ಪ್ರಚಲಿತ

ಭಾರತ ನಡೆಸಿದ್ದ ‘ಆಪರೇಷನ್ ರಾಹತ್’, ‘ಏರಲಿಫ್ಟ್’ ನಂತಹ ಮೈನವಿರೇಳಿಸುವ ರೋಚಕ ಕಾರ್ಯಾಚರಣೆಯ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ಭಾರತದಲ್ಲಿ ವಾಸಿಸುತ್ತಿರುವ ಜನರಿಗೆ ವಿದೇಶ ಪ್ರವಾಸ ಮಾಡಬೇಕು ಅಥವಾ Abroad ನಲ್ಲಿ Settle ಆಗಬೇಕು ಅಂತ ಕನಸು ಇರುತ್ತೆ. ಇರಲಿ ಆ ಕನಸಿಗೆ ನಾನು ವಿರುದ್ಧವಿಲ್ಲ ಆದರೆ ಅಲ್ಲಿ Settle ಆದಮೇಲೆ ತಾವು ಹುಟ್ಟಿ ಬೆಳೆದ, ತಮಗೆ ವಿದೇಶಕ್ಕೆ ಹೋಗಿ Settle ಆಗೋ ಹಾಗೆ ತಯಾರು ಮಾಡಿದ ತಾಯ್ನಾಡಾದ ಭಾರತದ ಬಗ್ಗೆ ಕೀಳರಿಮೆ ಮೂಡಿಸಿಕೊಂಡು ಭಾರತ ಒಂದು ದರಿದ್ರ ರಾಷ್ಟ್ರ/ಕೊಳಕು ದೇಶ/ಸತ್ತರೂ ಇದೇ ಹೊರದೇಶದಲ್ಲಿ ಸಾಯಬೇಕು ಹೊರತು ಇಂಡಿಯಾ ಮಾತ್ರ ಹೋಗಲ್ಲ /ನಮ್ಮ ಮಕ್ಕಳು ಇಲ್ಲಿ Abroad ನಲ್ಲೆ ಬೆಳೆಯಬೇಕು ಹೊರತು ಭಾರತಕ್ಕೆ ಅವರನ್ನ ಕಳಿಸಲ್ಲ ಅನ್ನೋದು ಅನೇಕ ಅನಿವಾಸಿ ಭಾರತೀಯರ ಭಾರತದ ಬಗ್ಗೆ ಇರುವ ಅಭಿಪ್ರಾಯಗಳು. (ಎಲ್ಲರೂ ಹಾಗೇ ಇರಲ್ಲ)

ಅನಿವಾಸಿ ಭಾರತೀಯರ ಮಾತಂತೂ ಬಿಡಿ ನಮ್ಮ ದೇಶದಲ್ಲೇ ಇದ್ದು ಈ ದೇಶ ಸಹಿಷ್ಣು ರಾಷ್ಟ್ರವಲ್ಲ ನಾವು ಈ ದೇಶ ಬಿಟ್ಟು ಹೊರಡೋಣವೇ ಅಂತ ಹೇಳೋ ಅನೇಕ ಭಾರತೀಯರೂ ನಮಗೆ ಸಿಗುತ್ತಾರೆ. ಅಂಥವರ ಬಗ್ಗೆ ದಿನ ಬೆಳಗಾದರೆ ತಾವು ಸುದ್ದಿ ಮಾಧ್ಯಮಗಳಲ್ಲೂ ನೋಡಿರ್ತೀರಾ ಕೇಳಿರ್ತೀರಾ.

ಆದರೆ ನಮ್ಮ ಭಾರತ ದೇಶದಷ್ಟು ಸಹಿಷ್ಣು, ನೆಮ್ಮದಿಯ, ಸುಖೀ ರಾಷ್ಟ್ರ ಇಡೀ ಜಗತ್ತಿನಲ್ಲಿಯೇ ಯಾವುದೂ ಇಲ್ಲ, ಅದು ವಿಶ್ವದ ದೊಡ್ಡಣ್ಣ/ಸೂಪರ್ ಪವರ್ ಅಂತ ಕರೆಯಿಸಿಕೊಳ್ಳೋ ಅಮೇರಿಕವೇ ಆಗಲಿ, ಬಲಾಢ್ಯ ರಾಷ್ಟ್ರ ಅನಿಸಿಕೊಳ್ಳೋ ಚೀನಾ, ರಷ್ಯಾ, ಜಪಾನ್, ಫ್ರಾನ್ಸ್, ಉತ್ತರ ಕೋರಿಯಾಗಳೇ ಆಗಲಿ.

ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಒಂದು ಸುಖೀ ರಾಷ್ಟ್ರ ಅನ್ನೋದಕ್ಕೆ ಹಲವಾರು ಕಾರಣಗಳಿವೆ ಅದಕ್ಕೆ ಉದಾಹರಣೆಗಳೂ ಇವೆ.

ಆದರೆ ಕೆಲಸಕ್ಕಂತಲೋ, ಹೊಟ್ಟೆಪಾಡಿಗಾಗಿಯೋ ಅಥವಾ Abroad ನಲ್ಲಿ Settle ಆಗಬೇಕಂತಲೋ ಭಾರತದಿಂದ ಇಸ್ಲಾಮಿಕ್ ರಾಷ್ಟ್ರಗಳಿಗೆ ಹೋದರೆ ನಿಜಕ್ಕೂ ಅಲ್ಲಿ ಭಾರತದಲ್ಲಿ ಅವರಿದ್ದಷ್ಟೇ ಸುರಕ್ಷಿತ feel ಆಗುತ್ತಾ ಅನ್ನೋದೇ ಪ್ರಶ್ನೆ.

ಖಂಡಿತವಾಗಿಯೂ ಇಲ್ಲ. ಅದಕ್ಕೆ ಕೆಲ ಕಾರಣಗಳೂ ಪುಷ್ಟಿ ನೀಡುತ್ತವೆ. ಇಸ್ಲಾಮಿಕ್ ರಾಷ್ಟ್ರಗಳು ತಮ್ಮ ನೆರೆಹೊರೆ ರಾಷ್ಟ್ರಗಳ ಜೊತೆಯಲ್ಲಿ ಧರ್ಮಕ್ಕೆ ಸಂಬಂಧಿಸಿದ ವಿಷಯ ಹಿಡಿದುಕೊಂಡು ತೈಲ ವ್ಯಾಪಾರ, ಸೇನಾಡಳಿತ ದಂಗೆ, ಅಂತರಿಕ ದಂಗೆ, ರಾಷ್ಟ್ರ ರಾಷ್ಟ್ರಗಳ ಹಳೇ ವೈಷಮ್ಯಗಳಿಂದ ಆಗಾಗ ಯುದ್ಧಗಳು ಮಾಡ್ತಾನೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಅಂತಹ ರಾಷ್ಟ್ರಗಳಲ್ಲಿ ಜೀವನ ಕಟ್ಟಿಕೊಳ್ಳಲೋ ಕೆಲಸಕ್ಕಂತಲೋ ಹೋಗಿರುವ ಭಾರತೀಯರು ಸಿಕ್ಕಾಕಿಕೊಂಡು ಪಡೋ ಪಾಡು ಅಷ್ಟಿಷ್ಟಲ್ಲ. ಕೊನೆಗೆ ಭಾರತ ವಾಪಸ್ ಮರಳಿ ಬರೋಣ ಅಂದರೂ ಅವರಿರುವ ರಾಷ್ಟ್ರಗಳಲ್ಲಿನ ಆಂತರಿಕ ದಂಗೆಯಿಂದ ಬರೋಕೂ ಆಗದೇ ಅಲ್ಲಿ ಉಳಿದುಕೊಳ್ಳೋಕು ಆಗದೆ ಅವರ ಪಾಡು ಆ ದೇವರಿಗೆ ಖುಷಿ.

ಆಗ ಭಾರತ ಅಂದರೆ ಏನು ಅನ್ನೋದು ಅವರಿಗೆ ಮನವರಿಕೆ ಆಗಿ ಭಾರತ ಒಂದು ಮಹಾನ್ ರಾಷ್ಟ್ರವಾಗಿ ಕಾಣೋಕೆ ಶುರುವಾಗತ್ತೆ.

ಇಂತಹದ್ದೆ ಘಟನೆ 2015 ರಲ್ಲಿ ಯೆಮನ್ ರಾಷ್ಟ್ರದಲ್ಲಿ ನಡೆದದ್ದನ್ನು ಸ್ಮರಿಸಬಹುದು.

ಯೆಮನ್’ಗೆ ತಾಕಿಕೊಂಡಿರೋ ರಾಷ್ಟ್ರವೇ ಸೌದಿ ಅರೇಬಿಯಾ. ಯೆಮನ್’ನಲ್ಲಿ ಕಳೆದ 20 ವರ್ಷಗಳಿಂದ ಅಧಿಕಾರವನ್ನ ತನ್ನಲ್ಲಿಯೇ ಇಟ್ಟುಕೊಂಡಿದ್ದ ರಾಷ್ಟ್ರಪತಿ ಅಲಿ ಅಬ್ದುಲ್ಲಾಹ್ ಸಲೇಹ್ ನ ವಿರುದ್ಧ ಅಲ್ಲಿನ ಸೇನೆ ದಂಗೆ ಎದ್ದಾಗ ಶುರುವಾಗಿದ್ದೆ “Yemen Crisis”

ಅವರವರ ಕಚ್ಚಾಟದಲ್ಲಿ ಬಡವಾಗಿದ್ದು ಮಾತ್ರ ಅಲ್ಲಿದ್ದ ಅನಿವಾಸಿ ಭಾರತೀಯರು/ಭಾರತದಿಂದ ಉದ್ಯೋಗ ಅರಸಿ ಹೋದವರು.

ಅಲ್ಲಿ ನಡೆದ ಸಂಘರ್ಷದಲ್ಲಿ ಸುಮಾರು ಐದು ಸಾವಿರ ಜನ ಭಾರತೀಯರು ಯೆಮನ್ ನಲ್ಲಿ ಸಂಕಷ್ಟದಲ್ಲಿದ್ದರು. ಆಗ ಅವರ ರಕ್ಷಣೆಗೆ ನಿಂತಿದ್ದೆ ಭಾರತ ಸರಕಾರ.

ಬಂಡುಕೋರರ ಹಾವಳಿಯಂತಹ ಹಾವಳಿಯನ್ನು ಮೆಟ್ಟಿ ನಿಂತು ಭಾರತ ಅಲ್ಲಿರುವ 4640 ಭಾರತೀಯರನ್ನೂ ಹಾಗು 42 ರಾಷ್ಟ್ರಗಳ 960 ವಿದೇಶಿಗರನ್ನೂ ಸುರಕ್ಷಿತವಾಗಿ ಅವರವರ ಮನೆಗೆ ತಲುಪಿಸಿತ್ತು.

ಆ 42 ರಾಷ್ಟ್ರಗಳೇನೂ ಸಣ್ಣಪುಟ್ಟ ರಾಷ್ಟ್ರಗಳೇನಾಗಿರಲಿಲ್ಲ ಅದರಲ್ಲಿ ವಿಶ್ವದ ಪವರಫುಲ್ ರಾಷ್ಟ್ರಗಳಾದ ರಷ್ಯಾ, ಅಮೇರಿಕ, ಇಂಗ್ಲೆಂಡ್ ರಾಷ್ಟ್ರಗಳೂ ಕೂಡ ಸೇರಿದ್ದವು.

ಆ Rescue Operation/Evacuation ಗೆ ಭಾರತ ಸರಕಾರ ಕೊಟ್ಟ ಹೆಸರೇ ಆಪರೇಷನ್ ರಾಹತ್ (Operation RAAHAT)

ಆ ಆಪರೇಷನ್ ರಾಹತ್ ಕೂಡ ಅಷ್ಟು ಸುಲಭದ್ದಾಗಿರಲಿಲ್ಲ. ಯೆಮನ್ ನಲ್ಲಿ ಆಂತರಿಕ ದಂಗೆ ಶುರುವಾದ ತತಕ್ಷಣವೇ ಭಾರತ ತನ್ನ ಯೆಮನ್ನಿನ ಅನಿವಾಸಿ ಭಾರತೀಯರ ರಕ್ಷಣೆಗೆ ದೌಡಾಯಿಸಿತ್ತು ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ.

ಯೆಮನ್ ನಲ್ಲಿ ಹೊರಗಿನಿಂದ ಬರುವ/ಹೋಗುವ ಎಲ್ಲ ವಿಮಾನಯಾನ ಸಂಪರ್ಕಗಳನ್ನೂ ಯೆಮನ್ನಿನ ಬಂಡುಕೋರರು ಬಂದ್ ಮಾಡಿದ್ದರಿಂದ ಭಾರತ ತನ್ನ ಸಹಾಯನ್ನ ವಿಮಾನದ ಮೂಲಕ ಮಾಡಲು ಸಾಧ್ಯವಾಗದಿದ್ದಾಗ ಗಲ್ಫ್ ರಾಷ್ಟ್ರದ Djibouti ನಗರದ ಮೂಲಕ ಯೆಮನ್ ಪ್ರವೇಶಿಸಿ ಅಲ್ಲಿರುವ ಅನಿವಾಸಿ ಭಾರತೀಯರ ರಕ್ಷಣೆಯನ್ನು ಸಮುದ್ರಮಾರ್ಗದಿಂದ ಭಾರತ ನೌಕಾದಳದ INS Sumitra(P59), INS Mumbai(D62) ಹಾಗು INS Tarkash(F50) ಯನ್ನ ಕಳಿಸಿಕೊಡಲಾಯಿತು.

ಅದರ ಜೊತೆ ಜೊತೆಗೆ ಭಾರತೀಯ ವಾಯುಪಡೆಯೂ ಟೊಂಕಕಟ್ಟಿ ನಿಂತಿತ್ತು, ಇಂಡಿಯನ್ ಏರ್ ಫೋರ್ಸ್ ನಿಂದ ಎರಡು C-17 Globemaster cargo ಹಾಗು ಎರಡು ಏರ್ ಬಸ್(A320) ವಿಮಾನಗಳನ್ನೂ ರಕ್ಷಣಾಕಾರ್ಯಕ್ಕಾಗಿ ಬಳಸಲಾಗಿತ್ತು.

ನೌಕಾಪಡೆಯ INS Sumitra ದಿಂದ ಸಮುದ್ರ ಮಾರ್ಗವಾಗಿ ಹಾಗು ಈ ವಿಮಾನಗಳ ಸಹಾಯದಿಂದ ಬರೋಬ್ಬರಿ 5600 ಜನ(960 ಜನ ವಿದೇಶಿಗರನ್ನೂ ಒಳಗೊಂಡಂತೆ)ರನ್ನ ತಮ್ಮ ತಮ್ಮ ತಾಯ್ನಾಡಿಗೆ ಮರಳುವುದಕ್ಕೆ ಭಾರತ ಸರಕಾರ ಸಹಾಯ ಮಾಡಿತ್ತು.

ಇನ್ನೊಂದು ವಿಶೇಷತೆಯೆಂದರೆ ಈ ಇಡೀ ರಕ್ಷಣಾಕಾರ್ಯದಲ್ಲಿ ಸ್ವತಃ ನಮ್ಮ ಆಗಿನ ರಕ್ಷಣಾ ಸಚಿವರಾಗಿದ್ದ ಜೆನರಲ್ ವಿ.ಕೆ.ಸಿಂಗ್ ರವರು ಖುದ್ದು ಯೆಮೆನ್ ನಲ್ಲಿ ಉಪಸ್ಥಿತರಿದ್ದರು.

ಭಾರತ ಈ ರಕ್ಷಣಾ ಕಾರ್ಯಾಚರಣೆಗೆ ಇಡೀ ವಿಶ್ವವೇ ಬೆರಗಾಗಿ ತಮ್ಮ ದೇಶದ ನಾಗರಿಕರನ್ನು ರಕ್ಷಿಸಿದ್ದ ಭಾರತವನ್ನ ಕೊಂಡಾಡಿದ್ದು ತಮಗೆಲ್ಲ ತಿಳಿದ ವಿಷಯವೇ.

ಅಲ್ಲಿಂದ ರಕ್ಷಿಸಲ್ಪಟ್ಟ ಎಲ್ಲ 5600 ಜನರಿಗೂ ನೀನ್ಯಾವ ಜಾತಿ ನೀನ್ಯಾವ ಧರ್ಮ ಅಂತ ಯಾರಿಗೂ ಕೇಳದೆಯೇ ಭಾರತಕ್ಕೆ ಮರಳಿ ತಂದಿದ್ದನ್ನು ನೋಡಿದರೂ ನಮ್ಮ ಭಾರತದಲ್ಲಿರುವ ಬುದ್ಧಿಜೀವಿಗಳಿಗೆ, ಪ್ರಗತಿಪರ, ಸೆಕ್ಯೂಲರ್ ಗಳ ಕಣ್ಣಿಗೆ ಭಾರತದ ಪ್ರಸ್ತುತ ಕೇಂದ್ರ ಸರಕಾರ ಕೋಮುವಾದಿಯಾಗಿ ಸರಕಾರವಾಗಿ ಕಾಣುವುದು ನಮ್ಮ ದೌರ್ಭಾಗ್ಯವೇ ಸರಿ.

ಇದೇ ರೀತಿಯ ಏರಲಿಫ್ಟ್ ಕಾರ್ಯಾಚರಣೆ ದೇಶದಲ್ಲಿ ಮೊದಲೂ ನಡೆದಿತ್ತು!!

ಆಪರೇಷನ್ ರಾಹತ್ ಭಾರತದ ಇತ್ತೀಚಿನ ರಕ್ಷಣಾ ಕಾರ್ಯವಾದರೆ ಇದಕ್ಕಿಂತ ಮುಂಚೆ ಭಾರತ ಇದೇ ರೀತಿಯಲ್ಲಿ ಇನ್ನೊಂದು Airlift ಕಾರ್ಯಾಚರಣೆ ಮಾಡಿತ್ತು ಅದು ಗಿನ್ನಿಸ್ ಬುಕ್ ನ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿರುವಂತಹ ರಕ್ಷಣಾ ಕಾರ್ಯಾಚರಣೆ. ಅದೇ ಕುವೈತ್ ನ 1990 ರ ರಕ್ಷಣಾ ಕಾರ್ಯಾಚರಣೆ!!

ಕುವೈತ್ ಮೇಲೆ ಇರಾಕಿನ ಸದ್ದಾಮ್ ಹುಸೇನ್ ದಾಳಿ ನಡೆಸಿ ಕುವೈತನ್ನೆ ತನ್ನ ಸೇನಾ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದಾಗ ಬರೋಬ್ಬರಿ 1,70,000 ಭಾರತೀಯರು ಕುವೈತನಲ್ಲಿ ಅಕ್ಷರಶಃ ಬಂಧಿಗಳ ಸ್ಥಿತಿಯಲ್ಲಿದ್ದರು.

ಕುವೈತ್ ನಲ್ಲಿ ನೆಲೆಯೂರಿದ ಅದೆಷ್ಟೋ ಭಾರತೀಯರು ಭಾರತವನ್ನೇ ಮರೆತಿದ್ದರು. ಯಾವಾಗ ಕುವೈತನ್ನ ಇರಾಕ್ ವಶಪಡಿಸಿಕೊಂಡಿತೋ ಆಗ ಅಲ್ಲಿನ ಅನಿವಾಸಿ ಭಾರತೀಯರಿಗೆ ಭಾರತದ ಬಗ್ಗೆ ನೆನಪಾಗತೊಡಗಿತ್ತು.

ಇರಾಕಿನ ಕ್ರೌರ್ಯಕ್ಕೆ ಕುವೈತನಲ್ಲಿದ್ದ ಭಾರತೀಯ ರಾಯಭಾರಿ ಕಛೇರಿಯೂ ಜೀವ ಭಯದಿಂದ ಖಾಲಿಯಾಗಿತ್ತು.

ಇನ್ನು ಅಲ್ಲಿದ್ದ 1,70,000 ಭಾರತೀಯರ ಕಥೆ?

ಅವರೆಲ್ಲರಿಗೂ ಹೀರೋ ಆಗಿ ಬಂದವನೇ ಭಾರತೀಯ ಮೂಲದ ಕುವೈತ್ ಉದ್ಯಮಿ ಸನ್ನಿ ಮ್ಯಾಥ್ಯೂ.

ಸನ್ನಿ ಮ್ಯಾಥ್ಯೂ ಗಂಡೆದೆ ತೋರಿಸಿ ಅಲ್ಲಿರುವ ಅಷ್ಟೂ ಅನಿವಾಸಿ ಭಾರತೀಯರನ್ನೂ ಇರಾಕಿ ಸೇನಾಪಡೆಗಳಿಂದ ಸುರಕ್ಷಿತವಾಗಿರಿಸಿ ನಿರಂತರವಾಗಿ ಭಾರತಕ್ಕೆ ಸಂಪರ್ಕ ಮಾಡದೇ ಹೋಗಿದ್ದರೆ ಆ ಲಕ್ಷಾಂತರ ಅನಿವಾಸಿ ಭಾರತೀಯರೂ ಕೂಡ ಕುವೈತ್ ಜನರ ಹಾಗೆಯೇ ಮಾರಣಹೋಮವಾಗಿಬಿಡ್ತಿದ್ದರೇನೋ.

ಭಾರತ ಸರಕಾರದ ವಿದೇಶಾಂಗ ಕಾರ್ಯಾಲಯದ ಜೊತೆಗೆ ನಿರಂತರ ಸಂಪರ್ಕವಿಟ್ಟುಕೊಂಡಿದ್ದರೂ ಭಾರತದ ಆಗಿನ ಸರಕಾರಕ್ಕೆ ಇದ್ದ ಒಂದು ತೊಂದರೆಯೆಂದರೆ ಕುವೈತನಲ್ಲಿದ್ದ ಅಷ್ಟೂ ಜನ ಅನಿವಾಸಿ ಭಾರತೀಯರಿಗೂ ತಾತ್ಕಾಲಿಕ ಪಾಸಪೋರ್ಟ್(Temporary Passport) ಕೊಡಿಸಿ ಅಲ್ಲಿಂದ ಕರೆತರುವುದಾಗಿತ್ತು.

ಕುವೈತಿನ ಏರಪೋರ್ಟಂತು ಅಕ್ಷರಶಃ ಬಂದ್ ಆಗಿಬಿಟ್ಟಿತ್ತು. ಈಗ ಸನ್ನಿ ಮ್ಯಾಥ್ಯೂ ಅವರಿಗಿದ್ದ ಒಂದು ದಾರಿಯೆಂದರೆ ಅಷ್ಟೂ ಜನರನ್ನ ಕುವೈತನಿಂದ ಪಕ್ಕದ ರಾಷ್ಟ್ರದ ಜೋರ್ಡಾನ್ ಗೆ ಕರೆತರೋದು.

ಜೋರ್ಡಾನ್ ನಿಂದ ಅವರನ್ನೆಲ್ಲ ಭಾರತಕ್ಕೆ ಮರಳಿ ತರಲು ಭಾರತೀಯ ವಿಮಾನಯಾನ ಸಜ್ಜಾಗಿ ನಿಂತಿದ್ದವು. ಆದರೆ ಕುವೈತ್ ನಲ್ಲಿದ್ದ ಇರಾಕಿ ಪಡೆಗಳನ್ನು ಕಣ್ತಪ್ಪಿಸಿ ಒಂದೂವರೆ ಲಕ್ಷ ಜನರನ್ನು ಜೋರ್ಡಾನ್ ತಲುಪಿಸುವುದೂ ಮ್ಯಾಥ್ಯೂಗೆ ಸಂಕಷ್ಟವೇ ಆಗಿತ್ತು. ಆದರೂ ಎದೆಗುಂದದ ಮ್ಯಾಥ್ಯೂ ಅವರೆಲ್ಲರನ್ನೂ ಜೋರ್ಡಾನ್ ಗೆ ತಲುಪಿಸಿಯೇಬಿಟ್ಟ.

ನಂತರ ಬರೋಬ್ಬರಿ 59 ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತ ವಿಮಾನಯಾನದ ಬರೋಬ್ಬರಿ 488 ವಿಮಾನಗಳು 1,70,000 ಅನಿವಾಸಿ ಭಾರತೀಯರನ್ನ ವಾಪಸ್ ಮಾತೃಭೂಮಿಗೆ ಕರೆತರಲಾಗಿತ್ತು(ಅದರಲ್ಲಿ ಈ ಕಥೆಯ ಕಥಾನಾಯಕ ಮ್ಯಾಥ್ಯೂನ ಪರಿವಾರವು ಒಂದಾಗಿತ್ತು)

ಈ ರಕ್ಷಣಾ ಕಾರ್ಯಾಚರಣೆ ‘ಏರ್ ಇಂಡಿಯಾ’ ವಿಶ್ವದ ಅತೀ ದೊಡ್ಡ ನಾಗರಿಕ ವಿಮಾನ ರಕ್ಷಣಾ ಕಾರ್ಯವಂತ ಗಿನ್ನಿಸ್ ಪುಟಗಳಲ್ಲಿ ಸೇರಿತು. ಅದರ ರೆಕಾರ್ಡ್ ಮುರಿಯೋದು ಈವರೆಗೂ ಯಾವ ರಾಷ್ಟ್ರಗಳಿಂದಲೂ ಆಗಿಲ್ಲ ಬಹುಶಃ ಮುಂದೆಯೂ ಆಗಲಾರದೇನೋ.
ಆ ಸಾಮರ್ಥ್ಯವಿರೋದು ನನ್ನ ಭಾರತಕ್ಕೇ ಮಾತ್ರ!!

ಮೊದಲು ಉಲ್ಲೇಖಿಸಿದ ಯೆಮೆನ್ ರಕ್ಷಣಾ ಕಾರ್ಯಾಚರಣೆಯಾದ ‘ಆಪರೇಷನ್ ರಾಹತ್’ ನಮಗೆಲ್ಲ ಗೊತ್ತಿದ್ದ ವಿಷಯವೇ ಆದರೆ ಈ ಕುವೈತ್ ರಕ್ಷಣಾ ಕಾರ್ಯಾಚರಣೆ ಅದೆಷ್ಟೋ ಭಾರತೀಯರಿಗೆ ಗೊತ್ತೆ ಇಲ್ಲ. ಇದನ್ನ ಭಾರತೀಯರಿಗೆ ತಿಳಿಸಲೆಂದೆ AIRLIFT ಎಂಬ ಹಿಂದಿ ಚಲನಚಿತ್ರ ಕೂಡ ಕಳೆದ ವರ್ಷ ತೆರೆಕಂಡಿತ್ತು.

ಆದರೆ ಈ ಚಿತ್ರದಲ್ಲಿ ಮ್ಯಾಥ್ಯೂ ಅವರ ಪಾತ್ರವಿಲ್ಲವಾದರೂ ಅವರ Alternate ಅಥವಾ ಕಾಲ್ಪನಿಕ ಪಾತ್ರವಾದ ‘ರಂಜಿತ್ ಕಟಿಯಾರ’ ಎನ್ನುವ ಪಾತ್ರವನ್ನ ಅಕ್ಷಯ್ ಕುಮಾರ್ ರವರು ನಿರ್ವಹಿಸಿದ್ದರು.

ಇಂತಹ ಚಿತ್ರಗಳಿಗೆ ಪ್ರೋತ್ಸಾಹ ಕೊಡಬೇಕೆ ಹೊರತು ಸಮಾಜವನ್ನ ಒಡೆಯುವಂತಹ, ಭಾರತದ ವೀರಾಂಗಿಣಿಯರಿಗೆ ಅಪಚಾರ ಎಸಗುವ ಸಂದೇಶವಿರುವ ಚಿತ್ರಗಳಿಗಲ್ಲ.

ಭಾರತವನ್ನ ಅಸಹಿಷ್ಣು ರಾಷ್ಟ್ರ ಅಂತ ಪ್ರಶಸ್ತಿ ವಾಪಸ್ ಮಾಡಿದವರಾಗಲಿ, ದೇಶದಲ್ಲಿ ಉಸಿರುಗಟ್ಟಿಸೋ ವಾತಾವರಣವಿದೆ ನಾವು ದೇಶ ಬಿಟ್ಟು ಹೋಗೋಣವೇ ಅಂದವರಾಗಲಿ ಅಥವಾ ಹೊರ ದೇಶಕ್ಕೆ ವಿಶೇಷವಾಗಿ ಇಸ್ಲಾಮಿಕ್ ರಾಷ್ಟ್ರಗಳಿಗೆ ಹೊಟ್ಟೆಪಾಡಿಗಾಗಿ ಹೋಗುವ ಭಾರತೀಯರು ಒಂದು ಬಾರಿ ಕನಿಷ್ಟಪಕ್ಷ ಇಂತಹ ನೈಜ ಘಟನೆಗಳ ಕುರಿತಾದ ಕಥೆಯನ್ನ ಸಿನೆಮಾ ಗಳನ್ನಾದರೂ ನೋಡಿ ಭಾರತ ಸುರಕ್ಷಿತವೋ ಅಥವ ಮುಸ್ಲಿಂ ರಾಷ್ಟ್ರಗಳು ಸೂಕ್ತವೋ ಅಂತ ತೀರ್ಮಾನಿಸಬೇಕು!!

– Vinod Hindu Nationalist

Tags

Related Articles

Close