ಪ್ರಚಲಿತ

ಭಾರತೀಯರ ಪಾಲಿಗಿದು ಕರಾಳ ದಿನ! ಕಾಂ‌ಗ್ರೆಸ್ ನ ಅಧಿಕಾರಾವಧಿಯಲ್ಲಿ 1.70 ಲಕ್ಷ ಕೋಟಿಗಳನ್ನು ದೋಚಿದ್ದವರನ್ನು ದೋಷಮುಕ್ತ ಗೊಳಿಸಿದ ನ್ಯಾಯಾಲಯ!

ಇದು ನಿಜಕ್ಕೂ ಆಘಾತಕರ! 2G ಸ್ಪೆಕ್ಟ್ರಮ್ ಹಗರಣದಲ್ಲಿ ಅದೆಷ್ಟೋ ಲಕ್ಷ ಕೋಟಿಗಳನ್ನು ದೋಚಿದ್ದ 19 ಆರೋಪಿಗಳನ್ನೂ ಸಹ ವಿಶೇಷ ನ್ಯಾಯಾಲಯ ದೋಷಮುಕ್ತ ಗೊಳಿಸಿದೆ. ಇದು ನಿಜಕ್ಕೂ ಭಾರತೀಯರ ಪಾಲಿಗೆ ಕರಾಳ ದಿನ!

2G ಹಗರಣದ ಮುಖ್ಯ ಆರೋಪಿಗಳಾಗಿದ್ದ ಎ.ರಾಜಾ ಮತ್ತು ಕನಿಮೋಳಿಯನ್ನು ದೋಷಮುಕ್ತಗೊಳಿಸಿರುವ ನ್ಯಾಯಾಲಯಕ್ಕೆ ‘ಪ್ರಕರಣವನ್ನು’ ಸೂಕ್ಷ್ಮವಾಗಿ ತನಿಖೆ ನಡೆಸಿ ಮುಂದಿನ ಹೆಜ್ಜೆ ಇಡಬೇಕೆಂದು ಕೇಂದ್ರ ಸರಕಾರ ಎಚ್ಚರಿಸಿದೆ. ಸಿಬಿಐ, ಇಡಿ ಆರೋಪಗಳನ್ನೆಲ್ಲ ತಳ್ಳಿ ಹಾಕಿರುವ ದೆಹಲಿ ವಿಶೇಷ ನ್ಯಾಯಾಲಯದ ನಿರ್ಧಾರದಿಂದ ಭಾರತೀಯರಿಗೆ.ಆಘಾತವಾಗಿರುವುದಂತೂ ಸುಳ್ಳಲ್ಲ.

ಈ ಹಿಂದೆ, TIME ಮ್ಯಾಗಜಿನ್ 2G ಹಗರಣವನ್ನು ಭಾರತದ ಇತಿಹಾಸದಲ್ಲಿಯೇ ನಡೆದ ಅತಿ ದೊಡ್ಡ ಹಗರಣ ಎಂದು ಅಭಿಪ್ರಾಯಪಟ್ಟಿದ್ದಲ್ಲದೇ, ಅಮೇರಿಕಾದ ರಿಚಾರ್ಡ್ ನೆಕ್ಸಾಲ್ ಹಗರಣಕ್ಕೆಸಮನಾಗಿದೆ ಎಂದು ಹೇಳಿತ್ತು.

ವಿಶೇಷ ತನಿಖಾ ನ್ಯಾಯಾಧೀಶರಾದ ಒ ಪಿ ಸಾಯ್ನಿ ತೀರ್ಪು ನೀಡಿದ್ದು, 19 ಜನ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. “ಯಾವುದೇ ಸಾಕ್ಷ್ಯಾಧಾರಗಳೂ ಸಿಗದ ಕಾರಣ, ಹಾಗೂ ಆರೋಪವನ್ನು ಸಾಬೀತು ಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನೂ ದೋಷಮುಕ್ತಗೊಳಿಸಲಾಗಿದೆ!” ಎಂದು ತೀರ್ಪು ನೀಡಿದೆ.

ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಸಿಬಿಐ, ಹೈ ಕೋರ್ಟ್ ಗೆ ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ವಿನಂತಿ ಮಾಡಿದ್ದು, ಹಗರಣ ಮತ್ತೊಂದು ತಿರುವು ಪಡೆದುಕೊಳ್ಳಲಿದೆ.

ಏನಿದು 2ಜಿ ಹಗರಣ?!

ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದ ಈ ಹಗರಣ, ಟೆಲಿಫೋನ್ ಕಂಪೆನಿಗಳಿಗೆ ನಿಯಮ ಮೀರಿ 2g ತರಂಗಗಳನ್ನು ಹೆಚ್ಚುವರಿ ನೀಡಿತ್ತು. ಅಲ್ಲದೇ, 2ಜಿ ಹಗರಣದಲ್ಲಿ ಹೆಚ್ಚುವರಿ ಹಣವನ್ನೂ ಪಡೆದಿದ್ದ ಆರೋಪಿಗಳು ದೋಚಿದ್ದು ಬರೋಬ್ಬರಿ 1,76,645 ಕೋಟಿ ರೂ ಪಾಯಿಗಳು! ಇದರ ಬಗ್ಗೆ 2010 ರಲ್ಲಿಯೇ Auditor General of India ತನಿಖೆ ನಡೆಸಿ ದೋಚಿದ್ದ ಹಣಗಳ ಮೌಲ್ಯವನ್ನು ಇಡಿ ಹಾಗೂ ಸಿಬಿಐ ಗೆ ಹಸ್ತಾಂತರಿಸಿತ್ತು.

ಕಾಂಗ್ರೆಸ್ ಕೂಡಾ ಸಮರ್ಥಿಸಿಕೊಂಡಿತ್ತು ಹಗರಣವನ್ನು!

ಕಾಂಗ್ರೆಸ್ ನ ಹಿರಿಯ ನಾಯಕ, ಕಪಿಲ್ ಸಿಬಲ್ ರ ‘ಶೂನ್ಯ ನಷ್ಟ” ಲಾಜಿಕ್ಕು ಮಕಾಡೆ ಮಲಗಿದ್ದು 2012 ರಲ್ಲಿ! 2G ಇಂದ ದೇಶಕ್ಕೆ ಯಾವ ರೀತಿಯ ನಷ್ಟವೂ ಆಗಿಲ್ಲ ಎಂದಿದ್ದ ಕಪಿಲ್ ಸಿಬಲ್ ರ ಲಾಜಿಕ್ಕನ್ನು ಸುಳ್ಳೆಂದು ಸಾಬೀತು ಪಡಿಸಿತ್ತು ಭಾರತೀಯ ಸರಕಾರ. ಪ್ರತಿ 2g 5mhz ಗೆ 14,000 ಕೋಟಿ ರೂಗಳಿಗೆ ಹರಾಜು ಹಾಕಿದ್ದು,ಪ್ರತಿ ಮೆಗಾ ಹರ್ಟ್ಜ್ 2,800 ಕೋಟಿ ರೂ ಗೆ ಬೆಲೆ ಬಾಳುತ್ತಿತ್ತು.

ಡಾ. ಸುಬ್ರಹ್ಮಣಿಯನ್ ಸ್ವಾಮಿ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ಈ ತೀರ್ಪಿನ ಕುರಿತು ಉಚ್ಛ ನ್ಯಾಯಾಲಯದಲ್ಲಿಯೇ ಭಾರತ ಸರಕಾರ ಆರೋಪಗಳನ್ನು ಸಾಬೀತು ಪಡಿಸಬೇಕು!” ಎಂದಿದ್ದಾರೆ.

ಟ್ವಿಟ್ಟರಾಯಿಗಳು ತೀರ್ಪಿನ ವಿರುದ್ದ ತಿರುಗಿ ಬಿದ್ದದ್ದು ಹೀಗೆ!

ರಿಶಿ ಭಾಗ್ರೀ ಎಂಬ ಪ್ರಸಿದ್ದ ಟ್ವಿಟ್ಟರಾಯಿ, ” ಎಂಟು ವರುಷ ವಿಚಾರಣೆ ಆದರೂ, ನ್ಯಾಯಾಲಯ ಆರೋಪವನ್ನು ಸಾಬೀತು ಪಡಿಸಲು ವಿಫಲವಾಗಿದೆ ಎಂದು ಈಗ ತೀರ್ಪು ನೀಡಿದೆ! ಕೋಟಿಗಟ್ಟಲೇ ಹಣ ಮಾಡಿದ್ದು ಮಾತ್ರ ನ್ಯಾಯಾಧೀಶ ಮತ್ತು ವಕೀಲರು!” ಎಂದು ಕಿಡಿ ಕಾರಿದ್ದಾರೆ.

https://twitter.com/rishibagree/status/943715186342428672

“ಮಾಜಿ ಟೆಲಿಕಾಮ್ ಸಚಿವನಾಗಿದ್ದ ಎ.ರಾಜಾ, ರಾಜ್ಯಸಭಾ ಸಂಸದೆ ಕನಿಮೋಳಿ ಮತ್ತು ಉಳಿದವರು ಹಗರಣದಲ್ಲಿ ಭಾಗಿಯಾಗಿಲ್ಲ ವೆಂದು
ದೋಷಮುಕ್ತರಾಗಿದ್ದಾರೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ನಿಧಾನವಾಗಿ ಚಪ್ಪಾಳೆ!” ಎಂದು ರೂಪಾ ಮೂರ್ತಿ ವ್ಯಂಗ್ಯವಾಡಿದ್ದಾರೆ.

– ಪೃಥು ಅಗ್ನಿಹೋತ್ರಿ

Tags

Related Articles

Close