ ಅದನ್ನು ಒಂಟಿಯಾಗಿಸಲು ಮಾಡಿದಂತೆ ಪಾಕ್ ವಿಷಯದಲ್ಲಿಯೂ ಅಮೆರಿಕ ಮಾಡುತ್ತದೆಯೇ ಎಂಬುದರ ಮೇಲೆ ಅಂತಿಮ ಪರಿಣಾಮ ಕಂಡು ಬರುತ್ತದೆ. ಇದೇನೇ ಇದ್ದರೂ, ಇದು ಸಕಾರಾತ್ಮಕ ಬದಲಾವಣೆಯೇ ಸರಿ. ಅಮೆರಿಕ ಭಾರತದ ಹಿತದೃಷ್ಟಿ ಯಿಂದ ಏನೂ ಈ ಹೆಜ್ಜೆಗಳನ್ನು ಇರಿಸುತ್ತಿಲ್ಲ. ಆದರೆ ಅಯಾಚಿತವಾಗಿ ಭಾರತಕ್ಕೆ ಇದರಿಂದ ಪ್ರಯೋಜನವಾಗುತ್ತದೆ. ಭಾರತ ಈ ಸನ್ನಿವೇಶವನ್ನು ಕಟ್ಟೆಚ್ಚರದಿಂದ ಗಮನಿಸುತ್ತಿದ್ದು, ಅಮೆರಿಕ ಕ್ರಮದಿಂದ ಪಾಕ್ ದುರ್ಬಲವಾದರೆ ಆಗ ಆ ಪರಿಸ್ಥಿತಿಯ ಲಾಭ ಪಡೆದು ಇತರ ದೇಶಗಳೊಂದಿಗೆ ತನ್ನ ಬಾಂಧವ್ಯ ಹೆಚ್ಚಿಸಿಕೊಂಡು ಪಾಕಿಸ್ತಾನವನ್ನು ಮತ್ತಷ್ಟು ಫಜೀತಿಗೆ ಸಿಲುಕಿಸುವ ಕಾರ್ಯತಂತ್ರ ಹೊಸೆಯಬೇಕು.

ಪಾಕ್‍ಗೆ ಮೋದಿಯಿಂದ ಬಿಗ್ ಶಾಕ್

ಭಾರತಕ್ಕೆ ಪಾಕ್‍ನಿಂದ ಆದ ಅವಮಾನ ಒಂದಾ ಎರಡಾ? ಪಾಕ್‍ನ ಗಡಿ ದಾಟಿ ತಪ್ಪಿ ಹೋದರೆ ಸಾಕು ಅದನ್ನೇ ಬೇಹುಗಾರಿಕೆಗೆ ಬಂದವರು ಎಂದು ಅವರನ್ನು ಪಾಕ್ ಜೈಲಿಗೆ ಅಟ್ಟಿ ಅಲ್ಲಿ ಚಿತ್ರ ಹಿಂಸೆ ನೀಡುತ್ತಾರೆ… ಕಳೆದ 22 ತಿಂಗಳುಗಳಿಂದ ಪಾಕ್ ಜೈಲಿನಲ್ಲಿ ಅನೇಕ ಚಿತ್ರ ಹಿಂಸೆಗಳನ್ನು ನೀಡುತ್ತಾರೆ… ಮೋದಿಜೀಯವರ ಕಾರ್ಯ ತಂತ್ರದಿಂದ ಜಾದವ್ ಕುಟುಂಬಕ್ಕೆ ಭೇಟಿ ಮಾಡಲು ಅವಕಾಶವನ್ನು ಕಲ್ಪಿಸಿಕೊಟ್ಟರು.. ಜಾದವ್ ಕುಟುಂಬ ಅಲ್ಲಿಗೆ ತಲುಪಿ ಭೇಟಿ ಏನೋ ಆಯಿತು…ಆದರೆ ಜಾದವ್ ಕುಟುಂಬವನ್ನು ಅವಮಾನಿಸಿರುವುದು ನಿಜಕ್ಕೂ ಭಾರತಕ್ಕೆ ಮರೆಯಲಾರದ ಘಟನೆ!! ಅದಲ್ಲದೇ ಹೊಸ ವರ್ಷದ ದಿನವೇ ಗಡಿಯಲ್ಲಿ 6 ಜನ ವೀರ ಯೋಧರು ಪಾಕ್ ಭಯೋತ್ಪಾದಕರ ದಾಳಿಗೆ ಮೃತ ಪಟ್ಟಿದ್ದಾರೆ…

ಇದಕ್ಕೆ ಪ್ರತಿಯಾಗಿ ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ಗುಂಡಿನ ದಾಳಿ ಹಾಗೂ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ರೀತಿಯ ಕ್ರಿಕೆಟ್ ಪಂದ್ಯಾಟ ನಡೆಯುವುದು ಅಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕ್‍ಗೆ ಖಡಕ್ ಹೇಳಿಕೆ ನೀಡಿದ್ದರು… ಪಾಕ್ ಪ್ರಚೋದಿತ ಗಡಿನಿಯಂತ್ರಿತ ರೇಖೆ ಉಲ್ಲಂಘನೆಯಿಂದಾಗಿ ಕ್ರಿಕೆಟ್ ಆಯೋಜಿಸಲು ವಾತಾವರಣ ಸೂಕ್ತವಾಗಿಲ್ಲ ಎಂದು ಹೇಳಿದ್ದಾರೆ. 2017ರಲ್ಲಿ ಭಾರತ ಪಾಕಿಸ್ತಾನ ನಡುವೆ ಬೂದಿಮುಚ್ಚಿದ ಕೆಂಡದಂತಿದ್ದ ವಾತಾವರಣವು, ಪಾಕ್ ಸೆರೆಯಲ್ಲಿರುವ ಕುಲಭೂಷಣ್ ಜಾದವ್ ಅವರ ತಾಯಿ ಹಾಗೂ ಪತ್ನಿಯನ್ನು ನಡೆಸಿಕೊಂಡ ರೀತಿ, ಹಾಗೂ ಪಾಕ್ ಪಡೆಗಳಿಂದ ಮತ್ತೆ ನಿಯಂತ್ರಣ ರೇಖೆ ಉಲ್ಲಂಘಿಸಿ, ದೇಶದ ಸೈನಿಕರನ್ನು ಹತ್ಯೆ ಮಾಡಿದ್ದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.. ಇದರ ಬೆನ್ನಿಗೆ ಪಾಕಿಸ್ತಾನವನ್ನು ಪಾಕ್ ರಾಷ್ಟ್ರಗಳ ಪಟ್ಟಿಯಿಂದ ಹೆಸರು ತೆಗೆದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ.

ಇದಕ್ಕೆಲ್ಲಾ ಪ್ರತಿಕಾರವನ್ನು ತೋರಿಸಿ ಪಾಕಿಸ್ತಾನವನ್ನು ಸಾರ್ಕ್ ಸದಸ್ಯ ರಾಷ್ಟ್ರಗಳ ಪಟ್ಟಿಯಿಂದ ಭಾರತ ತನ್ನ ಸ್ಥಾನಮಾನದಿಂದ ಹೊರಹಾಕಿದೆ.. ಅದರೊಂದಿಗೆ ಸರಕಾರದ ರಾಷ್ಟ್ರೀಯ ವೈಜ್ಞಾನಿಕ ಸುಧಾರಿತ ಸಂಶೋಧನೆಯನ್ನು ಇತರ ದೇಶಗಳಿಗಳೊಂದಿಗೆ ಸಹಕರಿಸುವ ವ್ಯವಸ್ಥೆಯಿಂದ ಪಾಕಿಸ್ಥಾನವನ್ನು ಹೊರ ಇಡಲಾಗಿದೆ..

ಟೆಲಿಕಾಂ ಕಂಪನಿಯ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಇದು ಆರು ದಕ್ಷಿಣ ಏಷ್ಯಾದ ದೇಶಗಳಾದ ಮತ್ತು ಸಾರ್ಕ್ ಸದಸ್ಯ ರಾಷ್ಟ್ರಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾಗಳಿಗೆ ಸಂಶೋಧನೆ ಮತ್ತು ಶಿಕ್ಷಣ ಜಾಲಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಭಾರತದ ಈ ಯೋಜನೆಯಿಂದ ಏಕೈಕ ಸಾರ್ಕ್ ದೇಶವಾದ ಪಾಕಿಸ್ತಾನವನ್ನು ಹೊರಹಾಕಲಾಗಿದೆ.

ಕಾಶ್ಮೀರ ಸೇರಿದಂತೆ ಭಾರತದ ಗಡಿಭಾಗದಲ್ಲಿ ಪಾಕಿಸ್ತಾನದ ಭಯೋತ್ಪಾದಕ ದಾಳಿಯಿಂದಾಗಿ ಕೇಂದ್ರ ಸರಕಾರ ಈಗಾಗಲೇ ಅಧೀಕೃತ ಮಾತುಕತೆಯನ್ನು ಪಾಕಿಸ್ತಾನದೊಂದಿಗೆ ಸ್ಥಗಿತಗೊಳಿಸಿದೆ..ಕಾಶ್ಮೀರ ಸೇರಿದಂತೆ ಭಾರತದ ಗಡಿಭಾಗದಲ್ಲಿ ಪಾಕಿಸ್ತಾನದ ಭಯೋತ್ಪಾದಕ ದಾಳಿಯಿಂದಾಗಿ ಕೇಂದ್ರ ಸರಕಾರ ಈಗಾಗಲೇ ಅಧೀಕೃತ ಮಾತುಕತೆಯನ್ನು ಪಾಕಿಸ್ತಾನದೊಂದಿಗೆ ಸ್ಥಗಿತಗೊಳಿಸಿದೆ..

ಮೋದಿ ಸರ್ಕಾರ ತನ್ನ ಅಧಿಕಾರದ ಆರಂಭದಿಂದಲೇ ಪಾಕಿಸ್ತಾನದ ವಿರುದ್ದ ಕಠಿಣ ನೀತಿಯನ್ನು ಹೊಂದಿದ್ದು. ಭಾರತೀಯ ಸೈನಿಕರ ನೆಲೆಯ ಮೇಲಿನ ಪಾಕ್ ಭಯೋತ್ಪಾದನಾ ದಾಳಿಗೆ ಗಡಿ ದಾಟಿ ಉಗ್ರರನ್ನು ತಟಸ್ಥಗೊಳಿಸುವ ಮೂಲಕ ಪ್ರತಿಕ್ರಿಯಿಸಿತ್ತು… ಇಡೀ ವಿಶ್ವದಲ್ಲಿಯೇ ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೇರಿಕಾವೇ ಪಾಕಿಸ್ತಾನದ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿರುವಾಗ ಇನ್ನೂ ಇದರ ಶಕ್ತಿ ಕುಂದುತ್ತದೆ ಎಂಬುವುದು ಖಂಡಿತಾ…

source: tend post

ಪವಿತ್ರ

Tags

Related Articles

Close